ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
53
ಕುಡುಬಿ
ಕುಡುಬಿ ಇದು ಕೊಂಕಣಿ ಬಾಶೆಯಲ್ಲಿ ದಾಕಲಾಗಿರುವ ಒಂದು ತಾಯ್ಮಾತು. ಕೊಂಕಣಿಯಲ್ಲಿ ಒಟ್ಟು ಅಯ್ದು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿವೆ. ಕರ್ನಾಟಕದಲ್ಲಿ ಕೊಂಕಣಿ (7,64,196), ಕುಡುಬಿ/ಕುಡುಂಬಿ (9,053), ಮಾಲ್ವಾನಿ (14), ನವಾಯಿತಿ (12,775) ಮತ್ತು ಗೊರ್ಬೊಲಿ/ಗೊರು/ಗೊರ್ವಾನಿ (21) ಮತ್ತು ಇತರ (2,235) ಗುಂಪುಗಳು ಇವೆ. ಇದರಲ್ಲಿ ಕುಡುಬಿ ಒಂದಾಗಿದ್ದು ದೇಶದಲ್ಲಿ ಒಟ್ಟು ದಾಕಲಾದ ಕುಡುಬಿ ಮಾತುಗರ ಸಂಕೆ 17,209 ಆಗಿದೆ. ಇದರಲ್ಲಿ 9,053 ಮಂದಿ ಅಂದರೆ 52.606% ಮಂದಿ ಕರ್ನಾಟಕದಲ್ಲಿ ದಾಕಲಾಗಿದ್ದಾರೆ. ಇದು ಕರ್ನಾಟಕದ 0.014% ಪ್ರತಿಶತ ಆಗುತ್ತದೆ. ಕರ್ನಾಟಕದಲ್ಲಿ ಕುಡುಬಿ ಇಪ್ಪತ್ತೇಳನೆ ಅತಿದೊಡ್ಡ ಬಾಶೆಯಾಗಿದೆ.
ಕರ್ನಾಟಕದಲ್ಲಿ ಹೆಚ್ಚಿನ ಕುಡುಬಿಗಳು ಉಡುಪಿ ಜಿಲ್ಲೆಯೊಂದರಲ್ಲಿಯೆ ಕಾಣಿಸುತ್ತಾರೆ. ಉಡುಪಿಯಲ್ಲಿ ಕರ್ನಾಟಕದ ಕುಡುಬಿಗಳ 85.341% ಅಂದರೆ 7,726 ಮಂದು ಇದ್ದಾರೆ. ಇದರ ಹೊರತು ಕಾರವಾರದಲ್ಲಿ 983 ಮಂದಿ ಕಾಣಿಸುತ್ತಾರೆ. ಇನ್ನುಳಿದಂತೆ ಒಟ್ಟು ಇಪ್ಪತ್ಮೂರು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಕುಡುಬಿಗಳು ದಾಕಲಾಗಿದ್ದಾರೆ. ಉಳಿದ ಅಯ್ದು ಜಿಲ್ಲೆಗಳಲ್ಲಿ ಕುಡುಬಿ ದಾಕಲೆ ಆಗಿಲ್ಲ.
ಇಲ್ಲಿ ಕೆಳಗೆ ಕುಡುಬಿ/ಕುಡುಂಬಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ್ನಾಟಕ | 6,10,95,297 | 9,053 | 0.014% | 100% |
| ಉಡುಪಿ | 11,77,361 | 7,726 | 0.656% | 85.341% |
| ದಕ್ಶಿಣ ಕನ್ನಡ | 20,89,649 | 983 | 0.047% | 10.858% |
| ಚಿಕ್ಕಮಗಳೂರು | 11,37,961 | 50 | — | 0.552% |
| ಶಿವಮೊಗ್ಗ | 17,52,753 | 40 | — | 0.441% |
| ಉತ್ತರ ಕನ್ನಡ | 14,37,169 | 37 | — | 0.408% |
| ಹಾವೇರಿ | 15,97,668 | 35 | — | 0.386% |
| ತುಮಕೂರು | 26,78,980 | 21 | — | 0.231% |
| ಬೆಳಗಾವಿ | 47,79,661 | 18 | — | 0.198% |
| ಬಾಗಲಕೋಟೆ | 18,89,752 | 18 | — | 0.198% |
| ಬಳ್ಳಾರಿ | 24,52,595 | 13 | — | 0.143% |
| ಕಲಬುರಗಿ | 25,66,326 | 13 | — | 0.143% |
| ವಿಜಯಪುರ | 21,77,331 | 13 | — | 0.143% |
| ರಾಯಚೂರು | 19,28,812 | 13 | — | 0.143% |
| ಯಾದಗಿರಿ | 11,74,271 | 13 | — | 0.143% |
| ದಾರವಾಡ | 18,47,023 | 9 | — | 0.099% |
| ಚಿಕ್ಕಬಳ್ಳಾಪುರ | 12,55,104 | 9 | — | 0.099% |
| ಮಯ್ಸೂರು | 30,01,127 | 8 | — | 0.088% |
| ಚಿತ್ರದುರ್ಗ | 16,59,456 | 8 | — | 0.088% |
| ಗದಗ | 10,20,791 | 8 | — | 0.088% |
| ಬೀದರ | 17,03,300 | 8 | — | 0.088% |
| ಬೆಂಗಳೂರು ನಗರ | 96,21,551 | 7 | — | 0.077% |
| ಮಂಡ್ಯ | 18,05,769 | 6 | — | 0.066% |
| ಹಾಸನ | 17,76,421 | 5 | — | 0.055% |
| ದಾವಣಗೆರೆ | 19,45,497 | 4 | — | 0.044% |
| ಕೋಲಾರ | 15,36,401 | 1 | — | 0.011% |
ಕುಡುಬಿ/ಕುಡುಂಬಿ ಮಾತುಗರ ಹಂಚಿಕೆ






0 Comments