ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಲಂಬಾಣಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

37

ಲಂಬಾಣಿ ಕರ‍್ನಾಟಕದ ಒಂದು ಮಹತ್ವದ ಬಾಶೆಗಳಲ್ಲಿ ಒಂದು. ಸರಕಾರ ಇದನ್ನು ಬಾಶೆ ಎಂದು ಮಾನ್ಯಿಸಿಲ್ಲ. ಕರ‍್ನಾಟಕದಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿರುವ ಬಾಶೆಗಳು ಏಳು. ಈ ಏಳು ದೊಡ್ಡ ಬಾಶೆಗಳ ಪಟ್ಟಿಯಲ್ಲಿ ಲಂಬಾಣಿಯೂ ಒಂದಾಗಿದೆ. ಲಂಬಾಣಿಯನ್ನು ಹಿಂದಿಯ ಒಳಗೆ ದಾಕಲಿಸಿದೆ.

ದೇಶದೆಲ್ಲೆಡೆ ವ್ಯಾಪಿಸಿರುವ ಲಂಬಾಣಿಗೆ ಹಲವಾರು ಬೇರೆ ಬೇರೆ ಕಡೆ ಹಲವಾರು ಹೆಸರುಗಳಿವೆ. ಲಂಬಾಣಿ, ಬಂಜಾರ ಮತ್ತು ಸುಗಾಲಿ ಎಂಬ ಮೂರು ಹೆಸರುಗಳು ಹಿಂದಿ ಒಳಗೆ ದಾಕಲಾಗಿವೆ. ಈ ಮೂರೂ ಲಂಬಾಣಿಯ ಹೆಸರುಗಳಾಗಿರುವುದರಿಂದ ಅವುಗಳನ್ನು ಒಟ್ಟುಗೂಡಿಸಿ ಲಂಬಾಣಿಯ ಅಂಕಿಯನ್ನು ತೋರಿಸಿದೆ. ಬಾರತದಲ್ಲಿ ದಾಕಲಾದ ಒಟ್ಟು ಲಂಬಾಣಿಗರ ಸಂಕೆ 50,28,806. ಇದರಲ್ಲಿ ಬಂಜಾರಿ (15,81,271), ಲಮಾಣಿ/ಲಂಬಾಡಿ (32,76,548), ಮತ್ತು ಸುಗಾಲಿ (1,70,987) ಈ ಮೂರೂ ಸೇರಿವೆ. 

ಇನ್ನು ಕರ‍್ನಾಟಕದಲ್ಲಿ ದಾಕಲಾದ ಲಂಬಾಣಿಗರನ್ನು ಗಮನಿಸುವುದಾದರೆ, ಕರ‍್ನಾಟಕದಲ್ಲಿ ಬಂಜಾರಿ (25,373), ಲಮಾಣಿ/ಲಂಬಾಡಿ (9,74,622), ಮತ್ತು ಸುಗಾಲಿ (76) ಈ ಮೂರೂ ಹೆಸರುಗಳು ದಾಕಲಾಗಿವೆ. ಇವುಗಳನ್ನು ಕೂಡಿದಾಗ ದೊರೆಯುವ ಕರ‍್ನಾಟಕದ ಒಟ್ಟು ಲಂಬಾಣಿಗರ ಸಂಕೆ 10,00,071 ಆಗಿದೆ. ಇದು ಒಟ್ಟು ಬಾರತದ ಲಂಬಾಣಿಗರ 19.886% ಆಗುತ್ತದೆ.

