ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
40
ಕರ‍್ನಾಟಕದಲ್ಲಿ 7,74,057 ಮಂದಿ ಮಾತುಗರನ್ನು ಹೊಂದಿರುವ ಮಲಯಾಳಂ ರಾಜ್ಯದ ಹತ್ತನೆಯ ಅತಿದೊಡ್ಡ ಬಾಶೆ. ಇದು ಒಟ್ಟು ದೇಶದ ಮಲಯಾಳಂ ಮಾತುಗರ 2.221% ಪ್ರತಿಶತತೆಯನ್ನು ರೂಪಿಸುತ್ತದೆ ಮತ್ತು ಕರ‍್ನಾಟಕದ 1.220% ಪ್ರತಿಶತತೆಯನ್ನು ರೂಪಿಸುತ್ತದೆ. ಮಲಯಾಳಂ ಬಾಶೆಯಲ್ಲಿ ಮಲಯಾಳಂ (7,45,903), ಪಣಿಯ (257), ಯರವ (26,536) ಎಂಬ ಮೂರು ತಾಯ್ಮಾತುಗಳು ಮತ್ತು ಇತರ (1,361) ಎಂಬ ಒಂದು ಗುಂಪು ದಾಕಲಾಗಿದೆ. ಇದರೊಳಗೆ ಮಲಯಾಳಂ ಮಾತಾಡುವವರು ಸಹಜವಾಗಿ ದೊಡ್ಡ ಸಂಕೆಯಲ್ಲಿದ್ದಾರೆ ಮತ್ತು ಯರವಕ್ಕೆ ಪರಿಗಣಿಸುವಶ್ಟು ಮಾತುಗರ ಸಂಕೆ ಕಾಣಿಸುತ್ತದೆ.
ಮಲಯಾಳಂ ಬಾಶೆಯ ಮಾತುಗರ ಸಂಕೆ ಈ ಮೇಲೆ ಹೇಳಿದಂತೆ 7,45,903 ಆಗಿದೆ. ಇದು ಕರ‍್ನಾಟಕದ 1.266%ಯನ್ನು ರೂಪಿಸುತ್ತದೆ. ಬೆಂಗಳೂರು ನಗರದಲ್ಲಿ (2,82,956) ಮೂರು ಲಕ್ಶದ ಹತ್ತಿರ, ಮಂಗಳೂರು (2,08,232) ಜಿಲ್ಲೆಯಲ್ಲಿ ಎರಡು ಲಕ್ಶ ಮತ್ತು ಕೊಡಗಿನಲ್ಲಿ (1,15,495) ಒಂದು ಲಕ್ಶದಶ್ಟು ಮಂದಿ ದಾಕಲಾಗಿದ್ದಾರೆ. ಈ ಮೂರು ಜಿಲ್ಲೆಗಳಲ್ಲಿ ಕರ‍್ನಾಟಕದ ಮಲಯಾಳಿಗಳ ಒಟ್ಟು ಅಂದಾಜು 80% ಪ್ರತಿಶತಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಇವುಗಳ ಹೊರತಾಗಿ ಚಿಕ್ಕಮಗಳೂರು, (28,161) ಉಡುಪಿ (25,093), ಮಯ್ಸೂರು (21,739), ಶಿವಮೊಗ್ಗ (16,747) ಮತ್ತು ಹಾಸನ (13,581) ಅಯ್ದು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಲಯಾಳಿಗರು ದಾಕಲಾಗಿದ್ದಾರೆ. ಹತ್ತು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮತ್ತು ಹನ್ನೆರಡು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.
ಕೆಳಗೆ ಮಲಯಾಳಂ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ‍್ನಾಟಕ | 6,10,95,297 | 7,45,903 | 1.220% | |
| ಬೆಂಗಳೂರು | 96,21,551 | 2,82,956 | 2,940% | 37.934% |
| ದಕ್ಶಿಣ ಕನ್ನಡ | 20,89,649 | 2,08,232 | 9.964% | 27.916% |
| ಕೊಡಗು | 5,54,519 | 1,15,495 | 20.827% | 15.483% |
| ಚಿಕ್ಕಮಗಳೂರು | 11,37,961 | 28,161 | 2.474% | 3.775% |
| ಉಡುಪಿ | 11,77,361 | 25,093 | 2.131% | 3.364% |
| ಮಯ್ಸೂರು | 30,01,127 | 21,739 | 0.724% | 2.914% |
| ಶಿವಮೊಗ್ಗ | 17,52,753 | 16,747 | 0.955% | 2.245% |
| ಹಾಸನ | 17,76,421 | 13,581 | 0.764% | 1.820% |
| ಉತ್ತರ ಕನ್ನಡ | 14,37,169 | 9,331 | 0.649% | 1.250% |
| ಕೋಲಾರ | 15,36,401 | 3,751 | 0.244% | 0.502% |
| ಬೆಂಗಳೂರು ಗ್ರಾಮಾಂತರ | 9,90,923 | 3,280 | 0.331% | 0.439% |
| ಮಂಡ್ಯ | 18,05,769 | 2,383 | 0.331% | 0.319% |
| ತುಮಕೂರು | 26,78,980 | 2,372 | 0.088% | 0.318% |
| ಬಳ್ಳಾರಿ | 24,52,595 | 2,304 | 0.093% | 0.308% |
| ದಾರವಾಡ | 18,47,023 | 1,665 | 0.090% | 0.223% |
| ಬೆಳಗಾವಿ | 47,79,661 | 1,587 | 0.033% | 0.212% |
| ದಾವಣಗೆರೆ | 19,45,497 | 1,242 | 0.063% | 0.166% |
| ಚಾಮರಾಜನಗರ | 10,20,791 | 1,140 | 0.111% | 0.152% |
| ರಾಮನಗರ | 10,82,636 | 887 | 0.081% | 0.118% |
| ಚಿತ್ರದುರ‍್ಗ | 16,59,456 | 788 | 0.047% | 0.105% |
| ಚಿಕ್ಕಬಳ್ಳಾಪುರ | 12,55,104 | 652 | 0.051% | 0.087% |
| ವಿಜಯಪುರ | 21,77,331 | 499 | 0.022% | 0.066% |
| ಬೀದರ | 17,03,300 | 478 | 0.0280% | 0.064% |
| ರಾಯಚೂರು | 19,28,812 | 436 | 0.022% | 0.058% |
| ಕಲಬುರಗಿ | 25,66,326 | 375 | 0.014% | 0.050% |
| ಹಾವೇರಿ | 15,97,668 | 267 | 0.016% | 0.035% |
| ಕೊಪ್ಪಳ | 13,89,921 | 235 | 0.016% | 0.031% |
| ಬಾಗಲಕೋಟೆ | 18,89,752 | 98 | 0.005% | 0.013% |
| ಗದಗ | 10,20,791 | 66 | 0.006% | 0.008% |
| ಯಾದಗಿರಿ | 11,74,271 | 63 | 0.005% | 0.008% |
ಮಲಯಾಳಂ ಮಾತುಗರ ಹಂಚಿಕೆ






0 Comments