ಶಿವು ಕಾಳಯ್ಯ ಕ್ಯಾಮೆರಾ ಕಣ್ಣಿನಲ್ಲಿ
ಇದು ಮುನ್ನಾರ್, ಊಟಿ, ಕೊಡೈಕನಲ್ ಅಲ್ಲ, ಕುಲುಮನಾಲಿ, ಅಥವ ನೈನಿತಾಲ್ ಖಂಡಿತ ಅಲ್ಲ. ಸ್ವಿಟ್ಜರ್ಲಾಂಡ್ ಅಂತೂ ಅಲ್ಲವೇ ಅಲ್ಲ. ಆದರೂ ಅಲ್ಲಿದ್ದಂತೆ. ಸಂಜೆ-ರಾತ್ರಿ ಅಥವ ನಸುಕಿನ ಐದುಗಂಟೆಯ ಮುಂಜಾವಿನಲ್ಲಿ ಕ್ಲಿಕ್ಕಿಸಿದ್ದ ಫೋಟೊವಂತೂ ಅಲ್ಲವೇ ಅಲ್ಲ.
ಇಂದು ಮುಂಜಾನೆ ಮ್ಯಾಕ್ರೋ ಫೋಟೊಗ್ರಫಿಗಾಗಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಮಂಜು ಯಾವ ಪರಿ ಆವರಿಸಿಕೊಂಡಿತೆಂದರೆ ಮುಂದಿನ ರಸ್ತೆಯೇ ಕಾಣದಷ್ಟು ದಟ್ಟವಾಗಿ ಇಡೀ Airport ರಸ್ತೆಯನ್ನು ಆವರಿಸಿಕೊಂಡಾಗ ಬೆಳಿಗ್ಗೆ 7-25 ಕ್ಕೆ ಕ್ಲಿಕ್ಕಿಸಿದ್ದು ಅಂದರೆ ನಂಬಲಿಕ್ಕೆ ಆಗುವುದಿಲ್ಲ ಅಲ್ವಾ! ದಾರಿಯುದ್ದಕ್ಕೂ ಹತ್ತಾರು ಫೋಟೊಗಳನ್ನು ಕ್ಲಿಕ್ಕಿಸುತ್ತಾ.. ನನಗಂತೂ ನನ್ನ ಟೂವೀಲರ್ನಲ್ಲಿ ಮೋಡದ ನಡುವೆ ತೇಲಿಹೋಗುತ್ತಿದ್ದಂತೆ ಅನುಭವವಾಯ್ತು…ಅದಕ್ಕೆ ಹೇಳುವುದು ನಮ್ಮ ಬೆಂಗಳೂರು ಭೂಲೋಕ ಸ್ವರ್ಗ!







photo tumba channagi tegedidira.