ಭಾನುವಾರದ ಸಣ್ಣ ಕಥೆ : ರಂಗಸ್ವಾಮಿ ಮೂಕನಹಳ್ಳಿ ಬರೆದ ಕಥೆ ’ಮೌಲ್ಯ’

ರಂಗಸ್ವಾಮಿ ಮೂಕನಹಳ್ಳಿ

ಕಣ್ಣು ಬಿಟ್ಟಾಗ ಕಂಡಿದ್ದು ಓಂ ಚಿನ್ಹೆ ಉಳ್ಳ ಕ್ಯಾಲೆಂಡರ್ ವಾರದ ಹಿಂದಷ್ಟೇ ನಾಲ್ಕು ರುಪಾಯಿ ಕೊಟ್ಟು ತಂದಿದ್ದೆ , ಅಲಾರಂ ನಿಂತು ನಿಖರವಾಗಿ ಎಷ್ಟು ಹೊತ್ತು ಆಯ್ತು ಅಂತ ಗಡಿಯಾರ ನೋಡಿದರೆ ಮಾತ್ರ ತಿಳಿಯುತ್ತೆ , ನಾನಂತು ಬಹಳ ಹೊತ್ತಿನಿಂದ ಕಣ್ಣು ಬಿಡಲು ಪ್ರಯತ್ನ ಪಟ್ಟು ಇದೀಗ ಜಯ ಗಳಿಸಿದ್ದೇನೆ , ಅದಕ್ಕೆ ಸಾಕ್ಷಿ ಎನ್ನುವಂತೆ ಕ್ಯಾಲೆಂಡರ್ ನನ್ನ ಕಣ್ಣಿಗೆ ಕಂಡಿದ್ದು .
ಇಂದು ಭಾನುವಾರ , ನನಗೆ ಹಾಗು ನನ್ನಂತ ಹಲವರಿಗೆ ಬಹಳ ಸುಖ ಕೊಡುವ ದಿನ , ಲೇಟಾಗಿ ಏಳಬಹುದು , ಕೆಲಸ -ಕಡತ , ದಡುಗು ಇಂದಿಲ್ಲ , ಹಾಗಾಗಿ ಭಾನುವಾರ ವಾರದ ಎಲ್ಲ ದಿನಗಳಿಗಿಂತ ಹೆಚ್ಚು ಪ್ರೀತಿಸುವ ದಿನವಾಗಿದೆ .
ಯಾರಿವನು ? ಪರಿಚಯಕ್ಕೆ ಮುಂಚೆ ಕಥೆ ಶುರು ಮಾಡಿಕೊಂಡ ಎಂದು ಅಂದು ಕೊಂಡವರಿಗೆ , ಅಂದು ಕೊಂಡಿಲ್ಲ ದವರಿಗೆ ಹಾಗು ಎಲ್ಲರಿಗೂ ಹೇಳಿಬಿಡುತ್ತೀನಿ , ನನ್ನ ಹೆಸರು ರಂಗ ಅಂತ , ಲೆಕ್ಕ ಪರಿಶೋಧಕನಾಗಲು ದುಡಿಯುತ್ತಿದೇನೆ , ಜೀವನದಲ್ಲಿ ಯಾವುದೇ ಆದರ್ಶ , ಆಶೋತ್ತರ ಇಟ್ಟು ಕೊಂಡಿಲ್ಲ , ನನ್ನ ಪ್ರಕಾರ ಅವೆಲ್ಲ ವ್ಯಕ್ತಿ ಉನ್ನತಿ ಪಡೆದ ನಂತರ ಇತರರಿಗೆ ಹೇಳಲು ಬಳಸುವ ಸವಕಲು ಪದಗಳು . ಆಕಸ್ಮಾತ್ ನೀವು ಆಶೋತ್ತರ ಇಟ್ಟು ಕೊಂಡರೆ ಇಂದಿನ ಪ್ರಪಂಚದಲ್ಲಿ ಅದು ಪಲಿಸುವುದು ಇಲ್ಲ , ಡಾಕ್ಟರ ಮಗ ಡಾಕ್ಟರ , ಆಫೀಸರ್ ಮಗ ಆಫೀಸರ್ , ಕೆಟ್ಟ ಕೋತಿ ಮೂತಿ ಇದ್ದರು ,ಆಕ್ಟರ್ ಮಗ ಆಕ್ಟರ್ .,ಅದಕ್ಕೆ ನಾನು ಬಿಂದಾಸ್ .., ನನಗೆ ಯಾವುದೇ ಗುರಿ ಇಲ್ಲ , ಏನಾದರು ಆಗ ಬೇಕು ಎನ್ನುವ ಆಹಾಕರ ಇಲ್ಲ . ಸರಿ ಬ್ಯಾಕ್ ಟು ಪ್ರೆಸೆಂಟ್ .
ಘಂಟೆ ೮.೩೦
ಓಂ ಕ್ಯಾಲೆಂಡರ್ಗೆ ನಮಿಸಿ ಎದ್ದೆ , ಹಲ್ಲುಜ್ಜುವುದು ಬೇಸರ ಎನಿಸಿತು ಬರಿ ಬಾಯಿ ಮುಕ್ಕಳಿಸಿ , ನಿನ್ನೆ ರಾತ್ರಿ ಫ್ಲಾಸ್ಕ್ ತುಂಬಿಸಿದ್ದ ಕಾಫೀ ಹೀರ ತೊಡಗಿದೆ , ಹೊಟ್ಟೆಯಲ್ಲಿ ಗುಡು ಗುಡು , ವಿಸರ್ಜನೆ , ಶಾಸ್ತ್ರಕ್ಕೆ ತಲೆಮೇಲೆ ನಾಲ್ಕು ಚೊಂಬು ನೀರು ಹುಯ್ದು ಕೊಂಡು ಸ್ನಾನ ಮುಗಿಸಿದೆ , ನಿತ್ಯವೂ ಹೀಗೆ .., ಯಾಂತ್ರಿಕ ಬದುಕು , ನನಗೆ ಅದರ ಬಗ್ಗೆ ಬೇಜಾರಿಲ್ಲ , ಅದು ನನಗೆ ಹೊಂದಿಕೆ ಆಗಿ ಬಿಟ್ಟಿದೆ , ವಾರದಿಂದ ಅದೇ ಪ್ಯಾಂಟು , ಅದೇ ಷರಟು .., ಥೂ ., , ಜೇಬಿನಲ್ಲಿ ಕಾಸಿದ್ದರೆ ತಾನೇ ಆಪ್ಷನ್ ಮಾತು , ಅವನ್ನೇ ಧರಿಸಿ ಮನೆಯಿಂದ ಹೊರಬಿದ್ದೆ .
ಘಂಟೆ ಬೆಳಿಗ್ಗೆ ೧೦ . ೩೦
ರಸ್ತೆಯಲ್ಲಿ ನಾನು ಬೇರೊಬ್ಬ ವ್ಯಕ್ತಿ .., ನನಗ್ಯಾರು ಪರಿಚವಿಲ್ಲ , ಗುರುತಿಸಿ ಹಾಯ್ ಹೇಳುವರಿಲ್ಲ , ಅಂದ ಮೇಲೆ ನನ್ನಷ್ಟು ಸುಖಿ ಇನ್ನ್ಯಾರು ? ಜೇಬು ತಡಕಿದಾಗ ಸಿಕ್ಕದ್ದು ಇಪ್ಪತೈದು ರುಪಾಯಿ , ಇನ್ನೂ ನಾಲ್ಕು ದಿನ ಬಸ್ ಚಾರ್ಜ್ ಬೇರೆ ಕೊಡಬೇಕು , ಹೊಟ್ಟೆ ಬೇರೆ ಹಸಿತ ಇದೆ , ಏನು ಮಾಡುವುದು .., ಯೋಚಿಸುತ್ತ , ನನ್ನ ನಡಿಗೆಯ ವೇಗ ಹೆಚ್ಚಿತ್ತು , ರಂಗಾ ., ಎಯ್ ರಂಗ .., ದನಿ ಬಂದತ್ತ ತಿರುಗಿದೆ ., ಲಕ್ಷಣವಾಗಿ , ಚಂದದ ಚೂಡಿದಾರು ಧರಿಸಿದ್ದ ಸುಮಾರು ನನ್ನ ವಯಸಿನ ಹುಡುಗಿ , ಒಮ್ಮೆ ಗಲಿಬಿಲಿ ಆಯ್ತು ತೋರಿಸಿಕೊಳ್ಳದೆ “ಎಸ್ ” ಎಂದೇ .
ಯಾಕೋ ಗೊತಗಲಿಲ್ವಾ .., ನಾನು ಕಣೋ ಚೇತು …., ಚೇತನ ಶೆಟ್ಟಿ .., ಎಂದಳು . ಮನಸ್ಸು ಕಾಲೇಜ್ ದಿನಗಳಲ್ಲಿ ಅರೆಕ್ಷಣ ಹುಡುಕಾಡಿ ., ಬಾಯ ಮೂಲಕ ಹೇಳಿಸಿತು .., ಗೊತ್ತಾಯ್ತು .
ಎನ್ನ್ಮಡ್ತಾ ಇದ್ದೀಯ ? .., ಪ್ರಶ್ನೆ , ಹೀಗೆ ಸುಮ್ಮನೆ ಉತ್ತರ .
ಎಷ್ಟು ದಿನ ಆಯ್ತು ., ಫ್ರೀ ಇದ್ದೀಯ .., ಒಂದು ಕಾಫಿ ಕುಡಿಯೋಣವ ? ನಾರ್ಮಲ್ ಆಗಿ ಉತ್ತರ ನೋ .., ಬಟ್ ಹಸಿದ ಹೊಟ್ಟೆ .., ಗೋಣು ಅಲ್ಲಾಡಿಸಿದೆ , ಹೋಟೆಲ್ ಹೊಕ್ಕೆವು , ಈ ಚೇತನ ಶೆಟ್ಟಿ ಬಗ್ಗೆ ನಿಮಗೆ ಹೇಳಬೇಕು , bcom ಓದುವಾಗ ., ಮೊದಲ ವರ್ಷ ಇವಳ ಹೆಸರು ಬರಿ ಚೇತನ .., ಯಾರೋ ನಕ್ಕರಂತೆ ಶೆಟ್ಟಿ ಸರ್ ನೇಮ್ ಕೇಳಿ , ಕೊನೆ ವರ್ಷಕ್ಕೆ ಚೇತನ ಶೆಟ್ಟಿ ಆಗಿದ್ದಳು ., ಶಿಲ್ಪಾ ಶೆಟ್ಟಿ ಫೇಮಸ್ ಆದಳಲ್ಲ ಅದರ ಮಹಿಮೆ ಗುರು ಅಂತ ಹುಡುಗರು ಮಾತನಾಡಿ ಕೊಂಡರು , ನೂರಾರು ಹುಡುಗಿಯರು ಇದ್ದರೂ ಚೇತನ ಸ್ಪೆಷಲ್ .., ಈ ಘಟನೆ ನಂತರ ನನ್ನ ಪಾಲಿಗೆ ಅವಳು ನೋರರಲ್ಲಿ ಒಬ್ಬಳಾದಳು .

ಎಷ್ಟೋ ವರ್ಷ ಸಿಗದ ಚೇತನ ಶೆಟ್ಟಿ , ಸಿಕ್ಕಳು , ಕಾಫಿ ಜೊತೆಗೆ ತಿಂಡಿ ಕೊಡಿಸಿ ಭಾಯ್ ಹೇಳಿ ಹೊರಟೆ ಹೋದಳು , ಕಾಲೇಜ್ ನಲ್ಲಿದಾಗ ನಾನು ಎಲ್ಲದರಲ್ಲೂ ಮೊದಲು , ಎಕ್ಷ್ಚಮ್ ನಂತರ ಪೇಪರ್ ಹೇಗಿತ್ತು ಅಂತ ಕೇಳುವ ಮಿತ್ರರ ದಂಡು ದೊಡ್ಡದಿತ್ತು , ಚೇತನ ಕೂಡ ಅಷ್ಟೇ ., ಹೆಚ್ಚು ಮಾತು , ಕಥೆ ಏನೂ ಇರಲಿಲ್ಲ , ಏನೂ ಅಂತೂ ದುಡ್ಡು ಖರ್ಚಾಗದೆ ಹೊಟ್ಟೆ ತುಂಬಿತ್ತು .
ಘಂಟೆ ಮೂರು ಮುಕ್ಕಾಲು .
ಕೂದಲು ತುಂಬಾ ಬೆಳದಿದೆ ಅನ್ನಿಸಿತು , ಟೇಬಲ್ ಮೇಲಿದ್ದ ಕತ್ತರಿ ( ನಾನು ಈ ರೂಂ ಬಾಡಿಗೆಗೆ ಪಡೆದಾಗ , ಈ ಕತ್ತರಿ ಇಲ್ಲೇ ಇತ್ತು ನಾನು ಕೊಂಡದ್ದು ಅಲ್ಲ ) ಕೈಗೆತ್ತಿಕೊಂಡೆ , ಅಂಗೈ ಅಗಲದ ಕನ್ನಡಿ ನೋಡಿ ಕೊಳ್ಳುತ್ತಾ ಕತ್ತರಿಸ ತೊಡಗಿದೆ , ಎಷ್ಟೋ ಭಾರಿ ಅನಿಸಿದೆ , ಐಶರಾಮಿ ಸಲೂನ್ ನಲ್ಲಿ ಪಾಪ್ ಸಂಗೀತ ಕೇಳುತ್ತ ಹೇರ್ ಕಟ್ ಮಾಡಿಸಿಕೊಳ್ಳ ಬೇಕೆಂದು , ಆದರೆ .., ಮೂರು ವರ್ಷ ಕಳೆದಿದೆ ನನಗೆ ನಾನೆ ಹೇರ್ ಕಟ್ ಮಡಿ ಕೊಳ್ಳುವುದು ಕಲಿತು .
ನನ್ನ ಬಾಸ್ ಮಗನ ಬರ್ತ್ಡೇ ಪಾರ್ಟಿ ಇದೆ , ಆರು ವರೆಗೆ , ರಾತ್ರಿ ಊಟ ಚಿಂತೆ ಕೂಡ ಇಲ್ಲ.
ಸಂಜೆ ೬. ೩೦
ಬರ್ತ್ಡೇ ಪಾರ್ಟಿ , ನಗು , ಕೇಕೆ, ಸಂಭ್ರಮ, ಬಲೂನು ಡಬ್ ಎನಿಸಿದರು, ಮಗು ನೀನು ನೂರ್ಕಾಲ ಚನ್ನಾಗಿ ಬಾಳು ಎಂದು ನಮಮ್ಮ ಹೇಳುವುದನ್ನೇ ಇವರು ಇಂಗ್ಲಿಷ್ ನಲ್ಲಿ , ಕೋರಸ್ ನಲ್ಲಿ ಹಾಡಿದರು , ನೂರಾರು ಧ್ವನಿಗಳಲ್ಲಿ ನನ್ನ ಧ್ವನಿ ಯಾರಿಗೂ ಕೇಳಿಸಲೇ ಇಲ್ಲ .
ಮನ ತೃಪ್ತಿ ಬಿಸಿ ಬೇಳೆ ಬಾತು ತಿಂದು ಎರಡು ಜೆಲೆಬಿ ಹೊಟ್ಟೆ ಗಿಳಿಸಿದೆ , ಫೋಟೋ .., ಎಂದರೆ ಅಲರ್ಜಿ , ಬಟ್ .., ನನ್ನ ಬೇಕು , ಬೇಡ ಕೇಳುವ , ಅದಕ್ಕೆ ಮನ್ನಣೆ ಕೊಡುವ ಜನ ಇವರ ? ಅಥವಾ ನಾನಷ್ಟು ದೊಡ್ಡವನ ? ಯಕಶ್ಚಿತ್ ಎರಡು ಹೊತ್ತು ಊಟಕ್ಕೆ ತತ್ವಾರ .
ಘಂಟೆ ೧೦. ೩೦
ಹಾಸಿಗೆ ತುದಿಯಲ್ಲಿ ಹರಿದಿದೆ , ಹತ್ತಿ ಹೊರಗೆ ಇಣುಕ ಹಾಕಿ ಹೊರ ಜಗತ್ತಿನಲ್ಲಿ ಆಗುತ್ತಿರುವ ಇಷ್ಟೊಂದು ವಹಿವಾಟು ನೋಡಲೇ ಇಲ್ಲವಲ್ಲ .., ಛೆ ಎಂದು ಹೊಸ ನೋಟ ಹರಿಸಿವಂತೆ ಕಾಣುತಿದೆ , ವಾರದಿಂದ ಹತ್ತಿ ತುರುಕಿ , ಹೊಲಿಗೆ ಹಾಕಬೇಕೆಂದು ಅಂದು ಕೊಂಡು ದಿನ ದೂಡಿದ್ದೆ , ಇಂದು ವಾರದ ನನ್ನ ಆಸೆ ಪೂರ್ಣ ಗೊಳಿಸಿ ಕೊಂಡೆ . ನಿದ್ದೆ ಯಾವಾಗ ಬಂತೋ ನನಗೆ ತಿಳಿಯದು
೧೫ ವರ್ಷದ ನಂತರ
ಘಂಟೆ ೮. ೩೦
ಕಣ್ಣು ಬಿಟ್ಟಾಗ ಕಂಡಿದ್ದು , ಅರೆನಗ್ನ ಯುವತಿಯ ಮುಂಗುರಳ ನೇವರಿಸುವ ಯುವಕನ ಚಿತ್ರ , ತೈಲ ಚಿತ್ರ , ಕಳೆದ ವಾರವಷ್ಟೇ ಸೌತ್ ಆಫ್ರಿಕಾ ದಲ್ಲಿ ಹರಾಜಿಲ್ಲ ಖರೀದಿಸಿದ್ದೆ , ಹತ್ತು ಲಕ್ಷ ಕೊಟ್ಟು , ಅಲಾರಂ ಇಡುವ ಅಭ್ಯಾಸ ತಪ್ಪಿ ಎಷ್ಟೋ ವರ್ಷ ಕಳೆದಿದೆ , ಕಣ್ಣು ಬಿಡಲು ಬಹಳ ಹೊತ್ತಿನಿಂದ ಪ್ರಯತ್ನ ಪಟಿದ್ದೆ , ಅದೀಗ ಫಲಿಸಿದೆ .
ಇಂದು ಭಾನುವಾರ , ನಾನು ಹಾಗೂ ನನ್ನಂತ ಹಲವರಿಗೆ , ವಾರ ಹಾಗು ದಿನಗಳಲ್ಲಿ ವ್ಯತ್ಯಾಸವಿಲ್ಲ .., ಭಾನುವಾರ ., ಎಲ್ಲಾ ದಿನದಂತೆ .., ಯಾವತ್ತು ಜಂಜಾಟವಿಲ್ಲ , ಬೇಕಾದಾಗ ಏಳಬಹುದು , ಬೇಕಾದ್ದು ಮಾಡಬಹುದು .., ಎಲ್ಲಾ ದಿನವೂ ಹಬ್ಬವೇ , ಪ್ರಿಯವೇ .
ಘಂಟೆ ೧೦
ವಾರ ಪತ್ರಿಕೆ ಯಲ್ಲಿ ನನ್ನ ಸಂದರ್ಶನ ಪ್ರಕಟವಾಗಿದೆ , ಓದುತ್ತಾ ನಗು ಬಂತು .., ಏನೆಲ್ಲಾ ಬರೆದಿದ್ದಾರೆ ? ಅಬ್ಬಾ .., ಸ್ವಂತ ಹೇರ್ ಕಟ್ ಮಾಡಿಕೊಳ್ಳು ವುದು ಕಲೆ ಯಂತೆ ಎಲ್ಲರಿಗೂ ಸಿದ್ದಿಸುವುದಿಲ್ಲವಂತೆ , ಶಾಂತ ವ್ಯಕ್ತಿಯಂತೆ , ಕಷ್ಟದಲ್ಲಿ ಇರುವವರಿಗೆ ತುಂಬಾ ಸಹಾಯ ಮಾಡ್ತಿನಂತೆ .., ಇನ್ನೂ ಏನೇನೂ .., ಮದುವೆ ಆಗಿಲ್ಲ ದಿದ್ದರೆ ಪಕ್ಕಾ ಬ್ರಹ್ಮಚಾರಿ ಅಂತ ಬರೆಯುತ್ತಿದರೋ ಏನೋ ? ಥೂ ಕರ್ಮ .., ನನ್ನ ಕಂಪನಿ ಜಾಹಿರಾತು ಮತ್ತೆ ಒಂದು ವರ್ಷಕ್ಕೆ ನಿನ್ನೆ ಯಷ್ಟೇ ರಿನ್ಯೂ ಮಾಡಿದ್ದರ ಮಹಿಮೆ .
ಘಂಟೆ ೧೧. ೩೦
ವಿಶಾಲವಾದ ಕಟ್ಟಡ ಒಂದರ ಉದ್ಘಾಟನೆ , ನನ್ನ ಮಿತ್ರ ., ಸಮಾಜದಲ್ಲಿ ಹೆಸರುವಾಸಿ .., ಕಟ್ಟಡ ಪೂರ್ಣ ಗೊಳಿಸಲು ನನ್ನಿಂದ ಪಡೆದದ್ದು ಕೇವಲ ೫ ಕೋಟಿ , ಋಣ ಸಂದಾಯ .
ಘಂಟೆ ೨ . ೩೦
ಪ್ರಸಿದ್ದ , ಐಶಾರಮಿ ಹೋಟೆಲ್ ನಲ್ಲಿ ಊಟ , ಬಿಲ್ ಪಾವತಿಸ ಬೇಕಿಲ್ಲ , ಹೋಟೆಲ್ ಮಾಲಿಕ ನನಗೆ ಪರಿಚಿತ.
ಘಂಟೆ ಮೂರು ಮುಕ್ಕಾಲು .
ನಾನು ಇಚ್ಚೆ ಪಟ್ಟರೆ , ಪ್ರಖ್ಯಾತ ಸಲೂನ್ ನಲ್ಲಿ ಪಾಪ್ ಸಂಗೀತ , ಕೇಳುತ್ತಾ ಹೇರ್ ಕಟ್ ಮಾಡಿಸಿ ಕೊಳ್ಳ ಬಹುದು , ನನಗೆ ಇಚ್ಚೆ ಇಲ್ಲ , ಕೂದಲು ಬಹಳ ಬೆಳೆದಿದೆ ಅನಿಸಿ , ಹೇರ್ ಕಟ್ ಮಾಡಿ ಕೊಳ್ಳ ತೊಡಗಿದೆ .
ಘಂಟೆ ೬. ೩೦
ದಿನ ನೂರು ಪಾರ್ಟಿಗೆ ಆಹ್ವಾನ ಇರುತ್ತೆ , ಯಾವುದು ಅಂತ ನೆನಪಿಡುವುದು ? ಹೋದರು ತಿನ್ನಲು ಆಗದು , ಮಧ್ಯಾಹ್ನ ತಿಂದ ಊಟವೇ ಇನ್ನೂ ಜೀರ್ಣ ಆಗಿಲ್ಲ .
ರಾತ್ರಿ ೧೦
ನನ್ನ ತೂಕಕ್ಕೆ ಹಾಸಿಗೆಯ ತುದಿಗಳಿಂದ ‘ಪುಸ್ ‘ ಎನ್ನುತ್ತಾ ಗಲಿ ಹೊರಟಿತು , ನಿದ್ದೆ ಯಾವಾಗ ಬಂತೋ ನನಗೆ ತಿಳಿಯದು .
ಉಪ ಸಂಹಾರ .
ಏರಿ ಏರುವ ಮೊದಲು ಮೌಲ್ಯಗಳು ಇದ್ದರೂ ಮುಕ್ಕಾಗಿ ಕಾಣುತ್ತವೆ , ಏರಿ ಏರಿದ ನಂತರ , ಮೌಲ್ಯಗಳು ಮನೆ ಮೆನೆ ಮಾತಾಗುತ್ತವೆ , ಹೀಗೇಕೆ ?
ಪ್ರಮಾಣ ಮಾಡಿ ಹೇಳುತ್ತೇನೆ ನಾನು ಯಾವತ್ತು ಆದರ್ಶ , ಮೌಲ್ಯ , ಅಶೋತ್ತರ ಇಟ್ಟು ಕೊಂಡವನಲ್ಲ , ಅದರೂ ಇವತ್ತು ನಾನೊಬ್ಬ ಆದರ್ಶ ವ್ಯಕ್ತಿ .
ಹಣ ,ಅಧಿಕಾರ, ಪ್ರಚಾರ ಸಾಕು , ಮೌಲ್ಯ , ಆದರ್ಶ ಇತ್ಯಾದಿಗಳು ಏಕೆ ಬೇಕು ?

‍ಲೇಖಕರು G

June 8, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ashok

    ಒಂದಷ್ಟು ಅವಸರವಸರವಾಗಿ ಓಡುತ್ತಿದೆಯೆನ್ನಿಸಿದರೂ ಕಥೆ ಚೆನ್ನಾಗಿದೆ

    ಪ್ರತಿಕ್ರಿಯೆ
    • Anonymous

      Very nice story… very practical scenarios… specially last three sentences…are touchy…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: