ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಟಿಬೆಟನ್ ಭಾಷೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

17

ಟಿಬೆಟನ್

ಟಿಬೆಟನ್ ಬಾಶೆಯು ಟಿಬೆಟೊ-ಬರ‍್ಮನ್ ಬಾಶಾ ಮನೆತನಕ್ಕೆ ಸೇರುವ ಒಂದು ಬಾಶೆಯಾಗಿದೆ. ಪರಿಗಣಿಸುವಷ್ಟು ಮಂದಿ ಮಾತುಗರನ್ನು ಕರ‍್ನಾಟಕದಲ್ಲಿ ಹೊಂದಿರುವ ಒಂದೆ ಒಂದು ಟಿಬೆಟೊ-ಬರ‍್ಮನ್ ಬಾಶೆ ಇದಾಗಿದೆ. ಬಾರತದಲ್ಲಿ ಟಿಬೆಟನ್ ಮಾತಾಡುವ ೧,೮೨,೬೮೫ ಮಂದಿ ದಾಕಲಾಗಿದ್ದಾರೆ. ಟಿಬೆಟನ್ ಬಾಶೆಯಲ್ಲಿ ಒಟ್ಟು ಎರಡು ತಾಯ್ಮಾತುಗಳು ಇವೆ. ಟಿಬೆಟನ್ ಮತ್ತು ಪುಕ್ರಿ. ಗಮನಿಸಬೇಕಾದ ಅಂಶವೆಂದರೆ ಪುಕ್ರಿಗೆ ಹೆಚ್ಚು ಮಾತುಗರು (೯೩,೫೦೦) ದಾಕಲಾಗಿದ್ದಾರೆ. ಟಿಬೆಟನ್ ಬಾಶೆಗೆ ಎರಡನೆ ಸ್ತಾನ (೮೩,೭೭೯). ಅದರೊಂದಿಗೆ ಇತರ ಎಂಬ ಗುಂಪಿನಲ್ಲಿಯೂ ಪರಿಗಣಿಸುವಶ್ಟು ಸಂಕೆಯ ಮಾತುಗರು ದಾಕಲಾಗಿದ್ದಾರೆ (೫,೪೦೬). 

ಕರ‍್ನಾಟಕದಲ್ಲಿ ಟಿಬೆಟನ್ ಬಾಶೆಗೆ ೨೭,೫೪೪ ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ಟಿಬೆಟನ್ ಬಾಶೆಯ ೧೫.೦೭೭% ಆಗುತ್ತದೆ. ಇದು ಕರ‍್ನಾಟಕದ 0.045% ಆಗುತ್ತದೆ. 

ಆದರೆ ಕರ‍್ನಾಟಕದಲ್ಲಿ ಟಿಬೆಟನ್ ಬಾಶೆಯಲ್ಲಿ ದಾಕಲಾದ ಬಹುತೇಕರು ಟಿಬೆಟನ್ ತಾಯ್ಮಾತನ್ನು ಆಡುವವರು. ಅಂದರೆ ಇದರಲ್ಲಿ ೨೭,೫೩೧ ಮಂದಿ ಈ ಗುಂಪಿನಲ್ಲಿ ಇದ್ದಾರೆ. ಪುಕ್ರಿ (4) ಮತ್ತು ಇತರ (9) ಗುಂಪಿನಲ್ಲಿ ಅತಿಕಡಿಮೆ ಮಂದಿ ದಾಕಲಾಗಿದ್ದಾರೆ. ಟಿಬೇಟನ್ ಒಂದನ್ನೆ ಪರಿಗಣಿಸಿದಾಗ ಕರ‍್ನಾಟಕದ ಟಿಬೆಟನ್ ಮಾತುಗರು ಒಟ್ಟು ಟಿಬೆಟಿನ ೩೨.೮೬೧% ಪ್ರತಿಶತ ಆಗುತ್ತಾರೆ. ಇವರು ಕರ‍್ನಾಟಕದ ೦.೦೪೫% ಪ್ರತಿಶತ ಆಗುತ್ತಾರೆ. ಕರ‍್ನಾಟಕದ ಹೆಚ್ಚಿನ ಸಂಕೆಯ ಟಿಬೆಟನ್ ಮಾತುಗರು ಮಯ್ಸೂರು (12,808) ಮತ್ತು ಕಾರವಾರ (10,573) ಜಿಲ್ಲೆಗಳಲ್ಲಿ ದಾಕಲಾಗಿದ್ದಾರೆ. ಇವೆರಡು ಜಿಲ್ಲೆಗಳಲ್ಲಿನ ಟಿಬೆಟನ್ನರ ಪ್ರತಿಶತತೆ 75% ಆಗುತ್ತದೆ. ಇದರ ನಂತರ ಚಾಮರಾಜನಗರ (3,448) ಜಿಲ್ಲೆಯಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಎರಡು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಹದಿನೇಳು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಉಳಿದ ಎಂಟು ಜಿಲ್ಲೆಗಳಲ್ಲಿ ಟಿಬೆಟನ್ ಮಾತುಗರು ದಾಕಲಾಗಿಲ್ಲ.

ಇಲ್ಲಿ ಕೆಳಗೆ ಟಿಬೆಟನ್ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29727,5312.868%100%
ಮಯ್ಸೂರು  30,01,12712,8080.426%46.522%
ಉತ್ತರ ಕನ್ನಡ 14,37,16910,5730.735%38.403%
ಚಾಮರಾಜನಗರ 10,20,7913,4480.337%12.524%
ಬೆಂಗಳೂರು ನಗರ  96,21,5514860.005%1.765%
ದಕ್ಶಿಣ ಕನ್ನಡ  20,89,6491210.005%0.439%
ಉಡುಪಿ  11,77,361330.002%0.119%
ಬೆಳಗಾವಿ 47,79,661102.092%0.036%
ದಾವಣಗೆರೆ 19,45,49784.112%0.029%
ಕೋಲಾರ 15,36,40174.556%0.025%
ದಾರವಾಡ  18,47,02363.248%0.021%
ಬೆಂಗಳೂರು ಗ್ರಾಮಂತರ 9,90,92363.248%0.021%
ಮಂಡ್ಯ 18,05,76942.215%0.014%
ಹಾಸನ 17,76,42142.251%0.014%
ಹಾವೇರಿ 15,97,66831.877%0.010%
ಬಳ್ಳಾರಿ 24,52,59531.223%0.010%
ತುಮಕೂರು 26,78,98031,119%0.010%
ಚಿಕ್ಕಮಗಳೂರು 11,37,96121.757%0.007%
ಚಿಕ್ಕಬಳ್ಳಾಪುರ 12,55,10421.593%0.007%
ಬೀದರ  17,03,30015.870%0.003%
ಚಿತ್ರದುರ‍್ಗ 16,59,45615.870%0.003%
ಶಿವಮೊಗ್ಗ 17,52,75315.705%0.003%
ಕಲಬುರಗಿ  25,66,32613.896%0.003%

ಟಿಬೆಟನ್ ಮಾತುಗರ ಹಂಚಿಕೆ

D:\writings\ನೂರು ಕೊರಳು\bashe\work-sept22\done\to final\NEW maps\Distribution of Tibetan.jpg

‍ಲೇಖಕರು avadhi

3 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading