ಸ್ಥಳ :ಕೆ.ಎಚ್.ಕಲಾಸೌಧ ಹನುಮಂತ ನಗರ ಬೆಂಗಳೂರು
18 ಸೆಪ್ಟೆಂಬರ್ ರಂದು · 15:00 – 19:೦೦ pm
ಶಿವರಾಮ ಕಾರಂತರ `ಬೆಟ್ಟದ ಜೀವ” ಈ ಕೃತಿಯನ್ನು ಆಧರಿಸಿ ಇದೇ ಹೆಸರಿನಲ್ಲಿ ಚಿತ್ರವೊಂದನ್ನು ಪಿ.ಶೇಷಾದ್ರಿ ನಿರ್ದೇಶಿಸಿದ್ದಾರೆ.
ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂಟಿ ಮನೆ, ಬೆಟ್ಟ ಗುಡ್ಡಗಳಲ್ಲಿ ಅಲ್ಲಲ್ಲಿ ಒಂದಿಬ್ಬರು ಜನರು – ಹೀಗೊಂದು ವಿವರಣೆ ಕೇಳಿದಾಗ ನಮ್ಮ ಕಣ್ಮುಂದೆ ಮಲೆನಾಡಿನ ಚಿತ್ರಣ ಬರುವುದು ಖಂಡಿತ. ಸ್ವಾತಂತ್ರ್ಯ ಪೂರ್ವದ ಸಂದರ್ಭ. ಆಗಿನ್ನು ರಸ್ತೆ ಸಂಪರ್ಕವಾಗಲಿ, ಇತರೆ ಸಂಪರ್ಕ ಮಾಧ್ಯಮವಾಗಲಿ ಇಂದಿನಷ್ಟು ವಿಕಾಸವಾಗಿರಲಿಲ್ಲ. ಯಾವುದೋ ಒಂದು ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ವೃದ್ಧ ದಂಪತಿಗಳ ಬಾಳಿನಲ್ಲಿ ಅಪರಿಚಿತನೊಬ್ಬನ ಪ್ರವೇಶವಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಈತ, ಆಂಗ್ಲರ ಕಣ್ತಪ್ಪಿಸಿ ಆ ದಂಪತಿಗಳ ನಡುವೆ ತಲೆ ಮರೆಸಿಕೊಳ್ಳುತ್ತಾ ನೆ. ಇದ್ದೊಬ್ಬ ಮಗ, ಮನೆ ತೊರೆದು ಹೋದಂದಿನಿಂದ ಅವನ ನಿರೀಕ್ಷೆಯಲ್ಲೆ ಇದ್ದ ಆ ವೃದ್ಧ ದಂಪತಿಗಳ ಜೀವನದಲ್ಲಿ ಅಪರಿಚಿತನ ಆಗಮನದಿಂದಾಗುವ ಬದಲಾವಣೆಗಳ ನೈಜ್ಯ ಚಿತ್ರಣವನ್ನು ಈ ಚಿತ್ರದಲ್ಲಿ ಕಾಣಬಹುದು. ಹಾಗೆಯೆ ಆಂಗ್ಲರ ಕಣ್ತಪ್ಪಿಸಿ, ದಟ್ಟ ಕಾನನದಲ್ಲಿ ಕ್ರೂರ ಮೃಗಗಳು, ವಿಷ ಜಂತುಗಳ ನಡುವೆ ಬದುಕುವ ಸವಾಲಿನ ಜೀವನವನ್ನು ಈ ಅಪರಿಚಿತ ಹೇಗೆ ನಿಭಾಯಿಸಬಲ್ಲ ಎಂಬ ಚಿತ್ರಣವೂ ಇಲ್ಲಿದೆ. ಆ ವೃದ್ಧ ದಂಪತಿಗಳ ಮತ್ತು ಅಪರಿಚಿತನ ಮಾನಸಿಕ ವೈರುಧ್ಯ, ಭಿನ್ನ ನಿಲುವುಗಳ ತೊಳಲಾಟ, ದ್ವಂದ್ವಗಳ ಪರಿಕಲ್ಪನೆ – ಹೀಗೆ ವಿವಿಧ ಸನ್ನಿವೇಶದಲ್ಲಿ ಅವರ ನಡವಳಿಕೆಯನ್ನ ನೋಡುಗರ ಮನಸ್ಸಿಗೆ ಹತ್ತಿರದಿಂದ ತಲುಪುವಂತೆ ಮಾಡಿರುವ ಪ್ರಯತ್ನವೇ ಈ ಚಿತ್ರ.
ಟಿಕೆಟ್ ಬೆಲೆ : 100 ರೂ.
ಸಂಪರ್ಕಿಸಿ : kts_gowda@yahoo.com 9880086300






SHIVARAMA KARANTARA KADAMBARIGALALLI “BETTADAJEEVA” KUDA ONDU MAHATWA KADAMBARI.HAGE KANNADADALLI ATYTTAMA KADAMBARI,KATHEGALIVE,CINEMA NIRDESHAKARU AA KADE KANNU HAYISABEKASTE,SHESHADRI NIRDESHANADALLI BETTADA JEEVA NIJAKKU JEEVA PADEDUKONDIRUTTADE ENDE NANNA NAMBIGE,NIMMA EE VISHISTA KARYAKRAMAKKE SHUBHASHAYAGALU,HOSPETYINDA BARUVUDU KASTA,HOSPETYALLI SHOW ARRANGE MADABEKENNUVA ASHE,DAYAVITTU YARANNU SAMPARKISABEKU TILISI.D.RAVI VARMA HOSPET