’ಬೇಂದ್ರೆ ಕಾವ್ಯ ಕಾರ್ಯಾಗಾರ’ಕ್ಕೆ ನೀವೂ ಬನ್ನಿ


ಆತ್ಮೀಯ ಸಾಹಿತ್ಯಾಸಕ್ತರೇ.

’ಅವಿರತ’ ತಂಡದಿಂದ ’ಬೇಂದ್ರೆ ಕಾವ್ಯ ಕಾರ್ಯಾಗಾರ’ ನಡೆಯುತ್ತಿದೆ.

“ಬೇಂದ್ರೆ ಬೆಳಗು” ಕಾರ್ಯಕ್ರಮ ಸರಣಿಯ ಎರಡನೇ ಹಾಗೂ ಕೊನೆಯ ದಿನದ ಕಾರ್ಯಕ್ರಮ “ಬೇಂದ್ರೆ ಕಾವ್ಯ – ಕಾರ್ಯಾಗಾರ” ಏಪ್ರಿಲ್ 12, ಭಾನುವಾರದಂದು.
ಈ ಕಾರ್ಯಕ್ರಮವು ಒಂದು ಸಾಹಿತ್ಯ ಮಂಟಪವಾಗಿದ್ದು, ಇಲ್ಲಿ ಶಿಬಿರಾರ್ಥಿಗಳು ಮುಖ್ಯ ಭೂಮಿಕೆಯನ್ನು ವಹಿಸಬೇಕಾಗುತ್ತೆ. ಈ ಶಿಬಿರದ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ಮತ್ತು ಇತರ ಸಾಮಾನ್ಯ ಶಿಬಿರಾರ್ಥಿಗಳಿಗೆ ಹಿರಿಯ ಸಾಹಿತಿಗಳ ಜತೆಗಿನ ಸಂವಾದದ ಮೂಲಕ ಬೇಂದ್ರೆ ಯವರ ಕಾವ್ಯದ ಮೂಲಕ ಇತರ ಎಲ್ಲ ಕಾವ್ಯಗಳ ಬಗೆಗಿನ ಆಸಕ್ತಿ ಹೆಚ್ಚಿಸುವುದು ಮತ್ತು ಹಾಗೂ ಅಧ್ಯಯನದ ಕಡೆಗೆ ಸಾಗಲು ಸಿದ್ದಗೊಳಿಸುವುದು
ಹಾಗಾಗಿ, ನಿಮಗೆ ನೀಡಲಾಗುವ ಬೇಂದ್ರೆಯವರ ಕವಿತೆಗಳನ್ನು ಶಿಬಿರಕ್ಕೆ ಬರುವ ಮುನ್ನ, ಪೂರ್ವಭಾವಿಯಾಗಿ ಓದಿಕೊಂಡು ಬಂದಿರಬೇಕಾಗುತ್ತದೆ. ಶಿಬಿರದ ದಿನ, ಆ ಕವನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು, ಆಲೋಚನೆಗಳನ್ನು (8-10 ಸದಸ್ಯರ) ಸಣ್ಣ ತಂಡಗಳಲ್ಲಿ ಪರಸ್ಪರ ಚರ್ಚೆ ಮಾಡಬೇಕಾಗುತ್ತೆ. ನಂತರ ಆ ತಂಡದ ಒಟ್ಟು ಅಭಿಪ್ರಾಯವನ್ನು ಮಂಡಿಸಬೇಕಾಗುತ್ತದೆ. ಶಿಬಿರದ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳ ನಡುವಿನ ಚರ್ಚೆಯನ್ನು ನಿಭಾಯಿಸುತ್ತಾ, ಕೃತಿಯೊಳಗಿನ ಲೇಖಕರ ಆಲೋಚನ ಕ್ರಮದ ಬಗ್ಗೆ ಪರಿಚಯಿಸುತ್ತಾ, ಚರ್ಚೆ, ವಿಚಾರ ವಿನಿಮಯ ಸಾಗಬೇಕಿರುವ ದಾರಿಯ ಮಾರ್ಗದರ್ಶನ ಮಾಡುತ್ತಾರೆ.
ಶಿಬಿರದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಭಾಗವಹಿಸುವ ಪ್ರತಿಯೊಬ್ಬ ಶಿಬಿರಾರ್ಥಿಗೂ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಬೇಕಾಗಿರುವುದರಿಂದ ಈ ಸಾಹಿತ್ಯ ಶಿಬಿರ ಕೇವಲ 40 ಜನ ಶಿಬಿರಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಕೋರುತ್ತೇವೆ.
ಶಿಬಿರದ ದಿನಾಂಕ:
12 ಏಪ್ರಿಲ್ 2015 , ಭಾನುವಾರ
ಸ್ಥಳ: ಸರ್ಕಾರಿ ವಿಜ್ಣಾನ ಕಾಲೇಜು, ಕೆ.ಆರ್.ಸರ್ಕಲ್ ಬಳಿ, ನೃಪತುಂಗ ರಸ್ತೆ, ಬೆಂಗಳೂರುಶಿಬಿರದ ವಿನ್ಯಾಸ:
ಶಿಬಿರದ ಕಾರ್ಯಕ್ರಮಗಳು ಈ ಕೆಳಗಿನಂತೆ 04 ಭಾಗಗಳಲ್ಲಿ ನಡೆಯುತ್ತದೆ.
09:30 – 11:00 AM
11:30 – 01:00 PM
02:00 – 3:30 PM
04:00 – 5:30 PM
ಪ್ರತಿ ಭಾಗದಲ್ಲಿ ಆಯ್ದು ಮೊದಲೇ ನಿಗದಿಪಡಿಸಿದ ಒಂದು ಅಥವಾ ಎರಡು ಕವಿತೆಗಳ ಸಂವಾದ, ವಿಚಾರ ವಿನಿಮಯ ಇರುತ್ತದೆ.90 ನಿಮಿಷಗಳ ಅವಧಿಯ ವಿಂಗಡಣೆ ಹೀಗಿರುತ್ತದೆ :
· ಮೊದಲ 20 ನಿಮಿಷ – ಪ್ರತಿ ತಂಡಗಳ ಚರ್ಚೆ / ವಿನಿಮಯ.
· ನಂತರದ 30 ನಿಮಿಷ – ಪ್ರತಿ ತಂಡದಿಂದ ಆಯ್ದ ಒಬ್ಬ ಶಿಬಿರಾರ್ಥಿ 5-6 ನಿಮಿಷಗಳಲ್ಲಿ ಅವರ ಒಟ್ಟೂ ಅಭಿಪ್ರಾಯ ಮಂಡಿಸುವುದು · ಕಡೆಯ 40 ನಿಮಿಷ – ಆ ಕವನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ ಮತ್ತು ಶಿಬಿರಾರ್ಥಿಗಳ ಅಭಿಪ್ರಾಯಕ್ಕೆ ಪ್ರತಿಕ್ರಿಯೆ.
ಕೆಲವು ಸೂಚನೆಗಳು:
೧) ಶಿಬಿರದಲ್ಲಿ ಬಾಗವಹಿಸಲು ಇಚ್ಚಿಸುವವರು ಕಳುಹಿಸುವ ಕವನಗಳನ್ನು ಓದಿ ಬರತಕದ್ದು
೨) ಶಿಬಿರದಲ್ಲಿ ಈ ಕೃತಿಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಇದ್ದು. ಎಲ್ಲರು ಪಾಲ್ಗೊಳ್ಳಬೇಕು.
೩) ಚರ್ಚೆಯಲ್ಲಿ ಯಾರನ್ನು ವೈಯುಕ್ತಿಕವಾಗಿ ನಿಂದನೆ ಮಾಡಬಾರದು ಮತ್ತು ಮುಕ್ತವಾಗಿ ಇನ್ನೊಬರ ಆಲೋಚನೆಗಳನ್ನು ಕೇಳಿಸಿಕೊಳ್ಳುವ ಮನೋಭಾವ ಇರಬೇಕು
೪) ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬರಬೆಕು. ನಡುವೆ ಬಂದು ಸೇರುವ ಅಥವಾ ಎದ್ದು ಹೋಗುವ ಅವಕಾಶ ಇರುವುದಿಲ್ಲ.
೫) ಪೂರ್ತಿ ದಿನದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿದ್ದವರು ಮಾತ್ರ ಬರಬೇಕು.
ಈ ಶಿಬಿರದಲ್ಲಿ ಭಾಗವಹಿಸುವವರು ದಯವಿಟ್ಟು ತಮ್ಮ ಹೆಸರು , ವಿದ್ಯಾಭಾಸ , ವೃತ್ತಿಯ ಸ್ವ-ವಿವರಗಳ ಜೊತೆಗೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಈ ಕೆಳಕಂಡ ಈ-ಮೈಲ್ ವಿಳಾಸಗಳಿಗೆ ಕಳುಹಿಸಿ
ಪ್ರಸನ್ನ ಲಕ್ಷ್ಮೀಪುರ: [email protected]
ಸತೀಶ್ ಗೌಡ: [email protected]
ಅಶ್ವತ್ಥ : [email protected]
 

‍ಲೇಖಕರು G

March 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: