
ಟಿ ಎನ್ ಸೀತಾರಾಂ
ಹೌದು …ಜೇನದನಿ ಅಂದರೆ ನನಗೆ ಅವರೇ ನೆನಪು ಬರೋದು…
ಬಾಲಮುರಳಿ ಕೃಷ್ಣ, ಭೀಮಸೇನ ಜೋಷಿ ಯವರ ಹಾಡುಗಳನ್ನು ಕೇಳಲು ‘ಸಂಧ್ಯಾರಾಗ’ ಚಿತ್ರವನ್ನು ಕನಿಷ್ಠ ನಾಲ್ಕು ಬಾರಿ ನೋಡಿದ್ದೇನೆ… ರೆಕಾರ್ಡ್ ಗೀಚು ಬಿದ್ದು ಹಾಳಾಗುವವರೆಗೂ ರೆಕಾರ್ಡ್ ಹಾಕಿಕೊಂಡು ಕೇಳಿದ್ದೇನೆ… ಸ್ಟಾರ್ ಹಾಡುಗಾರ…
ಸಾವು ಅನಿವಾರ್ಯವಾದರೂ ಚಿಕ್ಕಂದಿನ ದಿನಗಳಿಗೆ ಕೊಂಚವಾದರೂ ಮಾಧುರ್ಯ ತಂದ ಬಾಲ ಮುರಳಿ ಕೃಷ್ಣರ ಸಾವು
ಮನಸಿಗೆ ವಿಷಾದ ತಂದಿದೆ..
ಬಾಲಚಂದರ್ ವೀಣೆ, ಮಹಾಲಿಂಗಂ ಕೊಳಲು ಇವರಿಬ್ಬರ ಗಾಯನ… ರಾಮ ನವಮಿಯ ಉಲ್ಲಾಸದ ನೆನಪುಗಳನ್ನು ತರುತ್ತದೆ… ರಾಮನವಮಿ ಅಂದರೆ ಆಗತಾನೇ ಶುರುವಾಗುತ್ತಿದ್ದ ಬೇಸಿಗೆಯ ರಜ…
ಆಗ ಹೈಸ್ಕೂಲ್ ಓದುತ್ತಿದ್ದೆ… ಎಷ್ಟು ಸಂತೋಷದ
ದಿನಗಳು ಅವು… ಗಂಧರ್ವರು ಅನಿಸುತ್ತಿತ್ತು… ಈಗ ಯಾರೂ ಬದುಕಿಲ್ಲ… ಅವರನ್ನು ಮೀರಿಸುವ ಸಂಗೀತಗಾರರು ಈಗ ಬಂದಿರಬಹುದು, ಗೊತ್ತಿಲ್ಲ… ಆದರೆ ಬಾಲ್ಯದ ಹೀರೋಗಳನ್ನು ಯಾರೂ ಸೋಲಿಸಲಾರರು…
ನಿಮ್ಮ ನೆನಪಿಗೊಂದು. ಸವಿ ಸೆಲ್ಯೂಟ್ ಬಾಲಮುರಳಿ ಕೃಷ್ಣ ಸರ್…





0 Comments