ಬಿ ಎಂ ಬಷೀರ್ ಹೊಸ ಕವಿತೆ- ಅವರು ಬದಲಾಯಿಸಲು ಬಂದರು…

ಬಿ ಎಂ ಬಷೀರ್

ಅವರು ಬದಲಾಯಿಸಲು ಬಂದರು …

ಮತ್ತು ಅವರು ಬದಲಾಯಿಸಿದರು

ಊರಿನ ಹೆಸರುಗಳನ್ನು

ತಿನ್ನುವ ಆಹಾರಗಳನ್ನು

ಪ್ರೀತಿಸುವ ಮನಸುಗಳನ್ನು

ಬದಲಾಯಿಸಿಯೇ ಬಿಟ್ಟರು

ಮನುಷ್ಯರಿಗಾಗಿ ಮಿಡಿವವರನ್ನು

ನಕ್ಸಲರಾಗಿ

ತಾಯಿ ನೆಲವ ಪ್ರೀತಿಸಿದವರನ್ನು

ದೇಶದ್ರೋಹಿಗಳಾಗಿ

ದಲಿತರ ಜೊತೆಗಿದ್ದವರನ್ನು

ಕೈದಿಗಳಾಗಿ

ರೈತರನ್ನು ಖಾಲಿಸ್ತಾನಿಗಳಾಗಿ ….

ಬದಲಾಯಿಸಿದರು !

ಸರಕಾರೀ ಶಾಲೆಗಳನ್ನು

ಗೋ ಶಾಲೆಗಳಾಗಿ

ಬೀದಿ ಗೂಂಡಾಗಳನ್ನು

ಸಂಸ್ಕೃತಿ ರಕ್ಷಕರಾಗಿ

ವಿದ್ವೇಷ ಕಾರುವವರನ್ನು

ಸಾಧ್ವಿ-ಯೋಗಿಗಳಾಗಿ

ಬದಲಾಯಿಸಿದರು !

ಪೋಲೀಸರ ಲಾಠಿಗಳನ್ನು

ಆರೆಸ್ಸೆಸ್ ದಂಡಗಳಾಗಿ

ನ್ಯಾಯದ ತಕ್ಕಡಿಯನ್ನು

ಅಂಬಾನಿಯ ಊಳಿಗವಾಗಿ

ರೈತರ ಗದ್ದೆಗಳನ್ನು

ಅದಾನಿಯ ನೋಟುಗಳಾಗಿ

ಅವರು ಬದಲಾಯಿಸಿದರು !

ದಲಿತರ ಮಾನವನ್ನು

ಬಲಿತವರ ತೊತ್ತಾಗಿ

ಹೆಣ್ಣಿನ ಕಣ್ಣುಗಳನ್ನು

ರಕ್ತದ ಕೊಳವಾಗಿ

ಬಡವರ ಹಸಿವನ್ನು

ಧಗಿಸುವ ಕುಲುಮೆಯಾಗಿ

ಅವರು ಬದಲಾಯಿಸಿದರು !

ಹೌದು,

ವಿಶ್ವ ನೋಡುತ್ತಿದೆ

ಬದಲಾದ ಭಾರತವನ್ನು

ದಿಗ್ಬ್ರಾಂತಿಯಿಂದ !

‍ಲೇಖಕರು avadhi

September 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: