ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕು ಅಂದ್ರೆ ಇಷ್ಟೆನೇನೂ..

ಕೃಷ್ಣ


ಇವತ್ತು ನನ್ನ ಬೇರೆ ಎಲ್ಲಾದರೂ ಕರ್ಕೊಂಡು ಹೋಗೋ,,,, ಪಾರ್ಕು, ಸಿನಿಮಾ, ಯಾವುದೂ ಬೇಡ, //ಹಾಗಾದ್ರೆ ಇಲ್ಲೇ ಈ ಪುಟ್ಪಾತ್ ಮೇಲೆ ಕುಳಿತು ಹೋಗಿ ಬರೋ ಜನಗಳನ್ನ ನೋಡೋಣ ಕಣೆ ಮಜ ಇರುತ್ತೆ // ಥೂ… ನಿನ್ನ… ಎಂತಾ ಐಡಿಯ ನಿಂದು…. ಬೇಡ ಕಣೊ.. ನೋಡು ನಂಗೆ ಕ್ಲಾಸಿದೆ ಎರಡು ಗಂಟೆಗೆ ಹೊಗ್ಬೇಕು ನಾನು ಬೇಗ …ಕಣೋ// ಆಗ್ಲಿ ಒಂದು ಕಡೆ ಕರ್ಕೊಂಡು ಹೋಗ್ತಿನಿ ಆದ್ರೆ ನೀನು ಹೆದರಿ ಕೊಳ್ಳಬಾರದು . ನನ್ನ ನಂಬ್ತಿಯಾ, ನಾನು ಎಲ್ಲಿ ಕರ್ಕೊಂಡು ಹೊದ್ರು ಬರ್ತಿಯಾ // ನಿನ್ನ ನಂಬ್ತಿನಿ ಕಣೊ ಹೋಗೋಣ ಬಾ//………
ಇದೇನೂ ಇಲ್ಲಿಗೆ ಕರ್ಕೊಂಡು ಬಂದಿದ್ದಿಯಾ ಬೇಡ ಕಣೋ…… ನಂಗೆ ಒಂತರಾ ಆಗ್ತಾ ಇದೆ // ಮೊದಲು ಆಟೊದಿಂದ ಇಳಿ ಮಾರಾಯ್ತಿ ಆಮೇಲೆ… ಮಾತು // ಹೇ ಅದ್ಯಾಕೂ ಮುಸಿ ಮುಸಿ ನಗ್ತಾ ಇದ್ಯಾ ನಿನ್ನ ನಂಬಿದೀನಿ ಅಂತ ಹೇಳಿದ್ನಲ್ಲ. ನಿನ್ನ ತೋಳು ಹಿಡ್ಕೋತಿನಿ ಇರು. ಯಾಕೆ ನನ್ನ ಮೈಯಲ್ಲಾ ಸಣ್ಣದಾಗಿ ನಡಗ್ತಾ ಇದೆ,// ಸರಿ ನಿಂಗೆ ಈ ಜಾಗ ಬೇಡ ಅಂದ್ರೆ ಹೊಗೋಣ್ವಾ ವಾಪಸ್… ಅದ್ರೇ ಬಂದ ಮೇಲೆ. ಇಲ್ಲಿರುವುದರ ಅನುಭವ ಪಡೆದು ಹೋಗಬೇಕು ಅಂತ ನನ್ನ ಅನಿಸಿಕೆ. ಆದ್ರೆ ನಿನ್ನ ಬಲವಂತ ಮಾಡಲ್ಲ…….ಸರಿ ಹಾಗಾದ್ರೆ …. ಬಾ ಕಂಪಿಸ ಬೇಡ ನನ್ನ ತೋಳಿನಲ್ಲಿ ಅಡಗಿ ಕೊಂಡಂತೆ ಬರ್ತಿದಿಯಲ್ಲೇ …. ಹೆದರಿಕಿನಾ…// ………….
ನೀನು ಹೆಜ್ಜೆ ಇಡುವಾಗ ಹುಶಾರು ಕಣೆ ಇಲ್ಲಿ ಪ್ರತಿಯೊಂದು ಹೆಜ್ಜೆನೂ ಮುಖ್ಯ// ಇಲ್ಲಿ ಮಲಗಿರುವವರು ನಮಗೆ ತಿಳಿಯದವರು ಆದರೂ ಗೌರವಿಸಬೇಕು // ನಾನು ನಡಗ್ತಿದಿನೇನೊ //…
ನೋಡು ಇದು ತುಂಬಾ ಇತ್ತೀಚಿನದು. ಹುಟ್ಟಿದ ದಿನಾಂಕಕ್ಕೊ ಸತ್ತ ದಿನಾಂಕಕ್ಕೂ ಅಂತರ ಎಷ್ಟಿದೆ ಹೇಳು. ಕೇವಲ ಹದಿನಾರು ವರ್ಷ ಕಣೆ . ಹೆಸರು ಮುಖ್ಯ ಅಲ್ಲ. ಆ ಕಲ್ಲಿನ ಮೇಲೆ ಬರೆದಿರುವುದು ನೋಡು ” ನನ್ನ ಮೇಲೆ ಹೂವಿಡಬೇಡಿ . ನಾನು ಬದುಕಿದ್ದೇನೆ”.. ಮ್ ಮ್ ಬದುಕುವ ಆಸೆಯನ್ನು ಎಷ್ಟು ವ್ಯಕ್ತ ಪಡಿಸಿತ್ತೊ ಈ ಜೀವ…. ಸಾಯುವ ಮುನ್ನ … ಸಾವಿಗೊಂದು ಮುನ್ನುಡಿ ಇದ್ದಂತಿದೆಯಲ್ಲಾ//
ಎಷ್ಟಿರಬಹುದೊ ಇಲ್ಲಿ// ಇರಬಹುದು ಒಂದೈನೂರೂ , ಆರುನೂರು. ಗೊತ್ತಿಲ್ಲ ಕಣೆ// ಬಾ ಇಲ್ಲೇ ಕುಳಿತು ಕೊಳ್ಳೋಣ… ಅಲ್ಲಿ ನೋಡು ಕಾಣ್ತಾ ಇದಿಯ. ಆ ಮನುಷ್ಯನನ್ನ ಗುಂಡಿಯಲ್ಲಿಟ್ಟು ಪೂಜೆ ಮಾಡಿ ಮಣ್ಣು ಮುಚ್ಚತಾರೆ. ಆ ಮನುಷ್ಯ ಈ ಪ್ರಪಂಚದ ಅಳು,ನಗು,ದ್ವೇಷ,ಕೋಪ,ಅಸೋಯೆ,ಮೋಹ,ಪ್ರೇಮ, ಕಾಮ ಎಲ್ಲಾ ಅನುಭವಿಸಿ ಈಗ ತಣ್ಣಗಾಗಿದ್ದಾನೆ. ಆಕೆ ಅವನ ಹೆಂಡತಿ ಅವಳಿಗೆ ಹೂವಿನ ಹಾರ ಹಾಕಿ ಹರಿಶಿಣ ಹಚ್ಚಿ ಆ ಹೆಣಕ್ಕಿಂತ ಭಯಾನಕವಾಗಿ ಮಾಡಿದ್ದಾರೆ// ಮ್ ಬದುಕು ಅಂದ್ರೆ ಇಷ್ಟೆನೇನೂ//….
ಬಾ ಇವಾಗ….. ಇದರೊಳಗೆ ಹೋಗೋಣ ….
ನೋಡು ಈಗ ಆ ಹೆಣನ ಆ ವಿದ್ಯುತ್ ಚಿತಾಗಾರದ ಗೂಡಿನೊಳಕ್ಕೆ ಆ ಟ್ರಾಲಿನಲ್ಲಿಟ್ಟು ಒಳಗೆ ತಳ್ತಾನೆ ಅಲ್ಲಿಗೆ ಮುಗಿಯಿತು// …
ಬದುಕು ಅಂದ್ರೆ ಇಷ್ಟೆನೇನೂ // ಗೊತ್ತಿಲ್ಲ ಕಣೆ ನಂಗಂತೂ ಬದುಕೆಂದರೆ……. ಬದುಕಿದಷ್ಟು ದಿನ.. ಕೊನೆಗೆ ನಾನು ನೀನು ಎಲ್ಲಾ ಇಲ್ಲೆ ಬಂದು ಸೇರುತ್ತೇವೆ// ಬಾ ಇಲ್ಲೇ ಯಾವುದಾದ್ರು ಹೋಟೆಲ್ಗೆ ಹೋಗಿ ತಿಂಡಿ ತಿಂದ್ ಕೊಂಡು ಹೋಗೋಣ, ಅದ್ಯಾಕೂ ತುಂಬಾ ಹಸಿವಾಗ್ತಾ ಇದೆ.. ಏನೋ ಸಂಕಟ ಕಣೆ …..ನಮ್ಮಪ್ಪ , ಅಮ್ಮನ್ನ ಹೀಗೆ,… ಹೀಗೆ… ನೀನು ಈಗ ನೋಡಿದ್ಯಲ್ಲ….. ಹಾಗೆ ಸುಟ್ಟು ಬಿಟ್ಟೆವು.// ನಂಗೆ ತಿಂಡಿ ಬೇಡ ಕಣೋ…ಮ್ ಮ್ ಆದ್ರೆ ಕಾಪಿ ಕೊಡಿಸು ಸಾಕು//
ಬಾ ಹೊಗೋಣ ಹಿಂತಿರುಗಿ ನೋಡಬೇಡ ಆದರೆ ಮನಸ್ಸಿನಲ್ಲೇ ಈ ಜಾಗಕ್ಕೊಂದು ಗೌರವದಿಂದ ನಮಸ್ಕರಿಸು//
ಬದುಕು ಅಂದ್ರೆ ಇಷ್ಟೆನೇನೂ//…………….
 

‍ಲೇಖಕರು avadhi

17 February, 2013

4 Comments

  1. D.Ravivarma

    ಬದುಕು ಅಂದ್ರೆ ಇಷ್ಟೆನೇನೂ // ಗೊತ್ತಿಲ್ಲ ಕಣೆ ನಂಗಂತೂ ಬದುಕೆಂದರೆ……. ಬದುಕಿದಷ್ಟು ದಿನ.. ಕೊನೆಗೆ ನಾನು ನೀನು ಎಲ್ಲಾ ಇಲ್ಲೆ ಬಂದು ಸೇರುತ್ತೇವೆ// ಬಾ ಇಲ್ಲೇ ಯಾವುದಾದ್ರು ಹೋಟೆಲ್ಗೆ ಹೋಗಿ ತಿಂಡಿ ತಿಂದ್ ಕೊಂಡು ಹೋಗೋಣ, ಅದ್ಯಾಕೂ ತುಂಬಾ ಹಸಿವಾಗ್ತಾ ಇದೆ.. ಏನೋ ಸಂಕಟ ಕಣೆ …..ನಮ್ಮಪ್ಪ , ಅಮ್ಮನ್ನ ಹೀಗೆ,… ಹೀಗೆ… ನೀನು ಈಗ ನೋಡಿದ್ಯಲ್ಲ….. ಹಾಗೆ ಸುಟ್ಟು ಬಿಟ್ಟೆವು.// ನಂಗೆ ತಿಂಡಿ ಬೇಡ ಕಣೋ…ಮ್ ಮ್ ಆದ್ರೆ ಕಾಪಿ ಕೊಡಿಸು ಸಾಕು//
    ಬಾ ಹೊಗೋಣ ಹಿಂತಿರುಗಿ ನೋಡಬೇಡ ಆದರೆ ಮನಸ್ಸಿನಲ್ಲೇ ಈ ಜಾಗಕ್ಕೊಂದು ಗೌರವದಿಂದ ನಮಸ್ಕರಿಸು//
    ಬದುಕು ಅಂದ್ರೆ ಇಷ್ಟೆನೇನೂ……
    tumbaa arthapurna haagu chintanege hachhuva baraha….baduku andre iste eno….

  2. radha s talikatte

    gourava kodale beku !
    fbli share maadkondini dhanyavada krishna sir na dear avadhi

  3. Utham Danihalli

    Kisnana thumba thumba chenagidhe

  4. naithya

    super sir….. jivana andre ishtte….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading