ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಶಿವಮೊಗ್ಗ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಶಿವಮೊಗ್ಗ ಜಿಲ್ಲೆಯ ಬಗ್ಗೆ

ಬೆಳಕು ಚೆಲ್ಲಲಾಗಿದೆ.

28

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಕನಿಶ್ಟ ಮೂವತ್ತೊಂದು ಬಾಶೆಗಳು ಮತ್ತು ಕನಿಶ್ಟ ಅಯ್ವತ್ತೊಂಬತ್ತು ತಾಯ್ಮಾತುಗಳು ಬಳಕೆಯಲ್ಲಿವೆ. ಜಿಲ್ಲೆಯ ಅತಿದೊಡ್ಡ ಬಾಶೆ ಕನ್ನಡವಾಗಿದ್ದು, ಕನ್ನಡದ ಪ್ರತಿಶತತೆ ೭೦% ಇದೆ. ಉರ‍್ದು ಕನ್ನಡದ ನಂತರದ ಜಿಲ್ಲೆಯ ಅತಿದೊಡ್ಡ ಬಾಶೆ. ಇವುಗಳ ನಂತರ ತಮಿಳು, ತೆಲುಗು ಮತ್ತು ಲಂಬಾಣಿ ಬಾಶೆಗಳು ದೊಡ್ಡ ಸಂಕೆಯಲ್ಲಿ ಬಳಕೆಯಲ್ಲಿವೆ. ಆನಂತರ ಮರಾಟಿ ಮತ್ತು ಕೊಂಕಣಿ ಬಾಶೆಗಳ ಮಾತುಗರ ಸಂಕೆಯು ಪರಿಗಣಿಸುವಶ್ಟಿದೆ.

***

ಶಿವಮೊಗ್ಗ ಜಿಲ್ಲೆಗೆ ಸಂಬಂದಿಸಿದ ಜನಗಣತಿ ಒದಗಿಸುವ ಬಾಶಿಕ ಮಾಹಿತಿ ಆದರಿಸಿದ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ18171
ಆಸ್ಸಾಮಿ18171
ಬೆಂಗಾಲಿ62354578
ಬೆಂಗಾಲಿ62354578
ಬೊಡೊ990
ಬೊಡೊ990
ಡೋಗ್ರಿ101
ಡೋಗ್ರಿ101
ಗುಜರಾತಿ1696827869
ಗುಜರಾತಿ1628796832
ಸವರಾಶ್ಟ್ರ/ಸವರಾಶ್ಟ್ರಿ312
ಇತರ653035
ಹಿಂದಿ616723166430008
ಬಂಜಾರಿ405720781979
ಬೋಜ್ಪುರಿ16151
ಹಿಂದಿ807545013574
ಲಮಾಣಿ/ಲಂಬಾಡಿ476782408723591
ಮಾರ‍್ವಾರಿ1392730662
ರಾಜಸ್ತಾನಿ420232188
ಸಾದನ್/ಸಾದ್ರಿ101
ಇತರ332112
ಕನ್ನಡ1230352614410615942
ಕನ್ನಡ1229553614007615546
ಕುರುಬ/ಕುರುಂಬ1046
ಇತರ 789399390
ಕಾಶ್ಮೀರಿ231013
ಕಾಶ್ಮೀರಿ231013
ಕೊಂಕಣಿ257631285012913
ಕೊಂಕಣಿ255171272412793
ಕುಡುಬಿ/ಕುಡುಂಬಿ401822
ನವಾಯಿತಿ1578176
ಇತರ492722
ಮಯ್ತಿಲಿ110
ಮಯ್ತಿಲಿ110
ಮಲಯಾಳಂ1675981468613
ಮಲಯಾಳಂ1674781418606
ಯರವ624
ಇತರ633
ಮಣಿಪುರಿ743
ಮಣಿಪುರಿ743
ಮರಾಟಿ368461846818378
ಆರೆ110
ಮರಾಟಿ 367591842618333
ಇತರ864145
ನೇಪಾಲಿ1438162
ನೇಪಾಲಿ1438162
ಓಡಿಯಾ14711235
ಓಡಿಯಾ14611135
ಇತರ110
ಪಂಜಾಬಿ945143
ಪಂಜಾಬಿ945143
ಸಂಸ್ಕ್ರುತ1587
ಸಂಸ್ಕ್ರುತ1587
ಸಿಂದಿ955441
ಕಚ್ಚಿ422
ಸಿಂದಿ915239
ತಮಿಳು730513635536696
ಕೊರವ725
ತಮಿಳು730243634536679
ಇತರ20812
ತೆಲುಗು712603541735843
ತೆಲುಗು712293539735832
ಇತರ312011
ಉರ‍್ದು222700112770109930
ಉರ‍್ದು222699112770109929
ಇತರ101
ಅರಾಬಿಕ್/ಅರ‍್ಬಿ482523
ಅರಾಬಿಕ್/ಅರ‍್ಬಿ482523
ಬಿಲಿ/ಬಿಲೊಡಿ337172165
ಕೊಕ್ನ/ಕೊಕ್ನಿ/ಕುಕ್ನ550
ವಾಗ್ದಿ329165164
ಇತರ321
ಬೊಟಿಯ413
ಇತರ413
ಕೂರ‍್ಗಿ/ಕೊಡಗು1768393
ಕೂರ‍್ಗಿ/ಕೊಡಗು482424
ಕೊಡವ1285969
ಇಂಗ್ಲೀಶು1306367
ಇಂಗ್ಲೀಶು1306367
ಕಾಂದೇಶಿ592732
ಇತರ592732
ಕಾಸಿ22157
ಕಾಸಿ14104
ಪ್ನಾರ್/ಸಿಂಟೆಂಗ್853
ಟಿಬೆಟನ್101
ಟಿಬೆಟನ್101
ತುಳು849741354362
ತುಳು849741354362
ಇತರ220410951109

ಶಿವಮೊಗ್ಗ ಜಿಲ್ಲೆಯಲ್ಲಿ ಜನಗಣತಿ ಪ್ರಕಾರ ಬಳಕೆಯಲ್ಲಿರುವ ಒಟ್ಟು ಬಾಶೆಗಳ ಸಂಕೆ ಮೂವತ್ತು. ಅದರೊಟ್ಟಿಗೆ 2,204 ಮಂದಿ ಇರುವ ಇತರ ಎಂಬ ಗುಂಪಿನಲ್ಲಿ ಒಂದು ಬಾಶೆ ಇರಬಹದು ಎಂದು ಲೆಕ್ಕಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ದಾಕಲಾದ ಬಾಶೆಗಳ ಸಂಕೆ ಮೂವತ್ತೊಂದು. ಅಯ್ವತ್ತೆಂಟು ತಾಯ್ಮಾತುಗಳು ಇಲ್ಲಿ ದಾಕಲಾಗಿವೆ. ಇತರ ಎಂಬ ಬಾಶೆಯ ಗುಂಪಿನಲ್ಲಿ ಇರುವುದನ್ನು ಒಂದು ತಾಯ್ಮಾತು ಎಂದು ಪರಿಗಣಿಸಿದರೆ ಜಿಲ್ಲೆಯ ತಾಯ್ಮಾತುಗಳ ಸಂಕೆ ಅಯ್ವತ್ತೊಂಬತ್ತು ಆಗುತ್ತದೆ. ಇವುಗಳಲ್ಲಿ ಇತರ ಎಂಬ ಗುಂಪನ್ನು ಹದಿಮೂರು ಬಾಶೆಗಳಲ್ಲಿ ಕೊಟ್ಟಿದೆ. ಅವುಗಳೆಂದರೆ ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಓಡಿಯಾ, ತಮಿಳು, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಬೊಟಿಯ ಮತ್ತು ಕಾಂದೇಶಿ. ಈ ಹದಿಮೂರು ಇತರ ಎಂಬ ಗುಂಪುಗಳನ್ನು ಬಿಟ್ಟರೆ ಒಟ್ಟು ನಲ್ವತ್ತಯ್ದು ತಾಯ್ಮಾತುಗಳನ್ನು ಹೆಸರಿಸಿದಂತೆ ಆಗುತ್ತದೆ.

ಶಿವಮೊಗ್ಗ ಜಿಲ್ಲೆಯ ಜನಸಂಕೆ 17,52,753 ಆಗಿದೆ. ಜಿಲ್ಲೆಯಲ್ಲಿ ಕನ್ನಡ ಮಾತಾಡುವವರ ಸಂಕೆ 12,30,352 ಆಗಿದೆ. ಕನ್ನಡವು ಜಿಲ್ಲೆಯ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದು ಬಾಶೆಯಾಗಿದೆ. ಇದು ಜಿಲ್ಲೆಯ 70.195% ಆಗುತ್ತದೆ. ಆನಂತರ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದು ಬಾಶೆ ಉರ‍್ದು  – 2,22,700 (12.705%) ಆಗಿದೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಜಿಲ್ಲೆಯಲ್ಲಿ ಆರು ಬಾಶೆಗಳು ಇವೆ. ತಮಿಳು – 73,051 (4.167%), ತೆಲುಗು – 71,260 (4.065%), ಹಿಂದಿ – 61,672 (3.518%), ಮರಾಟಿ – 36,846 (2.102%), ಕೊಂಕಣಿ – 25,763 (1.469%) ಮತ್ತು ಮಲಯಾಳಂ – 16,759 (0.956%) ಆ ಬಾಶೆಗಳಾಗಿವೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರಿರುವ ಎರಡು ಬಾಶೆಗಳು ಇವೆ. ತುಳು – 8,497 (0.484%) ಮತ್ತು ಗುಜರಾತಿ – 1,696 (0.096%) ಈ ಎರಡು ಬಾಶೆಗಳು. ಇವುಗಳ ಜೊತೆಗೆ ಇತರ 2,204 (0.125%) ಗುಂಪಿನಲ್ಲಿಯೂ ಸಾವಿರಕ್ಕೂ ಹೆಚ್ಚು ಮಂದಿ ಮಾತುಗರು ಇದ್ದಾರೆ. ಇವುಗಳ ನಂತರ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕೂ ಹೆಚ್ಚು ಮಂದಿ ಮಾತನಾಡುವ ಬಾಶೆಗಳು ಆರು ಇವೆ. ಬೆಂಗಾಲಿ, ಬಿಲಿ/ಬಿಲೊಡಿ, ಕೂರ‍್ಗಿ/ಕೊಡಗು, ಓಡಿಯಾ, ನೇಪಾಲಿ ಮತ್ತು ಇಂಗ್ಲೀಶು. ನೂರಕ್ಕೂ ಕಮ್ಮಿ ಮಾತುಗರು ಇರುವ ಒಟ್ಟು ಹದಿನಾಲ್ಕು ಬಾಶೆಗಳು ಇವೆ. ಶಿವಮೊಗ್ಗ ಜಿಲ್ಲೆಯ ಬಾಶೆಗಳನ್ನು ಅವುಗಳ ಮಾತುಗರ ಸಂಕೆಯನ್ನು ಆದರಿಸಿ ಕೆಳಗಿನಂತೆ ಚಿತ್ರಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ12,30,35270.195%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,22,700 12.705%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು73,051 4.167%
’’ತೆಲುಗು 71,2604.065%
’’ಹಿಂದಿ61,672 3.518%
’’ಮರಾಟಿ 36,846 2.102%
’’ಕೊಂಕಣಿ 25,763 1.469%
’’ಮಲಯಾಳಂ16,7590.956%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತುಳು8,4970.484%
’’ಇತರ2,2040.125%
’’ಗುಜರಾತಿ1,6960.096%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಬೆಂಗಾಲಿ, ಬಿಲಿ/ಬಿಲೊಡಿ, ಕೂರ‍್ಗಿ/ಕೊಡಗು, ಓಡಿಯಾ, ನೇಪಾಲಿ, ಇಂಗ್ಲೀಶು1,5560.088%
ನೂರಕ್ಕಿಂತ ಕಡಿಮೆಹದಿನಾಲ್ಕು ಬಾಶೆಗಳು3970.022%
ಒಟ್ಟು ಮಾತುಗರು17,52,753100%

ಶಿವಮೊಗ್ಗ ಜಿಲ್ಲೆಯಲ್ಲಿ ದಾಕಲಾದ ವಿವಿದ ತಾಯ್ಮಾತುಗಳ ಚರ‍್ಚೆಯನ್ನು ಮಾಡಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ತುಸು ಹೆಚ್ಚುಕಡಿಮೆ ಆಗುತ್ತವೆ. ಹಿಂದಿಯ ಒಳಗೆ ದಾಕಲಾಗಿರುವ ಕರ‍್ನಾಟಕದ ಸಂದರ‍್ಬದಲ್ಲಿ ಪರಿಗಣಿಸಬಹುದಾದ ಕೆಲವು ಬಾಶೆಗಳನ್ನು ಇಲ್ಲಿ ಪಟ್ಟಿಸಿದೆ.

ಹಿಂದಿ 61,672

ಬಂಜಾರಿ 4,057

ಬೋಜ್ಪುರಿ 16

ಹಿಂದಿ 8,075

ಲಮಾಣಿ/ಲಂಬಾಡಿ 47,678

ಮಾರ‍್ವಾರಿ 1,392

ರಾಜಸ್ತಾನಿ 420

ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದಿ ಮಾತಾಡುವ 61,672 ಮಂದಿ ದಾಕಲಾಗಿದ್ದಾರೆ. ಆದರೆ, ಇದರಲ್ಲಿ ಹಿಂದಿ ಮಾತಾಡುವವರು 8,075 ಆಗಿವೆ. ಇದು ಒಟ್ಟು ಜಿಲ್ಲೆಯ ಹಿಂದಿಯ 13.093% ಮತ್ತು ಜಿಲ್ಲೆಯ 0.460% ಆಗುತ್ತದೆ. ಲಮಾಣಿ ಹೆಸರಿನಲ್ಲಿ 47,678 ಮತ್ತು ಬಂಜಾರಿ ಹೆಸರಿನಲ್ಲಿ 4,057 ಮಂದಿ ದಾಕಲಾಗಿದ್ದಾರೆ. ಇವೆರಡನ್ನು ಸೇರಿಸಿದಾಗ ಲಂಬಾಣಿಯಲ್ಲಿ 51,735 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 83.887% ಮತ್ತು ಜಿಲ್ಲೆಯ 2.951% ಆಗುತ್ತದೆ. ಹಾಗೆ ಮಾರ‍್ವಾರಿ ಬಾಶೆಗೆ 1,392 (0.079%) ಮಂದಿ ದಾಕಲಾಗಿದ್ದಾರೆ. ಈಗ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರ ಪಟ್ಟಿಗೆ ಲಂಬಾಣಿ ಬರುತ್ತದೆ. ಈ ಪಟ್ಟಿಯಲ್ಲಿ ಇದ್ದ ಹಿಂದಿ ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಬರುತ್ತದೆ. ಈ ಪಟ್ಟಿಗೆ ಮಾರ‍್ವಾರಿ ಬಾಶೆ ಕೂಡ ಸೇರುತ್ತದೆ. ಈ ಚರ‍್ಚೆಯನ್ನು ಗಮನಿಸಿ ಜಿಲ್ಲೆಯ ಬಾಶೆಗಳ ಮೇಲೆ ಕೊಟ್ಟಿರುವ ಪಟ್ಟಿಯನ್ನು ಮತ್ತೊಮ್ಮೆ ರಚಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ12,29,55370.149%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,22,69912.705%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತಮಿಳು73,0244.166%
’’ತೆಲುಗು71,2294.063%
’’ಲಂಬಾಣಿ51,7352.951%
’’ಮರಾಟಿ36,7592.097%
’’ಕೊಂಕಣಿ25,5171.455%
’’ಮಲಯಾಳಂ16,7470.955%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತುಳು8,4970.484%
’’ಹಿಂದಿ8,0750.460%
’’ಇತರ2,2040.125%
’’ಗುಜರಾತಿ1,6960.096%
’’ಮಾರ‍್ವಾರಿ1,392 0.079%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಶಿವಮೊಗ್ಗ17,52,753ಕನ್ನಡ12,29,55370.149%1
ಉರ‍್ದು2,22,69912.705%2
ತಮಿಳು73,0244.166%3
ತೆಲುಗು71,2294.063%4
ಲಂಬಾಣಿ51,7352.951%5
ಮರಾಟಿ36,7592.097%6
ಕೊಂಕಣಿ25,5171.455%7
ಮಲಯಾಳಂ16,7470.955%8
ತುಳು8,4970.484%9
ಹಿಂದಿ8,0750.460%10

‍ಲೇಖಕರು Admin

1 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading