ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ –ತುಳು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

36

ತುಳು ಕರ‍್ನಾಟಕದ ಒಂದು ಪ್ರದಾನ ಬಾಶೆ. ಇದು ಬಹುತೇಕ ಕರ‍್ನಾಟಕದಲ್ಲಿಯೆ ಕಾಣಿಸುತ್ತದೆ. ದೇಶದಲ್ಲಿ ತುಳು ಮಾತಾಡುವ ಒಟ್ಟು 18,46,427 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ಅಂದರೆ 15,95,038 ಮಂದಿ ಕರ‍್ನಾಟಕ ರಾಜ್ಯದಲ್ಲಿ ಕಾಣಿಸುತ್ತಾರೆ. ಇದು ದೇಶದ ಒಟ್ಟು ತುಳುವಿನ 86.385% ಆಗುತ್ತದೆ.  ತುಳು ಕರ‍್ನಾಟಕದ ಆರನೆಯ ಅತಿ ದೊಡ್ಡ ಬಾಶೆಯಾಗಿದೆ. ತುಳುವಿನಲ್ಲಿ ತುಳು ಒಂದೆ ತಾಯ್ಮಾತು ದಾಕಲಾಗಿದೆ. ಇದನ್ನು ಮಾತಾಡುವ 15,92,915 ಮಂದಿ ಇದ್ದಾರೆ. ಇತರ ಎಂಬ ಇನ್ನೊಂದು ಗುಂಪು ಇದ್ದು 2,123 ಮಂದಿ ದಾಕಲಾಗಿದ್ದಾರೆ. 

ಕರ‍್ನಾಟಕದ ಒಳಗೆ ತುಳುವಿನ ಹಂಚಿಕೆ ಗಮನಿಸಿದಾಗ ದೊಡ್ಡ ಸಂಕೆಯ ತುಳುವರು ಮಂಗಳೂರು ಜಿಲ್ಲೆಯಲ್ಲಿಯೆ ದಾಕಲಾಗಿದ್ದಾರೆ. ಮಂಗಳೂರಿನಲ್ಲಿ 10,14,638  ಮಂದಿ ತುಳುವರು ದಾಕಲಾಗಿದ್ದು ಇದು ಒಟ್ಟು ಕರ‍್ನಾಟಕದ ಒಟ್ಟು ತುಳುವರ 64% ಆಗುತ್ತಾರೆ. ಇದರ ಹೊರತಾಗಿ ಉಡುಪಿಯಲ್ಲಿ (3,68,655) ಮೂರೂವರೆ ಲಕ್ಶದಶ್ಟು ಮಂದಿ ಅಂದರೆ ಕರ‍್ನಾಟಕದ ತುಳುವರ 23%ದಶ್ಟು ಇದ್ದಾರೆ. ಚಿಕ್ಕಮಗಳೂರು, (62,827) ಕೊಡಗು (49,390), ಬೆಂಗಳೂರು ನಗರ (47,043) ಮತ್ತು ಹಾಸನ (21,669) ನಾಲ್ಕು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ತುಳುವರು ಇದ್ದಾರೆ. ಆರು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಹದಿನೆಂಟು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಯಾದಗಿರಿಯಲ್ಲಿ (60) ಮಾತ್ರ ನೂರಕ್ಕಿಂತ ಕಡಿಮೆ ತುಳು ಮಾತುಗರು ದಾಕಲಾಗಿದ್ದಾರೆ.

ಇಲ್ಲಿ ಕೆಳಗೆ ತುಳು ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ6,10,95,29715,92,9152.607%100%
ದಕ್ಶಿಣ ಕನ್ನಡ20,89,64910,14,63848.555%63.696%
ಉಡುಪಿ11,77,3613,68,65531.311%23.143%
ಚಿಕ್ಕಮಗಳೂರು11,37,96162,827 5.521%3.944%
ಕೊಡಗು5,54,51949,390 8.906%2.757%
ಬೆಂಗಳೂರು ನಗರ96,21,55147,0430.488%2.953%
ಹಾಸನ17,76,42121,6691.219%1.360%
ಶಿವಮೊಗ್ಗ17,52,7538,4970.484%0.533%
ಮಯ್ಸೂರು30,01,1277,4630.248%0.468%
ದಾರವಾಡ18,47,0233,0840.166%0.193%
ಬೆಳಗಾವಿ47,79,6612,2220.046%0.139%
ಉತ್ತರ ಕನ್ನಡ14,37,1691,4540.101%0.091%
ದಾವಣಗೆರೆ19,45,4979570.049%0.060%
ಬಳ್ಳಾರಿ24,52,5958000.032%0.050%
ಮಂಡ್ಯ18,05,7696710.037%0.042%
ಬೆಂಗಳೂರು ಗ್ರಾಮಾಂತರ9,90,9235780.058%0.036%
ತುಮಕೂರು26,78,9805580.020%0.035%
ಕೋಲಾರ15,36,4012790.018%0.017%
ಹಾವೇರಿ15,97,6682730.017%0.017%
ರಾಮನಗರ10,82,6362290.021%0.014%
ಬಾಗಲಕೋಟೆ18,89,7522190.004%0.013%
ವಿಜಯಪುರ21,77,3311920.008%0.012%
ಗದಗ10,20,7911890.018%0.011%
ಚಾಮರಾಜನಗರ10,20,7911740.017%0.010%
ಕಲಬುರಗಿ25,66,3261570.006%0.009%
ಚಿತ್ರದುರ‍್ಗ16,59,4561560.009%0.009%
ರಾಯಚೂರು19,28,8121500.007%0.009%
ಚಿಕ್ಕಬಳ್ಳಾಪುರ12,55,1041500.011%0.009%
ಬೀದರ17,03,3001060.006%0.006%
ಕೊಪ್ಪಳ13,89,9211020.007%0.006%
ಯಾದಗಿರಿ11,74,271600.005%0.003%

ತುಳು ಮಾತುಗರ ಹಂಚಿಕೆ 

C:\Users\DELL\Downloads\Distribution of Tulu.jpg

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

17 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading