ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕೆಂಬ ಪಾಠಶಾಲೆ…

ಡಾ.ಪದ್ಮಿನಿ ನಾಗರಾಜು

ಅವಳ ಅ ಒಂದು ನೋಟ
ಕಣ್ಣ ಮುಂದಾಡಿತು
ಅವಳು
ಸಣ್ಣಗೆ ಗುನುಗುಡುತ್ತಲ್ಲಿದ್ದಳು

ನಾನು ಹಿಂಬಾಲಿಸಿ ಅತ್ತಿತ್ತ ಹುಡುಕಿದೆ
ಕಣ್ಣಾಮುಚ್ಚಾಲೆ ಆಡುತ್ತಾ ನಗುತ್ತಲಿದ್ದಳು

ದೀರ್ಘ ಸಮಯ ಕಾದ ಮೇಲೆ
ತನ್ನ ತೊಡೆಯ ಮೇಲೆ ಮಲಗಿಸಿ
ಮುದ್ದಿಸಿ ಹಾಗೇ ನೆತ್ತಿ ಸವರಿದಳು

ಇನ್ನೇನು ಈ ಜಗವೇ ಸುಂದರ
ಎಂದಾಕ್ಷಣ ಅವಳದೇನೋ
ಕಿರಿಪಿರಿ ಸಣ್ಣ ಮುನಿಸು
ತನ್ನದೇ ನಡೆಯಬೇಕೆಂಬ ಅಹಂ

ಮಾತು ಮೌನವಾಗಿದೆ
ನನ್ನಸಿರು ನನಗೇ ಭಾರವಾಗಿದೆ
ಅವಳ ಒಂದೇ ಮಾತಿಗೆ
ಭೂಮಿಯಂತೆ ಕ್ಷಮಿಸಲು ಕಾದೆ

ಅವಳಿಗಿನ್ನೂ ಅದೆಂತದ್ದೋ ಸಿಟ್ಟು
ಪ್ರೀತಿ ಮಾಸುವಷ್ಟು
ಬಿಸುಟು ದೂರವಾಗುವಷ್ಟು
ಹಳೆಯದೆಲ್ಲಾ ಕಡಲ ತೆರೆಯಂತೆ
ಮರೆಸುವಷ್ಟು

ನೀರ ಬಿಟ್ಟು ಹೊರಬಂದ ಮೀನಿನಂತಾದಾಗ
ಮೌನ ಮುರಿದು ನಾನೇ ಮಾತಾಡಿದೆ
ನಾವಿಬ್ಬರೇ ಕುಳಿತು
ನನ್ನ ಕೋಪಕ್ಕೆ ಕಾರಣ ಕೊಟ್ಟೆ
ಅವಳು ತನ್ನ ಮುನಿಸಿಗೆ
ವಿವರ ನೀಡಿದಳು

ನಾನು ಅವಳಿಗೆ ಕೇಳಿದೆ
ನನಗೇಕೆ ನೀನಿಷ್ಟು ನೋವು ಕೊಟ್ಟೆ
ಅವಳು ನಗುತ್ತಾ ಹೇಳಿದಳು
ಹುಚ್ಚಾ,
ನಾನು ಬದುಕು ‘ಬದುಕು’ವುದು ಹೇಗೆಂದು
ನಿನಗೆ ಕಲಿಸುತ್ತಿದ್ದೆ!!

‍ಲೇಖಕರು avadhi

13 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading