ಪ್ರೀತಿಯ ಎಲ್ಲರಿಗೆ ನಮಸ್ಕಾರ. ಖುಷಿಯ ಸುದ್ದಿಯೊಂದನ್ನು ಬೊಗಸೆಯಲ್ಲಿ ಹಿಡಕೊಂಡು ನಿಮ್ಮೆಲ್ಲರ ಮುಂದೆ ಧುತ್ತೆಂದು ಬಂದು ಹಂಚೋದಕ್ಕೆ ನಿಂತಿದ್ದೇನೆ. ಈ ಖುಷಿ ಖಾಲಿಯಾದಾಗ ಮತ್ತೆ ಸದಾ ಹಾರೈಸುವ ನಿಮ್ಮೆಲ್ಲರ ಮುಂದೆ ನಿಂತು ‘ಭವತಿ ಭಿಕ್ಷಾಂದೇಹಿ’ ಅನ್ನೋದಕ್ಕೆ ನಂಗೆ ಖುಷಿಯೇ.
ವಿಚಾರ ಏನು ಅಂತ ಹೇಳಿಬಿಡ್ತೇನೆ. ನನ್ನ ಸಾಲುಗಳು(ಕವನಗಳು ಅಂತ ನೀವು ಆವತ್ತು ಕರೆದ ನಾ ಬರೆದ ಅದೇ ಆ ಸಾಲುಗಳು) ಪುಸ್ತಕ ರೂಪಕ್ಕೆ ಬಂದಿವೆಯಂತೆ. ಹೆಸರೇನು ಗೊತ್ತ?
“ಬೊಗಸೆಯಲ್ಲಿ ಬೆಳದಿಂಗಳು”
ಶಿರಸಿ ಕಾಲೇಜಿನಲ್ಲಿ ನನಗೆ ಕನ್ನಡ ಕಲಿಸಿಕೊಟ್ಟ ಪ್ರಿಯ ಪ್ರೊ.ವಿಜಯನಳಿನಿ ಮೇಡಮ್ಮು ಮುನ್ನುಡಿ ಬರೆದು ಹರಸಿದ್ದಾರಲ್ಲದೇ ಪುಸ್ತಕಕ್ಕೆ ಹೆಸರಿಟ್ಟವರೂ ಅವರೇ.
ಅಪಾರ ಅವರು ಚೆಂದದ ಮುಖಪುಟ ರಚಿಸಿಕೊಟ್ಟಿದ್ದಾರೆ. ಮುಖಪುಟದಲ್ಲಿನ ಚಿತ್ರ ಶಾಂತಲಾ ಭಂಡಿ ಅಂದಾಗ ನಿಮಗೆ ಖಂಡಿತವಾಗಿ ನೆನಪಾಗುವ ಪುಟ್ಟಪಾಪುವಿನ ಪಾದಗಳು. ಈ ಚಿತ್ರ ಕೊಟ್ಟವರು ಮಂಜುನಾಥ್ ಭಟ್ (ಹಿತ್ತಲಮನೆ ಗಿರೀಶಣ್ಣ).
ಬೆನ್ನುಡಿಯಲ್ಲಿ ನನ್ನ ಬೈದವರು ನನ್ನ ಪ್ರೀತಿಯ ಜೋಗಿ. ಇವರೆಲ್ಲರಿಗೂ ನನ್ನ ಅನಂತಾನಂತ ಧನ್ಯವಾದ.
ಆರಂಭದಿಂದ ಪುಸ್ತಕ ಪ್ರಿಂಟಾಗುವತನಕದ ಜವಾಬ್ಧಾರಿ ಹೊತ್ತ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರಿಗೆ ವಂದನೆ. ಪ್ರಕಾಶಕರಿಗೆ ನಮಸ್ಕಾರ. ಪುಸ್ತಕ ಎಲ್ಲಿ ಸಿಗತ್ತೆ ಅನ್ನೋದು ನಂಗೂ ಸಹ ಗೊತ್ತಿಲ್ಲ. ಪುಸ್ತಕ ಸಿಗೋ ಜಾಗವನ್ನ ಹೇಳೋಕೆ ಮತ್ತೆ ನಿಮ್ಮ ಮುಂದೆ ಬರಲಿದ್ದೇನೆ. ಹರಸಿ ಹಾರೈಸ್ತೀರಲ್ಲ ನೀವೆಲ್ಲ ಅಷ್ಟು ಸಾಕು.
ಪುಸ್ತಕ ಬಿಡುಗಡೆಯೆಲ್ಲಿ ಗೊತ್ತ? ನಿಮ್ಮ ನಿಮ್ಮ ಬೊಗಸೆಯಲ್ಲಿ. ನೀವೇ ನನ್ನೀ ಪುಸ್ತಕವನ್ನು ಬಿಡುಗಡೆಮಾಡುತ್ತೀರಿ. ಧನ್ಯವಾದ.
ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ







madam kavana hegidavo gottilla but nimma baraha wonderful,nimma appeal manamuttuvantide,mukaputa excellent jogi bennudi kuda bidi pustaka elli sigutte tilisilla publisher yaru enu vivara illa nimma bidugade karyakramakke hrudayaoorvaka shubhashayagalu…d.ravivarma hospet
ಅವಧಿಯ ಮಡಿಲಲ್ಲಿ ‘ಬೊಗಸೆಯಲ್ಲಿ ಬೆಳದಿಂಗಳು’ ಕಂಡು ಕಣ್ದುಂಬಿ ಬಂದಿದೆ. ಖುಷಿಯಾಗಿದೆ. ಧನ್ಯವಾದ.
ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ
ಶಾಂತಲಾ,
ಕವಿತಾಸಂಕಲನದ ಬಿಡುಗಡೆಗೆ ಶುಭಾಶಯಗಳು!! ಕವರ್ ಪೇಜ್ ಮುದ್ದಾಗಿದೆ, ಥೇಟ್ ನಿಮ್ಮ ಥರವೇ!! ಪುಸ್ತಕಕ್ಕಾಗಿ ಕಾಯುತ್ತಿದೇನೆ.
ಶಾಂತಲಾ…:):) ತುಂಬಾ ಖುಷಿಯಾಯ್ತು. ಪುಸ್ತಕ ನನ್ನ ಕೈಗೆ ಸಿಗೋದ್ಯಾವಾಗ ಎಂದು ಕಾಯ್ತಿದೀನಿ. ತುಂಬಾ ತುಂಬಾ ಅಭಿನಂದನೆಗಳು.
~ಮೀರ.