‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕಳೆದ ೨೦ ವರ್ಷಗಳಲ್ಲಿ ರಂಗಭೂಮಿ ಪಡೆದ ತಿರುವುಗಳನ್ನು ಗ್ರಹಿಸುವ, ಅವಲೋಕಿಸುವ, ವಿಶ್ಲೇಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾಗವತರು ಸಂಘಟನೆಗೆ ೧೦ ವರ್ಷ ತುಂಬಿದ ನೆನಪಿಗೆ ಕೈಗೊಂಡಿರುವ ಯೋಜನೆ ಇದು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ ಎಂ ಎಚ್ ಕೃಷ್ಣಯ್ಯ, ಡಾ ವಿಜಯಾ ಅವರು ಈ ಯೋಜನೆಯ ಮೇಲುಸ್ತುವಾರಿ ವಹಿಸಿದ್ದಾರೆ. ಈ ಕಾರ್ಯಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಆಯ್ದ ರಂಗಪ್ರೇಮಿಗಳನ್ನು ಆಹ್ವಾನಿಸಲಾಗಿತ್ತು.
ನಾಟಕ ಅಕಾಡೆಮಿಯ ಅಧ್ಯಕ್ಷ ಬಿ ವಿ ರಾಜಾರಾಂ, ಹಿರಿಯ ಸಾಹಿತಿ ಪ್ರೊ ಕೆ ಮರಳುಸಿದ್ಧಪ್ಪ, ಜೆ ಶ್ರೀನಿವಾಸಮೂರ್ತಿ, ರಾಜಪ್ಪ ದಳವಾಯಿ, ಮಲ್ಲಿಕಾರ್ಜುನ ಕಡಕೋಳ, ಕಿರಣ್ ಭಟ್, ಡಿ ಎಸ್ ಚೌಗಲೆ, ಎನ್ ಮಂಗಳಾ, ಹಾಲ್ಕುರಿಕೆ ಶಿವಶಂಕರ್, ಶಶಿಧರ ಅಡಪ, ಸಾಸ್ವೆಹಳ್ಳಿ ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಭಾಗವತರು ಸಂಘಟನೆಯ ರೇವಣ್ಣ ಹಾಗೂ ಶಶಿಧರ ಬಾರೀಘಾಟ್ ಅರ್ಥಪೂರ್ಣವಾಗಿ ಸಭೆ ನಿರ್ವಹಿಸಿದರು.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ-







0 Comments