
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದೊಡನೆ ದಿನಾಂಕ 7, 8 ಮತ್ತು 9ನೇ ನವೆಂಬರ್ 2014ರಂದು ಮೂರು ದಿನಗಳ ಅವಧಿಯ ಕಥಾ ಕಮ್ಮಟವನ್ನು ಕುಪ್ಪಳ್ಳಿಯಲ್ಲಿ ಆಯೋಜಿಸಿದೆ. ಕತೆಗಳ ಮೂಲಕ ಬೇರೆ ಬೇರೆ ಲೋಕಗಳ ಅರಿವು ಮತ್ತು ಸಾಂಸ್ಕೃತಿಕ ಜಿಜ್ಞಾಸೆ ನಡೆಸುವುದು ಈ ಕಮ್ಮಟದ ಉದ್ದೇಶ. ಖ್ಯಾತ ಭಾಷಾ ತಜ್ಞ ಡಾ. ಕೆ.ವಿ. ನಾರಾಯಣ ಅವರು ಕಮ್ಮಟದ ನಿರ್ದೇಶಕರಾಗಿರುತ್ತಾರೆ. ಕಥಾ ಕಮ್ಮಟದಲ್ಲಿ ಭಾಗವಹಿಸುವವರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಹಾಗೂ ಅಧ್ಯಯನ ಸಾಮಗ್ರಿ ನೀಡಲಾಗುವುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಮೂರು ದಿನಗಳ ಕಥಾ ಕಮ್ಮಟದಲ್ಲಿ ಭಾಗವಹಿಸುವವರು ತಮ್ಮ ಸ್ವವಿವರಗಳೊಂದಿಗೆ ಅಧ್ಯಕ್ಷರು, ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ನಂ. 90, 16ನೇ ಅಡ್ಡರಸ್ತೆ, 4ನೇ ಹಂತ, ಜೆ.ಪಿ. ನಗರ, ಬೆಂಗಳೂರು-560 078 ಇವರಿಗೆ ಅಥವಾ ಇ-ಮೇಲ್ drbrtrust@gmail.com ಇಲ್ಲಿಗೆ ಸಲ್ಲಿಸಬಹುದು. ಮೊಬೈಲ್ ದೂರವಾಣಿ 99803 05837. 9449987678 ಸಂಪರ್ಕಿಸಬಹುದು. ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 10. 2014.
ಬೆಸಗರಹಳ್ಳಿ ರಾಮಣ್ಣ ಕಥಾ ಕಮ್ಮಟ
ನಿಮಗೆ ಇವೂ ಇಷ್ಟವಾಗಬಹುದು…




0 Comments