ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಕೋಲಾರ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

7

ಕೋಲಾರ

ಕೋಲಾರದಲ್ಲಿ ಕಡಿಮೆ ಎಂದರೂ ಮೂವತ್ತೊಂಬತ್ತು ಬಾಶೆಗಳು ಮತ್ತು ಅರವತ್ತು ತಾಯ್ಮಾತುಗಳು ದಾಕಲಾಗಿವೆ. ಕೋಲಾರದಲ್ಲಿ ಕನ್ನಡ ಅತಿದೊಡ್ಡ ಬಾಶೆಯಾಗಿದ್ದು ಸುಮಾರು 51% ಇದೆ. ತೆಲುಗು ಜಿಲ್ಲೆಯ ಸುಮಾರು 22% ಆಗಿದೆ. ಕನ್ನಡ, ತೆಲುಗು ಇವುಗಳ ಜೊತೆಗೆ ಉರ‍್ದು ಮತ್ತು ತಮಿಳು ಬಾಶೆಗಳು ಲಕ್ಶಕ್ಕೂ ಹೆಚ್ಚಿನ ಮಾತುಗರನ್ನು ಜಿಲ್ಲೆಯಲ್ಲಿ ಹೊಂದಿವೆ.

ಜನಗಣತಿ ಕೊಟ್ಟಿರುವ ಕೋಲಾರ ಜಿಲ್ಲೆಯ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ654520
ಆಸ್ಸಾಮಿ634419
ಇತರ211
ಬೆಂಗಾಲಿ451324127
ಬೆಂಗಾಲಿ451324127
ಬೊಡೊ110
ಬೊಡೊ/ಬೊರೊ110
ಗುಜರಾತಿ516271245
ಗುಜರಾತಿ411216195
ಸವರಾಶ್ಟ್ರ/ಸವರಾಶ್ಟ್ರಿ904941
ಇತರ1569
ಹಿಂದಿ1036758354532
ಬೋಜ್ಪುರಿ35269
ಗರ‍್ವಾಲಿ1174
ಹಿಂದಿ917351973976
ಲಮಾಣಿ/ಲಂಬಾಡಿ1647886
ಮಾರ‍್ವಾರಿ647342305
ರಾಜಸ್ತಾನಿ301165136
ಸುಗಾಲಿ1266
ಇತರ241410
ಕನ್ನಡ791465402499388966
ಕನ್ನಡ791446402491388955
ಕುರುಬ/ಕುರುಂಬ1257
ಇತರ734
ಕಾಶ್ಮೀರಿ431
ಕಾಶ್ಮೀರಿ431
ಕೊಂಕಣಿ258125133
ಕೊಂಕಣಿ255124131
ಕುಡುಬಿ/ಕುಡುಂಬಿ101
ನವಾಯಿತಿ101
ಇತರ110
ಮಯ್ತಿಲಿ532
ಮಯ್ತಿಲಿ532
ಮಲಯಾಳಂ378116852096
ಮಲಯಾಳಂ375116702081
ಯರವ301515
ಮಣಿಪುರಿ291217
ಮಣಿಪುರಿ291217
ಮರಾಟಿ1042753135114
ಮರಾಟಿ1042653135113
ಇತರ101
ನೇಪಾಲಿ18210874
ನೇಪಾಲಿ18210874
ಓಡಿಯಾ287616541222
ಓಡಿಯಾ287616541222
ಪಂಜಾಬಿ18117
ಪಂಜಾಬಿ18117
ಸಂಸ್ಕ್ರುತ1358
ಸಂಸ್ಕ್ರುತ1358
ಸಂತಾಲಿ11110
ಸಂತಾಲಿ11110
ಸಿಂದಿ1064
ಸಿಂದಿ1064
ತಮಿಳು1688668339385473
ತಮಿಳು1688588339085468
ಇತರ835
ತೆಲುಗು348256173791174465
ತೆಲುಗು348253173789174464
ಇತರ321
ಉರ‍್ದು19784810081897030
ಉರ‍್ದು19784510081697029
ಇತರ321
ಅಂಗಾಮಿ211
ಅಂಗಾಮಿ211
ಆವೊ110
ಆವೊ110
ಬಿಲಿ/ಬಿಲೊಡಿ422
ಇತರ422
ಬೊಟಿಯ413
ಇತರ413
ಕೂರ‍್ಗಿ/ಕೊಡಗು743638
ಕೂರ‍್ಗಿ/ಕೊಡಗು321418
ಕೊಡವ422220
ಇಂಗ್ಲೀಶು518256262
ಇಂಗ್ಲೀಶು518256262
ಗಾರೊ101
ಗಾರೊ101
ಕರಿಯಾ330
ಇತರ330
ಕಾಸಿ110
ಕಾಸಿ110
ಕೊಮ್211
ಕೊಮ್211
ಕುರುಕ್/ಓರಆನ್110
ಇತರ110
ಲಕೇರ್110
ಮರ110
ಲುಶಾಯಿ/ಮಿಜೊ752
ಲುಶಾಯಿ/ಮಿಜೊ752
ತಾಡೊ101
ತಾಡೊ101
ಟಿಬೇಟನ್734
ಟಿಬೇಟನ್734
ತ್ರಿಪುರಿ330
ತ್ರಿಪುರಿ330
ತುಳು279139140
ತುಳು279139140
ಇತರ432914

ಕೋಲಾರ ಜಿಲ್ಲೆಯಲ್ಲಿ ಜನಗಣತಿ ದಾಕಲಿಸಿರುವ ಬಾಶೆಗಳ ಸಂಕೆ ಮೂವತ್ತೆಂಟು. ಇತರ ಎಂಬ ಒಂದು ಗುಂಪು ಸೇರಿ ಮೂವತ್ತೊಂಬತ್ತು ಆಗುತ್ತದೆ. ಒಟ್ಟು ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ಜಿಲ್ಲೆಯಲ್ಲಿ ದಾಕಲಿಸಿದೆ. ಇತರ ಎಂಬ ಗುಂಪಿನಲ್ಲಿ ಕೇವಲ ನಲ್ವತ್ಮೂರು ಮಂದಿ ಇರುವುದರಿಂದ ಅದರಲ್ಲಿ ಒಂದೆ ತಾಯ್ಮಾತು ಎಂದು ಎಣಿಸಿದರೆ ಜಿಲ್ಲೆಯ ತಾಯ್ಮಾತುಗಳ ಸಂಕೆ ಅರವತ್ತು ಆಗುತ್ತದೆ. ಹದಿಮೂರು ಬಾಶೆಗಳಲ್ಲಿ ಇತರ ಎಂಬ ಗುಂಪು ದಾಕಲಾಗಿವೆ. ಅವುಗಳೆಂದರೆ ಆಸ್ಸಾಮಿ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮರಾಟಿ, ತಮಿಳು, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಕೂರ‍್ಗಿ/ಕೊಡಗು, ಕರಿಯಾ ಮತ್ತು ಕುರುಕ್/ಓರಆನ್. ಇವುಗಳ ಹೊರತಾಗಿ ಹೆಸರಿಸಲಾದ ತಾಯ್ಮಾತುಗಳ ಸಂಕೆ ನಲ್ವತ್ತಾರು ಆಗುತ್ತವೆ. 

ಕೋಲಾರ ಜಿಲ್ಲೆಯ ಜನಸಂಕೆ 15,36,401 ಆಗಿದೆ. ಇದರಲ್ಲಿ ಕನ್ನಡವು ಅತಿ ಹೆಚ್ಚು ಮಂದಿ ಮಾತಾಡುವ ಬಾಶೆಯಾಗಿದ್ದು ಕನ್ನಡ ಮಾತುಗರ ಸಂಕೆ 7,91,465 ಆಗಿದೆ. ಇದು 51.514% ಇದ್ದು ಜಿಲ್ಲೆಯ ಅರ‍್ದದಶ್ಟು ಆಗುತ್ತದೆ. ತೆಲುಗನ್ನು ಮಾತಾಡುವ 3,48,256 ಮಂದಿ ಇದ್ದು ಇದರ ಪ್ರತಿಶತತೆ 22.666% ಇದೆ. ಆನಂತರ ಉರ‍್ದು 1,97,848 (12.877%) ಮಾತುಗರನ್ನು ಮತ್ತು ತಮಿಳು 1,68,866 (10.991%) ಮಾತುಗರನ್ನು ಹೊಂದಿದೆ. ಈ ನಾಲ್ಕು ಬಾಶೆಗಳು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿವೆ. ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಮರಾಟಿ – 10,427 (0.678%) ಮತ್ತು ಹಿಂದಿ – 10,367 (0.674%) ಬಾಶೆಗಳು ಇವೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿಯನ್ನು ಹೊಂದಿರುವ ಬಾಶೆಗಳು ಮಲಯಾಳಂ – 3,781 (0.246%) ಮತ್ತು ಓಡಿಯಾ – 2,876 (0.187%) ಇವೆ. ಸಾವಿರಕ್ಕಿಂತ ಕಮ್ಮಿ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಆರು ಬಾಶೆಗಳು ಇವೆ, ಇಂಗ್ಲೀಶು, ಗುಜರಾತಿ, ಬೆಂಗಾಲಿ, ತುಳು, ಕೊಂಕಣಿ ಮತ್ತು ನೇಪಾಲಿ. ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಇಪ್ಪತ್ತು ಬಾಶೆಗಳು ಇವೆ. ಕೆಳಗೆ ಈ ಬಾಶೆಗಳನ್ನು ಅವುಗಳ ಮಾತುಗರ ಸಂಕೆಯಾದರಿಸಿ ಹೊಂದಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚು ಕನ್ನಡ7,91,465 51.514%
’’ತೆಲುಗು3,48,25622.666% 
’’ಉರ‍್ದು1,97,84812.877%
’’ತಮಿಳು1,68,86610.991% 
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ10,4270.678%
’’ಹಿಂದಿ10,3670.674%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮಲಯಾಳಂ3,781 0.246%
’’ಓಡಿಯಾ2,8760.187%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಇಂಗ್ಲೀಶು, ಗುಜರಾತಿ, ಬೆಂಗಾಲಿ, ತುಳು, ಕೊಂಕಣಿ, ನೇಪಾಲಿ 1,7530.114%
ನೂರಕ್ಕಿಂತ ಕಡಿಮೆ ಇಪ್ಪತ್ತು ಬಾಶೆಗಳು3120.020%
ಒಟ್ಟು ಮಾತುಗರು15,36,401100%

ಕೋಲಾರದ ತಾಯ್ಮಾತುಗಳನ್ನು ಗಮನಿಸಿ ಈ ಪಟ್ಟಿಯನ್ನು ಇನ್ನೊಮ್ಮೆ ಮಾಡಿದರೆ ಒಂದು ಸಣ್ಣ ಬದಲಾವಣೆ ಮಾತ್ರ ಆಗುತ್ತದೆ. ಹಿಂದಿ ಈಗ 10,367 ಮಾತುಗರೊಂದಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ಮತ್ತು ಒಂದು ಲಕ್ಶಕ್ಕಿಂತ ಕಡಿಮೆ ಮಾತುಗರಿರುವ ಬಾಶೆಗಳ ಪಟ್ಟಿಯಲ್ಲಿದೆ. ಆದರೆ ಹಿಂದಿಯ ಒಳಗೆ ಹಿಂದಿ ಮಾತಾಡುವವರ ಸಂಕೆ ತುಸು ಕಡಿಮೆಯಾಗಿ 9,173 (0.597%) ಆಗುತ್ತದೆ. ಹೀಗಾಗಿ ಹಿಂದಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಮಾತುಗರ ಬಾಶೆಗಳ ಪಟ್ಟಿಗೆ ಇಳಿಯುತ್ತದೆ. ಇದರ ಹೊರತಾಗಿ ಯಾವುದೆ ಬದಲಾವಣೆ ಆಗುವುದಿಲ್ಲ. ತಾಯ್ಮಾತುಗಳ ಸಂಕೆಯನ್ನು ಅನುಲಕ್ಶಿಸಿ ಬಾಶೆಗಳ ಪಟ್ಟಿಯನ್ನು ಇಲ್ಲಿ ಮತ್ತೊಮ್ಮೆ ಹೊಂದಿಸಿ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಒಂದು ಲಕ್ಶಕ್ಕಿಂತ ಹೆಚ್ಚು ಕನ್ನಡ7,91,44651.512%
’’ತೆಲುಗು3,48,25322.666%
’’ಉರ‍್ದು1,97,84512.877%
’’ತಮಿಳು1,68,85810.990%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ10,4260.678%
’’ಹಿಂದಿ9,1730.597%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮಲಯಾಳಂ3,7510.244%
’’ಓಡಿಯಾ2,8760.187%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಕೋಲಾರ15,36,401ಕನ್ನಡ7,91,44651.512%1
ತೆಲುಗು3,48,25322.666%2
ಉರ‍್ದು1,97,84512.877%3
ತಮಿಳು1,68,85810.990%4
ಮರಾಟಿ10,4260.678%5
ಹಿಂದಿ9,1730.597%6
ಮಲಯಾಳಂ3,7510.244%7
ಓಡಿಯಾ2,8760.187%8
ಮಾರ‍್ವಾರಿ6470.042%9
ಇಂಗ್ಲೀಶು5180.033%10

‍ಲೇಖಕರು Admin

7 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading