ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ‘ಮಾನ’ ಕಥಾಸಂಕಲನಕ್ಕೆ..

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಪ್ರತಿ ವರ್ಷ ನೀಡುವ ‘ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ’ಯ 2010ನೇ ಸಾಲಿಗೆ ಎಲ್ಲಪ್ಪ ಕೆಕೆಪುರ ಅವರು ರಚಿಸಿರುವ ‘ಮಾನ’ ಕಥಾಸಂಕಲನವು ಆಯ್ಕೆಯಾಗಿದೆ. ‘ಮಾನ’ ಕಥಾ ಸಂಕಲನವನ್ನು ಬೆಂಗಳೂರಿನ ಕುಕ್ಕೆಶ್ರೀ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಸೆಪ್ಟೆಂಬರ್ 10, 2011ರಂದು ಮಂಡ್ಯದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವ ಈ ಪ್ರಶಸ್ತಿಯು ಇಪ್ಪತ್ತು ಸಾವಿರ ರೂಪಾಯಿ ನಗದು, ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ನ್ಯಾಯಮೂತರ್ಿ ಶ್ರೀ ನಾಗಮೋಹನ್ದಾಸ್ ರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಮಾರಂಭದಲ್ಲಿ ಬಳ್ಳಾರಿಯ ಲೋಹಿಯಾ ಪ್ರಕಾಶನವು ಹೊರತಂದಿರುವ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸಮಗ್ರ ಕಥನ ಸಾಹಿತ್ಯ ಸಂಪುಟ ‘ಕಣಜ’ವು ಬಿಡುಗಡೆಯಾಗಲಿದೆ. ಪ್ರಖ್ಯಾತ ಕತೆಗಾರ ಶ್ರೀ ಕೆ. ಸತ್ಯನಾರಾಯಣ ಅವರು ಬಿಡುಗಡೆ ಮಾಡಲಿರುವ ಈ ಕೃತಿಯನ್ನು ಕುರಿತು ನವದೆಹಲಿಯ ಭಾರತೀಯ ಭಾಷೆಗಳ ಅಮೆರಿಕಾ ಅಧ್ಯಯನ ಸಂಸ್ಥೆಯ ನಿದರ್ೆಶಕ ಹಾಗೂ ವಿಮರ್ಶಕ ಶ್ರೀ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಲಿದ್ದಾರೆ.

‍ಲೇಖಕರು avadhi

28 August, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading