ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬುಕ್ ಬ್ರಹ್ಮ’ದಿಂದ ಕಥಾ ಸ್ಪರ್ಧೆ ಪುರಸ್ಕಾರ..

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023 ಮತ್ತು ಕಾದಂಬರಿ ಪುರಸ್ಕಾರ 2023ʼ

ರೂ. 2 ಲಕ್ಷ 69 ಸಾವಿರ ಬಹುಮಾನ!

ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ.

ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ನಗದನ್ನು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ17 ಕಥೆಗಳಿಗೆ ತಲಾ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ ಈ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.

ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023ರ ನಿಯಮಗಳು:

  1. ಕಥೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.
  2. ಕಥೆಯು ಅಪ್ರಕಟಿತವಾಗಿರಬೇಕು. ಮುದ್ರಣ ಅಥವಾ ಯಾವುದೇ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
  3. ಕಥೆಗೆ ಯಾವುದೇ ರೀತಿಯ ಪದಮಿತಿ ಇರುವುದಿಲ್ಲ.
  4. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇಲ್ಲ.
  5. ಹಸ್ತಪ್ರತಿ ಅಥವಾ ಟೈಪ್ ಮಾಡಿದ ಕಥೆಯಿರುವ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಬಾರದು. ಕಥೆ ಮುಗಿದ ನಂತರ ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು.
  6. ಕಥೆಗಾರರು ನಿಬಂಧನೆಗಳಿಗೆ ಒಪ್ಪಿದ ಮತ್ತು ಸಹಿ ಮಾಡಿದ ಪ್ರತ್ಯೇಕ ಒಂದು ಪತ್ರ ಇಡಬೇಕು.
  7. ಬುಕ್‌ಬ್ರಹ್ಮ ಪ್ರೈವೇಟ್ ಲಿಮಿಟೆಡ್ (Book Brahma Private Limited), ಫರ್ಬೆಂಡನ್‌ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್ (Verbinden Communication Private Limited) ಮತ್ತು ಕಾಗ್ನಿಕ್ವೆಸ್ಟ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (Cogniquest Technologies Private Limited) ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ಫರ್ಧೆಯಲ್ಲಿ ಭಾಗವಹಿಸುವಂತಿಲ್ಲ.
  8. ಕನ್ನಡದ ಪ್ರಮುಖ ಕಥೆಗಾರರು/ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
  9. ಆಯ್ಕೆಗೆ ಸಂಬಂಧಿಸಿದಂತೆ ʻಬುಕ್ ಬ್ರಹ್ಮ’ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.
  10. ಕಥೆಗಳನ್ನು ಕಳುಹಿಸಲು ಕೊನೆಯ ದಿನ ಬುಧವಾರ, ಮೇ 31, 2023.
  11. ಆಗಸ್ಟ್‌ 1, 2023 ರಂದು ಮಂಗಳವಾರ, ಅಂತಿಮ ಸುತ್ತನ್ನು ಪ್ರವೇಶಿಸುವ 25 ಕಥೆಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
  12. ಆಗಸ್ಟ್ 15, 2023 ರಂದು ಮಂಗಳವಾರ, ನಡೆಯಲಿರುವ ಸಮಾರಂಭದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಕಥೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡನ್ನೂ ಮಾಡಲಾಗುವುದು.
  13. ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಳನ್ನು ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ 25 ಕಥೆಗಳ ಪೈಕಿ ಬಹುಮಾನ ಪಡೆಯದೇ ಉಳಿಯುವ 17 ಕಥೆಗಳಿಗೆ ತಲಾ 2000 ರೂಪಾಯಿ ಗೌರವಧನ ನೀಡಲಾಗುವುದು. ಈ ಎಲ್ಲಾ 25 ಕಥೆಗಳ ಹಕ್ಕುಸ್ವಾಮ್ಯ ಕಥೆಗಾರರು ಮತ್ತು ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಬ್ಬರಿಗೂ ಜಂಟಿಯಾಗಿ (ಶೇಕಡಾ 50) ಸೇರಿರುತ್ತದೆ.
  14. ಅಂತಿಮ ಸುತ್ತಿಗೆ ಆಯ್ಕೆಯಾದ ಕಥೆಗಾರರು ಬಹುಮಾನ ವಿತರಣಾ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಬೇಕು. ಸಮಾರಂಭದ ದಿನ ಬೆಳಿಗ್ಗೆ ನಡೆಯುವ ʻಕಥಾ-ಕಾದಂಬರಿ ಸಂವಾದ’ದಲ್ಲಿ ಭಾಗವಹಿಸುವುದು ಅಪೇಕ್ಷಣೀಯ.
  15. ಒಬ್ಬರು ಒಂದು ಕಥೆಯನ್ನು ಮಾತ್ರ ಕಳಿಸಬೇಕು. ಕಾದಂಬರಿ ಸ್ಪರ್ಧೆಗೆ ಪುಸ್ತಕ ಕಳುಹಿಸಿದವರೂ ಕೂಡ ಕಥೆಗಳನ್ನು ಕಳುಹಿಸಬಹುದು.
  16. ಕಥೆಗಳನ್ನು ಈ-ಮೇಲ್ ಮೂಲಕ (ನುಡಿ/ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ) bbks2023@bookbrahma.com ಅಥವಾ ಹಸ್ತಪ್ರತಿಯನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್ ಕೆ ಕಾಂಪ್ಲೆಕ್ಸ್ ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100 ಕ್ಕೆ ಕಳುಹಿಸಿಕೊಡಬಹುದು.
    ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 78926 08118

‍ಲೇಖಕರು avadhi

2 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading