
ಹೊಸ ತಲೆಮಾರಿನ ಲೇಖಕ. 2010ರಲ್ಲಿ ‘ವಿಳಾಸ ಇಲ್ಲದವರ ಹುಡುಕುತ್ತಾ’ ಕಥಾ ಸಂಕಲನ ಪ್ರಕಟವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಪಡೆದ ಸಂಕಲನ ಅದು. ಸಾಹಿತ್ಯ, ರಂಗಭೂಮಿ, ಸಿನೆಮಾ ಇವರ ಆಸಕ್ತಿ ಕ್ಷೇತ್ರ.
ಪ್ರಸ್ತುತ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ
* * * * *
ಗವಿಸಿದ್ಧ ಹೊಸಮನಿ
ಎದಿಗುದ್ದೋಕ ಹಂಗ ಪುಸುಪುಸು ಬೆಳುದಿದ್ದ ಆ ಊರು ದುರುಗನು ತಾನು ಉಸ್ಸೋ ಅಂತ ಉಸುರಾಕಲು ಸವುಡು ಮಾಡಿಕೊಟ್ಟ ಆ ಊರನ್ನು ತನ್ನ ಹಡುದವ್ವ ಅಂತ ಪರಿಭಾವುಸಿಕೊಂಡಿದ್ದನು.
ಚಿಗುರು ಮೀಸಿ ತೊಟ್ಟು, ಚಿಗುರು ಒಯುಸ್ಸು ಅವುನದು. ಊರು ಗುಣವಂತಪ್ಪನ ಮಗುನಾದ ಲಗುಮನು ಊರು ಬಗುಲಾಗಿನ ಪಟ್ಟಣುದಾಗ ಓದಿ ನೌಕುರಿ ಮಾಡೂದನ್ನು ಕಂಡಾಗಿಂದ, ತಾನೂ ಲಗುಮನಂತಾಗಲು ಹಠ ತೊಟ್ಟು ಕಂಡಾಪಟಿ ಓದಿ ಕೊನೆಗೂ ಕೆಲುಸ ಸಿಗುದಿದ್ದಾಗ ಕಾನೂನು ಪದುವಿ ಮುಗುಸಿ ಕೊನೆಗೂ ಪಟ್ಟುಣದ ವಕೀಲರೊಬ್ಬರಲ್ಲಿ ಕೆಲುಸ ಗಿಟ್ಟಿಸಿ ನೌಕುರಿ ಮಾಡುತ್ತಿದ್ದ. ಸಂಡೂಲು ಸಿಕ್ಕಾಗ ತನ್ನೂರಿಗೆ ಬಂದು ಹೋಗುತ್ತಿದ್ದ.
ಹೀಂಗ ಬಹೂ ದಿನುದಿಂದ ತಾನು ಲಾಯುರುಕಿ ಮಾಡ್ತಿನಂತ ತುಸು ಗತ್ತು ಬೀಗುತ್ತಿದ್ದ ದುರುಗನು ಪತ್ರಿಕೆಗಳಿಗೆ ತನ್ನೂರಿನ ಅದು, ಇದು ಅಂತ ಬರುದೂ ಊರಲಿ ಹೆಸುರು ಮಾಡಿದ್ದ. ತನ್ನೆದುಗೆ ನಾಕಕುಷರ ಬಿದ್ದಾಗಿಂದ ಅರುವುಗೊಂಡು ತನ್ನೂರು ಬದುಕು-ಬ್ಯಾನಿ, ಆಸುರುಕಿ, ಬ್ಯಾಸುರುಕಿ, ಬೆರುಗಿಗೆ ಮಿಡುದ ತಾನು ಬರುದ ಬರೆಹ ಪತ್ರಿಕೆಯಲ್ಲಿ ಬಂದಾಗ ಅವುನ ಮೈಯಲ್ಲಿ ಮತ್ತಷ್ಟು ಕಸುವು ಬರುತ್ತಿತ್ತು. ಹೀಗ ತನ್ನೂರ ಜನುರ ದುಃಖ ದುಮ್ಮಾನ ಕಾಣುತ್ತಲೇ ಪೆನ್ನು ಹಿಡಿಯುತ್ತಿದ್ದ.
ಆಗೊಮ್ಮೆ, ಈಗೊಮ್ಮೆ ಊರು ಹಿರೇ ದೊಡ್ಡಪ್ಪನ ಮನಿಗೆ ಬರುವ ಪತ್ರಿಕೆಯೊಂದರಲ್ಲಿಯೂ ದುರುಗನು ಬರೆದ ಅದು ಪ್ರಕಟವಾಗಿತ್ತು. ಅದನ್ನು ಓದಿದಾಗಿಂದ ಆತನೂ, ದುರುಗನು ಎದುರಾದಾಗೊಮ್ಮೆ ‘ಏನಾ ಬರುತಿಯಲ್ಲೇ ಮುದ್ಕಾ ಚೊಲೊ ಬರೀತಿ’ ಅನ್ನುರುತುಲೆ.. ದುರುಗನು, ‘ಏನು ಇಲ್ಲಾ ಬುಡ್ರಿ’ ಅಂತಾ ಆ ಪೇಪುರನ್ನು ಹಂಗ ಹಗುರುಕ ಎಳುಕೊಂಡು ಅದರಲಿ ತನ್ನ ಹೆಸುರು ಕಂಡು ಹಿರಿಹಿರಿ ಹಿಗ್ಗುತ್ತಿದ್ದ.
ಇಂತಪ್ಪ ದುರುಗನನ್ನು ಕಾಡುತಲಿದ್ದ ಜೀವ ಅಂದರೆ ಅದು ಅವುನೂರಿನ, ಹಳೆಯ ಪಳಿಯುಳುಕೆಯಂತ `ಬಾವಿ ಸಂಗಮ್ಮ’ ಅಂಬುವುದೇ ಆಗಿತ್ತು. ದುರುಗನ ಜೀವುನವನ್ನು ನಿತ್ಯ ಹಿಂಡುತ್ತ, ಹೊತ್ತೊತ್ತಿಗೆ ಮಣ್ಣಿನ ಪದುವ ಹಾಡುತ್ತಲೇ ತನ್ನ ಬದುಕನ್ನುನಿರುಕಿಸುತ್ತಿದ್ದ ಸಂಗಮ್ಮಳ ಬದುಕು ಅದು ಪದುಕ ಮೀರಿದ್ದೇ ಆಗಿತ್ತು.
ಸುಮ್ಮನೇ ಆ ಊರು ಹಿರಿಕುರ ವಯಸ್ಸು ಎಣುಸುತ ಸರುತಿ ಹಿಡುದ್ರ ಸಂಗಮ್ಮಳದು ಅವುಳ ವಸುಡಿನ ಹುಳುಕು ಹಲ್ಲಿನ ಪರುಕಾರ ಅದುಮಾಸು ಅವುಳ ವಯಸ್ಸು ಎಂಬತ್ತೇಳೋ, ಎಂಬತ್ತೆಂಟೋ ಆಗುತಿತ್ತು. ಸಂಗಮ್ಮಳು ತನ್ನ ತಾಯಿಯ ತೊಗುಲು ಬಿಡುಸಿಕೊಂಡು ಇಯಾಂವು.. ಇಯಾಂವು.. ಅನ್ನುವ ದಿವುಸದಿಂದ ಹಿಡುದು ಹತ್ತಿಪ್ಪತ್ತು ವರುಷದ ಮ್ಯಾಲೆ ಅಲ್ಲಿಗೆ ಸಾಲೆಂಬುದು ಶುರುವಾತು ಅಂದ್ರ ಅವಳಿಗೆ ಸಾಲಿ ದರುಶನ ಆಗಿಲ್ಲವೆಂದೇ ಅರುಥ. ಎದುರಾದ ಯಾರಾದರು `ಸಾಲಿ ಕಲ್ತಿ ಅನುಬೇ ಸಂಗಮ್ಮ’ ಅಂತಂದಾಗ ‘ಅದೇದ್ಕ ಬೇಕುಪಾ ಕಿರುಕುಸಾಲಿ’ ಎಂದೇ ಸಂಗಮ್ಮ ಗೊಳ್ಳೆಂದು ನಗೆಯಾಡುತ್ತಿತ್ತು. ಕುಣಿಸೇರೋ ಈ ಹೊತ್ತಿನಲ್ಲೂ, ಸುಮ್ಮನೆ ಯಾರಾದರೂ ‘ನಿಂಗಾ ವಯಸ್ಸೇನಬೇ ಸಂಗಮ್ಮ’ ಎಂದುರೆ ಬರಾಬ್ಬರಿ ಮೂವತ್ತು ವರುಷದಿಂದ ‘ಒಂದ್ಮೂವತ್ತ, ನಾಲತ್ತು ಇರಹುದೆಪ್ಪಾ’ ಎಂದು ಹೇಳುತ್ತಲೇ ಬಂದಿರುವುದು ಸಂಗಮ್ಮಳ ಮತ್ತೊಂದು ಚಕಿತುದ ಸಂಗುತಿಯೇ ಆಗಿತ್ತು.
ಎಲುಬುದೊಗುಲಲ್ಲೇ ತೆಳ್ಳುಗೆ ಹೊಳೆವ ಕಂಗುಳು.. ಊರು ಜಿವುನುಪ್ಪನ ಹೋಲುವ ಹಂಡು-ಬಂಡು ಬಣ್ಣುದ ಒಡುಕು ಗುಂಡಿಯ ಜಂಪುರು.. ಪಾದುದಿಂದ ಹಣೆವರೂಗೂ; ತುದಿಬೆರುಳಿನಿಂದ-ಕಿವಿವರೂಗೂ ಸುಕ್ಕು ಗಟ್ಟಿದ ಮೈದೊಗುಲು.. ಹಳುಸು ಹಲ್ಲುಗಳು, ತುಸು ಬಾಗಿದ ನಡು.. ಇಷ್ಟು ಸಾಕಾಗಿ ಬಿಡುತ್ತಿತ್ತು ಇವಳೇ ಸಂಗಮ್ಮ ಎಂದು ಖೂನು ಹಚ್ಚಲು. ಇನ್ನೂ ಸಂಗಮ್ಮ ನೆಲುದ ಪಾದುಕೆ ಬಿದ್ದ ದಿನುಗುಳ ಆಸುಪಾಸು ದಿನುಗುಳಲ್ಲಿ ಅವುಳ ಗುಡಿಸುಲು ಪಕ್ಕವೇ ಒಂದು ಬಾವಿಗೂ ಗುದ್ದಲಿ ಪೂಜೆಯಾಗಿ ಅದುರಗೂಟುನ ಬೆಳುದ ಸಂಗಮ್ಮಳ ಹೆಸುರಿಗೆ ಬಾವಿ ಅನ್ನುವ ಅಡ್ಡನಾಮವೂ ಪುಕ್ಕಟೇ ಬಂದು ಊರಿಗೆ ಊರೇ ‘ಬಾವಿ ಸಂಗಮ್ಮ’ ಅಂದಾಗಲೇ ತನ್ನನ್ನು ನೆಪ್ಪು ಮಾಡಿಕೊಳ್ಳುವಂತಾಗಿದ್ದ ಸಂಗುತಿ ಖುದ್ದು ಸಂಗಮ್ಮಗೇ ಹೊಳೆಯುದ ಒಂದು ಒಗುಟೇ ಆಗಿತ್ತು.
ರಟ್ಟೆ ಬಲಿಯುತ್ತಲೇ ಅಣೆ-ನಾಕಾಣೆಯ ಕೂಲಿ-ನಾಲಿ ಮಾಡಿ ಸೇರಿಸಿದ್ದ ನಾಕಾಸಿನಿಂದ ಬರೋಬ್ಬರಿ ನಾಕ್ಕೂರ್ಗಿ ಹೊಲ ಹಿಡುದಿದ್ದ ಸಂಗಮ್ಮಗೆ ಹೊಲ ಅಂದುರ ಎಲ್ಲಿಲ್ಲದ ಕಕ್ಕುಲಾತಿ ಇತ್ತು. ಆಸುರಕಿ, ಬ್ಯಾಸುರಕಿ ಇಲ್ಲದೇ ಗಳುಸಿದ್ದ ಕಡುಗೆಂಪು ಮಣ್ಣಿನ ಒಂದೇ ಹಾಸಿನ ಆ ಭೂಮಿಯೇ ತನ್ನ ರಗುತ ಹಂಚಿಕೊಂಡುವರಿಗೆ ಆಸ್ರಾದೀತು ಎಂದು ಅಂದುಕೊಂಡಿತ್ತು. ಕೈ-ಕಾಲು ನಡುಗುತ್ತ ಮಣ್ಣಿಗೆ ಹೊರುಡುವ ವಯಸ್ಸಲ್ಲೂ ‘ಎಪ್ಪಾ ನಾ ಕಷ್ಟಪಟ್ಟ ಗಳುಸಿದ ಹೊಲಾನ ಕಳ್ಕೋಬಾಡ್ರಿ.. ಬಂಗಾರುದಂತ ಮೊಮ್ಮಕ್ಳ ಅದಾವು ಉಳುಸ್ರಿ’ ಎಂದು ಆಗಾಗ ತಿಳಿ ಹೇಳುತ್ತಿತ್ತು. ಗುಡಿಸಲು ಪಕ್ಕುದ ಬಾವಿ ಕಟ್ಟೆಗೆ ಕೂತು ಬದುಕಿನ ಪದಕಟ್ಟುತ್ತಿತ್ತು. ಭೂಮಿ ಗನುಮಕ್ಕಳಿಗೆ ಸೇರುಬೇಕು ಎನ್ನುವ ಹೊತ್ತಿನಲ್ಲಿ, ಒಂದುಕಷರ ಕಲಿಯದ, ಓದದ ಸಂಗಮ್ಮಳು ತಾನು ಗಳುಸಿದ ಭೂಮಿಯೂ ಬರೀ ಗಂಡುಮೊಮ್ಮಕ್ಕಳಿಗಷ್ಟೇ ಅಲ್ಲ ಅದು ಹೆಣ್ಣು ಮೊಮ್ಮಕ್ಕಳಿಗೂ ಸೇರುಬೇಕೆಂದು ಆಗಾಗ ಶರುಣ-ಶರುಣಿಯರಂತೆ ಜೀವತತುವ ನುಡಿಯುತುಲಿತ್ತು. ಇಂತಪ್ಪ ಕಾರುಣವಿಟ್ಟು, ತನ್ನ ಕಿರಿಮಗುಳು ಅಕ್ಕವ್ವಳ ಮಗ ಅರುಥಾರುಥ ತನ್ನ ಹೆಣ್ಣು ಮೊಮ್ಮಗ ಮಾರುನನ್ನೂ ಗಂಡು ಮೊಮ್ಮಕ್ಕಳಂತೆಯೇ ದೇಕುರೇಖಿ ಮಾಡುತ್ತ, ‘ಅಂವಾ ಎಂಟೆತ್ತಿನ ಒಕ್ಕಲುತನ ಮಾಡುವ ಭಂಟುನಾಗುಬೇಕು’ ಎನ್ನುವ ಕನಸೂ ಕಾಣುತ್ತ ಮಾರುನ ಮೇಲು ಒಂದುರ ಮೇಲೊಂದುರಂತೆ ಪದುವ ಕಟ್ಟುತಲಿತ್ತು.
‘ಮಾರಪ್ಪ ಬಾರೊ, ತಳುವಾರು ಮಾರಪ್ಪು /
ಬಾವಿ ಸಂಗಮ್ಮಳ ಮೊಮ್ಮಗನು/ ಮಾರಪ್ಪ
ಎಂಟೆತ್ತು ಕಟ್ಟೊ ಊರಾಗ’
ಎಂದು ಜನಪದುರಂತೆ ಹಾಡು ಗುಣಗುತಲಿತ್ತು ಸಂಗಮ್ಮ.
ಒಮ್ಮೆ ಹೀಗಾಯಿತು..
ಆ ಊರು ಸೀಮೆಯಲ್ಲಿ ಯಾವುದೋ ಜ್ವರುದ ಗಾಳಿ ಬಿಸಲು ಅದು ಬಡುಕಲು ಮೈಯುಳ್ಳ ಮಾರುನ ಬೆನ್ನೂ ಬಿದ್ದು, ಸ್ವಂಡಾಸು ಹತ್ತಿ ನಾಕಾರು ತಿಂಗುಳೇ ಉರುಳುತಲಿತ್ತು. ಪತ್ರಿಕೆಯಲ್ಲಿ ಜ್ವರುದ ಸುದ್ದಿಯಾಗಲು ವಾರುಕೆ ಒಂದು ಸರುತಿ ಊರಿಗೆ ಬರುತುಲಿದ್ದ ಬಿಳಿಸೀರೆಯುಡುವ ದಾದಿಯು ಸಂಗಮ್ಮಳ ಮನೆಗೆ ಬಂದು ‘ಬೇ ಮುದುಕಿ ಊರಾಗ ಡೆಂಗು ಫೀವರ್ ಐತಿ… ಜ್ವರಾನು ಬಂದಾವು ಹುಡುಗನ ಹೆಲ್ಥು ಬಗ್ಗೆ ಕೇರು ಮಾಡು’ ಎಂದು ಕಂಗ್ಲಿಷ್ ಮಾತಾಡಿ ತನ್ನ ಕರಿ ಬ್ಯಾಗಿನಿಂದ ಯಾವುದೋ ಬೂದುಬಣ್ಣುದ ಎರುಡು ಗುಳುಗೆ ನೀಡಿ ಹೋಗಿದ್ದಳು.
ಡೆಂಗು, ಹೆಲುಥು, ಫಿವುರು ಇದ್ಯಾವುದೂ ಗೊತ್ತಾಗುದೇ ಜ್ವರ ಎಂಬುದಷ್ಟು ಗೊತ್ತಾಗಿ ‘ಆತ ಎವ್ವಾ ಜ್ವಾಕಿದಿಂದ ಇರುತೀನಿ’ ಅಂತ ಯಾವಾಗುಲೋ ಒಮ್ಮೆ ಬರುತ್ತಿದ್ದ ದಾದಿಗೆ ಸಂಗಮ್ಮ ಹೇಳಿತ್ತಾದರೂ ದಾದಿ ಬಂದು ಹಾಗೆ ಹೇಳಿ ಹೋದು ಚಣುದಿಂದಲ ಸಂಗಮ್ಮಳು ಮೊದುಲಾಗಿ ಇಡೀ ಊರುಗೆ ಊರೇ ಭಯವಗೊಂಡಿತ್ತು. ದಾದಿಯೊಬ್ಬಳು ಅಲ್ಲಿಗೆ ಬಂದುದ್ದು ಬಿಟ್ಟರೆ ಸಂಬಂಧಿಸಿದ ಯಾರೂ ಇತ್ತ ಲಕುಶ ವಹಿಸಿರುಲಿಲ್ಲ. ತಿಂಗಳೊಪ್ಪತ್ತಿನಿಂದಲೇ ಮಾರನು ಜ್ವರದಿಂದ ಬಳಲುತ್ತಲೇ ಇದ್ದನು.
ಅವತ್ತು ಮಾರನು ಘಳುಗೆ-ಘಳುಗೆಗೊಮ್ಮೆ ಚೆಡ್ಡಿ ಉಚ್ಚುತ್ತಲೇ, ತಿಣುಕುತ್ತ ಹಂಗ ನರುಳಲು ಸಂಗಮ್ಮ `ಯಾರರ ಬರಪೋ.. ಕೆಟ್ಟಾ ಜ್ವರಾ ಬಂದಾವಂತ ಬರಪೊ.. ಇಂವಾ ಬದುಕಿದ್ರ ಭೂಮಿ ಕೊಡೂದು ಬಂದಿತಂತ ಅವ್ರ ಮಾವಾರು ತಟೂಗೂ ಲಕುಶ ಕೊಡಾವಲ್ರಪೋ’ ಅನ್ನುತ್ತಲೇ.. ಅಷ್ಟೊತ್ತಿನಿಂದಲೇ ನೆಟೇಗಣ್ಣು ಹಾಕಿದ್ದ ಮಾರುನ ಉಸುರು ಚಣ ಹೊತ್ತಿನಲ್ಲ ನಿಂತು ಬಿಡಲು; ಸಂಗಮ್ಮ ‘ಅಯ್ಯೋ ಮಾರಾ..’ ಎಂದು ಕಿರುಚಿಕೊಂಡಳು. ಸುದ್ದಿ ಕೇಳುತ್ತಲೇ ಅಲ್ಲಿಗೆ ಬಂದ ಊರು ಜನರು ಚು.. ಚು… ಚು…. ಎಂದು ಲೊಚುಗುಟ್ಟಿದ್ದರು. ಆ ಚಣುದಿಂದಲೇ ಸಂಗಮ್ಮಳ ಗುಡಿಸುಲಿಗೆ ಕತ್ತುಲು ಹೊಕ್ಕಿತ್ತು. ಮಾರನು ಸತ್ತ ದಿನುದಿಂದ ಮತ್ತದೇ ಬಾವಿ ಕಟ್ಟಿ ಹಿಡುದಿದ್ದ ಸಂಗಮ್ಮಳು ಆ ಕಟ್ಟಿಗೆ ಕೂತು ‘ಮಾರಪ್ಪ ಮಾರಪ್ಪಾ’ ಅಂತ ಪೇಚಿಡುತ್ತಿತ್ತು. ಯಾರಾದರೂ ಬಾವಿ ಹತ್ತಿರ ಕಾಣುತ್ತಲೇ ‘ನಮ್ಮ ಮಾರಪ್ಪನ ನೋಡಿರನು’ ಅಂತ್ತಿತ್ತು, ಗುಡಿಸುಲೇ ಅದುರುವಂತೆ ಬಳುಬಳು ಕಣ್ಣೀರಿಡುತ್ತಿತ್ತು. * * *
ಡೆಂಗೆ ಜ್ವರುದಿಂದ ತನ್ನೂರು ಹುಡುಗನೊಬ್ಬ ಸತ್ತ ಸುದ್ದಿ ನೋಡುತ್ತಲೇ ತಳುವ ಮಳುವ ಗೊಂಡಿದ್ದ ಲಾಯರು ದುರುಗಪ್ಪ ಅರಥಾರುಥ ದುರಗನು ಪಟ್ಟಣುದಿಂದ ಅವತ್ತು ಊರಿಗೆ ಬಂದು ಗಾವೂದ ದೂರುದಲ್ಲಿದ್ದ ಸಂಗಮ್ಮಳ ಗುಡಿಸುಲತ್ತ ಸಾಗಿದ್ದ. ಲೆಕ್ಕಿ ತಪ್ಪುಲಿನ ಸಂಗಮ್ಮಳ ಗುಡಿಸುಲಿನ ಅಡುಗೋಡುಯ ಮೇಲಿನ ಚಿಮುಣಿ ಬುಡ್ಡಿ ಬಿಕ್ಕುತೊಡುಗಿತ್ತು. ದುರಗಪ್ಪನು ಚೂರು ಜಂಗು ಹತ್ತಿದ ತಗುಡಿನ ಬಾಗಿಲು ಸರುಸಿ ಮೆಲುದನಿಯಲಿ ‘ಸಂಗಮ್ಮಾ’ ಅನ್ನುತ್ತಲೇ.. ‘ಯಾರು ಮಾರಪ್ಪನು.. ಬಾ ಎಪ್ಪಾ ನೀ ಅವುರ ಆಸ್ತಿ ಕಸಗೊಂತಿದ್ದಿಲಪೊ.. ನಿಮ್ಮಾವಾರು ತೋರುಸಿದ್ರ ಉಳಿತಿದ್ದೆಪೋ ನೀನು…’ ಎಂದು ಅತ್ತು ಅತ್ತು ಬತ್ತಿದ ತನ್ನ ಕಣ್ದುಂಬು ಮತ್ತೆ ನೀರು ತಂದಿತ್ತು ಸಂಗಮ್ಮ. ದುರುಗನ ಕಣ್ಣೆವೆಯಲ್ಲೂ ನೀರು ತೊಟ್ಟಿಕ್ಕಿತ್ತು. ಆಗ ದುರುಗನು ಅವುಳತ್ತಿರ ತಟುಗ ಸರುಕೊಂಡು ‘ ಎಮ್ಮಾ ನಾನು ದುರಗಪ್ಪ ವಕೀಲ’ ಅಂದಾಗ ‘ಅಯ್ಯ ದುರುಗಪ್ಪನು ಬಾರಪ್ಪೋ.. ಎಪ್ಪಾ ನನ್ನ ಮಗುಳ ಅಕ್ಕವ್ವ ಐತೆಲ್ಲಾ ಅದು ನನುಗ ಗನುಮಗೂನ ಸಮುನಪೊ.. ಅದ್ರ ಬದ್ಕಿಗೆ ಎಳ್ಳುಕಾಸಿನ ಸುಖಾ ಇಲ್ಲಾ.. ಅದುಕ ಆಕಿ ಮಗುನ್ನ ಇಲ್ಲೆ ಇಟ್ಗೊಂಡಿದ್ಯಾ.. ಜ್ವರ ಜ್ವರ ಅಂತ ಬಡ್ಕೊಂಡ್ರೂ ನಿಮ್ಮ ಮಾವ್ನಾರು ಡಾಕುಟರ ಹತ್ತಿರ ತೋರುಸಲಿಲ್ಲಪೊ.. ಅವುನು ಬದ್ಕಿದ್ರ ಹೊಲಾ ಕೊಡೂದು ಬಂದಿತಂತ ಅವುರ ಲೆಕ್ಕ, ಈಕೀನು ಯಾವಾಗ ಹೊಕ್ಕಾಳೇನೋ ಅಂತ ನಂದಾ ಚಿಂತಿ ಮಾಡಾಕತ್ಯಾರಪೊ.. ಎಪ್ಪಾ ಅಕ್ಕವ್ವುನ ಬಾಳೆವು ಸಜ್ಜಿಲ್ಲಾ, ಆಕಿ ಹಸುರೀಗೆ ಎಕ್ರೆ ಹೊಲಾ ಸಿಗುವಂಗ ಮಾಡಪೊ.. ನೀನು ಪಟ್ಟಣುದಾಗ ಇರುತಿ.. ಕಾವುದೇ ಕಥಿ ಏನೂಂತ ಗೊತ್ತಿರುತ್ತ.. ಈ ಕಡೆ ಸಲುಪು ನೆದುರು ಇರುಲೆಪೋ’ ಎಂದು ಸಂಗಮ್ಮ ಥೇಕುತ್ತಲೇ ಹಾಗನ್ನಲು; ದುರಗನು ‘ಹೂಂ’ ಅಂದು ಬಂದಿದ್ದ.
* * *
ಸಂಗಮ್ಮಳ ದೂರುದ ಸಂಬಂಧಿಯೂ ಆಗಿದ್ದ ದುರುಗನು ಕಾನೂನು ಪದುವಿ ಓದಿದ್ದ. ಆಗಾಗ ಪಟ್ಟುಣುಕೆ ತೆರುಳಿ ವಕೀಲಿ ವೃತ್ತಿ ಮಾಡುತಲ್ಲಿದ್ದ. ನ್ಯಾಯುದ ಪರುವ ಸದಾ ವಕಾಲತ್ತು ಮಾಡುತ್ತ, ತನ್ನ ಕೆಲುಸದ ಜೊತುಗೆ ಊರು ಪಕ್ಕುದ ಸಿಟಿ ಸಂಘುಟನೆಯಲ್ಲಿ ಆಗಾಗ ಆ ಧ್ಜಜುದೊಂದುಗೆ ಕಾಣುವ ಇವುನನ್ನು ಕಂಡುರೆ ಕೆಲುವರಿಗೆ ಹೊಟ್ಟಿಯಲ್ಲಿ ಚಿಟಿ ಮುಳ್ಳು ಆಡಿಸಿದಂತಾಗುತ್ತಿತ್ತು. ತನ್ನ ಕೆಲುಸುದೊಟ್ಟಿಗೆ ಊರು ಜನುರ ಕೆಲಸವನ್ನೂ ಮಾಡುತ್ತಿದ್ದ ದುರಗ. ಸಂಗಮ್ಮಳ ವಿಷಯ ಕಿವಿಗಿಟ್ಟ ದಿನುದಿಂದ ಅದು ತಲಿಯೊಳುಗ ಗುಂಗಿಟ್ಟು ತಿರುಗುತ್ತಿರುವಾಗ ಒಂದು ದಿನ ಊರ ದುಗ್ಗಮ್ಮನ ಕಟ್ಟೆಯಡಿ ಅವುಳ ಹಿರೇಮಗ ಭೀಮಪ್ಪ ಎದುರಾದ. ದುರುಗನು ಅವುನನ್ನು ಕಣ್ಣು ಅಗುಲಿಸಿ ನೋಡಿ ಮುಖುವ ಕೆಳುಗ ಹಾಕಲು ಅವುನು ‘ಎ ದುರಗಪ್ಪ ನಮ್ಮ ಊರಿಗೆ ಮೊನ್ನೆ ಕಂಪ್ನಿದೋರು ಬಂದಾರಲ್ಲಾ ಅವ್ರ ಮುದ್ಕಿ ಹೊಲಾ ತಗೊಂಡ್ರ.. ಏಕ್ರೇಕ 30 ಸಾವ್ರ.. ಊರ ಹಿರೇರ ಮುಗುಸಿದ್ರು.. ಭೂಮಿ ಇವತ್ತಿದ್ದೀತು, ನಾಳೆ ಹೋದಿತು.. ಚೋಲೊ ದುಡ್ಡಾತು ಕೊಟ್ನೆಪಾ.. ಮುದ್ಕಿನೂ ಸೈ ಮಾಡುಲ್ಲಂದಿತ್ತು… ಮತ್ತ ಇದು ಹೊಲ ಮಾರೂದ ಪತ್ರಲ್ಲ.. ರೇಷನ್ ಕಾರ್ಡಿನ ಪತ್ರ ಸೈ ಮಾಡು ಅಂದೆ ಮಾಡ್ತು… ಅವತ್ತು ನೀನು ಇದ್ದೆಲ್ಲಾ..’ ಎಂದು ಒಂದೇ ಉಸುರಿಗೆ ಹೇಳುತ್ತಲೇ ವರುಟಾದ ಆ ಬಿಳುಪು ಹಾಳೆಯನ್ನು ಮುಂದಿಟ್ಟನು.
‘ನಿನ್ನ ಹೊಲಾ ಏನು ಆಗುಲ್ಲೆಮ್ಮಾ ಆ ಹೊಲಾ ಉಳುಸೋ ಜವುಬುದಾರಿ ನಂಗ್ಬಿಡು’ ಎಂದು ವಾರುದ ಹಿಂದಷ್ಟೇ ಹೇಳಿ ಬಂದಿದ್ದ ದುರುಗನು, ಅವುನ ಇಟ್ಟಿದ್ದ ಆ ಕಾಗುದುವ ಕಂಡು ತಳುವು ಮಳುವುಗೊಂಡು ಅವುನ ಗಂಟಲು ಬಿಗುದಂತನುಸಿತು. ‘ಅಯ್ಯ ಸಂಗಮ್ಮನ ಹೊಲಾನ ಆಕಿ ಮಕ್ಳು ಯಾರ ಕಂಪ್ನಿ ದವುರಿಗೆ ಮಾರಿದ್ರಂತಲ್ಲಾ ಎಪ್ಪಾ.. ಊರುಗೆ ಅವೊಳೇ ಜೋಡು ಆದ್ವು ಅಂತೀನಿ..ಅವು ಮನಿ ಹಾಳಾಗ.. ವಕೀಲಾಗಿ ಇಡೀ ದೇಶದ ಸುದ್ದೀನ ಮಾತಾಡುತಿ ನೀನು.. ಸಂಗಮ್ಮನ ಹೊಲಾ ಉಳಿವಂಗ ಮಾಡ್ಲಿಲ್ಲ ಬಿಡಾ ಎಪ್ಪಾ ನೀನು.. ‘ ಎಂದು ಉಸುಲು ಬಿಡುದೇ ಅಂದ ತನ್ನವ್ವಳ ಮಾತುಗಳು ಎದುಗೆ ಚುಚುಗ ಚುಚ್ಚಿದಂತನುಸಿ ತಡುವ ಮಾಡುದೇ ಗುಡಿಸುಲತ್ತ ಸುಳುದಿದ್ದ ದುರಗಪ್ಪ.
ಹೊಲ ಮಾರೋ ಸುದ್ದಿ ಊರಲ್ಲಿ ಸುಗ್ಗಿಯಂತಾಗಿದ್ದರಿಂದ ಭಯವಗೊಂಡಿದ್ದಳೇನೋ ಘಳಿಗೆ, ಘಳಿಗೆಗೂ ದುರಗನ ಹೆಜ್ಜೆ ಸಪ್ಪಳುವನ್ನೇ ಕಾದು ಕೂತಿರುತ್ತಿದ್ದ ಸಂಗಮ್ಮಳು ಆ ಹೊತ್ತುಗೆ ಅವುನ ಹೆಜ್ಜೆ ಸಪ್ಪಳ ಕೇಳಿ, ‘ಎಪ್ಪಾ ದುರಗಣ್ಣ ನಿಮ್ಮಾವ ಭೀಮಪ್ಪ ಗುಡುಸಲುಕ ಬಂದು ರೇಷನ್ ಕಾಡಿಂದಿದು ಅಂತ ಹೇಳಿ ಬಿಳೆ ಹಾಳಿ ಮ್ಯಾಲೆ ನನ್ನ ಹೆಬ್ಬಟ್ಟು ಒತ್ತಿಟ್ಟು ಹೋಗ್ಯಾನ.. ನಂಗ್ಯಾಕ ಹೊಟ್ಟಿ ಬುಗುಲ್ ಬುಗುಲ್ ಅನ್ನಕತೈತಿ.. ನಮ್ಮ ಊರು ಗುಡ್ಡಕ್ಕ ಯಾರ ಕಂಪ್ನಿದೋರು ಬಂದಾರಂತ.. ಅವೇನ ಹೊಲ ಕೇಳಕತ್ಯಾವಂತ ನಂಗ ಬಾಳವ್ವ ಹೇಳ್ತು.. ನಂಗ್ಯಾಕ ನಿಧಾನು ಆಗುವಲ್ದಪಾ.. ದವುಡು ನನ್ನ ಹೊಲನಾ ಆಕಿ ಮಕ್ಳ ಹೆಸುರಿಲೆ ಮಾಡ್ಸು ಎಪ್ಪಾ..’ ಎಂದು ಸಂಗಮ್ಮ ಮಾತು ಮುಗಿಸುತ್ತಲೇ ಭೀಮಪ್ಪ ಅತ್ತಿಂದ ಗರುಗರು ನೋಟುಗಳ ಪೆಂಡಿ ಹಿಡುದು ಬಂದದ್ದನ್ನು ಕಂಡು ದುರಗನಿಗೆ ತಲೆ ತಿರುಗಿದಂತಾಗಿತ್ತು.
ಸಂಗಮ್ಮಳ ಹೊಲ ಮಾರಾಟಗೊಂಡ ಮರುದಿನದಿಂದ ಅವುಳು ಪಡುತ್ತಿದ್ದ ಸಂಕುಟ, ಅವುಳ ಚೆಂದುದ ಆಸ್ತಿ, ಖಾಸಗೀ ಕಂಪುನಿ, ಸೌಕಾರು ಲಾಭಿ, ವಕೀಲುರು, ನ್ಯಾಯ ಎಲ್ಲವೂ ಬಿಡುದಂತೆ ಕಾಡಿ ತನ್ನ ಬಟ್ಟೆಬರೆಯೊಂದುಗೆ ದುರಗನು ಮತ್ತೆ ಪಟ್ಟುಣುದ ಹಾದಿ ಹಿಡಿಯುತ್ತಲೇ ಅಲ್ಲಿ ಒಂದು ದೃಶ್ಯವ ಕಂಡನು. ‘ಪ್ರಾಣವ ಕೊಡುತೀವಿ.. ಭೂಮಿಯ ಕೊಡುದಿಲ್ಲ..’ ಎಂದು ಅನ್ನತೊಡುಗಿದ್ದ ಗುಂಪನ್ನು ಕಂಡು ಯಾಕೋ ಅವುನಿಗೆ ತುಸುವ ನಿರಾಳ ಅನ್ನಿಸಿತು. ‘ನಮ್ಮನ್ನು ಸಾಕುವ, ಜ್ವಾಪಾನು ಮಾಡುವ ಈ ಭೂಮಿ ಬಿಡುಲಾರೆವು.. ಖಾಸಗೀ ಕಂಪುನಿಗಳುಗೆ ಮಣ್ಣು ನೀಡಲಾರೆವು’ ಎಂದು ಅವರು ಧ್ವಜವ ಕೈಯಲ್ಲಿ ಹಿಡುದು ಅತ್ತಲೂ, ಇತ್ತಲೂ ಮಾಡುತ್ತ ಹೇಳುತ್ತಲೇ ಇದ್ದರು. ‘ನಿಮುಗ ಹಣವ ಕೊಡುತೀವಿ.. ನಮುಗ ಭೂಮಿ ಕೊಡ್ರಿ.. ನಾವು, ಫ್ಯಾನು ಹಾಕಿಯೇ ಹಾಕತೀವಿ..’ ಎಂದು ಅವರೂ ಹೇಳುತ್ತಿದ್ದರು. ಭೂಮಿ ಉಳುವಿಗಾಗಿ ನಡುದ ಹೋರಾಟವು, ರಸ್ತೆಗೆ, ಉಪುವಾಸಕ್ಕೆ ಬಂದು ನಿಂತಿತ್ತು. ಮರುದಿನುವ ಕೋಳಿ ಕೂಗೋ ಹೊತ್ತಿಗೆ ಆ ಲಡಾಯಿಯು ಮುಗೂದ ಹೋದಾಗ ದುರುಗನು ತನ್ನ ಕತ್ತುವ ಕೆಳುಗ ಹಾಕಿದ್ದ. ಈ ಮೊದಲು ‘ನಾವು ಭೂಮಿ ಕೊಡುದಿಲ್ಲ’ ಅಂದವರೇ ಕಂಪನಿಯವರಿಗೆ ಭೂಮಿ ಕೊಟ್ಟಾಗ ಅಲ್ಲಿನ ಬಿಳುಪು ಬಣ್ಣುದ ವಸ್ತ್ರ ದಾರಿಗಳು ಕೂಹುಕ ನಗು ಬೀರಿದ್ದರು. ಇದ್ದೊಂದ ಅವುಕಾಶವೂ ಕೈ ಬಿಟ್ಟು, ಮತ್ತೆ ಮರುದಿನ ದುರುಗ ತನ್ನೂರತ್ತವ ಪಾದುವ ಕಿತ್ತಿದ್ದ.
* * *
ದುರಗನು ಮರಳಿ ತನ್ನೂರತ್ತ ಬರುತ್ತಲೇ ಊರ ಓಣಿಗಳು ಕತ್ತುಲದ ಪದುವ ಹಾಡತೊಡುಗಿದ್ದವು. ಮೂಡುಣ ಕೆಂಪೇರುತ್ತಲೇ ಹೊಲುದಲ್ಲಿರುತ್ತಿದ್ದ ಚಕ್ಕುಡಿಗಳು, ಎತ್ತುಗಳು ಅಲ್ಲಲ್ಲೇ ಮಲುಗಿದ್ದವು. ಯಾವತ್ತೂ ನೋಡಿರುದ ನೆಲುವ ತೋಡುವ ಆ ಮಸೀನುಗಳು ಊರು ಸೀಮೆಯ ತುಳಿಯುತ್ತಲೇ ಊರ ಬಸುರಿಯರು ಬಿಕ್ಕುವಂತೆ ಭಾಸವಾಗುತೊಡುಗಿತ್ತು. ಊರೆಂಬೂರೂ ಹುಡಿಹುಡಿಯಾಗುವಂತೆ ಬಂದ ಗಾಡಿಗಳೆಲ್ಲಾ ಗುಡ್ಡುವ ಏರುತ್ತಲೇ ಊರ ಶಾಲೆಯ ಬಾಲುವ ಮಕ್ಕಳು ಕವುಕವು ಕಣ್ಣು ಬಿಡುತೊಡುಗಿದ್ದವು. ಬಂದ ನಾಕಾರು ದಿನುದಲ್ಲಿಯೇ ಊರು ಅರುದಷ್ಟು ಭೂಮಿ ನುಂಗಿದ್ದ ಆ ಮಸೀನುಗಳು ಬಾವಿ ಸಂಗಮ್ಮಳ ಹೊಲುದಲ್ಲಿ ಬೀಡುವ ಬಿಟ್ಟು ಸಾಪುಸಾಪಾದ ನೆಲುವಗೆಯುತೊಡುಗಿ ಅಲ್ಲಲ್ಲೇ ತಗ್ಗು, ದಿನ್ನೆಗಳು.. ರಾಶಿ ಕಲ್ಲುಗಳು.. ಮಬ್ಬಾಗಿಸುವ ಹುಡಿ ಮಣ್ಣು.. ಏಳುತ್ತಲೇ `ಲೇ ಹುಡುಗ್ರಾ_ನಿಮ್ಮ ತಾತ ಮುತ್ತಾತ್ರು ಜೀವ ಹಲುವ ಹಲುವ ಮಾಡಿ ಗಳ್ಸಿದ ಪಡಿ-ಪಾವು ಭೂಮಿನಾ ಕಳ್ಕೋ ಬ್ಯಾಡ್ರಲೇ.. ಅದ್ರ ಬೆಲೆ ನಿಮ್ಗೇನ್ರಲೇ ಗೊತ್ತು.. ನಮ್ಗ ಸಾಯೂತನ ಅನ್ನ ನೀಡೂದು ಮಣ್ಣ್ರಲೇ.. ಮಣ್ಣಿದ್ರ ಯಾರುದೂ ಅಂಜ್ಕಿಲ್ಲ, ಅಳ್ಕಿಲ್ಲ.. ಮಣ್ಣ ಕಳ್ಕೊಂಡ್ರ ಮಾನ ಕಳುಕೊಂಡಗ್ಲೆ’ ಎಂದು ಧನಿಯುಯೊಂದು ತೇಲುತ್ತ ತೇಲುತ್ತ ಹೊರುಟಿತ್ತು.
* * *
ಊರು ಜನುರು ತಮ್ಮ ಮೂಗುನ ಮೇಲೆ ಬೆರುಳಾಡಿಸುವಂತೆ ಫಸುಲು ಕೊಡುತ್ತಿದ್ದ ಸಂಗಮ್ಮಳ ಹೊಲುದಲ್ಲಿ ಪುಡಿಗಲ್ಲು ಗುಡ್ಡಿ ಬೀಳುತ್ತಲೇ.. ಇತ್ತ ‘ಸಂಗಮ್ನ ಬಾಯಿ ಬಿದೈತಿ’ ಅಂತ ಅನ್ನುವ ಸುದ್ದಿಯೊಂದು ಓಣಿ ಸುತ್ತುತ್ತಲೇ ದುರುಗ ಅವುಳ ಗುಡಿಸುಲಿನತ್ತ ಸುಳುದು, ಅಲ್ಲಿ ಅಂಗಾತು ಮಲುಗಿದ್ದ ಸಂಗಮ್ಮಳ ಹೆಣುವ ಕಂಡು ಬೋರಿಟ್ಟ. ‘ಎಪ್ಪಾ ದುರುಗಪ್ಪ ನನ್ ಹೊಲ ಉಳುಸಪೋ’ ಅನ್ನುವ ಅವುಳ ಮಾತು ನೆನುಪಾಗಿ ಬಳುಬಳು ಕಣ್ಣೀರಿಟ್ಟ. ‘ಎಮ್ಮಾ ನನ್ನ ಕ್ಷಮಿಸಮ್ಮೋ’ ಎಂದು ಮನುದೊಳುಗೆ ಬೋರಿಟ್ಟ. `ಯಾವ ದೇಶದ್ವೊ ಊರಾಕ ಬಂದು ಊರ ಹಾಳ ಮಾಡಿದ್ವು’ ಎಂದು ಶೆಟ್ಟರ ರುದ್ರಮ್ಮ ವಟುವಟು ಅನ್ನುತೊಡುಗಿತ್ತು. ‘ನಿಮ್ಮಂತ ಕಲ್ತಾರಿದ್ರ.. ಭೂಮಿ ಉಳಿತಿತ್ತೆಪ್ಪಾ..’ ಎಂದು ಕುರುಬರು ಹನುಮವ್ವಳೂ ಮಾತು ಗೂಡಿಸಿತ್ತು. ತಾಸೊತ್ತಿನಿಂದಲೇ ತೆಳುವಾಗಿ ಉರಿಯುತೊಡುಗಿದ್ದ ಆತನೂ ರಭುಸುದಿಂದಲೇ ಅತ್ತ ಪಾದುವ ಊರಿದ್ದ.
ನಿತ್ಯ ಗುಡ್ಡವ ಏರಿ ಅಲ್ಲಿನ ಹುಲ್ಲು ಮೇಯ್ದು ಹೊಟ್ಟೆ ಹೊರೆ ಮಾಡಿ ಸಂಜೆ ಹೊತ್ತುಗೆ ಊರಿನತ್ತ ಮುಖುವ ಮಾಡಿ ಹಸುಗೂಸುಗಳಿಗೆ ಹಾಲಾಗುತ್ತಿದ್ದ ದನುಗಳು ಗುಡ್ಡವನ್ನು ಕಣ್ಣೆತ್ತಿ ನೋಡುದೇ ಒಣುಕಲು ತೊಗುಲಿನೊಂದಿಗೆ ಆಗಷ್ಟೇ ಅತ್ತ ಮುಖ ಮಾಡಿದ್ದವು. ಮುದುಕಿಗೆ ಬಾಯಿ ಬೀಳುತ್ತಲೇ ಗುಡಿಸುಲತ್ತ ಬಂದು, ಪಕ್ಕದ ಚಾದಂಗುಡಿಯಲ್ಲಿ ಕೂತು ಮುರಿದು ಅಲ್ಲಲ್ಲೇ ಬಿದ್ದ ಆ ತುಂಡು ಬೀಡಿಗಳುಗೆ ಬೆಂಕಿ ಹೊತ್ತಿಸುತ್ತಲೇ ಇದ್ದ ಕುರುಬರ ಮುದಿಯಜ್ಜ ‘ಲೇ ಶಿವ್ಯಾ, ಯಂಕಾ ಕೊಡ್ಲಿ ತಗೋರಿ ಹುಂಚಿ ಪಟ್ಯನ ಜಾಲಿ ಗಿಡ ಅಷ್ಟ ಕಡೀರಿ ಸಾಕು’ ಅನ್ನುತ್ತಲೇ ದುರುಗನು ಎದುವ ಹುಣ್ಣಿನ ನೋವನ್ನು ಗಳುಗಳುನೇ ಉಣ್ಣುತೊಡುಗಿದ್ದ. ಗುಡ್ಡದ ಸಂದುಯಲ್ಲಿ ಆ ಮಶೀನುಗಳ ಹಾರಿಸುವ ಧೂಳುಗೆ ಬೆದುರಿಹೋದಂತೆ, ಹೊತ್ತು ಮತ್ತೀಗ ಮೆಲ್ಲನೆ ಮೋಡುವ ಸೀಳುವ ತೊಡುಗಿತ್ತು, ಇದೆ ಕೊನೆಯೇನೋ ಅಂಬುವಂತೆ…!
* * *
‘ಊರುಗೆ ನನ್ನಿಂದ ಏನಾದರೊಂದು ಸಹಾಯವ ಮಾಡಬೇಕು’ ಅನ್ನುವ ಇಚಾರುವ ತನ್ನೆದುಯೊಳುಗ ಜ್ವಾಪಾಣದಿಂದಿರಿಸಿ ಕಾಲೇಜು ಮೆಟ್ಟಿಲುವ ಏರಿ ನೀಚುತನುದ ವಿರುದ್ಧ ದನಿಯ ಎತ್ತುತ್ತಿದ್ದ ದುರಗನು ಈಗೀಗ ಮಾನುಸಿಕ ಸಮುತೋಲುನ ಕಳುದುಕೊಂಡಿದ್ದ. ಹಚ್ಚ ಹಸುರ ಕಾಡುನಂಗಿದ್ದ ಸಂಗಮ್ಮಳ ಹೊಲ ಮಶೀನುಗಳ ಬಾಯಿಗೆ ಅನ್ನವಾಗಿದ್ದು, ಊರು ಭಣುವ ಭಣುವ ಅನ್ನತೊಡುಗಿದ್ದು, ಈ ಬಗ್ಗೆ ಪ್ರಶ್ನಿಸುದೇ ತಾನು ಸುಮ್ಮನಾಗಿದ್ದು, ಪ್ರಶ್ನಿಸಿದ್ದರೂ ಜನ ಅದನ್ನು ತಿರಸ್ಕರಿಸಿದ್ದು, ಮುರುಕುಲು ಚಪ್ಪುರದಲ್ಲಿಯೇ ಸಂಗಮ್ಮ ತೆಳ್ಳುಗೆ ಬಿಕ್ಕುತ್ತಿದ್ದ ದೀಪುದಡಿ ಅನಾಥವಾಗಿ ಮಲುಗಿದ್ದು.. ಎಲ್ಲವೂ ಮತ್ತೆ ಮತ್ತೆ ಕಾಡಿ ದುರಗಪ್ಪ ಹಣ್ಣುಗಾಯಿ-ನೀರುಗಾಯಿಗುತೊಡುಗಿದ್ದ. ಸಂಗಮ್ಮಳಿಗೆ ನ್ಯಾಯ ಕೊಡುಸುದ ತಾನು ನಾಲಾಯಕ ಎಂದು ಗೊಣುಗಿಕೊಂಡ. ಅವುನ ಕೆಣ್ಣೆದುರಿಗೆ ಕಾಣುತ್ತಿದ್ದ ಪವುವಿ ಪತ್ರಗಳು, ಪುರಸ್ಕಾರಗಳು ಅಣುಕಿಸುತ್ತಿರುವಂತೆ ಭಾಸವಾಗಿತ್ತು. ಗುಡುಸಲು ಪಕ್ಕುವೇ ಸುತ್ತುತ್ತಿದ್ದ ಭೀಮಪ್ಪನೇ ತನ್ನ ಪರುಮ ವೈರಿ ಎಂಬಂತೆ ಕಂಡಿದ್ದ. ಮನುಸು ಹಿಡುತಕ್ಕೆ ಸಿಗುದೇ ತಡುಕಾಡಿದ. ‘ನಮ್ಮ ವೈರಿ ಯಾರು?’ ಅಂಬೋ ಉತ್ತುರಕೆ ಹಲುಬಿದ. ‘ನಾನು ಮಾತ್ರ ಸಂಗಮ್ಮಳ ವೈರಿ’ ಎಂದು ಪೇಚುಗಿಟ್ಟ. ಸಂಗಮ್ಮಳನ್ನು ಸಾಯುಸಿದ ಅವುರಲ್ಲಿ ಬಹಳಷ್ಟು ಓದಿದ, ವಕೀಲನಾದ ತಾನೂ ಅವಿಭಾಜ್ಯ ಪಾಲುದಾರ ಅಂದನುಸಿ ‘ಸಂಗಮ್ಮ ನನ್ನ ಕ್ಷಮಿಸಮ್ಮೋ’ ಎಂದು ಮತ್ತೊಮ್ಮೇ ಮನುದೊಳುಗೆ ಅತ್ತು ಹೊರುಳಾಡಿದ.
ಸಂಗಮ್ಮಳ ಸಾವಿನ ನೆರುಳಲ್ಲಿ ಊರು ಓಣೆಂಬ ಓಣಿಗುಳು ಸುಮ್ಮುನೇ ಮಲುಗಿದ್ದರೂ ಊರು ಗುಡ್ಡದಲ್ಲಿ ಅವುಗಳ ಸದ್ದು ಜೋರಾಗಿತ್ತು. ಊರು ಹೆಣ್ಣುಮಕ್ಕುಳ ಗರುಭವನ್ನೇ ಬಗೆಯಲು ಬಂದಂತೆ ಊರತ್ತಲೇ ಬರುತ್ತಿದ್ದ ಆ ಮಸೀನುಗಳು ಮತ್ತು ಅವುರು ದುರುಗನ ಕಣ್ಣುಲಿ ನೆತ್ತುರು ಉರಿ ತರುಸಿದ್ದರು. ಅಲ್ಲಿ ಊರು ಅಡುವಿಯ ಹೊಲುದಲ್ಲಿ ಸಂಗಮ್ಮ ಮಣ್ಣುಗೆ ಮಣ್ಣಾಗುತ್ತಲೇ ಅವುಳ ಗುಡಿಸಲು ಮುಂದೆ ಹೊತ್ತಿದ್ದ ಬೆಂಕಿಯ ಹೊಗೆಯು ಊರು ಸಾಲುಮನೆಗಳುಗೆ ಅಷ್ಟಷ್ಟೇ ಹೊಕ್ಕಂತೆ ಭಾಸುವಾಗಿ ದುರುಗನ ಮನುದಲಿ ಅದೆಂತದ್ದೋ ಶಗುತಿ ಚಿಟುಗಿ ಆಡಿಸಿದಂತಾಗಿ, ಸಂಗಮ್ಮಳ ಗುಡಿಸುಲು ನೆರುಕಿಗಿದ್ದ ಮಂಡು ಕುಡುಗೋಲುನ್ನು ಹಿಡುದು ಅವುಡುಗಚ್ಚಿದ್ದ ದುರುಗನು ಗವ್ವು ಅನ್ನೂ ರಾತುರಿ ಎಂಬ ರಾತುರಿಯಲ್ಲೇ ಗುಡ್ಡದತ್ತ ಮುಖುವ ಮಾಡಿದ್ದ.





0 Comments