ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
39
ಕೊಂಕಣಿಗೆ 7,88,294 ಮಾತುಗರು ಕರ‍್ನಾಟಕದಲ್ಲಿ ಇದ್ದು ಇದು ರಾಜ್ಯದ ಒಂಬತ್ತನೆ ದೊಡ್ಡ ಬಾಶೆಯಾಗಿದೆ. ದೇಶದ ಒಟ್ಟು ಕೊಂಕಣಿ ಮಾತುಗರ 34.934% ಕರ‍್ನಾಟಕದಲ್ಲಿ ದಾಕಲಾಗಿದ್ದಾರೆ. ಕೊಂಕಣಿಗೆ ಒಟ್ಟು ಅಯ್ದು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿವೆ. ಇದರಲ್ಲಿ ಕೊಂಕಣಿ (7,64,196), ಕುಡುಬಿ/ಕುಡುಂಬಿ (9,053), ಮಾಲ್ವಾನಿ (14), ನವಾಯಿತಿ (12,775) ಮತ್ತು ಗೊರ‍್ಬೊಲಿ/ಗೊರು/ಗೊರ‍್ವಾನಿ (21) ಮಂದಿ ಇದ್ದಾರೆ. ಇತರ ಎಂಬ ಗುಂಪಿನಲ್ಲಿ 2,235 ಇದ್ದಾರೆ. ಸಹಜವಾಗಿ ಇವುಗಳಲ್ಲಿ ಕೊಂಕಣಿ ಮಾತುಗರದು ದೊಡ್ಡ ಪ್ರಮಾಣ.
ಕೊಂಕಣಿ ಮಾತುಗರು ಈ ಮೇಲೆ ಹೇಳಿದಂತೆ 7,64,196 ಇದ್ದಾರೆ. ಇದರಲ್ಲಿ ಸುಮಾರು 18% ಮಂದಿ, ಅಂದರೆ ಸುಮಾರು ಎರಡೂವರೆ ಲಕ್ಶದಶ್ಟು ಮಂದಿ ಕೊಂಕಣಿಗಳು ಕಾರವಾರ (2,51,862) ಜಿಲ್ಲೆಯಲ್ಲಿಯೆ ಇದ್ದಾರೆ. ಆನಂತರ ಮಂಗಳೂರು ಜಿಲ್ಲೆಯಲ್ಲಿ ಎರಡು ಲಕ್ಶಕ್ಕೂ ಹೆಚ್ಚು ಮಂದಿ ಇದ್ದಾರೆ. ಉಡುಪಿಯಲ್ಲಿ (1,33,195) ಒಂದೂವರೆ ಲಕ್ಶದ ಹತ್ತಿರ ಮಂದಿ ಇದ್ದಾರೆ. ಬೆಂಗಳೂರು (64,298), ಶಿವಮೊಗ್ಗ (25,517), ಬೆಳಗಾವಿ (20,971), ದಾರವಾಡ (16,823) ಮತ್ತು ಚಿಕ್ಕಮಗಳೂರು (14,584) ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಆರು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ, ಹದಿನಯ್ದು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಯಾದಗಿರಿ (32) ಜಿಲ್ಲೆಯಲ್ಲಿ ನೂರಕ್ಕಿಂತ ಕಡಿಮೆ ಕೊಂಕಣಿಗಳು ದಾಕಲಾಗಿದ್ದಾರೆ.
ಕೊಂಕಣಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ‍್ನಾಟಕ | 6,10,95,297 | 7,64,196 | 1.290% | 100% |
| ಉತ್ತರ ಕನ್ನಡ | 14,37,169 | 2,51,862 | 17.524% | 32.957% |
| ದಕ್ಶಿಣ ಕನ್ನಡ | 20,89,649 | 2,04,939 | 9.807% | 26.817% |
| ಉಡುಪಿ | 11,77,361 | 1,33,195 | 11.313% | 17.429% |
| ಬೆಂಗಳೂರು | 96,21,551 | 64,298 | 0.668% | 8.413% |
| ಶಿವಮೊಗ್ಗ | 17,52,753 | 25,517 | 1.455% | 3.339% |
| ಬೆಳಗಾವಿ | 47,79,661 | 20,971 | 0.438% | 2.744% |
| ದಾರವಾಡ | 18,47,023 | 16,823 | 0.910% | 2.201% |
| ಚಿಕ್ಕಮಗಳೂರು | 11,37,961 | 14,584 | 1.281% | 1.908% |
| ಕೊಡಗು | 5,54,519 | 6,114 | 1.102% | 0.800% |
| ಮಯ್ಸೂರು | 30,01,127 | 6,053 | 0.201% | 0.792% |
| ದಾವಣಗೆರೆ | 19,45,497 | 5,451 | 0.280% | 0.713% |
| ಹಾಸನ | 17,76,421 | 3,880 | 0.218% | 0.507% |
| ಹಾವೇರಿ | 15,97,668 | 2,187 | 0.136% | 0.286% |
| ಗದಗ | 10,20,791 | 1,314 | 0.128% | 0.171% |
| ಬಳ್ಳಾರಿ | 24,52,595 | 988 | 0.040% | 0.129% |
| ಬಾಗಲಕೋಟೆ | 18,89,752 | 883 | 0.046% | 0.115% |
| ಕೊಪ್ಪಳ | 13,89,921 | 862 | 0.062% | 0.112% |
| ಮಂಡ್ಯ | 18,05,769 | 667 | 0.036% | 0.087% |
| ತುಮಕೂರು | 26,78,980 | 619 | 0.23% | 0.081% |
| ರಾಯಚೂರು | 19,28,812 | 505 | 0.026% | 0.066% |
| ಬೆಂಗಳೂರು ಗ್ರಾಮಾಂತರ | 9,90,923 | 434 | 0.043% | 0.056% |
| ರಾಮನಗರ | 10,82,636 | 407 | 0.037% | 0.053% |
| ಚಿತ್ರದುರ‍್ಗ | 16,59,456 | 345 | 0.O2O% | 0.045% |
| ಕಲಬುರಗಿ | 25,66,326 | 328 | 0.012% | 0.042% |
| ಕೋಲಾರ | 15,36,401 | 255 | 0.016% | 0.033% |
| ವಿಜಯಪುರ | 21,77,331 | 245 | 0.011% | 0.032% |
| ಚಾಮರಾಜನಗರ | 10,20,791 | 232 | 0.022% | 0.030% |
| ಚಿಕ್ಕಬಳ್ಳಾಪುರ | 12,55,104 | 106 | 0.008% | 0.013% |
| ಬೀದರ | 17,03,300 | 100 | 0.005% | 0.013% |
| ಯಾದಗಿರಿ | 11,74,271 | 32 | 0.002% | 0.004% |
ಕೊಂಕಣಿ ಮಾತುಗರ ಹಂಚಿಕೆ






0 Comments