ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಗವದ್ಗೀತೆ: ಎರಡೇ ಆಯ್ಕೆ

ಭಾರತ ಬಿಟ್ಟು ಎಲ್ಲಿಗೆ ತೊಲಗುವುದು?

ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು.  ನಮ್ಮ  ಶಿಕ್ಷಣ ಸಚಿವರಾದ ಕಾಗೇರಿಯವರು ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಮೇಲೆ ಇನ್ನು ಏನು ದಾರಿ ಉಂಟು.

ಕಾಗೇರಿಯವರು ಆ ರೀತಿ ಕೋಲಾರದಲ್ಲಿ ಹೇಳಿದ ದಿನ ಅವರ ಒಂದು ಪಕ್ಕ ಪೇಜಾವರ ಶ್ರೀಗಳೂ ಇನ್ನೊಂದೆಡೆ ನಮ್ಮ ಸ್ಕೂಲುಗಳಲ್ಲಿ ಭಗವದ್ಗೀತೆ ಅಭಿಯಾನ ನಡೆಸಿ ಸಿಕ್ಕಾಪಟ್ಟೆ ಪುಣ್ಯ ಕಟ್ಟಿಕೊಂಡಿರುವ ಸೊಂದಾ ಶ್ರೀಗಳೂ ವಿರಾಜಮಾನರಾಗಿದ್ದರು. ಅದರಿಂದ ಅವರಿಗೆ ಸಿಕ್ಕಾಪಟ್ಟೆ ಉಮೇದು ಬಂದು ಇದು ಶಾಖೆಯ ಕಾರ್ಯಕ್ರಮ ಅಲ್ಲ  ಎಂಬುದನ್ನು ಒಂದು ಕ್ಷಣ ಮೈಮರೆತು ಹೇಳಿರಬಹುದಾ ಅಂತ ಅನ್ನಿಸಿತು. ಮುಂದಿನ ದಿನ ಮಂತ್ರಿಗಳ ಮಾಮೂಲಿ ಸ್ಟೈಲಿನಲ್ಲಿ ನಾನು ಹಾಗೆ ಹೇಳಲೇ ಇಲ್ಲ, ನನ್ನನ್ನು ಮಿಸ್ ಕೋಟ್ ಮಾಡಿದ್ದಾರೆ ಅಂತ ಹೇಳಿಯಾರು ಅಂದುಕೊಂಡಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅಷ್ಟೆ ಅಲ್ಲದೆ ಅವರ ಪಾರ್ಟಿಯ ಭೀಷಣ ಭಾಷಣಕಾರರಾದ ಈಶ್ವರಪ್ಪ ಅದೇ ಅರ್ಥದ ಮಾತುಗಳನ್ನು ಪುನರುಚ್ಛರಿಸಿದ್ದಾರೆ.

ಇನ್ನೂ ಆಶ್ಚರ್ಯವೆಂದರೆ ಯಾವುದೇ ಅನುಮಾನ ಇಲ್ಲದೆ ಫಾಸಿಸ್ಟ್ ಅಂತ ಕರೆಯಬಹುದಾದ  ಕಾಗೇರಿಯವರ ಮಾತನ್ನು ಖಂಡಿಸಬೇಕಾದಷ್ಟು ಯಾರೂ ತಕ್ಷಣದಲ್ಲಿ ಖಂಡಿಸಿಲಿಲ್ಲ. ಭೈರಪ್ಪನವರ ಕಾದಂಬರಿಯ ಬಗ್ಗೆ ತುಂಬಾ ತಲೆಕೆಡಿಕೊಂಡ ಮಂದಿಯೂ ಸೇರಿದಂತೆ ಎಲ್ಲರೂ ಒಬ್ಬ ಮಂತ್ರಿಯ ನೇರ ಧಮಕಿಯ ಬಗ್ಗೆ ಅದೇನೂ ವಿಶೇಷ ಅಲ್ಲ ಎಂಬಂತೆ ತಣ್ಣಗಿರುವುದು ಆಶ್ಚರ್ಯವೇ.

ಈ ಅಭಿಯಾನ ಶುರುವಾದ ಮೊದಲ ಹಂತದಲ್ಲಿ ಎದ್ದ ಪ್ರಶ್ನೆಗಳಿಗೆ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ಖಡ್ಡಾಯ ಅಲ್ಲ ಅಂತ ಮತ್ತೆ ಮತ್ತೆ ಇಲಾಖೆಯ ಅಧಿಕಾರಿಗಳು, ಮಂತ್ರಿಗಳು ಹೇಳುತ್ತಾ ಇದ್ದರು. ತಾವು ಡಿಡಿಪಿಐಗಳಿಗೆ ಕಳಿಸಿದ ಸರ್ಕ್ಯುಲರ್ರುಗಳಲ್ಲಿ ಟ್ರೈನಿಂಟ್ ಗೆ ಪ್ರಾಧ್ಯಾಪಕರನ್ನು ಕಳಿಸುವುದು ಖಡ್ಡಾಯ ಅಂದಾಗಲೂ ಎಲ್ಲಾ ಮಕ್ಕಳು ಭಾಗವಹಿಸುವುದು ಖಡ್ಡಾಯ ಅಂತ ನೇರ ಹೇಳದೆ ambiguity ಕಾದುಕೊಂಡಿದ್ದರು.

ಎರಡು ವರ್ಷಗಳ ನಂತರ ಸಚಿವರು ಗೀತೆ ಬೇಡದವರು ದೇಶ ಬಿಟ್ಟು ಹೋಗಿ ಅನ್ನುತ್ತಿರುವುದು ಗಮನಿಸಬೇಕಾದ ಬದಲಾವಣೆ. ಇದನ್ನು ಗಮನಿಸದೆ ಹೋದಲ್ಲಿ ಅದು ಅಪಾಯಕಾರಿ ಕುರುಡುತನವಾದೀತು. ಮೌಲಿಕ ಶಿಕ್ಷಣ ಎಂಬ ನೇಪದಲ್ಲಿ ಗೀತೆಯನ್ನು ಹೇಳಿಕೊಡುತ್ತಿರುವುದರ ಹಿಂದಿನ ತರ್ಕವನ್ನೂ ಗಮನಿಸಬೇಕು. ನೈತಿಕತೆಯನ್ನು ಧರ್ಮಕ್ಕೂ, ಧರ್ಮವನ್ನು ಹಿಂದೂ ಧರ್ಮಕ್ಕೂ, ಹಿಂದೂ ಧರ್ಮವನ್ನು ಭಗವದ್ಗೀತೆಗೂ ನೇರ ಇಲ್ಲಿ ಸಮೀಕರಿಸಲಾಗುತ್ತಿದೆ.

ಮುಂದೆ ಓದಿ –ಬಾಗೇಶ್ರೀ

 

‍ಲೇಖಕರು G

18 July, 2011

10 Comments

  1. sandhya

    And to think that he is the education minister…. God help us

  2. raju hegade

    ಜನರ ವೋಟು ಪಡೆವ ಕಸರತ್ತು ಕಲಿತಿದ್ದರೆ.ವಿರೋದಿ ಪಕ್ಷದಲಿ ಇದನ್ನೆಲ್ಲ ಬಗ್ಗು ಬಡಿಯಬಲ್ಲ ನಯಕರಿಲ್ಲ. ಕಣ್ಣು ಚುಚ್ಚುವ ಸೂಜಿ ಕೊಲುವ ಬಡಿಗೆ ಮಾತ್ರ ನಮ್ಮ ಮುಂದಿದೆ

  3. Nagesh. KM

    Bhagavadgeetha is not a religious document it describes the way of life.Its the people who understand Geetha differently at different stages of life ,it can not be dismissed because its eternal truth.Geetha teachings are more relevent in our present day competitive life.There is nothing wrong in teaching/learning geetha.Geetha itself says we must imbibe good knowledge irrespective of its origin.

  4. Dr.D.M.Sagar

    Bhagavadgeetha is not a religion, it’s a way of life, it’s a lemma of life. Read it fully Bhageshree, understand it. We are against any forcible means of pouring it onto children, however, an optional introduction would be definitely helpful. [I do apologise G.N.Mohan for not being able to respond in a typical politically correct way, since I am not trained for this since decades!]

    • Divakara

      ಭಗವದ್ಗೀತೆ ಧರ್ಮ ಗ್ರಂಥವೋ ಅಲ್ಲವೋ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಭಾಜಪ ಸರ್ಕಾರ ಭಗವದ್ಗೀತೆಯಂತಹ ಒಂದು ಗ್ರಂಥವನ್ನು ಹಿಂದೂ ಧರ್ಮದ ಪವಿತ್ರ ಗ್ರಂಥ ಎಂದು ಬಿಂಬಿಸಿ,ತನ್ಮೂಲಕ ಹಿಂದೂ ಧರ್ಮ ಜಾಗೃತಿ ಮೂಡಿಸಲು ಯತ್ನಿಸುತ್ತಿರುವುದು ಮಾತ್ರ ಸ್ಪಷ್ಟ. ಭಗವದ್ಗೀತೆಯಲ್ಲಿ ಸಮಕಾಲೀನ ಸಂದರ್ಭದ ಎಲ್ಲ ಸಮಸ್ನೆಗಳಿಗೂ ಉತ್ತರವಿದೆ ಎಂದು ವಾದಿಸುವುದು ಸರಳೀಕೃತ ವಾದವಾಗುತ್ತದೆ. ಯಾರು ಹೇಗೇ ಬೇಕಾದರೂ ತಮ್ಮ ಇಚ್ಚಾನುಸಾರ ವ್ಯಾಖ್ಯಾನಿಸಬಹುದಾದ ಈ ಗ್ರಂಥವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಭಾರತೀಯ ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ವರ್ಣಾಶ್ರಮ ಧರ್ಮವನ್ನು ಸಂರಕ್ಷಿಸುವ ಹಾಗು ಕ್ಷಾತ್ರ ಧರ್ಮವನ್ನು ಎತ್ತಿಹಿಡಿಯುವ ಮೂಲಕ ಪ್ರಭುತ್ವವನ್ನು ಬಲಗೊಳಿಸುವ ಗ್ರಂಥವಾಗಿಯೂ ಕಾಣುತ್ತದೆ. ಹಾಗಾಗಿ ಭಗವದ್ಗೀತೆಯನ್ನು ಎಲ್ಲರೂ ಪವಿತ್ರ ಧರ್ಮ ಗ್ರಂಥವೆಂದು ಭಾವಿಸಬೇಕಿಲ್ಲ. ಕಾಗೇರಿಯವರ ಅಭಿಪ್ರಾಯವನ್ನು ಅನುಮೋದಿಸಲೂ ಬೇಕಿಲ್ಲ. ವಿರೋಧಿಗಳನ್ನು ದೇಶ ಬಿಟ್ಟು ತೊಲಗಲು ಆಜ್ಞಾಪಿಸಿರುವ ಕಾಗೇರಿಯವರು, ಇದೇ ರೀತಿ ಮುಸ್ಲಿಮರನ್ನು ಸಮುದ್ರಕ್ಕೆ ಎಸೆಯಲು ಆಜ್ಞಾಪಿಸಿದ ಥಾಕರೆಯರ ಅಪರಾವತಾರವಾಗಿ ಕಾಣುತ್ತಾರೆ. ಭಾಜಪ ಸರ್ಕಾರ ಸ್ಥಾಪಿಸಿದ್ದಕ್ಕೂ ಸಾರ್ಥಕವಾಯಿತೆಂದು ಸಂಘ ಪರಿವಾರ ಹೆಮ್ಮೆಯಿಂದ ಬೀಗುತ್ತಿರಬಹುದು. ಆದರೆ ಇಂಥವರೆಲ್ಲಾ ನಮ್ಮ ಮಂತ್ರಿಗಳಾಗಿದ್ದಾರಲ್ಲಾ ಎಂದು ಕರ್ನಾಟಕದ ಜನತೆ ಪರಿತಪಿಸುತ್ತಲೂ ಇರಬಹುದು.

    • sandhya

      hi i dont think Bhageshree has condemned Bhagavatgita or negated its essense. The article is againsta compelling it and I fully agree with it. I have read vachanas, some part of Bhagavatgita and agree that it has immense depth. But I am not arrogant enough to say that it is the ultimate truth, because idont have much knowledge about Bible, Qur-aan, Gurubaani or Jewish religion. Let that be an option, it is not right to say that if you dont follow gita you have to leave country or do you think so?

  5. A P Bhat

    ಇವರು ಹೇಳುವುದು ವೇದ ಇಕ್ಕುವುದು ಗಾಳ ಪಂಥ ದವರು. ಯಾವುದೇ ಒಳ್ಳೆಯ ವಿಚಾರವನ್ನು ಜೀವನದಲ್ಲಿ ಮೊದಲು ಅಳವಡಿಸಿ ಆಮೇಲೆ ಬೇರೆಯವರಿಗೆ ಪಾಠ ಮಾಡಲಿ.ಒಳ್ಳೆಯ ವಿಚಾರಕ್ಕೆ ಗೀತೆಯೇ ಆಗಬೇಕೆಂದಿಲ್ಲ. ಶರಣರ ಸರಳವಾದ ವಚನಗಳೆ ಸಾಕು.

  6. ಗೋಪೀನಾಥ ರಾವ್

    ಭಗವದ್ಗೀತೆಯನ್ನು ಮುಟ್ಟುವ ಯೋಗ್ಯತೆ ಇಲ್ಲದವರು ಇಂದು ಅದನ್ನು ಕಲಿಸ ಹೊರಟಿದ್ದಾರೆ. ಈ ರಾಜಕೀಯ ನಾಯಕರು ಗೀತೆಯಲ್ಲಿ ಹೇಳಿದ ನೂರಾರು ಪಾಠಗಳಲ್ಲಿ ಕನಿಷ್ಠ ಒಂದನ್ನಾದರೂ ಮೊದಲು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಿ ಆಮೇಲೆ ಇತರರಿಗೆ ಪಾಠ ಮಾಡಲಿ. ಇವರ ಕೈಯಲ್ಲಿ ಸಿಕ್ಕಿ ಗೀತೆಯೂ ಬೀದಿಗೆ ಬಂತು….!

  7. siddamukhi

    ¤vÀå ¨sÀUÀªÀ¢ÎÃvÉ ¥ÀoÀt ªÀiÁrzÀªÀgÀÄ CgÀtå MvÀÄÛªÀj ªÀiÁrzÀgÀÄ. ²ªÀªÉÆUÀÎzÀ ¸Áé«ÄÃf UÉÆÃªÀÅ ¸ÁPÁuÉ ºÉ¸ÀgÀ°è ºÀt PÉÆ¼Éî ºÉÆqÉzÀgÀÄ. E¸ÁÌ£ï ¸ÀA¸ÉÜAiÀÄgÀÄ ¨sÀÆ«Ä PÀ§½¹zÀgÀÄ. GqÀĦ ²æÃUÀ¼ÀÄ »AzÀĽzÀªÀjUÉ ¸ÉÃjzÀ PÀȵÀÚ zÉêÁ®AiÀĪÀ£ÀÄß PÀȵÀÚ ªÀÄoÀ ªÀiÁrPÉÆAqÀÄ ªÀAa¹zÀgÀÄ. ¤ÃgÁ gÁrAiÀÄ PÉÆlÖ PÀ¥ÀÄà ºÀtªÀ£ÀÄß ¹éÃPÀj¹ PÀÈvÁxÀðgÁzÀgÀÄ. ¨sÀUÀªÀ¢ÎÃvÉ »A¨Á®PÀ ¸ÀA¸ÀzÀ C£ÀAvÀPÀĪÀiÁgï 5 ¸Á«gÀ PÉÆÃn ºÀÄqÉÆÌà ºÀUÀgÀtzÀ°è °Ã£ÀgÁzÀgÀÄ. ZÉrØvÉÆlÖ AiÀÄrAiÀÄÆgÀ¥Àà ¨sÀÆPÀ§½PÉ ªÀiÁrzÀgÀÄ. ¨sÀUÀªÀ¢ÎÃvÉ £ÉÊwPÀvÉAiÀÄ vÀ¼ÀºÀ¢ JAzÀÄ ºÉüÀĪÀ ©eɦAiÀÄ ¤dªÁzÀ £ÉÊwPÉAiÀÄ §tÚ FUÀ §AiÀįÁVzÉ. »ÃUÁV J®ègÀÆ ¨sÀUÀªÀ¢ÎÃvÉ ¥ÀoÀt ªÀiÁqÀ¨ÉÃPÀÄ.
    ¹zÀݪÀÄÄT

  8. hr naveenkumar

    “ಭಗವದ್ಗೀತೆ ಒಪ್ಪದವರು ದೇಶ ಬಿಟ್ಟು ತೊಲಗಲಿ” ಎಂದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಹೇಳಿಕೆ ಅಪ್ರಭುದ್ದ ಮತ್ತು ಸಂವಿಧಾನ ವಿರೋಧಿಯಾಗಿದೆ. ಈ ಹೇಳಿಕೆಯನ್ನು ದೇಶಪ್ರೇಮಿಗಳು ತೀವ್ರವಾಗಿ ಖಂಡಿಸಬೇಕಾಗುತ್ತದೆ.
    ಈ ರಾಷ್ಟ್ರದ ಗ್ರಂಥ ಸಂವಿಧಾನವೇ ಹೊರತು ಭಗವದ್ಗೀತೆಯಲ್ಲ. ಭಾರತ ಹಲವು ಧರ್ಮ, ಜಾತಿ, ಭಾಷೆ, ಪಂಗಡ, ಆಚರಣೆಯಿಂದ ಕೂಡಿದ ದೇಶವೆಂಬುದನ್ನು ಸಚಿವರು ಮರೆತಿದ್ದಾರೆ, ನಮ್ಮ ಸಂವಿಧಾನದ ಅನುಚ್ಚೇದ 19(1) ರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವುದನ್ನು ಸಚಿವರು ಅರಿತು ಮಾತನಾಡುವುದು ಒಳಿತು. ಪ್ರಭುತ್ವವನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದೆ. ಪ್ರಶ್ನಿಸಿದವರನ್ನು ದೇಶದಿಂದ ಹೊರ ಹಾಕಿ ಎನ್ನುವ ವಿವೇಕ ಇಲ್ಲದ ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಹಿಟ್ಲರನ ಫ್ಯಾಸಿಸ್ಟ್ ದೋರಣೆಯ ಅನುಕರಣೆಯಾಗಿದೆ.
    ಪ್ರಾಥಮಿಕ ಮತ್ತು ಫೌಢಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನ ನಡೆಸಲು ಶೀರಸಿಯ ಸೋಂದಸ್ವರ್ಣವಲ್ಲಿ ಸಂಸ್ಥಾನಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆ ಹಾಗು ಶಿಕ್ಷಕರಿಗೆ ಆದೇಶಿಸುವ ಮೂಲಕ ರಾಜ್ಯದ ಬಿ.ಜೆ.ಪಿ. ಸಕರ್ಾರ ತನ್ನ ಕೋಮುವಾದಿ ಅಜೆಂಡವನ್ನು ಮುಗ್ದ ಮನಸ್ಸಿನ ಶಾಲಾ ಮಕ್ಕಳ ಮೇಲೆ ಹೇರುತ್ತಿರುವುದು ಖಂಡನೀಯ. ಈ ಅಭಿಯಾನವನ್ನು ನಡೆಸಲು ಅವಕಾಶ ನೀಡಬಾರದು ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಪ್ರಚಾರ ಹಾಗು ಧಾಮರ್ಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಯಾವುದೇ ಧರ್ಮಪ್ರಚಾರಕ್ಕೆ ಸಕರ್ಾರಿ ಶಾಲೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು.
    ಶಾಲೆಗಳು ಯಾವುದೇ ಒಂದು ಧರ್ಮದ ಆಸ್ತಿಯಲ್ಲ, ಅಲ್ಲಿ ಹಿಂದು, ಮುಸ್ಲಿಮ್, ಸಿಖ್, ಜೈನ ಹಾಗೂ ಇತರೆ ಧರ್ಮದಲ್ಲಿ ನಂಬಿಕೆ ಇರುವವರು ಅಥವ ಧರ್ಮದಲ್ಲಿ ನಂಬಿಕೆ ಇಲ್ಲದವರೂ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಯಾವುದೇ ಒಂದು ಧಾಮರ್ಿಕ ಗ್ರಂಥವನ್ನು ಶಾಲೆಗಳಲ್ಲಿ ಪ್ರಸಾರ ಮಾಡುವುದು ಭಾರತ ಸಂವಿಧಾನದ ಧರ್ಮ ನಿರಪೇಕ್ಷ ತತ್ವಕ್ಕೆ ವಿರುದ್ದವಾಗಿದೆ. ಶಾಲೆಗಳನ್ನು ಧರ್ಮದ ಪ್ರಸಾರ ಕೇಂದ್ರಗಳನ್ನಾಗಿಸಲು ಹೊರಟಿರುವ ರಾಜ್ಯ ಸಕರ್ಾರದ ಕ್ರಮ ಫ್ಯಾಸಿಸ್ಟ್ ಮನೋಭಾವದ್ದಾಗಿದೆ.
    ಭಗವದ್ಗೀತೆ ಪ್ರಶ್ನಾತೀತ ಗ್ರಂಥವಲ್ಲ ಎಂದುಕೊಂಡರೆ ಅದು ಮೂರ್ಖತನವಾದೀತು. ಆರ್ಯರ ಆಗಮನದಿಂದಲೇ ಪುರೋಹಿತಶಾಹಿ ವ್ಯವಸ್ಥೆಯ ಹೇರಿಕೆಯ ವಿರುದ್ದ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ವೈಧಿಕ ಪರಂಪರೆಯನ್ನು ಧಿಕ್ಕರಿಸಿದ ಶಿವಶರಣ ಕ್ರಾಂತಿಕಾರಿ ಬಸವಣ್ಣನವರ ಹೋರಾಟವನ್ನು ಸಚಿವರು ನೆನಪಿಸಿಕೊಳ್ಳಲಿ,. ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿಯನ್ನು ಪ್ರಶ್ನಿಸಿ ಕನಕದಾಸರು, ಕಭೀರ ದಾಸರು ಮತ್ತಿತರ ಶರಣರು ಹೋರಾಡಿದ ಇತಿಹಾಸವಿದೆ. ಭಗವದ್ಗೀತೆಯ ಕುರಿತಾಗಿ ಕೆಲವು ಪ್ರಶ್ನೆಗಳಿದ್ದು ಅವುಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗಿದೆಯೆಂದು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ಈ ಸನಾತನಿಗಳು ಮರೆತಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಜಾತಿ ಭೇದವನ್ನು ಸಮರ್ಥಿಸುವ ಮನುಸ್ಪ್ರುತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ರವರು ಸುಟ್ಟು ಹಾಕಿ ತಿರಸ್ಕರಿಸಿದ್ದನ್ನು ಸಚಿವರು ಮನದಟ್ಟುಮಾಡಿಕೊಳ್ಳಬೇಕು.
    ಭಗವದ್ಗೀತೆ ರಾಷ್ಟ್ರೀಯ ಗ್ರಂಥವೂ ಅಲ್ಲ, ಎಲ್ಲಾ ಹಿಂದುಗಳ ಪವಿತ್ರ ಗ್ರಂಥವೂ ಅಲ್ಲ. ಬದಲಾಗಿ ಕೆಲ ವೈದಿಕರ ಗ್ರಂಥವಷ್ಟೇ ಎಂದು ಸಚಿವರು ತಿಳಿಯಬೇಕಾಗಿದೆ. ಇದನ್ನು ಸಾರ್ವತ್ರೀಕರಣಗೊಳಿಸುವುದು ಸಂವಿಧಾನಕ್ಕೆ ತೋರಿದ ಅಪಚಾರ. ಪ್ರಜಾಪ್ರಭುತ್ವ, ಸಂವಿಧಾನ, ಶಾಸಕಾಂಗ ಇವುಗಳು ರಚಿತವಾಗಲು ವಿದೇಶಿ ತಜ್ಞರ ಕೊಡುಗೆಯನ್ನ ಯಾರೂ ಮರೆಯುವಂತಿಲ್ಲ. ಈ ನಾಡಿನಲ್ಲಿ ವೈಚಾರಿಕ ಕ್ರಾಂತಿಗೆ ಕರೆ ನೀಡಿದ ರಾಷ್ಟಕವಿ ಕುವೆಂಪುರವರ ಸಾಹಿತ್ಯವನ್ನು ಓದಿ ವಿಶ್ವ ಮಾನವನಾಗಲು ಕಾಗೇರಿಯವರು ಪ್ರಯತ್ನಿಸಿದರೆ ಅದು ಶಿಕ್ಷಣ ಸಚಿವರ ಸ್ಥಾನಕ್ಕೆ ಸಲ್ಲುವ ಗೌರವ.
    ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ, ಜಾತಿವ್ಯವಸ್ಥಯನ್ನು ಸಮರ್ತಿಸಲಾಗಿದೆ. ಯಾವುದೇ ಪ್ರತಿಫಲ ನಿರೀಕ್ಷಿಸದೇ ಸುಮ್ಮನೇ ದುಡಿಯಬೇಕು ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿದ್ದು ಎನ್ನುವ ಗೀತೆಯಸಾರ ಗುಲಾಮಗಿರಿ ಮತ್ತು ಪಾಳೇಗಾರಿ ವ್ಯವಸ್ಥೆಯನ್ನು ಪ್ರೋಸ್ತಾಯಿಸುವಂತಿದೆ. ಎದು ಶ್ರಮಶಕ್ತಿಯನ್ನು ಕಡೆೆಗಣಿಸುತ್ತದೆ. ಪುನರ್ಜನ್ಮ, ಪಾಪ-ಪುಣ್ಯ, ಆಸ್ತಿಗಾಗಿ ಸಹೋದರನ್ನು ಕೊಲ್ಲು ಹೀಗೆ ಮೌಡ್ಯತೆಯನ್ನ ಸಾರುವ ಜೀವವಿರೋಧಿ ಸಂದೇಶಗಳು ಗೀತೆಯಲ್ಲಿವೆ. ಹೀಗಾಗಿ ಇದು ಸರ್ವಸಮ್ಮತವಲ್ಲ. ಇದನ್ನು ಅನುಸರಿಸುವುದು ಕೆಲವರ ಖಾಸಗೀ ವಿಚಾರ. ಸರ್ಕಾರಿಶಾಲೆಗಳಲ್ಲಿ ಅಭಿಯಾನದ ಮೂಲಕ ಅಧಿಕೃತಗೊಳಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
    ಸರ್ಕಾರಿ ಶಾಲೆಗಳು ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿವೆ, ಸುಮಾರು ಶೇ 58 ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಶಿಕ್ಷಣ ವ್ಯಾಪಾರೀಕಣ, ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಸಕರ್ಾರ ಮುಂದಾಗುತ್ತಿಲ್ಲ. ಬದಲಾಗಿ ಈ ರೀತಿಯ ಕೋಮುವಾದಿ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಸರ್ಕಾರದ ಹೊಣೆಗೇಡಿತನವಾಗಿದೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಒಪ್ಪದಿರುವ ಭಗವದ್ಗೀತೆಯನ್ನು ಶಾಲೆಗಳಲ್ಲಿ ಭೋಧಿಸುವ ಅಗತ್ಯವಿಲ್ಲ. ಸಂವಿಧಾನ ಬದ್ದ ಶಾಲೆಗಳು ಆರ್.ಎಸ್.ಎಸ್. ಕೇಂದ್ರಗಳಾಗಬೇಕಿಲ್ಲ. ಅಪ್ರಾಪ್ತ ಎಳೇ ಮಕ್ಕಳಲ್ಲಿ ಬಲವಂತದ ಮತ ಪ್ರಚಾರ ಮಾಡುತ್ತಿರುವ ತಾವು ಕಾನೂನು ಉಲ್ಲಂಘಿಸುತ್ತಿದೆ. ಇಂತಹ ಸಂವಿಧಾನ ವಿರೋಧಿ ಅಭಿಯಾನವನ್ನು ರಾಜ್ಯ ಸಕರ್ಾರ ಕೂಡಲೇ ಹಿಂಪಡೆಯಬೇಕು ಮತ್ತು ಶಿಕ್ಷಣ ಸಚಿವ ಕಾಗೇರಿ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು.
    – ಹೆಚ್.ಆರ್.ನವೀನ್ ಕುಮಾರ್
    ಬೆಂಗಳೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading