ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ
ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಈ ವಾರದ ಅಂಕಣದಲ್ಲಿ ಮಂಡ್ಯ ಜಿಲ್ಲೆಯ ಬಗ್ಗೆ
ಬೆಳಕು ಚೆಲ್ಲಲಾಗಿದೆ.
23
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಕೆಯ ಕನ್ನಡ ಮಾತುಗರು ಕಂಡುಬರುತ್ತಾರೆ. ಜಿಲ್ಲೆಯಲ್ಲಿ ಕನ್ನಡ ಮಾತಾಡುವವರ ಪ್ರತಿಶತತೆ ೯೨%ರಶ್ಟು ಇದೆ. ಕನ್ನಡದ ನಂತರ ಉರ್ದು ದೊಡ್ಡ ಸಂಕೆಯ ಮಾತುಗರನ್ನು ಹೊಂದಿದೆ. ಆನಂತರ ತಮಿಳು ಮತ್ತು ತೆಲುಗು ಪರಿಗಣಿಸುವಶ್ಟು ಸಂಕೆಯ ಮಾತುಗರನ್ನು ಹೊಂದಿವೆ. ಮಂಡ್ಯ ಜಿಲ್ಲೆಯಲ್ಲಿ ಕಡಿಮೆ ಎಂದರೂ ಮೂವತ್ತೆರಡು ಬಾಶೆಗಳು ಬಳಕೆಯಲ್ಲಿವೆ, ಕಡಿಮೆ ಎಂದರೂ ಅರವತ್ತು ತಾಯ್ಮಾತುಗಳು ಇವೆ.
***
ಮಂಡ್ಯ ಜಿಲ್ಲೆಯ ಬಾಶೆಗಳ ಮಾಹಿತಿಯನ್ನು ಜನಗಣತಿ ಕೊಟ್ಟಿರುವಂತೆ ಇಲ್ಲಿ ಪಟ್ಟಿ ಮಾಡಿದೆ.
| ಬಾಶೆ | ತಾಯ್ಮಾತು | ಒಟ್ಟು ಮಾತುಗರು | ಗಂಡು | ಹೆಣ್ಣು |
| ಆಸ್ಸಾಮಿ | 16 | 11 | 5 | |
| ಆಸ್ಸಾಮಿ | 16 | 11 | 5 | |
| ಬೆಂಗಾಲಿ | 127 | 73 | 54 | |
| ಬೆಂಗಾಲಿ | 127 | 73 | 54 | |
| ಗುಜರಾತಿ | 851 | 451 | 400 | |
| ಗುಜರಾತಿ | 833 | 440 | 393 | |
| ಸವರಾಶ್ಟ್ರ/ಸವರಾಶ್ಟ್ರಿ | 12 | 7 | 5 | |
| ಇತರ | 6 | 4 | 2 | |
| ಹಿಂದಿ | 8604 | 4797 | 3807 | |
| ಬಂಜಾರಿ | 6 | 2 | 4 | |
| ಹಿಂದಿ | 5837 | 3363 | 2474 | |
| ಲಮಾಣಿ/ಲಂಬಾಡಿ | 1804 | 926 | 878 | |
| ಮಾಳ್ವಿ | 5 | 5 | 0 | |
| ಮಾರ್ವಾರಿ | 617 | 325 | 292 | |
| ರಾಜಸ್ತಾನಿ | 322 | 171 | 151 | |
| ಇತರ | 13 | 5 | 8 | |
| ಕನ್ನಡ | 1659823 | 831662 | 828161 | |
| ಬಡಗ | 4 | 2 | 2 | |
| ಕನ್ನಡ | 1659740 | 831619 | 828121 | |
| ಕುರುಬ/ಕುರುಂಬ | 19 | 10 | 9 | |
| ಇತರ | 60 | 31 | 29 | |
| ಕಾಶ್ಮೀರಿ | 10 | 7 | 3 | |
| ಕಾಶ್ಮೀರಿ | 10 | 7 | 3 | |
| ಕೊಂಕಣಿ | 675 | 326 | 349 | |
| ಕೊಂಕಣಿ | 667 | 321 | 346 | |
| ಕುಡುಬಿ/ಕುಡುಂಬಿ | 6 | 4 | 2 | |
| ಇತರ | 2 | 1 | 1 | |
| ಮಲಯಾಳಂ | 2387 | 1159 | 1228 | |
| ಮಲಯಾಳಂ | 2383 | 1157 | 1226 | |
| ಯರವ | 3 | 1 | 2 | |
| ಇತರ | 1 | 1 | 0 | |
| ಮಣಿಪುರಿ | 8 | 0 | 8 | |
| ಮಣಿಪುರಿ | 8 | 0 | 8 | |
| ಮರಾಟಿ | 7930 | 3994 | 3936 | |
| ಮರಾಟಿ | 7923 | 3990 | 3933 | |
| ಇತರ | 7 | 4 | 3 | |
| ನೇಪಾಲಿ | 158 | 65 | 93 | |
| ನೇಪಾಲಿ | 158 | 65 | 93 | |
| ಓಡಿಯಾ | 80 | 37 | 43 | |
| ಓಡಿಯಾ | 80 | 37 | 43 | |
| ಪಂಜಾಬಿ | 77 | 43 | 34 | |
| ಪಂಜಾಬಿ | 77 | 43 | 34 | |
| ಸಂಸ್ಕ್ರುತ | 1 | 1 | 0 | |
| ಸಂಸ್ಕ್ರುತ | 1 | 1 | 0 | |
| ಸಿಂದಿ | 8 | 5 | 3 | |
| ಸಿಂದಿ | 8 | 5 | 3 | |
| ತಮಿಳು | 24117 | 11905 | 12212 | |
| ತಮಿಳು | 24117 | 11905 | 12212 | |
| ತೆಲುಗು | 23457 | 11744 | 11713 | |
| ತೆಲುಗು | 23457 | 11744 | 11713 | |
| ಉರ್ದು | 76500 | 38312 | 38188 | |
| ಉರ್ದು | 76497 | 38309 | 38188 | |
| ಇತರ | 3 | 3 | 0 | |
| ಅರಾಬಿಕ್/ಅರ್ಬಿ | 6 | 3 | 3 | |
| ಅರಾಬಿಕ್/ಅರ್ಬಿ | 6 | 3 | 3 | |
| ಬಿಲಿ/ಬಿಲೊಡಿ | 2 | 1 | 1 | |
| ಇತರ | 2 | 1 | 1 | |
| ಬೊಟಿಯ | 18 | 10 | 8 | |
| ಇತರ | 18 | 10 | 8 | |
| ಕೂರ್ಗಿ/ಕೊಡಗು | 89 | 51 | 38 | |
| ಕೂರ್ಗಿ/ಕೊಡಗು | 28 | 13 | 15 | |
| ಕೊಡವ | 61 | 38 | 23 | |
| ಇಂಗ್ಲೀಶು | 84 | 45 | 39 | |
| ಇಂಗ್ಲೀಶು | 84 | 45 | 39 | |
| ಕೊಯ | 1 | 0 | 1 | |
| ಕೊಯ | 1 | 0 | 1 | |
| ಕುಕಿ | 1 | 1 | 0 | |
| ಕುಕಿ | 1 | 1 | 0 | |
| ಕುರುಕ್/ಓರಆನ್ | 1 | 0 | 1 | |
| ಕುರುಕ್/ಓರಆನ್ | 1 | 0 | 1 | |
| ಲುಶಾಯಿ/ಮಿಜೊ | 4 | 4 | 0 | |
| ಲುಶಾಯಿ/ಮಿಜೊ | 4 | 4 | 0 | |
| ಮುಂಡ | 5 | 2 | 3 | |
| ಮುಂಡ | 5 | 2 | 3 | |
| ಮುಂಡಾರಿ | 1 | 0 | 1 | |
| ಮುಂಡಾರಿ | 1 | 0 | 1 | |
| ಟಿಬೆಟನ್ | 4 | 1 | 3 | |
| ಟಿಬೆಟನ್ | 4 | 1 | 3 | |
| ತುಳು | 671 | 341 | 330 | |
| ತುಳು | 671 | 341 | 330 | |
| ಇತರ | 53 | 34 | 19 |
ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಮೂವತ್ತೊಂದು ಬಾಶೆಗಳು ಬಳಕೆಯಲ್ಲಿವೆ ಎಂದು ಜನಗಣತಿ ಪಟ್ಟಿಸಿದೆ. ಇವುಗಳ ಜೊತೆಗೆ ಇತರ ಎಂಬ 53 ಮಂದಿ ಮಾತ್ರ ಇರುವ ಗುಂಪೊಂದನ್ನೂ ಕೊಟ್ಟಿದೆ. ಇದನ್ನು ಒಂದು ಬಾಶೆ ಎಂದು ಲೆಕ್ಕಿಸಿದಾಗ ಜಿಲ್ಲೆಯಲ್ಲಿ ಮೂವತ್ತೆರಡು ಬಾಶೆಗಳು ಇರುವುದು ತಿಳಿಯುತ್ತದೆ. ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ಜನಗಣತಿ ಪಟ್ಟಿ ಮಾಡಿದೆ. ಇತರ ಗುಂಪಿನಲ್ಲಿ ಇರುವ ತಾಯ್ಮಾತು ಒಂದು ಎಂದು ಲೆಕ್ಕಿಸಿ ತಾಯ್ಮಾತುಗಳು ಸಂಕೆ ಅರವತ್ತು ಎಂದೆನ್ನಬಹುದು. ಇವುಗಳಲ್ಲಿ ಒಂಬತ್ತು ಬಾಶೆಗಳಲ್ಲಿ ಇತರ ಎಂಬ ಗುಂಪುಗಳನ್ನು ತೋರಿಸಿದೆ. ಇತರ ಗುಂಪನ್ನು ಒಳಗೊಂಡಿರುವ ಬಾಶೆಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಮರಾಟಿ, ಉರ್ದು, ಬಿಲಿ/ಬಿಲೊಡಿ ಮತ್ತು ಬೊಟಿಯ. ಇವುಗಳ ಹೊರತಾಗಿ ಅಯ್ವತ್ತು ತಾಯ್ಮಾತುಗಳನ್ನು ಜಿಲ್ಲೆಯಲ್ಲಿ ಹೆಸರಿಸಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಜನಗಣತಿ ವರದಿ ಪ್ರಕಾರ ಜನಸಂಕೆ 18,05,769 ಇದೆ. ಇದರಲ್ಲಿ ಅತಿ ಹೆಚ್ಚು ಮಂದಿ ಅಂದರೆ 16,59,823 ಕನ್ನಡ ಮಾತಾಡುವವರಾಗಿದ್ದಾರೆ. ಇದು ಜಿಲ್ಲೆಯ 91.917% ಆಗುತ್ತದೆ. ಇದು ಅತಿ ಹೆಚ್ಚು ಪ್ರಮಾಣ ಎಂದು ಹೇಳಬಹುದು. ಉಳಿದ ಸುಮಾರು 8 ಪ್ರತಿಶತ ಮಂದಿ ಬೇರೆ ಬೇರೆ ಬಾಶೆಗಳನ್ನು ಆಡುವವರು. ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಒಂದೆ ಬಾಶೆ ಕನ್ನಡ. ಆನಂತರ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಯಾವುದೆ ಬಾಶೆ ದಾಕಲಾಗಿಲ್ಲ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಮೂರು ಬಾಶೆಗಳು ದಾಕಲಾಗಿವೆ. ಅವುಗಳೆಂದರೆ, ಉರ್ದು – 76,500 (4.236%), ತಮಿಳು – 24,117 (1.335%) ಮತ್ತು ತೆಲುಗು – 23,457 (1.299%). ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಮೂರು ಬಾಶೆಗಳು ಇವೆ. ಹಿಂದಿ – 8,604 (0.476%), ಮರಾಟಿ – 7,930 ( 0.439%) ಮತ್ತು ಮಲಯಾಳಂ – 2,387 (0.132%). ಒಂದು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಅಯ್ದು ಬಾಶೆಗಳು ಇವೆ. ಅವುಗಳೆಂದರೆ ಗುಜರಾತಿ, ಕೊಂಕಣಿ, ತುಳು, ನೇಪಾಲಿ ಮತ್ತು ಬೆಂಗಾಲಿ. ನೂರಕ್ಕಿಂತ ಕಡಿಮೆ ಮಂದಿ ಮಾತುಗರು ಇರುವ ಬಾಶೆಗಳು ಇಪ್ಪತ್ತು ಇವೆ. ಈಗ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಮಾತುಗರ ಸಂಕೆಯಾದರಿಸಿ ವಿನ್ಯಾಸಗೊಳಿಸಿ ತೋರಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 16,59,823 | 91.917% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಉರ್ದು | 76,500 | 4.236% |
| ’’ | ತಮಿಳು | 24,117 | 1.335% |
| ’’ | ತೆಲುಗು | 23,457 | 1.299% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಹಿಂದಿ | 8,604 | 0.476% |
| ’’ | ಮರಾಟಿ | 7,930 | 0.439% |
| ’’ | ಮಲಯಾಳಂ | 2,387 | 0.132% |
| ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು | ಗುಜರಾತಿ, ಕೊಂಕಣಿ, ತುಳು, ನೇಪಾಲಿ, ಬೆಂಗಾಲಿ | 2,482 | 0.137% |
| ನೂರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳು | ಇಪ್ಪತ್ತು ಬಾಶೆಗಳು | 469 | 0.025% |
| ಒಟ್ಟು ಮಾತುಗರು | 18,05,769 | 100% |
ಮಂಡ್ಯ ಜಿಲ್ಲೆಯ ದಾಕಲಾದ ತಾಯ್ಮಾತುಗಳನ್ನು ಗಮನಿಸಿದಾಗ ಜಿಲ್ಲೆಯ ಬಾಶೆಗಳಲ್ಲಿ ಸ್ವಲ್ಪ ಬದಲಾವಣೆ ಕಾಣಿಸುತ್ತದೆ. ಹಿಂದಿ ಬಾಶೆಯೊಳಗಿನ ಅಂಕಿಸಂಕೆಗಳನ್ನು ಇಲ್ಲಿ ಗಮನಿಸಬಹುದು. ಕರ್ನಾಟಕದ ಸಂದರ್ಬದಲ್ಲಿ ಮುಕ್ಯವೆನಿಸುವ ಕೆಲವು ಬಾಶೆಗಳ ಮಾಹಿತಿಯನ್ನು ಕೆಳಗೆ ಪಟ್ಟಿಸಿದೆ.
ಹಿಂದಿ 8,604
ಬಂಜಾರಿ 6
ಹಿಂದಿ 5,837
ಲಮಾಣಿ/ಲಂಬಾಡಿ 1,804
ಮಾರ್ವಾರಿ 617
ರಾಜಸ್ತಾನಿ 322
ಮಂಡ್ಯ ಜಿಲ್ಲೆಯಿಂದ ವರದಿಯಾದ ಒಟ್ಟು ಹಿಂದಿ ಮಾತುಗರು 8,604. ಆದರೆ, ಇದರಲ್ಲಿ ಹಿಂದಿ ಮಾತಾಡುವವರು 5,837 ಆಗಿದ್ದಾರೆ ಮತ್ತು ಲಂಬಾಣಿ ಮಾತಾಡುವವರು 1,810 ಆಗಿದ್ದಾರೆ. ಲಂಬಾಣಿ ಬಾಶೆಯಲ್ಲಿ ಲಮಾಣಿ ಹೆಸರಿನ 1,804 ಮತ್ತು ಬಂಜಾರಿ ಹೆಸರಿನ 6 ಮಂದಿ ಸೇರಿದ್ದಾರೆ. ಇನ್ನುಳಿದ ಬಾಶೆಗಳ ಸಂಕೆ ಗಣನೀಯವಾಗಿಲ್ಲ. ಜಿಲ್ಲೆಯ ತಾಯ್ಮಾತುಗಳನ್ನು ಗಮನದಲ್ಲಿರಿಸಿಕೊಂಡು ಮೇಲೆ ಕೊಟ್ಟಿರುವ ಮಂಡ್ಯ ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಮತ್ತೊಮ್ಮೆ ಕೊಟ್ಟಿದೆ. ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳ ಪಟ್ಟಿಯಲ್ಲಿ ಹಿಂದಿಯ ಜೊತೆಗೆ ಈಗ ಲಂಬಾಣಿ ಸೇರಿಕೊಳ್ಳುತ್ತದೆ.
ತಾಯ್ಮಾತುಗಳ ಅಂಕಿಸಂಕೆಯನ್ನು ಗಮನದಲ್ಲಿ ಇರಿಸಿಕೊಂಡು ಜಿಲ್ಲೆಯ ಬಾಶೆಗಳ ಪಟ್ಟಿಯನ್ನು ಕೆಳಗಿನಂತೆ ಮರುರೂಪಿಸಬಹುದು.
| ಸಾಪೇಕ್ಶ ಸಂಕೆ | ಬಾಶೆ | ಸಂಕೆ | % |
| ಹತ್ತು ಲಕ್ಶಕ್ಕಿಂತ ಹೆಚ್ಚು | ಕನ್ನಡ | 16,59,740 | 91.913% |
| ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು | ಉರ್ದು | 76,497 | 4.236% |
| ’’ | ತಮಿಳು | 24,117 | 1.335% |
| ’’ | ತೆಲುಗು | 23,457 | 1.299% |
| ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು | ಮರಾಟಿ | 7,923 | 0.438% |
| ’’ | ಹಿಂದಿ | 5,837 | 0.323% |
| ’’ | ಮಲಯಾಳಂ | 2,383 | 0.131% |
| ’’ | ಲಂಬಾಣಿ | 1,810 | 0.100% |
ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಬಾಶೆ | ಮಾತುಗರು | ಜಿಲ್ಲೆಯ % | ಜಿಲ್ಲೆಯಲ್ಲಿ ಸ್ತಾನ |
| ಮಂಡ್ಯ | 18,05,769 | ಕನ್ನಡ | 16,59,740 | 91.913% | 1 |
| ಉರ್ದು | 76,497 | 4.236% | 2 | ||
| ತಮಿಳು | 24,117 | 1.335% | 3 | ||
| ತೆಲುಗು | 23,457 | 1.299% | 4 | ||
| ಮರಾಟಿ | 7,923 | 0.438% | 5 | ||
| ಹಿಂದಿ | 5,837 | 0.323% | 6 | ||
| ಮಲಯಾಳಂ | 2,383 | 0.131% | 7 | ||
| ಲಂಬಾಣಿ | 1,810 | 0.100% | 8 | ||
| ಗುಜರಾತಿ | 851 | 0.047% | 9 | ||
| ತುಳು | 671 | 0.037% | 10 |






0 Comments