ಕರ‍್ನಾಟಕದಲ್ಲಿ ದಾಕಲಾದ ಲಂಬಾಣಿಗರು ಇಡಿಯ ನಾಡಿನ ತುಂಬ ಪಸರಿಸಿಕೊಂಡಿರುವರಾದರೂ ಹಯ್ದರಾಬಾದ ಕರ‍್ನಾಟಕ ಆನಂತರ ಮುಂಬಯ್ ಕರ‍್ನಾಟಕ ಬಾಗಗಳಲ್ಲಿ ತುಸು ಹೆಚ್ಚಿನ ದಟ್ಟತೆಯನ್ನು ಹೊಂದಿರುವುದು ಕಾಣಿಸುತ್ತದೆ. ಕಲಬುರಗಿ ಜಿಲ್ಲೆ ಅತಿ ಹೆಚ್ಚು ಮಂದಿ ಲಂಬಾಣಿಗರನ್ನು ಹೊಂದಿದೆ. ಕಲಬುರಗಿಯಲ್ಲಿ ದಾಕಲಾದ ಲಂಬಾಣಿಗಳ ಸಂಕೆ 1,81,847 ಆಗಿದ್ದು ಇದು ರಾಜ್ಯದ ಒಟ್ಟು ಲಂಬಾಣಿಗರ 18% ಆಗುತ್ತದೆ. ವಿಜಯಪುರ ಕಲಬುರಗಿಯ ನಂತರ ಅತಿ ಹೆಚ್ಚು ಮಂದಿಯನ್ನು ಒಳಗೊಂಡಿದೆ. ವಿಜಯಪುರದ ಲಂಬಾಣಿಗರು 1,12,870 ಆಗಿದ್ದು ಇದು ನಾಡಿನ ಲಂಬಾಣಿಗರ 11% ಮಂದಿಯನ್ನು ರೂಪಿಸುತ್ತದೆ. ಈ ಎರಡು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿಯನ್ನು ಹೊಂದಿವೆ. ಆನಂತರ ಯಾದಗಿರಿ (75,804), ಬಳ್ಳಾರಿ (75,638), ದಾವಣಗೆರೆ (72,001), ಬೀದರ (61,375) ಮತ್ತು ಶಿವಮೊಗ್ಗ (51,735) ಈ ಅಯ್ದು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಅಯ್ವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಒಟ್ಟು ಹದಿಮೂರು ಜಿಲ್ಲೆಗಳಲ್ಲಿ ಅಯ್ವತ್ತು ಸಾವಿರಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಅವುಗಳೆಂದರೆ ಹಾವೇರಿ (45,422), ಚಿತ್ರದುರ‍್ಗ (38,016), ರಾಯಚೂರು (35,151), ಗದಗ (32,571), ತುಮಕೂರು (28,633), ಬಾಗಲಕೋಟೆ (27,991), ಕೊಪ್ಪಳ (23,436), ಚಿಕ್ಕಮಗಳೂರು (22,862), ಬೆಂಗಳೂರು (21,031), ಬೆಳಗಾವಿ (20,190), ರಾಮನಗರ (14,336), ಹಾಸನ (13,787) ಮತ್ತು ದಾರವಾಡ (11,376). ಆನಂತರ ಎಂಟು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮತ್ತು ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮಂದಿ ಲಂಬಾಣಿಗರು ದಾಕಲಾಗಿದ್ದಾರೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ6,10,95,29710,00,0711.636%100%
ಕಲಬುರಗಿ25,66,3261,81,8477.085%18.183%
ವಿಜಯಪುರ21,77,3311,12,8705.183%11.286%
ಯಾದಗಿರಿ11,74,27175,8046.455%7.579%
ಬಳ್ಳಾರಿ24,52,59575,6383.083%7.563%
ದಾವಣಗೆರೆ19,45,49772,0013.700%7.199%
ಬೀದರ17,03,30061,3753.603%6.137%
ಶಿವಮೊಗ್ಗ17,52,75351,7352.951%5.173%
ಹಾವೇರಿ15,97,66845,4222.843%4.541%
ಚಿತ್ರದುರ‍್ಗ16,59,45638,0162.290%3.801%
ರಾಯಚೂರು19,28,81235,1511.822%3.514%
ಗದಗ10,20,79132,5713.190%3.256%
ತುಮಕೂರು26,78,98028,6331.068%2.863%
ಬಾಗಲಕೋಟೆ18,89,75227,9911.481%2.798%
ಕೊಪ್ಪಳ13,89,92123,4361.686%2.343%
ಚಿಕ್ಕಮಗಳೂರು11,37,96122,8622.00%2.286%
ಬೆಂಗಳೂರು96,21,55121,0310.218%2.102%
ಬೆಳಗಾವಿ47,79,66120,1900.422%2.018%
ರಾಮನಗರ10,82,63614,3361.324%1.433%
ಹಾಸನ17,76,42113,7870.776%1.378%
ದಾರವಾಡ18,47,02311,3760.615%1.137%
ಚಾಮರಾಜನಗರ10,20,7917,7590.760%0.775%
ಚಿಕ್ಕಬಳ್ಳಾಪುರ12,55,1047,3230.583%0.732%
ಉತ್ತರ ಕನ್ನಡ14,37,1697,0650.491%0.706%
ಬೆಂಗಳೂರು ಗ್ರಾಮಾಂತರ9,90,9233,7060.373%0.370%
ಮಯ್ಸೂರು30,01,127   2,8420.094%0.284%
ಮಂಡ್ಯ18,05,7691,8100.100%0.180%
ಉಡುಪಿ11,77,3611,4090.119%0.140%
ದಕ್ಶಿಣ ಕನ್ನಡ20,89,6491,3200.063%0.131%
ಕೊಡಗು5,54,5195830.105%0.058%
ಕೋಲಾರÀ15,36,4011760.011%0.017%
C:\Users\DELL\Downloads\Distribution of Lambani.jpg

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

24 November, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading