ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ದಾರವಾಡ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ದಾರವಾಡ ಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

14

ದಾರವಾಡ

ದಾರವಾಡ ಜಿಲ್ಲೆಯಲ್ಲಿ ಕನಿಶ್ಟ ಮೂವತ್ತಾರು ಬಾಶೆಗಳು ಇವೆ ಮತ್ತು ಕನಿಶ್ಟ ಎಪ್ಪತ್ತು ತಾಯ್ಮಾತುಗಳು ಇವೆ. ಜಿಲ್ಲೆಯ 70%ದಶ್ಟು ಕನ್ನಡ ಮಾತಾಡುವವರು ಇದ್ದಾರೆ. ಉರ‍್ದು ಸುಮಾರು 18% ಮಾತುಗರನ್ನು ಹೊಂದಿದ್ದು ಪ್ರದಾನ ಬಾಶೆಯಾಗಿದೆ. ಆನಂತರ ಮರಾಟಿ, ತೆಲುಗು ದೊಡ್ಡ ಬಾಶೆಗಳಾಗಿ ಕಾಣಿಸುತ್ತವೆ. ಗುಜರಾತಿ ಮಾತುಗರ ಸಂಕೆ ಗಮನ ಸೆಳೆಯುತ್ತದೆ. ಅದರೊಂದಿಗೆ ಕೊಂಕಣಿ, ಲಂಬಾಣಿ, ತಮಿಳು ಮತ್ತು ಮಾರ‍್ವಾರಿ ಬಾಶೆಗಳ ಮಾತುಗರ ಸಂಕೆಯೂ ಪರಿಗಣಿಸುವಶ್ಟು ಇದೆ.

ದಾರವಾಡ ಜಿಲ್ಲೆಯಲ್ಲಿ ಇರುವ ಬಾಶೆಗಳ ಮಾಹಿತಿಯನ್ನು ಜನಗಣತಿ ಈ ಕೆಳಗಿನಂತೆ ಒದಗಿಸುತ್ತದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ312
ಆಸ್ಸಾಮಿ312
ಬೆಂಗಾಲಿ641396245
ಬೆಂಗಾಲಿ641396245
ಗುಜರಾತಿ268871372613161
ಗುಜರಾತಿ311315361577
ಪಟ್ಟಣಿ110
ಸವರಾಶ್ಟ್ರ/ಸವರಾಶ್ಟ್ರಿ963
ಇತರ237641218311581
ಹಿಂದಿ438922265421238
ಬಂಜಾರಿ522131
ಬೋಜ್ಪುರಿ1106248
ಗರ‍್ವಾಲಿ211
ಗೊಜ್ರಿ/ಗುಜ್ಜಾರಿ/ಗುಜರ್513021
ಹರಿಯಾಣ್ವಿ1046
ಹಿಂದಿ 228801187611004
ಲಮಾಣಿ/ಲಂಬಾಡಿ1130657235583
ಮಾರ‍್ವಾರಿ758539173668
ರಾಜಸ್ತಾನಿ1378738640
ಸಾದನ್/ಸಾದ್ರಿ101
ಸುಗಾಲಿ18108
ಇತರ499272227
ಕನ್ನಡ1294476657962636514
ಕನ್ನಡ1294240657843636397
ಕುರುಬ/ಕುರುಂಬ1064
ಪ್ರಾಕ್ರುತ/ಪ್ರಾಕ್ರುತ ಬಾಶಾ1186157
ಇತರ1085256
ಕಾಶ್ಮೀರಿ241113
ಕಾಶ್ಮೀರಿ241113
ಕೊಂಕಣಿ1685883438515
ಕೊಂಕಣಿ1682383278496
ಕುಡುಬಿ/ಕುಡುಂಬಿ954
ಇತರ261115
ಮಯ್ತಿಲಿ332112
ಮಯ್ತಿಲಿ332112
ಮಲಯಾಳಂ1667866801
ಮಲಯಾಳಂ1665866799
ಯರವ202
ಮಣಿಪುರಿ330
ಮಣಿಪುರಿ330
ಮರಾಟಿ582912919329098
ಕೋಳಿ110
ಮರಾಟಿ581692913129038
ಇತರ1216160
ನೇಪಾಲಿ234121113
ನೇಪಾಲಿ234121113
ಓಡಿಯಾ381189192
ಓಡಿಯಾ381189192
ಪಂಜಾಬಿ544827132735
ಪಂಜಾಬಿ544827132735
ಸಂಸ್ಕ್ರುತ17710
ಸಂಸ್ಕ್ರುತ17710
ಸಂತಾಲಿ211
ಸಂತಾಲಿ211
ಸಿಂದಿ866443423
ಕಚ್ಚಿ493237256
ಸಿಂದಿ373206167
ತಮಿಳು902243834639
ಕೊರವ18510580
ತಮಿಳು882242704552
ಇತರ1587
ತೆಲುಗು436442169821946
ತೆಲುಗು 435472165421893
ಇತರ974453
ಉರ‍್ದು339854172066167788
ಉರ‍್ದು 339802172040167762
ಇತರ522626
ಅಂಗಾಮಿ110
ಅಂಗಾಮಿ110
ಅರಾಬಿಕ್/ಅರ‍್ಬಿ241113
ಅರಾಬಿಕ್/ಅರ‍್ಬಿ241113
ಬಿಲಿ/ಬಿಲೊಡಿ264146118
ಬಿಲಿ/ಬಿಲೊಡಿ211
ಕೊಕ್ನ/ಕೊಕ್ನಿ/ಕುಕ್ನ321
ಮವ್ಚಿ211
ಪರದಿ20411094
ವಾಗ್ಡಿ503020
ಇತರ321
ಕೂರ‍್ಗಿ/ಕೊಡಗು371819
ಕೂರ‍್ಗಿ/ಕೊಡಗು1266
ಕೊಡವ251213
ಇಂಗ್ಲೀಶು813403410
ಇಂಗ್ಲೀಶು813403410
ಗೊಂಡಿ413
ಮರಿಯ/ಮುರಿಯ413
ಹಲಬಿ482523
ಇತರ482523
ಕಾಸಿ101
ಕಾಸಿ101
ಕಿಎಮ್ನುಂಗನ್633
ಇತರ633
ಕೊಡ/ಕೊರ201010
ಕೊಡ/ಕೊರ201010
ಕುರುಕ್/ಓರಆನ್351718
ಕುರುಕ್/ಓರಆನ್351718
ಲಕೇರ್220
ಮರ220
ನಿಸ್ಸಿ/ದಪ್ಲ110
ಅಪ್ತಾನಿ110
ಟಿಬೇಟನ್642
ಟಿಬೇಟನ್642
ತುಳು310415631541
ತುಳು308415531531
ಇತರ201010

ದಾರವಾಡ ಜಿಲ್ಲೆಯಲ್ಲಿ ಒಟ್ಟು ಮೂವತ್ತಯ್ದು ಬಾಶೆಗಳನ್ನು ಜನಗಣತಿ ಪಟ್ಟಿಸುತ್ತದೆ. ಇತರ ಎಂಬ ಒಂದು ಗುಂಪಿನಲ್ಲಿ 414 ಮಂದಿ ಮಾತುಗರು ದಾಕಲಾಗಿದ್ದು ಇದನ್ನು ಒಂದು ಬಾಶೆ ಎಂದು ಪರಿಗಣಿಸಿದರೆ ಜನಗಣತಿ ದಾರವಾಡ ಜಿಲ್ಲೆಯಲ್ಲಿ ಮೂವತ್ತಾರು ಬಾಶೆಗಳೆಂದು ಪಟ್ಟಿಸಿದಂತಾಗುತ್ತದೆ. ಇನ್ನು ತಾಯ್ಮಾತುಗಳ ಸಂಕೆ ಅರ‍್ವತ್ತೊಂಬತ್ತು ಇದೆ. ಇತರ ಎಂಬ ಬಾಶೆಯ ಗುಂಪಿನಲ್ಲಿ ಒಂದೆ ತಾಯ್ಮಾತು ಎಂದು ಲೆಕ್ಕಿಸಿದರೆ ಜಿಲ್ಲೆಯ ತಾಯ್ಮಾತುಗಳ ಸಂಕೆ ಎಪ್ಪತ್ತು ಎಂದಾಗುತ್ತದೆ. ಇವುಗಳಲ್ಲಿ ಹನ್ನೆರಡು ಬಾಶೆಗಳ ಒಳಗೆ ಇತರ ಗುಂಪು ದಾಕಲಾಗಿದೆ. ಇತರ ಎಂಬ ಗುಂಪು ದಾಕಲಾದ ಬಾಶೆಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮರಾಟಿ, ತಮಿಳು, ತೆಲುಗು, ಉರ‍್ದು, ಬಿಲಿ/ಬಿಲೊಡಿ, ಹಲಬಿ, ಕಿಎಮ್ನುಂಗನ್ ಮತ್ತು ತುಳು. ಅಂದರೆ ಒಟ್ಟು ಅರ‍್ವತ್ತೊಂಬತ್ತು ತಾಯ್ಮಾತುಗಳಲ್ಲಿ ಹೆಸರಿಸಲಾದ ತಾಯ್ಮಾತುಗಳು ಅಯ್ವತ್ತೇಳು ಆಗುತ್ತವೆ.

ದಾರವಾಡ ಜಿಲ್ಲೆಯ ಜನಸಂಕೆ 2011ರ ಜನಗಣತಿ ಪ್ರಕಾರ 18,47,023 ಇದೆ. ಇದರಲ್ಲಿ ಕನ್ನಡ ಮಾತಾಡುವ 12,94,476 ಮಂದಿ ಇದ್ದಾರೆ. ಅಂದರೆ ಒಟ್ಟು ಜಿಲ್ಲೆಯ 70.084% ಆಗುತ್ತದೆ. ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡ ಮಾತ್ರ ಆಗಿದೆ. ಉರ‍್ದು ಬಾಶೆಗೆ 3,39,854 (18.400%) ಮಂದಿ ಇದ್ದು ಒಂದು ಲಕ್ಶಕ್ಕೂ ಹೆಚ್ಚಿನ ಮಂದಿ ಇರುವ ಬಾಶೆ ಇದಾಗಿದೆ. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು ಅಯ್ದು ಇವೆ. ಇವುಗಳಲ್ಲಿ ಮರಾಟಿಗೆ 58,291 (3.155%), ಹಿಂದಿಗೆ 43,892 (2.376%), ತೆಲುಗಿಗೆ 43,644 (2.362%), ಗುಜರಾತಿಗೆ 26,887 (1.455%) ಮತ್ತು ಕೊಂಕಣಿಗೆ 16,858 (0.912%) ಮಂದಿ ಮಾತುಗರು ಇದ್ದಾರೆ. ಆನಂತರ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳು ಒಟ್ಟು ನಾಲ್ಕು ಮಾತ್ರ ಇವೆ. ಅವುಗಳೆಂದರೆ ತಮಿಳು – 9,022 (0.488%), ಪಂಜಾಬಿ – 5,448 (0.294%), ತುಳು – 3,104 (0.168%) ಮತ್ತು ಮಲಯಾಳಂ – 1,667 (0.090%) ಬಾಶೆಗಳು. ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತಾಡುವ ಆರು ಬಾಶೆಗಳು ಇವೆ. ಇವುಗಳಲ್ಲಿ ಸಿಂದಿ, ಇಂಗ್ಲೀಶು, ಬೆಂಗಾಲಿ, ಓಡಿಯಾ, ಬಿಲಿ/ಬಿಲೊಡಿ ಮತ್ತು ನೇಪಾಲಿ ಬಾಶೆಗಳು ಇವೆ. ಇವುಗಳ ಜೊತೆಗೆ ಇತರ ಎಂಬ ಗುಂಪಿನಲ್ಲಿ 414 ಮಂದಿ ಇದ್ದು ಇದನ್ನೂ ಸೇರಿಸಿದರೆ ಒಟ್ಟು ಏಳು ಬಾಶೆಗಳು ಆಗುತ್ತವೆ. ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಒಟ್ಟು ಹದಿನೆಂಟು ಬಾಶೆಗಳು ಇವೆ. ಜನಗಣತಿ ಒದಗಿಸಿರುವ ಮಾಹಿತಿಯನ್ನು ಕೆಳಗಿನಂತೆ ಚಿತ್ರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ12,94,47670.084%
ಹತ್ತು ಲಕ್ಶಕ್ಕಿಂತ ಕಡಿಮೆ ಒಂದು ಲಕ್ಶಕ್ಕಿಂತ ಹೆಚ್ಚು ಉರ‍್ದು3,39,85418.400%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ58,2913.155%
’’ಹಿಂದಿ43,892 2.376%
’’ತೆಲುಗು43,6442.362%
’’ಗುಜರಾತಿ26,8871.455%
’’ಕೊಂಕಣಿ 16,858 0.912
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತಮಿಳು9,0220.488%
’’ಪಂಜಾಬಿ5,448 0.294%
’’ತುಳು 3,1040.168%
’’ಮಲಯಾಳಂ1,6670.090%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಸಿಂದಿ, ಇಂಗ್ಲೀಶು, ಬೆಂಗಾಲಿ, ಓಡಿಯಾ, ಬಿಲಿ/ಬಿಲೊಡಿ, ನೇಪಾಲಿ36130.195%
ನೂರಕ್ಕಿಂತ ಕಡಿಮೆ ಹತ್ತೊಂಬತ್ತು ಬಾಶೆಗಳು2690.014%
ಒಟ್ಟು ಮಾತುಗರು18,47,023100%

ತಾಯ್ಮಾತುಗಳ ಮಾಹಿತಿಯನ್ನು ತುಸು ಗಮನಿಸಿದಾಗ ದಾರವಾಡ ಜಿಲ್ಲೆಯ ಬಾಶಿಕ ಮಾಹಿತಿಯಲ್ಲಿ ಏರುಪೇರಾಗುತ್ತದೆ. ಈಗ ತಾಯ್ಮಾತುಗಳ ಬಗೆಗೆ ತುಸು ಮಾತುಕತೆ ಮಾಡಬಹುದು.

ಗುಜರಾತಿ ಬಾಶೆಗೆ 26,887 ಮಂದಿ ದಾಕಲಾಗಿದ್ದು ಇದರಲ್ಲಿ ಇತರ ಎಂಬ ಗುಂಪಿನಲ್ಲಿ ದೊಡ್ಡ ಸಂಕೆಯ ಅಂದರೆ 23,764 ಸಂಕೆಯ ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ಗುಜರಾತಿಯ 88.384% ಆಗುತ್ತದೆ. ಗುಜರಾತಿ ಮಾತಾಡುವ ಮಂದಿ ಕೇವಲ 3,113 ಮಾತ್ರ (11.578%). ಆದರೆ ಈ ತಾಯ್ಮಾತುಗಳು ಯಾವು ಎಂಬ ತಿಳುವಳಿಕೆ ಇಲ್ಲದಿರುವುದರಿಂದ ಇದನ್ನು ಗುಜರಾತಿ ಎಂದೆ ಪರಿಗಣಿಸಿ ಮುಂದುವರೆಯಬಹುದು.

ಹಿಂದಿ ಬಾಶೆಯ ಅಂಕೆಸಂಕೆಗಳು ಸಹಜವಾಗಿ ಹೆಚ್ಚಿನ ಗಮನ ಸೆಳೆಯುತ್ತವೆ. ಈಗ ಹಿಂದಿಯೊಳಗೆ ಪಟ್ಟಿಸಿರುವ ಮತ್ತು ಕರ‍್ನಾಟಕದ ಸಂದರ‍್ಬದಲ್ಲಿ ಮಹತ್ವ ಪಡೆದುಕೊಳ್ಳುವ ಕೆಲವು ಬಾಶೆಗಳ ಪಟ್ಟಿಯನ್ನು ಗಮನಿಸಬಹುದು

ಹಿಂದಿ 43,892

ಬಂಜಾರಿ 52

ಬೋಜ್ಪುರಿ 110

ಹಿಂದಿ 22,880

ಲಮಾಣಿ/ಲಂಬಾಡಿ 11,306

ಮಾರ‍್ವಾರಿ 7,585

ರಾಜಸ್ತಾನಿ 1,378

ಸುಗಾಲಿ 18

ಹಿಂದಿ ಬಾಶೆಗೆ ಒಟ್ಟು 43,892 ಮಂದಿಯನ್ನು ತೋರಿಸಿದೆ. ಇದರಲ್ಲಿ ಹಿಂದಿ ಮಾತಾಡುವ ಮಂದಿ ಅರ‍್ದದಶ್ಟು ಇದ್ದಾರೆ. ಹಿಂದಿಯ ಮಾತುಗರು 22,880 ಇದ್ದು ಇದು ಜಿಲ್ಲೆಯ ಹಿಂದಿಯ 52.127% ಮತ್ತು ಜಿಲ್ಲೆಯ 1.238% ಆಗುತ್ತದೆ. ಇದರಲ್ಲಿ ಪರಿಗಣಿಸುವಶ್ಟು ಮಂದಿ ಲಂಬಾಣಿ ಮಾತಾಡುವವರು ಇದ್ದಾರೆ. ಲಮಾಣಿ ಹೆಸರಿನಲ್ಲಿ 11,306, ಬಂಜಾರಿ ಹೆಸರಿನಲ್ಲಿ 52 ಮತ್ತು ಸುಗಾಲಿ ಹೆಸರಿನಲ್ಲಿ 18 ಮಂದಿ ದಾಕಲಾಗಿದ್ದಾರೆ. ಇದರ ಒಟ್ಟು ಮೊತ್ತ 11,376 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 25.918% ಮತ್ತು ಜಿಲ್ಲೆಯ 0.615% ಆಗುತ್ತದೆ. ಹಾಗೆಯೆ ಮಾರ‍್ವಾರಿ ಮಾತಾಡುವ 7,585 (0.410%) ಮಂದಿ ಮತ್ತು ರಾಜಸ್ತಾನಿ ಮಾತಾಡುವ 1,378 (0.074%) ಮಂದಿ ದಾಕಲಾಗಿದ್ದಾರೆ. ಈಗ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆಗಳ ಪಟ್ಟಿಗೆ ಲಂಬಾಣಿ ಬರುತ್ತದೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಾತುಗರ ಬಾಶೆಗಳ ಪಟ್ಟಿಗೆ ಮಾರ‍್ವಾರಿ ಮತ್ತು ರಾಜಸ್ತಾನಿ ಸೇರುತ್ತವೆ. ಹಿಂದಿಯ ಈ ಚರ್ಚೆಯನ್ನು ಗಮನದಲ್ಲಿ ಇಟ್ಟುಕೊಂಡು ದಾರವಾಡ ಜಿಲ್ಲೆಯ ಬಾಶೆಗಳನ್ನು ಹೀಗೆ ಬಿಡಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ12,94,24070.071%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು3,39,80218.397%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ58,1693.149%
’’ತೆಲುಗು43,5472.357%
’’ಗುಜರಾತಿ26,8871.286%
’’ಹಿಂದಿ22,8801.238%
’’ಕೊಂಕಣಿ16,8230.910%
’’ಲಂಬಾಣಿ11,3760.615%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುತಮಿಳು8,8220.477%
’’ಮಾರ‍್ವಾರಿ7,5850.410%
’’ರಾಜಸ್ತಾನಿ1,378 0.074%
ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ದಾರವಾಡ18,47,023ಕನ್ನಡ12,94,24070.071%1
ಉರ‍್ದು3,39,80218.397%2
ಮರಾಟಿ58,1693.149%3
ತೆಲುಗು43,5472.357%4
ಗುಜರಾತಿ26,8871.286%5
ಹಿಂದಿ22,8801.238%6
ಕೊಂಕಣಿ16,8230.910%7
ಲಂಬಾಣಿ11,3760.615%8
ತಮಿಳು8,8220.477%9
ಮಾರ‍್ವಾರಿ7,5850.410%10

‍ಲೇಖಕರು Admin

26 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading