ಬಿನಾಕಾ ಗೀತ ಮಾಲಾ :ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್

-ಮಾಲತಿ ಶೆಣೈ

ನೆನಪಿನ ಸಂಚಿಯಿಂದ

ಚಿಕ್ಕಂದಿನಿಂದ ಅಂದರೆ ನಾನು ಒಂದು ವರ್ಷದವಳಾದಾಗಿನಿಂದ ನನಗೆ ಹಿಂದಿ ಹಾಡುಗಳನ್ನು ಕೇಳುವುದು ಅಭ್ಯಾಸ. ಅಮ್ಮ ಬೆಳಿಗ್ಗೆ ೫.೦೦ ಗಂಟೆಗೆ ಪಂಪ್ ಸ್ಟವ್ ನಲ್ಲಿ ಚಹಾ ಮಾಡ್ತಾ, ರೇಡಿಯೋ ಟ್ಯೂನ್ ಮಾಡ್ತಾ ಇದ್ದರು. ರೇಡಿಯೋದ ಆ ದಿನದ ಕಾರ್ಯಕ್ರಮ ಶುರು ಆಗುವ ಮೊದಲಿನ ಆ ಸಂಗೀತ ಇನ್ನೂ ಕಿವಿಯಲ್ಲಿ ಗುನುಗುತ್ತಿದೆ.

ಇನ್ನೊಂದು ನೆನಪು ’ಬಿನಾಕಾ ಗೀತ್ ಮಾಲಾ’ ದ ಅಮೀನ್ ಸಿಯಾನಿ’ ಪ್ಯಾರೆ ಬೆಹೆನೋ ಔರ್ ಭಾಯಿಯೋ”ಅಥವ’ಆವಾಜ್ ಕೆ ದುನಿಯಾ ಕೆ ದೋಸ್ತೋಂ, ಆಪಕೋ ಅಮೀನ್ ಸಿಯಾನಿ ಕಾ ಪ್ಯಾರ್ ಭರಾ ನಮಶ್ಕಾರ” ಕೇಳಿದ ಕೋಡಲೆ ಮೈ ಮೇಲಿನ ರೋಮ ನಿಮಿರಿ ನಿಲ್ಲುತ್ತಿದ್ದವು. ಅಷ್ಟು ಮಾಂತ್ರಿಕ ಶಕ್ತಿಯಿತ್ತು ಅವರ ದನಿಗೆ.

ಬುಧವಾರ ರಾತ್ರಿ 8.00 ರಿಂದ 9.00 ಜನ ಜೀವನ ಎಲ್ಲ ತಟಸ್ಥ. ಮುಂಬೈನಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲೇ. ರಿಕ್ಷಾ, taxi ನವರು ಸಹ ರೇಡಿಯೋ ಸೀಲೋನ್ ಗೆ ಟ್ಯೂನ್ ಮಾಡ್ತಿದ್ದರು. ಮಧ್ಯ ಬರುವ binaca top toothpaste ನ advertisement ಹಾಡನ್ನು ನಾವು ಅದರ ಜತೆಗೆ ಗುನುಗುನಿಸುತ್ತಿದ್ದೆವು.

ಒಂದು ಸಲ ಹುಬ್ಬಳ್ಳಿಗೆ ಹೋಗಿದ್ದೆವು, ಮದುವೆಯಲ್ಲಿ ಪಾಲ್ಗೊಳ್ಳಲು. ದೊಡ್ಡಮ್ಮನ ಮನೆಗೆ. ಮನೆ ಚಿಕ್ಕದ್ದು. ರಾತ್ರಿ ೭.೦೦ ರ ಸುಮಾರಿಗೆ ಕರೆಂಟ್ ಹೋಯ್ತು. ನಾವೆಲ್ಲ ಮಲಗಿದ್ದೆವು. ದೊಡ್ಡಮ್ಮನ ಕಿರಿ ಮಗ ಮಂಚದ ಕೆಳಗಡೆ ಮಲಗಿ, ರಾತ್ರಿ ಬಿನಾಕ ಗೀತ್ ಮಾಲಾ ಹಾಕಿ, ನಾವೆಲ್ಲರೂ ತನ್ಮಯರಾಗಿ ಕೆಳಿದ್ದ ನೆನಪು ಇನ್ನೂ ಹಸಿರಾಗಿದೆ. ಸೆಲ್ ನಿಂದ ನಡೆಯುವ ರೇಡಿಯೋ ಆದ್ದರಿಂದ ಕರೆಂಟ್ ಇಲ್ಲದಾಗಿಯೂ ಕೇಳಬಹುದಿತ್ತು.

ಅಮೇಲೆ ಅದು ’ಸಿಬಾಕಾ’ ಗೀತಮಾಲಾ ಆಗಿ ಪರಿವರ್ತನೆ ಗೊಂಡಾಗ ಏನೋ ಇರುಸುಮುರುಸು. ಆದರೂ ಅಮೀನ್ ಸಯಾನಿ ಯವರು ಸಿರ್ಫ್ ನಾಮ್ ಬದಲಾ ಹೈ ಅಂದಾಗ ಸಮಾಧಾನ. ಮೊಟ್ಟಮೊದಲು ಅರ್ಧ ಗಂಟೆ ಇದ್ದ ಬಿನಾಕಾ ಗೀತ್ ಮಾಲಾ ಅಭಿಮಾನಿ ಕೇಳುಗರ ಒತ್ತಾಯದ ಮೇರೆಗೆ ಒಂದು ಗಂಟೆ ನಡೆಸಲಾಯಿತು. ಕಾರ್ಯಕ್ರಮ ಕೇಳುಗರ ಪತ್ರ ಸೆಕ್ಷನ್ ನಲ್ಲಂತೂ ಕೇಳುಗರ ಪತ್ರದ ಮಹಾಪೂರ.ಸೈನಿಕರು ಬರೆದ ಪತ್ರಗಳನ್ನು ಓದಿದಾಗ ಕಲ್ಲು ಹೃದಯ ಕರಗಬೇಕು ಹಾಗಿರುತ್ತಿತ್ತು ಪತ್ರದ ಒಕ್ಕಣೆ. ಹೈ ಸ್ಕೂಲ್ ಗೆ ಬಂದಾಗ ನಾವು ಮರುದಿನ ಶಾಲೆಯಲ್ಲಿ ಯಾವ ಯಾವ ಹಾಡು ಬಂತು ಅಂತ ಅದರ ಬಗ್ಗೆ ಡಿಸ್ಕಸ್ ಮಾಡ್ತಿದ್ವಿ. that was the -in thing- ಆವಾಗ.

ಸಿಬಾಕ ಗೀತ ಮಾಲದಿಂದ ಅದು ಕೋಲ್ಗೆಟ್ – ಸಿಬಾಕಾ ಗೀತ ಮಾಲಾ ಆಗಿ ಪರಿವರ್ತನೆಗೊಂಡು ಅದನ್ನು ವಿವಿಧ ಭಾರತಿಯಲ್ಲಿ ಮುನ್ನಡೆಸಲಾಯಿತು.ಆಮೇಲಿನ ದಿನಗಳಲ್ಲಿ ಹವಾಮಹಲ್ ಬಿಟ್ಟರೆ ಈ ಪರಿಯ ಮನ್ನಣೆ ಸಿಕ್ಕಿದ ಯಾವುದೇ ಕಾರ್ಯಕ್ರಮದ ಬಗ್ಗೆ ಕೇಳಿಯೂ ಇಲ್ಲ.

ಸುಮಾರು 1983 ನಲ್ಲಿ ನಮ್ಮ ಮನೆಗೆ ಮೊದಲ ಟಿ.ವಿ.- ಕಪ್ಪು ಬಿಳುಪು -ಬಂತು. ರೇಡಿಯೋ ಕಡೆ ಗಮನ ಕಡಿಮೆಯಾಗಿ, ಕ್ರಮೇಣ ನಿಂತು ಹೋಗಿತ್ತು.ಇತ್ತೀಚಿಗೆ ಬೆಂಗಳೂರಿಗೆ ಬಂದ ಮೇಲೆ ರೇಡಿಯೋ f.M. ಶುರು ಆದ ಮೇಲೆ ಪುನಃ ಹಾಡು ಕೇಳುವ ಗೀಳು ಹತ್ತಿ ಬಿಟ್ಟಿದೆ.ಈಗ ನಮ್ಮ ಮನೆಯಲ್ಲಿ/ಕಛೇರಿಯಲ್ಲಿ ದಿನದ 24 ಗಂಟೆಯೂ world space ಚಾಲೂ ಇರುತ್ತದೆ.

ಅಮೀನ್ ಸಯಾನಿಯವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗಲಂತೂ ತುಂಬಾ ಖುಶಿ.

ಅಮೀನ್ ಸಯಾನಿ ನಂತರ ಒಳ್ಳೆ ದನಿ ಇದ್ದದ್ದು ಹರೀಶ್ ಭಿಮಾನಿ ಮತ್ತು ಅಮಿತಾಭ್ ಬಚ್ಚನ್, ಆದರೂ ಅಮೀನ್ ಸಯಾನಿ ದನಿ ಬಗ್ಗೆ undying loyalty ಈಗಲೂ

ಮೊನ್ನೆ ಸೊಪ್ಪು ಕ್ಲೀನ್ ಮಾಡ್ತ ಸಿಕ್ಕ ಹಳೆಯ ವಿಜಯಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶರ್ ಭಟ್ ನವರು ಅಮೀನ್ ಸಯಾನಿಯವರ ಬಗ್ಗೆ ಬರೆದಿದ್ದನ್ನು ಓದಿ, ನನ್ನದಿಷ್ಟು ನೆನೆಪನ್ನು ಬ್ಲಾಗಿಸಿದೆ.

’ಅಮೀನ್ ಸಯಾನಿಜೀ ಆಪ್ಕೋ ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್’

.

‍ಲೇಖಕರು avadhi

April 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Ganesh

    ಮಾಲತಿಜೀ ಆಪ್ಕೋ ಪ್ಯಾರ್ ಭರಾ ನಮಶ್ಕಾರ್

    ಪ್ರತಿಕ್ರಿಯೆ
  2. umesh desai

    ಹಳೇ ನೆನಪು ಹೆಕ್ಕಿ ಕೊಟ್ಟಿದ್ದಕ್ಕೆ ಧನ್ಯ…..ಅದು ಸಿಯಾನಿ ಅಲ್ಲ ಸಯಾನಿ ಆಗಬೇಕಲ್ಲ
    ಅದು ಬಿನಾಕಾದಿಂದ ಸಿಬಾಕಾ ಆತು ಆದ್ರೆ ಅಮೀನ್ ಸಯಾನಿ ಶೈಲಿ ಬದಲಾಗಲಿಲ್ಲ ಅವ ಹಾಗೂ ತಬಸ್ಸುಮ್ ಸಿಲೋನ್ ರೇಡಿಯೋದ ಸ್ಟಾರ್ ಗಳಾಗಿದ್ರು……

    ಪ್ರತಿಕ್ರಿಯೆ
    • malathi S

      thank you Umesh!!
      Yes !!do u recall Tabassum and her ‘phool khile hain gulshan gulshan’ on Television?
      woh din bhi kyaa din the?
      Now
      worldspace service is no longer available in India 🙁
      🙂

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: