ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬರಲಿದ್ದಾಳೆ ‘ಪೂತನಿ’

ನಾನು ನಿರ್ದೇಶಿಸುತ್ತಿರುವ ಹೊಸ ರಂಗ ರೂಪ.

ಬಯಲಾಟ..ದೊಡ್ಡಾಟ..ಅಟ್ಟದಾಟ..ಮ್ಯಾಳ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ‘ಮೂಡಲಪಾಯ ಯಕ್ಷಗಾನ’ ಮೂಲ ದ್ರಾವಿಡ ಜನಪದ ರಂಗದಿಂದ ಕವಲೊಡೆದ ವಿಶಿಷ್ಟ ‘ರಂಗ ವೈಭವ’ ಪಡವಲಪಾಯ ಯಕ್ಷಗಾನದ ಸೋದರಿಕೆ. ವಿಭಿನ್ನವಾದ ಶೈಲಿಯನ್ನು ಮೈಗೂಡಿಸಿಕೊಂಡು ಜನಪದ ರಂಗವನ್ನು ಶ್ರೀಮಂತಗೊಳಿಸಿದೆ ‘ ಮ್ಯಾಳ ‘

ನಾನು ಮ್ಯಾಳದಲ್ಲಿ ‘ಪೂತನಿ’ಯನ್ನು ರಂಗಕ್ಕೆ ತರುವವನಿದ್ದೇನೆ..

ಖ್ಯಾತ ಕಾದಂಬರಿಗಾರ್ತಿ ರಂಗ ಶಿಕ್ಷಕಿಯೂ ಆಗಿದ್ದ ಆಶಾ ರಘು ಅವರ ಮೂಲ ರಚನೆಯನ್ನು ಖ್ಯಾತ ಬರಹಗಾರರು. ರಂಗತಜ್ಞರೂ ಆದ ಪ್ರೊ.ತೋಂಟದಾರ್ಯ ಅವರು ‘ಮ್ಯಾಳ ಭಾಷೆ’ಗೆ ಅಳವಡಿಸಿದ್ದಾರೆ. ಉದಯೋನ್ಮುಖ ಕಲಾವಿದೆ ರಂಗ ನಿರ್ದೇಶಕಿ ನಿರ್ಮಲಾ ನಾದನ್ ಅವರು ‘ಪೂತನಿ’ ಆಗಿ ರಂಗದ ಮೇಲೆ ಬರಲಿದ್ದಾರೆ. ಹೆಸರಾಂತ ಯುವ ಭಾಗವತರಾದ ಅರಳಗುಪ್ಪೆ ಪುಟ್ಟಸ್ವಾಮಿ ಅವರು ಭಾಗವಂತಿಕೆ ಮಾಡಲಿದ್ದಾರೆ.

ಐದು ಭಾಷೆಗಳಲ್ಲಿ ‘ಪೂತನಿ’ ರಂಗದ ಮೇಲೆ ಬರಲಿದ್ದಾಳೆ.

ಆಗಸ್ಟ್ ೨ ೮ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನ ಇದೆ. ಪ್ರೋತ್ಸಾಹ ಧನ ಕೊಟ್ಟು ಕನ್ನಡದ ‘ಪೂತನಿ ಮ್ಯಾಳ’ ನೋಡಿ.

ನಿಮ್ಮೆಲ್ಲರ ಪ್ರೀತಿ ನನ್ನ ತಂಡದ ಮೇಲಿರಲಿ..

ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ರಂಗ ನಿರ್ದೇಶಕ

‍ಲೇಖಕರು Admin

16 July, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading