ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾಗೀರಥಿ ಹೆಗಡೆ ಅವರಿಗೆ ‘ಸರಳಾ ರಂಗನಾಥ ರಾವ್ ಪ್ರಶಸ್ತಿ’

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ಸಾಹಿತ್ಯ, ಕಲೆಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕøತಿಕ ಸಂಸ್ಥೆ. ಲೇಖಕಿಯರ ಪ್ರಕಟಿತ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಲೇಖಕಿ ಒಬ್ಬರಿಗೆ ಪ್ರಶಸ್ತಿಯೊಂದನ್ನು ನೀಡುವ ಯೋಜನೆಯನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ.

2021ನೇ ಸಾಲಿನ ಪ್ರಶಸ್ತಿಗೆ ಶಿರಸಿಯ ಲೇಖಕಿ ಶ್ರೀಮತಿ ಭಾಗೀರಥಿ ಹೆಗಡೆ ಅವರನ್ನು ತೀರ್ಪುಗಾರರ ಮಂಡಳಿ ಆಯ್ಕೆ ಮಾಡಿದೆ.ಪ್ರಶಸ್ತಿಗೆ ಭಾಜನವಾಗಿರುವ ಕೃತಿ:ಕಾಲಾಂತರ (ಕಾದಂಬರಿ). ಖ್ಯಾತ ವಿಮರ್ಶಕಿ ಮತ್ತು ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ಎಲ್.ಜಿ.ಮೀರಾ, ಖ್ಯಾತ ಕವಿ ಮತ್ತು ವಿಮರ್ಶಕ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಜಿ.ಎನ್.ರಂಗನಾಥ ರಾವ್ ತೀರ್ಪುಗಾರರಾಗಿದ್ದರು. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಶಾಲು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ.ಪ್ರಶಸ್ತಿಯನ್ನು 2023ರ ಜನವರಿ ತಿಂಗಳಿನಲ್ಲಿ ಪ್ರದಾನ ಮಾಡಲಾಗುವುದು.

‍ಲೇಖಕರು Admin

7 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading