ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
58
ಮೂವತ್ತಾಲ್ಕು ಬಾಶೆಗಳಿಗೆ ನೂರಕ್ಕಿಂತ ಕಡಿಮೆ ಮತ್ತು ಹತ್ತಕ್ಕಿಂತ ಹೆಚ್ಚು ಮಂದಿ ಕಾಣಿಸುತ್ತಾರೆ. ಹಲಬಿ (76), ಕೊಮ್ (71), ಮುಂಡಾರಿ (67), ಕರಿಯಾ (66), ಲಕೇರ್ (66), ಸವರ (62), ಆವೊ (60), ಅಂಗಾಮಿ (57), ಸೆಮಾ (57), ಕಿನ್ನವುರಿ (54), ಮಾವೊ (49), ಕಬುಇ (44), ಲೊತಾ (43), ಗಾರೊ (41), ತಂಗ್ಸಾ (39), ಕರ್ಬಿ/ಮಿಕಿರ್ (38), ವಯ್ಪೆ (38), ಮೊಗ್ (33), ಕೊಯ (29), ಅಪ್ಗನ್/ಕಾಬುಲಿ/ಪಾಶ್ತೊ (27), ಹ್ಮರ್ (24), ಹೊ (23), ನಿಸ್ಸಿ/ದಪ್ಲ (23), ಲೆಪ್ಟ (21), ದಿಮಾಸಾ (20), ಜೊವು (20), ದೆವೋರಿ (17), ಬಿಶ್ಣುಪ್ರಿಯಾ (15), ಆನಲ್ (14), ಚಕ್ರು/ಚೊಕ್ರಿ (13), ಕೊಂಡ (12), ಬುಮಿಜ್ (11), ಕೆಜಾ (11) ಮತ್ತು ಗಾಂಗ್ಟೆ (10).
ಇಪ್ಪತ್ತೆಂಟು ಬಾಶೆಗಳಿಗೆ ಹತ್ತಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಮರಿಂಗ್ (8), ಮಿರಿ/ಮಿಶಿಂಗ್ (8), ಶೆರ್ವಾ (8), ಹಲಂ (7), ಕೊರ್ಕು (7), ಜೆಮಿ (7), ಜಟಾಪು (6), ಕಿಎಮ್ನುಂಗನ್ (6), ಮಾಲ್ತೊ (6), ಮರಂ (6), ಪೊಚೂರಿ (6), ಗದಬ (5), ಕೊನ್ಯಕ್ (5), ರೆಂಗ್ಮ (5), ತಮಂಗ್ (5), ಕಿಸಾನ್ (4), ಕುಇ (4), ಲಿಂಬು (4), ಯಿಂಚುಂಗ್ರೆ (4), ಚಾಂಗ್ (3), ಕೊಚ್ (3), ನಿಕೊಬಾರಿಸ್ (3), ಚಕೆಸಂಗ್ (2), ಮಿಶ್ಮಿ (2), ನೊಕ್ಟೆ (2), ರಬಾ (2), ಸಂಗ್ಟಂ (1), ವಾಂಚೊ (1).
ಕಡಿಮೆ ಸಂಕೆಯ ಮಾತುಗರನ್ನು ಹೊಂದಿರುವ ಬಾಶೆಗಳು ಹೆಚ್ಚಾಗಿ ಟಿಬೆಟೊ-ಬರ್ಮನ್ ಮತ್ತು ಆಸ್ಟ್ರೊ-ಏಸಿಯಾಟಿಕ್ ಬಾಶಾ ಮನತೆನಗಳಿಗೆ ಸಂಬಂದಿಸಿದವು. ದ್ರಾವಿಡ ಮತ್ತು ಇಂಡೊ-ಆರ್ಯನ್ ಮನೆತನದ ಕೆಲವು ಇದರಲ್ಲಿ ಇವೆ.
| ಹಲಬಿ | 76 | ಹಲಬಿ | 1 |
| ಕೊಮ್ | 71 | ಕೊಮ್ | 71 |
| ಮುಂಡಾರಿ | 67 | ಮುಂಡಾರಿ | 66 |
| ಕರಿಯಾ | 66 | ಕರಿಯಾ | 61 |
| ಲಕೇರ್ | 66 | ಲಕೇರ್ -ಮರ | 66 |
| ಸವರ | 62 | ಸವರ | 62 |
| ಆವೊ | 60 | ಆವೊ | 26 |
| ಆವೊ | ಆವೊ –ಮೊಂಗ್ಸೆನ್, | 3 | |
| ಅಂಗಾಮಿ | 57 | ಅಂಗಾಮಿ | 51 |
| ಸೆಮಾ | 57 | ಸೆಮಾ | 57 |
| ಕಿನ್ನವುರಿ | 54 | ಕಿನ್ನವುರಿ | 54 |
| ಮಾವೊ | 49 | ಮಾವೊ | 25 |
| ಮಾವೊ | ಮಾವೊ -ಪಾಒಲ | 23 | |
| ಕಬುಇ | 44 | ಕಬುಇ -ರೊಂಗ್ಮೆಯ್ | 38 |
| ಕಬುಇ | ಕಬುಇ | 6 | |
| ಲೊತಾ | 43 | ಲೊತಾ | 43 |
| ಗಾರೊ | 41 | ಗಾರೊ | 41 |
| ತಂಗ್ಸಾ | 39 | ||
| ಕರ್ಬಿ/ಮಿಕಿರ್ | 38 | ಕರ್ಬಿ/ಮಿಕಿರ್ | 38 |
| ವಯ್ಪೆ | 38 | ವಯ್ಪೆ | 38 |
| ಮೊಗ್ | 33 | ಮೊಗ್ | 32 |
| ಕೊಯ | 29 | ಕೊಯ | 29 |
| ಅಪ್ಗನ್/ಕಾಬುಲಿ/ಪಾಶ್ತೊ | 27 | ಅಪ್ಗನ್/ಕಾಬುಲಿ/ಪಾಶ್ತೊ | 21 |
| ಹ್ಮರ್ | 24 | ಹ್ಮರ್ | 24 |
| ಹೊ | 23 | ಹೊ | 15 |
| ಹೊ | ಹೊ – ಲೊಹರ | 8 | |
| ನಿಸ್ಸಿ/ದಪ್ಲ | 23 | ನಿಸ್ಸಿ/ದಪ್ಲ | 12 |
| ಲೆಪ್ಚ | 21 | ಲೆಪ್ಚ | 21 |
| ದಿಮಾಸಾ | 20 | ದಿಮಾಸಾ | 18 |
| ಜೊವು | 20 | ಜೊವು | 20 |
| ದೆವೋರಿ | 17 | ದೆವೋರಿ | 17 |
| ಬಿಶ್ಣುಪ್ರಿಯಾ | 15 | ಬಿಶ್ಣುಪ್ರಿಯಾ ಮಣಿಪುರಿ/ಮಣಿಪುರಿ ಬಿಶ್ಣುಪ್ರಿಯಾ | 2 |
| ಆನಲ್ | 14 | ಆನಲ್ | 14 |
| ಚಕ್ರು/ಚೊಕ್ರಿ | 13 | ಚಕ್ರು/ಚೊಕ್ರಿ | 13 |
| ಕೊಂಡ | 12 | ಕೊಂಡ | 8 |
| ಕೊಂಡ | ಕೊಂಡ -ಕೊಡು | 4 | |
| ಬುಮಿಜ್ | 11 | ||
| ಕೆಜಾ | 11 | ಕೆಜಾ | 7 |
| ಗಾಂಗ್ಟೆ | 10 | ಗಾಂಗ್ಟೆ | 10 |
| ಮರಿಂಗ್ | 8 | ಮರಿಂಗ್ | 8 |
| ಮಿರಿ/ಮಿಶಿಂಗ್ | 8 | ಮಿರಿ/ಮಿಶಿಂಗ್ | 8 |
| ಶೆರ್ವಾ | 8 | ಶೆರ್ವಾ | 8 |
| ಹಲಂ | 7 | ಹಲಂ | 4 |
| ಕೊರ್ಕು | 7 | ಕೊರ್ಕು | 7 |
| ಜೆಮಿ | 7 | ಜೆಮಿ | 7 |
| ಜಟಾಪು | 6 | ||
| ಕಿಎಮ್ನುಂಗನ್ | 6 | ||
| ಮಾಲ್ತೊ | 6 | ಮಾಲ್ತೊ-ಪಹರಿಯ | 6 |
| ಮರಂ | 6 | ಮರಂ | 6 |
| ಪೊಚೂರಿ | 6 | ಪೊಚೂರಿ | 5 |
| ಗದಬ | 5 | ಗದಬ | 5 |
| ಕೊನ್ಯಕ್ | 5 | ಕೊನ್ಯಕ್ | 5 |
| ರೆಂಗ್ಮ | 5 | ರೆಂಗ್ಮ | 5 |
| ತಮಂಗ್ | 5 | ತಮಂಗ್ | 5 |
| ಕಿಸಾನ್ | 4 | ಕಿಸಾನ್ | 4 |
| ಕುಇ | 4 | ಕುಇ | 4 |
| ಲಿಂಬು | 4 | ಲಿಂಬು | 4 |
| ಯಿಂಚುಂಗ್ರೆ | 4 | ಯಿಂಚುಂಗ್ರೆ-ಚಿರ್ | 2 |
| ಯಿಂಚುಂಗ್ರೆ | ಯಿಂಚುಂಗ್ರೆ-ತಿಕಿರ್ | 1 | |
| ಯಿಂಚುಂಗ್ರೆ | ಯಿಂಚುಂಗ್ರೆ | 1 | |
| ಚಾಂಗ್ | 3 | ಚಾಂಗ್ | 3 |
| ಕೊಚ್ | 3 | ಕೊಚ್ | 3 |
| ನಿಕೊಬಾರಿಸ್ | 3 | ನಿಕೊಬಾರಿಸ್ | 3 |
| ಚಕೆಸಂಗ್ | 2 | ಚಕೆಸಂಗ್ | 2 |
| ಮಿಶ್ಮಿ | 2 | ||
| ನೊಕ್ಟೆ | 2 | ನೊಕ್ಟೆ | 2 |
| ರಬಾ | 2 | ರಬಾ | 2 |
| ಸಂಗ್ಟಂ | 1 | ಸಂಗ್ಟಂ | 1 |
| ವಾಂಚೊ | 1 | ವಾಂಚೊ | 1 |
ಈ ಪಟ್ಟಿಯಲ್ಲಿ ಕೆಲವು ಕುತೂಹಲ ಸೆಳೆಯುವ ಅಂಶಗಳಿವೆ. ಕೆಲವು ಬಾಶೆಗಳಿಗೆ ಆ ಬಾಶೆಯಲ್ಲಿ ದಾಕಲಾದ ಎಲ್ಲರೂ ಅದೆ ಹೆಸರಿನ ತಾಯ್ಮಾತಿನ ಒಳಗೆ ಕಾಣಿಸುತ್ತಾರೆ. ಉದಾ.: ಕೊಮ್ (71), ಸವರ (62) ಮೊ. ಇಲ್ಲಿ ದಾಕಲಾದ ಬಾಶೆಗಳಲ್ಲಿ ಕೆಲವಕ್ಕೆ ಒಂದಕ್ಕಿಂತ ಹೆಚ್ಚು ತಾಯ್ಮಾತುಗಳು ಇವೆ. ಕೆಲವು ಬಾಶೆಗಳಿಗೆ ಆ ಬಾಶೆಯ ಹೆಸರಿನ ತಾಯ್ಮಾತು ದಾಕಲಾಗಿಲ್ಲ. ಉದಾ.: ತಂಗ್ಸಾ, ಬುಮಿಜ್, ಜಟಾಪು, ಕಿಎಮ್ನುಂಗನ್ ಮತ್ತು ಮಿಶ್ಮಿ. ಕೆಲವು ಬಾಶೆಗಳಿಗೆ ಆ ಹೆಸರಿನ ತಾಯ್ಮಾತಿನಲ್ಲಿ ತೀರಾ ಕಡಿಮೆ ಮಂದಿ ದಾಕಲಾಗಿದ್ದಾರೆ. ಉದಾ.: ಹಲಬಿ. ಹಲಬಿ ಬಾಶೆಯಲ್ಲಿ ದಾಕಲಾದ ಮಾತುಗರು 76. ಆದರೆ, ಇದರೊಳಗೆ ಹಲಬಿ ತಾಯ್ಮಾತಿನ ಹೆಸರಲ್ಲಿ ಕಾಣುವ ಮಾತುಗರು ಕೇವಲ 1.
ಇನ್ನು ಬೇರೆ ಬಾಶೆಗಳ ಒಳಗೆ ದಾಕಲಾಗಿರುವ ಹಲವಾರು ತಾಯ್ಮಾತುಗಳಿಗೆ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಇಂತಾ ಎಪ್ಪತ್ತೊಂದು ಬಾಶೆಗಳು ಇವೆ. ಈ ಪಟ್ಟಿಯನ್ನು ಇಲ್ಲಿ ತಯಾರಿಸಿ ಕೊಟ್ಟಿದೆ.
| ಕಾಸಿ- ಪ್ನಾರ್/ಸಿಂಟೆಂಗ್ | 97 |
| ಹಿಂದಿ-ದುಂಡುರಿ | 87 |
| ಹಿಂದಿ- ಬರ್ಮವುರಿ /ಗಡ್ಡಿ | 79 |
| ಹಿಂದಿ-ಗೊಜ್ರಿ/ಗುಜ್ಜಾರಿ/ಗುಜಾರ | 77 |
| ಹಿಂದಿ-ಸುಗಾಲಿ | 76 |
| ಆದಿ- ಆದಿ | 61 |
| ತ್ರಿಪುರಿ-ಕೊಕ್ ಬರಾಕ್ | 58 |
| ಬಿಲಿ/ಬಿಲೊಡಿ-ಕೊಕ್ನ/ಕೊಕ್ನಿ/ಕುಕ್ನ | 55 |
| ಹಿಂದಿ-ಅವದಿ | 53 |
| ಬೆಂಗಾಲಿ-ಚೆಕ್ಮಾ | 52 |
| ಗುಜರಾತಿ-ಪಟ್ಟಣಿ | 42 |
| ಮಯ್ತಿಲಿ-ತಾಟಿ | 42 |
| ತ್ರಿಪುರಿ- ತ್ರಿಪುರಿ | 38 |
| ಹಿಂದಿ-ಪವಾರಿ/ಪೊವಾರಿ | 34 |
| ಹಿಂದಿ-ಬುಂದೇಲಿ/ಬುದೇಲ್ ಕಂಡಿ | 31 |
| ಬಿಲಿ/ಬಿಲೊಡಿ-ಚೊದಾರಿ | 29 |
| ಉರ್ದು -ಬನ್ಸಾರಿ | 27 |
| ಹಿಂದಿ-ಬಗೇಲಿ/ಬಗೇಲ್ ಕಂಡಿ | 26 |
| ಆದಿ-ತಲ್ಗಲೊ | 26 |
| ಹಿಂದಿ-ನಾಗ್ಪುರಿಯ | 25 |
| ಓಡಿಯಾ-ಸಂಬಲ್ಪುರಿಯ | 22 |
| ಕೊಂಕಣಿ-ಗೊರ್ಬೊಲಿ/ಗೊರು/ಗೊರ್ವಾನಿ | 21 |
| ಹಿಂದಿ-ಮಾಲ್ವಿ | 20 |
| ಹಿಂದಿ-ಕುರ್ಮಾಲಿ ತಾರ್ | 16 |
| ಹಿಂದಿ-ಕೊರ್ತಾ /ಕೊತ್ತಾ | 15 |
| ಸಿಂದಿ-ಬಾಟಿಯ | 15 |
| ಲಹಂದ-ಹಿಂದಿ ಮುಲ್ತಾನಿ | 14 |
| ಕೊಂಕಣಿ-ಮಾಲ್ವಾನಿ | 14 |
| ಹಿಂದಿ-ಕಡಿ ಬೊಲಿ | 13 |
| ಹಿಂದಿ-ಸರ್ಜಾಪುರಿಯ | 13 |
| ಹಿಂದಿ-ನಿಮಾಡಿ | 11 |
| ಮಯ್ತಿಲಿ-ತಾರು | 10 |
| ಹಿಂದಿ-ಮೆವಾರಿ | 9 |
| ಮರಾಟಿ-ಕೋಳಿ | 9 |
| ಸಂತಾಲಿ-ಮಹಿಲಿ | 9 |
| ಬೊಡೊ-ಕಚರಿ | 9 |
| ಹಿಂದಿ-ಬಗತಿ/ ಬಗತಿ ಪಹರಿ | 8 |
| ಹಿಂದಿ-ಬದ್ರಾವತಿ | 8 |
| ನಿಸ್ಸಿ/ದಪ್ಲ- ನಿಸ್ಸಿ/ದಪ್ಲ | 7 |
| ಆದಿ-ಆದಿ ಗಲ್ಲೊಂಗ್/ಗಲ್ಲೊಂಗ್ | 7 |
| ಗುಜರಾತಿ=ಪೊಂಚಿ | 6 |
| ಹಿಂದಿ-ಮೆವಾತಿ | 6 |
| ತ್ರಿಪುರಿ-ರೆಆಂಗ್ | 6 |
| ಕಾಂದೇಶಿ-ಅಹಿರಿನಿ | 6 |
| ಹಿಂದಿ-ಬ್ರಜ್ ಬಾಶಾ | 5 |
| ಬಿಲಿ/ಬಿಲೊಡಿ-ಮವ್ಚಿ | 5 |
| ಬಿಲಿ/ಬಿಲೊಡಿ- ಬಿಲಿ/ಬಿಲೊಡಿ | 4 |
| ಗೊಂಡಿ-ಕಲರಿ | 4 |
| ಗೊಂಡಿ-ಮರಿಯ/ಮುರಿಯ | 4 |
| ಟಿಬೆಟನ್-ಪುರ್ಕಿ | 4 |
| ಕೊರ್ವ -ಕೊರಕು | 4 |
| ಹಿಂದಿ-ಲೋದಿ | 3 |
| ಹಿಂದಿ-ಮಂಡೇಲಿ | 3 |
| ಪಂಜಾಬಿ-ಬಾಗ್ರಿ | 3 |
| ಬಿಲಿ/ಬಿಲೊಡಿ-ತಡವಿ | 3 |
| ಓಡಿಯ-ಬಟ್ರಿ | 2 |
| ಬಿಲಿ/ಬಿಲೊಡಿ-ಬಾಒರಿ | 2 |
| ಆದಿ-ಆದಿ ಮಿನಿಯೊಂಗ್/ ಮಿನಿಯೊಂಗ್ | 2 |
| ಕಾಸಿ-ಲಿಂಗ್ಯಂಗ್ಮ | 2 |
| ಬೆಂಗಾಲಿ-ಹಯಿಜೊಂಗ್/ಹಜೊಂಗ್ | 1 |
| ಹಿಂದಿ-ಚುರಾಹಿ | 1 |
| ಹಿಂದಿ-ಹರ/ಹರೋತಿ | 1 |
| ಹಿಂದಿ-ಜೋನ್ಪುರಿ/ಜೋನ್ಸರಿ | 1 |
| ಹಿಂದಿ-ಕಾಂಗ್ರಿ | 1 |
| ಹಿಂದಿ-ಪದರಿ | 1 |
| ಕಾಶ್ಮೀರಿ-ಕಿಶ್ತವರಿ | 1 |
| ಮಯ್ತಿಲಿ-ಪುರ್ಬಿ ಮಯ್ತಿಲಿ | 1 |
| ಓಡಿಯಾ-ಬುಇಯಾ/ಬುಯಾನ್(ಒರಿ) | 1 |
| ಬಿಲಿ/ಬಿಲೊಡಿ-ಬರೆಲ್ | 1 |
| ಬಿಲಿ/ಬಿಲೊಡಿ-ಬಿಲಾಲಿ | 1 |
| ಗೊಂಡಿ-ದೊರ್ಲಿ | 1 |






0 Comments