ಬ್ಲಾಗ್ ನಲ್ಲೊಂದು ಕಳ್ಳತನ ಪ್ರಕರಣ..

ಬ್ಲಾಗ್ ಲೋಕದ ಅಡುಗೆ ಮನೆ ಎಂದೇ ಹೆಸರಾದ ‘ಪಾಕ ಚಂದ್ರಿಕೆ’ ಸಾಕಷ್ಟು ಅಡುಗೆ ಗುಟ್ಟುಗಳನ್ನು ಹೇಳಿಕೊಡುತ್ತಾ ಬಂದಿದೆ. ಪತ್ರಕರ್ತ ಅರವಿಂದ ನಾವಡ ಅವರ ಬ್ಲಾಗ್ ಇದು. ಅವರ ಬ್ಲಾಗ್ ನಿಂದ ಅನಾಮತ್ತಾಗಿ ಲೇಖನ ಕದ್ದ ಬಗ್ಗೆ ಅರವಿಂದ ನಾವಡ ಅವರೇ ಹಂಚಿಕೊಂಡಿರುವ ಕಥೆ ಇಲ್ಲಿದೆ.


ನನ್ನ ಈ ಮಾತು ಹೇಳುತ್ತಿರುವುದು ಸುಮ್ಮನೆ ಅಲ್ಲ. “ಗೋಪಿಕಾಳ ಅಡುಗೆ ಮನೆಯಿಂದ” ಎನ್ನೋ ಹೆಸರಿನ ಬ್ಲಾಗಿನಲ್ಲಿ ನನ್ನ ಪಾಕಶಾಲೆಯಿಂದ ಯಥಾವತ್ತಾಗಿ ಕದಿಯಲಾಗಿದೆ.
“ಬ್ಯಾಚುಲರ್ ಕಿಚನ್’ ನಲ್ಲಿ ಬೆಳ್ಳುಳ್ಳಿ ಅನ್ನ ಎನ್ನೋ ಶೀರ್ಷಿಕೆಯಡಿ ನಾನು ಪ್ರಕಟಿಸಿದ್ದು ಏಪ್ರಿಲ್ 23, 2009 ರಂದು. ಗೋಪಿಕಾಳ ಅಡುಗೆ ಮನೆಯಲ್ಲಿ ಪ್ರಕಟವಾಗಿರುವುದು ಜುಲೈ 31 ರಂದು 2009 ರಲ್ಲಿ.
ಇಷ್ಟು ದಿನವಾದರೂ ಈ ಕದ್ದದ್ದು ನನಗೆ ತಿಳಿದೆ ಇರಲಿಲ್ಲ. ಕೆಲವು ನನ್ನ ಬ್ಲಾಗ್ ನ ಕಾಯಂ ಓದುಗರು ಇಮೇಲ್ ಮಾಡಿ ಎಚ್ಚರಿಸಿದಾಗಲೇ ತಿಳಿದದ್ದು.
ನನ್ನ ಲೇಖನದ ಶೀರ್ಷಿಕೆಯಿಂದ ಹಿಡಿದು ಪ್ರತಿ ಪದವನ್ನೂ ಹಾಗೆಯೇ ಕದಿಯಲಾಗಿದೆ. ಅವರು ಮಾಡಿದ ಮಹಾನ್ ಸಾಧನೆಯೆಂದರೆ ಒಂದು ಫೋಟೋ ಹಾಕಿರುವುದು, ಅದು ಎಲ್ಲಿಂದ ಕದ್ದದ್ದೋ ಗೊತ್ತಿಲ್ಲ. ಟಿಪ್ಸ್ ನಿಂದ ಹಿಡಿದು ಎಲ್ಲವನ್ನೂ ಹಾಗೆಯೇ ಯಥಾವತ್ತಾಗಿ ಕದಿಯುವುದೆಂದರೆ ನಿಜಕ್ಕೂ ನಾಚಿಕೆಗೇಡು.
ಒಂದುವೇಳೆ ನನ್ನ ಪೋಸ್ಟ್ ಅನ್ನು ಅವರು ಬಳಸುವಾಗ ಎಲ್ಲಿಯಾದರೂ ಒಂದೆಡೆ ನನ್ನ ಬ್ಲಾಗ್ ನ ಹೆಸರು ಉಲ್ಲೇಖಿಸಬೇಕಿತ್ತು. ಹೀಗೆ ಕದ್ದು ವೀರರಾಗುವವರಿಗೆ ಏನೆಂದು ಕರೆಯಬೇಕೋ ಗೊತ್ತಿಲ್ಲ, ನೀವೇ ಯಾರಾದರೂ ಹೇಳಬೇಕು. ಹೀಗೆ ಮಾಡಿದವರು ತಮ್ಮ ಹೆಸರನ್ನು ರವೀಂದ್ರ ಹೆಗಡಾಲ್ ಎಂದು ಕರೆದುಕೊಂಡಿದ್ದಾರೆ….ಹೀಗೆ ಕದಿಯೋವರಿಗೆ ಜೈ ಹೋ ಎನ್ನಬೇಕು !

‍ಲೇಖಕರು avadhi

April 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಶಾಮ್

    ನಾವಡರೆ,
    ಕದಿಯುವುದೇ ಆದರೆ, ಕುಂಬಳಕಾಯಿ ಕದಿಯಬೇಕು, ಬೆಳ್ಳುಳ್ಳಿ ಏಕೋ.
    ನನಗೆ ಅಸಿಡಿಟಿ ಜಾಸ್ತಿಯಾಗಿರುವ ಈವಾಗ ಇದನ್ನು ಮತ್ತೆ ನೆನಪಿಸಿದ ಅವಧಿಗೆ ಧನ್ಯವಾದಗಳು. ಸಂದರ್ಭೋಚಿತ!
    http://thatskannada.oneindia.in/recipe/rice/2009/0915-bachelors-favourite-garlic-chitranna-recipe.html
    ಅನ್ಯಥಾ ಶರಣಂ ನಾಸ್ತಿ. ಇವತ್ತು ನನ್ನ ಅಡುಗೆ ಮನೆಯಲ್ಲಿ ಮತ್ತೆ ಬೆಳ್ಳುಳ್ಳಿ ಚಿತ್ರಾನ್ನ.
    ಶಾಮಿ

    ಪ್ರತಿಕ್ರಿಯೆ
  2. Netravathi Abbokkaraka Ubar

    ಕಳ್ಳರಿದ್ದಾರೆ ಜೋಕೆ!!!
    ಅಂದ ಹಾಗೆ ತಾವು ಯಾವ ಊರಿನವರು
    ಸ್ವಾಮಿ ?ಬೇಕಾಬಿಟ್ಟಿ ಬೆಳ್ಳುಳ್ಳಿ ಪ್ರೇಮಿ ಯಾಗಿ ಕಾಣುತ್ತೀರಿ?
    ಹೀಗೆ ತಿಂದರೆ ಬೆಳ್ಳುಳ್ಳಿಯ ಮಾರ್ಕೆಟ್ ದರ ಇನ್ನೂ ಹೆಚ್ಚಬಹುದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: