ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಟ್ಟದೂರು ಪ್ರಶಸ್ತಿ

ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನ ಕೊಪ್ಪಳ, ಬೆಟ್ಟದೂರು, ಮಾನ್ವಿ ——-   ಪ್ರಶಸ್ತಿಗಳ ಘೋಷಣೆ   ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬೆಟ್ಟದೂರು ಗ್ರಾಮದ ಅಮರಮ್ಮ ಚೆನ್ನಬಸವಪ್ಪ ದಂಪತಿ ರೈತ ಕುಟುಂಬಕ್ಕೆ ಸೇರಿದವರು. ಚೆನ್ನಬಸವಪ್ಪನವರು ರೈತ ಹೋರಾಟಗಾರರೂ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವರೂ, ವಚನ ಸಾಹಿತ್ಯ, ವಿಚಾರ ಸಾಹಿತ್ಯ ಸೃಷ್ಟಿಸಿದವರೂ ಆಗಿದ್ದಾರೆ. ಈ ದಂಪತಿ ಹೆಸರಿನಲ್ಲಿ ಪ್ರತಿ ವರ್ಷ ವಚನ ಸಾಹಿತ್ಯ ಹಾಗೂ ವಿಚಾರ ಸಾಹಿತ್ಯಕ್ಕೆ ಪ್ರಶಸ್ತಿ ನೀಡುವ ಪರಿಪಾಠವನ್ನು ಹಾಕಿಕೊಂಡು ಬಂದಿದೆ. 2010ರ ಸಾಲಿನಲ್ಲಿ ಆಯ್ಕೆ ಸಮಿತಿಯು ಡಾ.ಚೆನ್ನಕ್ಕ ಪಾವಟೆಯವರ ‘ವಚನ ಸಂಗಮ’ ಡಾ. ಗಂಗಮ್ಮ ಸತ್ಯಂಪೇಟೆಯವರ ‘ಉಕ್ಕಿನ ಮಹಿಳೆ’ ಸ.ರಾ.ಸುಳಕೂಡೆ ಅವರ ‘ಅಂತರಂಗದ ಅನ್ವೇಷಣೆ’ ಕೃತಿಗಳನ್ನು ಆಯ್ಕೆ ಮಾಡಿದೆ. ಮಾನ್ವಿಯಲ್ಲಿ ಚೆನ್ನಬಸವಪ್ಪ ಬೆಟ್ಟದೂರು ಅವರ ಸ್ಮರಣೆಯ ಕಾರ್ಯಕ್ರಮ ಜೂನ 13, 2012ರಂದು ನಡೆಯಲಿದ್ದು ಆಗ ಪ್ರಶಸ್ತಿ ಪ್ರದಾನ ಮಾಡಲಾಗುವುದು. ——————————————————— ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ ಶ್ರೀಮತಿ ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನವು 2011ನೇ ಸಾಲಿನ ಪ್ರಶಸ್ತಿಗಾಗಿ ವಚನ ಸಾಹಿತ್ಯ ಹಾಗೂ ವಿಚಾರ ಸಾಹಿತ್ಯದ ವಿಶ್ಲೇಷಣಾತ್ಮಕ ಕೃತಿಗಳನ್ನು ಆಹ್ವಾನಿಸಿದೆ. ಏಪ್ರಿಲ್ 30,2012ರೊಳಗಾಗಿ 2011ರಲ್ಲಿ ಮಾತ್ರ ಪ್ರಕಟಿತವಾದ ಕೃತಿಗಳ 3 ಪ್ರತಿಗಳನ್ನು ಅಲ್ಲಮಪ್ರಭು ಬೆಟ್ಟದೂರು, ಅಮರಚೇತನ,ಕಲ್ಯಾಣ ನಗರ,ಕಿನ್ನಾಳ ರಸ್ತೆ,ಕೊಪ್ಪಳ-583 231. ಇಲ್ಲಿಗೆ ಕಳಿಸಲು ಕೋರಿದೆ. ಮೊಬೈಲ್ ಸಂಖ್ಯೆ : 9844049205ಗೆ ಸಂಪರ್ಕಿಸಬಹುದು.   ಎಚ್.ಎಸ್.ಪಾಟೀಲ್ ಪ್ರತಿಷ್ಠಾನದ ಪರವಾಗಿ ಕೀರ್ತಿ ಕಾಲೋನಿ,ಭಾಗ್ಯನಗರ,ಕೊಪ್ಪಳ-583238. ಮೊ : 9482938940    ]]>

‍ಲೇಖಕರು G

13 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading