ಮೂರು ಪಾಳಿಯ ಕವಿತೆ
ಕು.ಸ.ಮಧುಸೂದನ
ಮುಂಜಾನೆ
ಆಕಳಿಸುತ್ತಲೇ ಏಳುವ ಕವಿತೆ
ಹಲ್ಲುಜ್ಜದೆ ಕಾಫಿಕುಡಿದು
ಹೊರಡುತ್ತದೆ ದುಡಿಮೆಗೆ
ಮಧ್ಯಾಹ್ನ
ಬೆನ್ನು ನೋವಿಗೆ ಸೂಕ್ತ
ವ್ಯಾಯಾಮ ಔಷಧಿಗೆ
ಗೂಗಲ್ ಮಾಡುತ್ತಲೇ
ಲಂಚ್ ಬ್ರೇಕ್ ಮುಗಿಸುತ್ತದೆ
ಸಂಜೆ
ಜನ ಸಂದಣಿಯಿರದ ಬಾರಿನ
ಮೂಲೆ ಟೇಬಲ್ಲಿನಲ್ಲಿ
ವಿರಾಜಮಾನವಾಗಿ
ನೊರೆಯುಕ್ಕುವ
ಬಿಯರಿನ ಮಗ್ಗಿಗೆ
ತುಟಿಯೊಡ್ಡುತ್ತದೆ
ರಾತ್ರಿ
ಸುಕ್ಕುಗಟ್ಟದ ಹಾಸಿಗೆಯೊಳಗೆ ಅಡ್ಡಾಗಿ
ಮೊನ್ನೆ ನೋಡಿದ ಹೊಸ ಹುಡುಗಿಯ
ದುಂಡಗಿನ ಎದೆಗಳನ್ನು
ಬೊಗಸೆಯಲ್ಲಿ ತುಂಬಿಕೊಂಡಂತೆ
ಕನಸುತ್ತ
ಗೊರಕೆ ಹೊಡೆಯತೊಡಗುತ್ತದೆ
ಹೀಗಿರುವಾಗ ಹಾಳೆಗಿಳಿ ಕವಿತೆ
ಎಂದರೆಲ್ಲಿ ಮಾತು ಕೇಳುತ್ತದೆ.
ಚೆನ್ನಾಗಿದೆ.
thanksmadam