ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿತ್ತಲಿ ಮೋಡ ಅದುವರೆಗೂ ಸುಡಲಿ ಬೆಂದ ಒಡಲು..

ಜೋಕೆ !

-ಶ್ರೀನಿವಾಸ ಡಿ. ಶೆಟ್ಟಿ

ಹನಿಯೊಡೆದ ಮೋಡ ಬಿತ್ತುವುದು
ಕಾಯಿರಿ ನೀವು
ಬಿತ್ತದಿರಿ ಅದು ಬಿತ್ತುವವರೆಗೆ
ಅಥವಾ
ಕಣ್ಕಟ್ಟು ಪ್ರವೀಣ ಸರ್ಕಾರ
ಬಿತ್ತಲಿ ಮೋಡ
ಅದುವರೆಗೂ ಸುಡಲಿ ಬೆಂದ ಒಡಲು
ಇಲ್ಲವಾದರೆ
ದಢೂತಿ ಪಂಡಿತ ಉಸುರಲಿ
ಎಂಜಲೊಂದಿಗೆ ಹಾರಲಿ ಮಂತ್ರ
ಅಲ್ಲಿಯ ತನಕ ಸುರಿಯುತ್ತಿರಿ ಹವಿಸ್ಸು
ಅಯ್ಯೋ! ಮುಗಿಯಿತೇ ಆಯಸ್ಸು?
 
ಸಾಕು, ತಡ ಮಾಡಿದ್ದು
ನಾಳೆ, ನಾಡಿದ್ದು ಎಲ್ಲ ಒಂದೇ ಇಂದಿನಂತೆ
ಸುರಿಯಲಿ, ಸುರಿಸಲಿ
ನೀವು ಮಾತ್ರ ಬಿತ್ತಿ ಬೀಜ
ಜೋಕೆ!
ಕೀಳುವವರ ಸಾಲು ಬಲು ಉದ್ದ
 
ಅವಕಾಶಕ್ಕೆ ಬೇಕು ಅವಕಾಶ
ಕಾಯಬೇಕು ಸಾವಕಾಶ
ಭವಗಳ ಕಳೆದು
ಹೊಸ ಜೀವ ತಳೆದು
ನೀವು ನೀವಾಗಿಯೇ ಅವರಾಗಿ
ಜೋಕೆ!
ನೀವು ಅವರಾಗುವ ದಿನ
ಅವರು ನೀವಾಗುವುದಿಲ್ಲ
ನೀವು ನೀವಾಗಿಯೇ ಇರಲು
ಅವರು ಬಿಡುವುದಿಲ್ಲ

‍ಲೇಖಕರು avadhi

2 April, 2013

3 Comments

  1. chalam

    ನೀವು ನೀವಾಗಿಯೇ ಅವರಾಗಿ……ನಾನಾ ಅರ್ಥಗಳನ್ನು ಧ್ವನಿಸುವ ಸಾಲುಗಳು ಇಷ್ಟವಾದವು.ಏನೋ ಕಡಿಮೆಯಾಗಿದೆ ಅನಿಸಿತು……….

  2. Naveen

    Good Poem.. Sir

  3. uma

    last stanza is super kano.. i like vry much

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading