ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಲೂರು ರಾಮಮೂರ್ತಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಬೇಲೂರು ರಾಮಮೂರ್ತಿಯವರ ‘ಹಾಸ್ಯ ಗಂಗೋತ್ರಿ’ ಮತ್ತು  ‘ಹಾಸ್ಯ ವೈವಿಧ್ಯ’ ಬಿಡುಗಡೆಗೊಂಡಿವೆ. ಆ ಮೂಲಕ ಬೇಲೂರು ರಾಮಮೂರ್ತಿಯವರು ಇನ್ನೇನು ಸೆಂಚುರಿಗೆ ಹತ್ತತ್ರ. ಹ್ಯೂಮರ್ ಕ್ಲಬ್ ಇಂಟರ್‌ನ್ಯಾಷನಲ್ ಮತ್ತು ಹೇಮಂತ ಸಾಹಿತ್ಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಹಿರಿಯ ರಂಗ ಕರ್ಮಿ ವೈ. ವಿ. ಗುಂಡುರಾವ್, ಹಿರಿಯ ರಂಗ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ನವರು, ಹೇಮಂತ ಸಾಹಿತ್ಯದ ಎಂ. ವೆಂಕಟೇಶರವರು ಭಾಗವಹಿಸಿದ ಸಭೆಯಲ್ಲಿ ಕೃತಿಗಳು ಲೋಕಾರ್ಪಣೆಗೊಂಡಿವೆ.

“ಹಾಸ್ಯದ ಗುಣ ಕೇವಲ ನಗಿಸುವುದಷ್ಟೇ ಅಲ್ಲ, ಸಂದೇಶವನ್ನೂ ಒಳಗೊಂಡಿರುತ್ತದೆ. ಬೇಲೂರು ರಾಮಮೂರ್ತಿಯವರ ಈ ಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಚುಟುಕಾದ ಹಾಸ್ಯದಿಂದ ಸ್ವಾರಸ್ಯಕರವಾಗಿವೆ. ಅದರಲ್ಲೂ ‘ಹಾಸ್ಯ ಗಂಗೋತ್ರಿ’ಯಲ್ಲಿ ಕುತೂಹಲ ಮೂಡಿಸುವ ಕತೆಗಳು ಆಸಕ್ತಿಯಿಂದ ಓದಿಸುತ್ತವೆ” ಎಂದು ಹಿರಿಯ ರಂಗ ಕರ್ಮಿ ವೈ. ವಿ. ಗುಂಡುರಾವ್ ಮೆಚ್ಚುಗೆ ಸೂಚಿಸಿದ್ದಾರೆ.

ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು avadhi

8 May, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading