‘ರಂಗ ಮಂಡಲ’ದ ವಿಶಿಷ್ಟ ಯೋಜನೆ ‘ಕಾವ್ಯ ಸಂಸ್ಕೃತಿ ಯಾನ’
ಪ್ರತೀ ತಿಂಗಳ ಮೂರನೆಯ ಭಾನುವಾರ ಜರುಗುವ ಕಾರ್ಯಕ್ರಮ
ಒಂದೊಂದು ತಿಂಗಳು ಒಂದೊಂದು ಜಿಲ್ಲೆಯಲ್ಲಿ
ಈ ಯಾನದ ಮೊದಲ ಕಾರ್ಯಕ್ರಮ ಚಾಮರಾಜನಗರದಲ್ಲಿ ನಾಳೆ ಆರಂಭವಾಗಲಿದೆ
ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕವಿಗೋಷ್ಟಿಯ ಸರ್ವಾಧ್ಯಕ್ಷರು
ಅದಕ್ಕೆ ಮುನ್ನುಡಿಯಾಗಿ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಡಸಾಲೆಯಲ್ಲಿ ಯಾನದ ಕಾವ್ಯ ದೀವಟಿಗೆಯನ್ನು ಬೆಳಗಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಸಾಂಸ್ಕೃತಿಕ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ಕಾವ್ಯ ದೀವಟಿಗೆ ಬೆಳಗಿದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಧರಣಿದೇವಿ ಮಾಲಗತ್ತಿ ಅವರು ದೀವಟಿಗೆಯನ್ನು ಹಸ್ತಾಂತರಿಸಿದರು.












0 Comments