ಸಂಗೀತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಬಾಲಮುರಳಿ ಕೃಷ್ಣ ಇನ್ನಿಲ್ಲ.
ಇದು ‘ಅವಧಿ’ಗೆ ಇನ್ನಿಲ್ಲದ ನೋವು.
‘ಮುಖಮುದ್ರೆ’ಖ್ಯಾತಿಯ ಎ ಎನ್ ಮುಕುಂದ್ ಅವರು 1980 ರಲ್ಲಿ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇವೆ. ಮುಕುಂದ್ ಆಗತಾನೇ ಡಾರ್ಕ್ ರೂಮ್ ಸಜ್ಜು ಮಾಡಿದ್ದರು.
ಈ ಮೂಲಕ ಸಂಗೀತದ ಮುರುಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ.
Note:BMK’s photos were taken with my second hand 35mm camera MAMIYA SEKOR which I had bought for Rs 1300. The film used was ORWO 400 ASA , refilled roll as I could not afford to buy any original company packed film.
ಎಲ್ಲ ಹಕ್ಕುಗಳು: ಎ ಎನ್ ಮುಕುಂದ್ ಅವರದ್ದು / All Rights: A N Mukund







ಬಾಲಮುರುಳಿಗೆ 'ಮುಕುಂದ' ನಮನ
ನಿಮಗೆ ಇವೂ ಇಷ್ಟವಾಗಬಹುದು…




ಎಷ್ಟೊಳ್ಳೆ ಫೋಟೋಗಳು! ಕಣ್ಣು ತುಂಬಿ ಬಂತು
ನುಡಿ ನಮನ
ಡಾ.ಎಂ.ಬಾಲಮುರಳೀ ಕೃಷ್ಣ
* * * * * * * * * * * * * * * *
ತನು ತುಂಬಿ ಮನ ತುಂಬಿ ಚಿತ್ತ ಚೇತನ ತುಂಬಿ ರಸಿಕ ಜನ ಮಾನಸದಿ ತುಡಿ-ತುಡಿವ ಗಾನ ಮನ ಮನದ ಮನೆ ಮುಟ್ಟಿ ಮುದದಿ ಎದೆ ಕದ ತಟ್ಟಿ ನಾಕ ಲೋಕವ ಮೆಟ್ಟಿ ಮಿಡಿ-ಮಿಡಿವ ಗಾನ-1
ತನ್ಮಯದ ಭಾವದಲಿ ಚಿನ್ಮಯಾನಂದದಲಿ ಚಿಮ್ಮಿ ಹೊಮ್ಮುವ ರಮ್ಯ ಶೃಂಗಾರ ಗಾನ ಯಕ್ಷ ಲೋಕವ ಸೃಜಿಸಿ ಜೀವ ಕೋಟಿಯ ತಣಿಸಿ ರಸ ಗಂಗೆಯಲಿ ಮೀಯಿಸುವ ದಿವ್ಯ ಗಾನ-2
ಭವದ ಜಡ ಕೊರಡಿನಲಿ ಚೈತನ್ಯ ಕೊನರಿಸುವ ಅಮೃತ ಸಂಜೀವಿನಿಯ ಋತುಮಾನ ಗಾನ ಅನುಭವದ ಅಭಿವ್ಯಕ್ತಿ ಅನುಭಾವ ಧೀಶಕ್ತಿ ಅಧ್ಯಾತ್ಮ ಚಿಚ್ಛಕ್ತಿ ಸ್ವರ್ಗೀಯ ಗಾನ-3
ಶ್ರುತಿಯ ವೈವಿಧ್ಯತೆಯ ಲಯದ ವೈಶಿಷ್ಟ್ಯತೆಯ ಭಾವ ಗಾಂಭೀರ್ಯತೆಯ ಉತ್ಕೃಷ್ಟ ಗಾನ ಸ್ವರದ ಪ್ರಸ್ತಾರತೆಯ ರಾಗ ವಿಸ್ತಾರತೆಯ ನಾದ ಮಾಧುರ್ಯತೆಯ ಲಾಲಿತ್ಯ ಗಾನ-4
“ಷಡ್ಜ” “ರಿಷಭ”ದಿ ಸುಳಿದು “ಗಾಂಧಾರ”ದಲಿ ಮೆರೆದು “ಮಧ್ಯಮ”ದಿ ಮೈತಳೆದು ಸಂಭ್ರಮಿಪ ಗಾನ “ಪಂಚಮ”ದಿ ಇಂಚರಿಪ ಸುಗಮ ಸುಭಗಾಲಾಪ “ಧೈವತ” “ನಿಷಾಧ”ದಲಿ ಝೇಂಕರಿಪ ಗಾನ-5
“ಮಂದ್ರ” “ಮಧ್ಯಮ” “ತಾರ” ಸ್ತರತ್ರಯದಿ ಸಂಚರಿಪ ಭವ್ಯ ಲೀಲಾಜಾಲ ಸುಶ್ರಾವ್ಯ ಗಾನ ತಾನಪೂರ ಮೃದಂಗ ನಾದಲೀಲೆ ತರಂಗ “ಬಾಲಮುರಳೀ ಕೃಷ್ಣ” ಗಂಧರ್ವ ಗಾನ-6
ದಾಸ ಶರಣರ ರಚನ ಕವನ ಕೀರ್ತನ ವಚನ ಚಿತ್ರಗೀತಾ ಸ್ರೋತ ಬಲು ಅದ್ವಿತೀಯ ದೈವ ಕರುಣೆಯ ಶ್ರುತಿಯು ಪಂಚರತ್ನದ ಸ್ತುತಿಯು ಲಘು-ಸುಗಮ-ಶಾಸ್ತ್ರೀಯ ಅದು ಅಪ್ರಮೇಯ-7
ಗಿರಿ ಶಿಖರದೆತ್ತರದ ಮುಗಿಲಗಲ ಬಿತ್ತರದ ಸಾಗರದ ಆಳ ವಿದ್ವತ್ ದಾರ್ಶನಿಕ ಶೋಭೆ ಹೃದಯವನು ಕರಗಿಸುವ ಮೈಯ ನವಿರೇಳಿಸುವ ವಿಸ್ಮಯಾದ್ಭುತ ಹುಟ್ಟು ಸಂಗೀತ ಪ್ರತಿಭೆ-8
ಚೆಲುವ ಚೆನ್ನಿಗ ರೂಪು ದಿಟದಿ ಭೂಗಂಧರ್ವ ಲೋಕ ಮೋಹಕ ಮೋಡಿ ಬಲು ಗಾಡಿಗಾರ ಹಲವು ಹೊಸರಾಗಗಳ ಸೃಷ್ಟಿಸಿದ ಧೀಮಂತ ದೈತ್ಯ ಪ್ರತಿಭೆಯ ಮೇರು ವಾಗ್ಗೇಯಕಾರ-9
“ಕೃಷ್ಣ”-“ಭೀಮ”ರು ಸೇರಿ “ಜುಗಲಬಂದಿ” ಕಚೇರಿ ಬೆರಗುಗೊಳಿಸಿತು ಜಗವ ಆ ದಿವ್ಯ ಗಾನ “ದಕ್ಷಿಣಾದಿ”ಯ ಸೊಬಗು “ಉತ್ತರಾದಿ”ಯ ಬೆಡಗು ಉಭಯ ಶೈಲಿಯ ಮಿಳನ ಪೀಯೂಷ ಪಾನ-10
ಕೆಲ ಸಮಯ ಕೆಲ ನಿಯಮ ಕಟ್ಟಳೆಯ ಗೆರೆ ಮೀರಿ ಹಿಡಿದ ಪರಿವರ್ತನೆಯ ಹೊಸಹಾದಿ ಬೆರಗು ಮುಕ್ತ ಚಿಂತನೆಯಿಂದ ಸಂಪ್ರದಾಯದ ಜೊತೆಗೆ ಹೊಸ ಪ್ರಯೋಗದ ಸೃಜನಶೀಲತೆಯ ಮೆರುಗು-11
ಗಾನವೊಂದೇ ಅಲ್ಲ ಹಲವು ವಾದ್ಯದಿ ನಿಪುಣ ಬೆರಳೆಣಿಕೆ ವಯೊಲ ವಾದಕರಲ್ಲಿ ಪ್ರಮುಖ ಆ ಮೊಗವೊ ಅರವಿಂದ ಆ ನಗುವೊ ಮಕರಂದ ಆ ಪದವೊ ಸಿರಿಗಂಧ ಪಾವನ ಮಯೂಖ-12
ಗಡಿಗೆ ಸೀಮಿತವಲ್ಲ “ಕರ್ನಾಟಕ ಸಂಗೀತ” ಭಾರತೀಯ ಸಂಗೀತಕಿದು ಮೂಲ ಧಾತು ಎಂದ ಗಾನ ತಪಸ್ವಿ ಒಲಿದು ಬಂದವು ಹಲವು ಬಿರುದು-ಪದವಿ-ಪ್ರಶಸ್ತಿ ಗೌರವದ ಮಾತು-13
ಸರಸತಿಯ ವರಪುತ್ರ ಸರ್ವ ಜನ ಪ್ರಿಯಪಾತ್ರ ನಲಿದುಲಿದ ಕೋಗಿಲೆಯೆ ಸೇರಿದೆಯ ಗಗನ ಹೊನ್ನದಾರದಿ ಹೆಣೆದ ಚೆನ್ನ ಮುತ್ತಿನ ಹಾರ ಗಾನಯೋಗಿಗೆ ಅರ್ಪಿಸುವೆ ನಮನ ಸುಮನ-14
-ಟಿ.ಕೆ.ಗಂಗಾಧರ ಪತ್ತಾರ