ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಕುಲದ ಹೂಗಳ ಕವಿಯ ಜನುಮದಿನವಿಂದು..

 

 

 

 

 

ಗುಡಿಗೆ ಹೊರಟ ದಾರಿಯಲ್ಲಿ

ಹೆಜ್ಜೆಗೊಂದು ಹೂವಿದೆ

ಪುಣ್ಯ ಪಯಣ ಸಾರುವಲ್ಲಿ

ನಿಮಿಷಕೊಂದು ನೋವಿದೆ,

 

 

 

 

 

 

 

ಹೂಗಣ್ಣಿನಿಂದ ಜಗವನ್ನು ನೋಡುತ್ತ, ಮಧ್ವ – ಮಾರ್ಕ್ಸ್ ಎಂಬ ಎರಡು ಧ್ರುವಗಳ ಆಶಯವನ್ನು ಸಮನ್ವಯಗೊಳಿಸಿ ಮಿಥಿಲೆಯಾಗಿ,ಬಕುಲದ ಹೂಗಳ ಸ್ನಿಗ್ಧ ಸೌಂದರ್ಯದಿಂದ ತಂಬೆಲರ ಪಿಸು ಮಾತಿನಲ್ಲಿ ಕವಿತೆಗಳ ಬೆಳ್ಳಕ್ಕಿ ಹಿಂಡನ್ನೇ ಕಾಣಿಸಿದ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಜನುಮ ದಿನವಿಂದು.

ಕನ್ನಡ ಕಾವ್ಯ ಪರಂಪರೆಗೆ ತನ್ನದೇ ವಿಶಿಷ್ಟ ಧಾರೆಯನ್ನು ನೀಡಿದ ಎಕ್ಕುಂಡಿಯವರ ಕವಿತೆಗಳನ್ನು ಮತ್ತೆ ಮತ್ತೆ ಓದುವುದೇ ಒಂದು ವಿಶಿಷ್ಟ ಅನುಭವ.

ಎಕ್ಕುಂಡಿಯವರ ಬೆಳ್ಳಕ್ಕಿ ಹಿಂಡಿನಲ್ಲಿ ನಾವೂ ಜಗದಗಲ ಮುಗಿಲಗಲ ಸ್ವಚ್ಛಂದ ವಿಹರಿಸೋಣ..

‍ಲೇಖಕರು Avadhi GK

20 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading