ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರ್ಡ್ ಫ್ಲೂ… ವರ್ಡ್ ಫ್ಲೂ!

ಅಮಾಸೆ ಟೈಮ್ಸ್ ರುಚಿ

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. ಆ ಆಸೆಯ ಮೊದಲ ಕಂತು ಇಲ್ಲಿದೆ.

* * *

ಲ್ಲ ಕಡೆ ಬರ್ಡ್ ಫ್ಲೂ ಬಂದಿರೋ ಬಗ್ಗೆ ಸ್ಪೆಷಲ್ ಸ್ಟೋರಿ ಮಾಡಬೇಕೆಂದು ಕಬ್ಬನ್ ಪಾರ್ಕ್ ಕಡೆ ಅಮಾಸೆ ಅಡ್ಡಾಡುತ್ತಿದ್ದ ಎದುರಿಗೆ ಯಾರೋ ಮಫ್ಲರ್ ಸುತ್ತಿಕೊಂಡು ಕೆಮ್ತಾ ಬರೋದು ಕಣ್ಣಿಗೆ ಬಿತ್ತು. ಹತ್ತಿರ ಬಂದು ನೋಡಿದರೆ ಖಾಯಂ ಭಾವಿ ಸಿ.ಎಂ.ಯಡ್ಡಿ!

ಅಮಾಸೆ: ತಮಗ್ಯಾವ  ಫ್ಲೂ ಬಂದಿದೆ ಸಾರ್!

ಯಡ್ಡಿ: ಈಗಿನ್ನೂ ಡಾ.ಅನಂತ್ ಕುಮಾರ್ ಹತ್ರ ಹೋಗಿದ್ದೆ. “ನಿನಗೆ ಬಂದಿರೋದು ಗೌಡ್ಸ್ ಫ್ಲೂ. ಅದು ಈ ವರ್ಷ ವಾಸಿಯಾಗೋಲ್ಲ. ನಿಂಗೆ ಪವರ್ ಸಿಗಲ್ಲ” ಅಂತ ಪವರ್ ಫುಲ್ ಮಾತ್ರೆ ಕೊಟ್ಟವ್ರೆ. ಬೆಳಗ್ಗೆ, ರಾತ್ರಿ ಅನಂತವ್ರತ ಮಾಡೋಕೆ ಹೇಳವ್ರೆ… (ಕ್ಕುಕ್ಕುಕ್ಕು ಎಂದು ಕೆಮ್ಮುತ್ತಾ ಮುಂದೆ ಸಾಗುವರು).

ಅವರನ್ನು ಬೀಳ್ಕೊಟ್ಟು ಬರುತ್ತಿರುವಾಗ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮರದ ಕೆಳಗೆ ಕೂತು ಪೆನ್ ಮುರಿಯುತ್ತಿದ್ದುದು ಕಂಡು ಬಂತು! “ಯಾಕ್ಸಾರ್?” ಎಂದರೆ, ಹಾಳಾದ್ದು “ವರ್ಡ್ ಫ್ಲೂ ಬಂದಿದೆ. ಏನೂ ಬರೆಯೋಕಾಗ್ತಾ ಇಲ್ಲ” ಎಂದು ಮತ್ತೊಂದು ಪೆನ್ ಗಾಗಿ ತಡಕಾಡತೊಡಗಿದರು.

‍ಲೇಖಕರು avadhi

26 January, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading