ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
38
ಹಿಂದಿ ಬಾರತದ ಒಂದು ಅತಿ ದೊಡ್ಡ ಬಾಶೆಎಂದು ಜನಗಣತಿ ತೋರಿಸುತ್ತದೆ. ದೇಶದಲ್ಲಿ ಹಿಂದಿಗೆ ದಾಕಲಾದ ಮಂದಿ 52,83,47,193 ಆಗಿದೆ. ಇದು ಒಟ್ಟು ದೇಶದ 43.63% ಆಗುತ್ತದೆ. ಹಿಂದಿ ಬಾಶೆಯ ಒಳಗೆ ದೇಶದ ಹಲವಾರು ದೊಡ್ಡ ದೊಡ್ಡ ಮತ್ತು ಅತ್ಯಂತ ಮಹತ್ವದ ಬಾಶೆಗಳನ್ನು ತಾಯ್ಮಾತುಗಳೆಂದು ಪಟ್ಟಿಸಿದೆ. ಹೀಗೆ ಹಿಂದಿಯ ಒಳಗೆ ಪಟ್ಟಿಸಿದೆ ಬಾಶೆಗಳು ಅಯ್ವತ್ತಾರು. ಇವುಗಳಲ್ಲಿ ಕೆಲವಾರು ಬಾಶೆಗಳಿಗೆ ಕೋಟ್ಯಂತರ ಮಂದಿ ಮಾತುಗರು ಇದ್ದಾರೆ. ಹಿಂದಿ ತಾಯ್ಮಾತಿನ ಸಂಕೆಯನ್ನು ಗಮನಿಸಿದಾಗ 32,22,30,097 ಆಗಿದೆ.
ಇನ್ನು ಕರ್ನಾಟಕ ರಾಜ್ಯಕ್ಕೆ ಬರುವುದಾದರೆ ರಾಜ್ಯದಲ್ಲಿ ಹಿಂದಿಗೆ ದಾಕಲಾದ ಮಾತುಗರ ಸಂಕೆ 20,13,364, ಮತ್ತು ಹಿಂದಿಯ ಒಳಗೆ ದಾಕಲಾದ ಬಾಶೆಗಳು ನಲವತ್ತು. ಇದರಲ್ಲಿ ಹಿಂದಿ ತಾಯ್ಮಾತಿಗೆ ದಾಕಲಾದ ಮಂದಿ 8,71,809. ಇದು ಒಟ್ಟು ಬಾರತದ ಹಿಂದಿ 0.270% ಆಗುತ್ತದೆ. ಹಿಂದಿ ಕರ್ನಾಟಕದ ಎಂಟನೆ ಅತಿ ದೊಡ್ಡ ಬಾಶೆಯಾಗಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಮಂದಿ ಹಿಂದಿ ಮಾತುಗರು ದಾಕಲಾಗಿರುವುದು ಬೆಂಗಳೂರು ನಗರ ಜಿಲ್ಲೆಯಲ್ಲಿ. ಬೆಂಗಳೂರಿನ ಹಿಂದಿಗರ ಸಂಕೆ 4,38,067 ಆಗಿದೆ. ಇದು ಒಟ್ಟು ಕರ್ನಾಟಕದ ಹಿಂದಿಯರ 50%ಕ್ಕಿಂತ ಹೆಚ್ಚಾಗುತ್ತದೆ. ಬೆಂಗಳೂರಿನ ನಂತರ ಬೀದರ (53,422) ಮತ್ತು ಕಲಬುರಗಿ (52,516) ಈ ಎರಡು ಜಿಲ್ಲೆಗಳಲ್ಲಿ ಅಯ್ವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಹತ್ತು ಜಿಲ್ಲೆಗಳಲ್ಲಿ ಅಯ್ವತ್ತು ಸಾವಿರಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಇನ್ನುಳಿದ ಹದಿನೇಳು ಜಿಲ್ಲೆಗಳಲ್ಲಿ ಹಿಂದಿಗೆ ದಾಕಲಾದ ಮಾತುಗರ ಸಂಕೆ ಹತ್ತು ಸಾವಿರಕ್ಕಿಂತ ಕಡಿಮೆ ಇದೆ.
ಹಿಂದಿಯ ಪಸರಣವನ್ನು ಇಲ್ಲಿ ತೋರಿಸಿದೆ
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ್ನಾಟಕ | 6,10,95,297 | 8,71,809 | 1.426% | 100% |
| ಬೆಂಗಳೂರು | 96,21,551 | 4,38,067 | 4.552% | 50.246% |
| ಬೀದರ | 17,03,300 | 53,422 | 3.136% | 6.127% |
| ಕಲಬುರಗಿ | 25,66,326 | 52,516 | 2.046% | 6.023% |
| ಬೆಳಗಾವಿ | 47,79,661 | 39,005 | 0.816% | 4.474% |
| ಬಳ್ಳಾರಿ | 24,52,595 | 35,101 | 1.431% | 4.026% |
| ರಾಯಚೂರು | 19,28,812 | 33,764 | 1.750% | 3.872% |
| ಮಯ್ಸೂರು | 30,01,127 | 27,483 | 0.915% | 3.152% |
| ದಾರವಾಡ | 18,47,023 | 22,880 | 1.238% | 2.624% |
| ಕೊಪ್ಪಳ | 13,89,921 | 20,034 | 1.441% | 2.297% |
| ವಿಜಯಪುರ | 21,77,331 | 15,863 | 0.728% | 1.819% |
| ದಕ್ಶಿಣ ಕನ್ನಡ | 20,89,649 | 15,086 | 0.721% | 1.730% |
| ಯಾದಗಿರಿ | 11,74,271 | 12,977 | 1.105% | 1.488% |
| ಉತ್ತರ ಕನ್ನಡ | 14,37,169 | 10,384 | 0.722% | 1.191% |
| ಬೆಂಗಳೂರು ಗ್ರಾಮಾಂತರ | 9,90,923 | 9,544 | 0.963% | 1.094% |
| ಕೋಲಾರ | 15,36,401 | 9,173 | 0.597% | 1.052% |
| ತುಮಕೂರು | 26,78,980 | 8,655 | 0.323% | 0.992% |
| ಬಾಗಲಕೋಟೆ | 18,89,752 | 8,608 | 0.455% | 0.987% |
| ಶಿವಮೊಗ್ಗ | 17,52,753 | 8,075 | 0.460% | 0.926% |
| ಮಂಡ್ಯ | 18,05,769 | 5,837 | 0.323% | 0.669% |
| ದಾವಣಗೆರೆ | 19,45,497 | 5,753 | 0.295% | 0.659% |
| ಹಾಸನ | 17,76,421 | 5,425 | 0.305% | 0.622% |
| ಉಡುಪಿ | 11,77,361 | 5,341 | 0.453% | 0.612% |
| ಚಿತ್ರದುರ್ಗ | 16,59,456 | 4,985 | 0.300% | 0.571% |
| ಗದಗ | 10,20,791 | 4,905 | 0.480% | 0.562% |
| ರಾಮನಗರ | 10,82,636 | 4,056 | 0.374% | 0.465% |
| ಹಾವೇರಿ | 15,97,668 | 3,949 | 0.247% | 0.452% |
| ಚಿಕ್ಕಮಗಳೂರು | 11,37,961 | 3,678 | 0.323% | 0.421% |
| ಕೊಡಗು | 5,54,519 | 2,325 | 0.419% | 0.266% |
| ಚಿಕ್ಕಬಳ್ಳಾಪುರ | 12,55,104 | 1,758 | 0.140% | 0.201% |
| ಚಾಮರಾಜನಗರ | 10,20,791 | 1,650 | 0.161% | 0.189% |
| ಇನ್ನು ಮುಂದಿನ ವಾರಕ್ಕೆ |






0 Comments