ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂದೆ ಜೋಗಿ ಬಾ ಬಾರೋ ಜೋಗಿ ಏನ ಹೊತ್ತು ತಂದಿ…?

ಜೋಗಿ ಥೇಟ್ ದ ರಾ ಬೇಂದ್ರೆಯವರ ಜೋಗಿಯಂತೆಯೇ…. ಅವರ ಬರಹಗಳಂತೂ ಬೇಂದ್ರೆ ಹೇಳುವಂತೆ ‘ಜೇನು ತುಂಬಿ ತೊಟಗುಟ್ಟುತಾವ ಅದ ಬಯಸುತಾವ ಕಣ್ಣು…’

ಅವರು ಬರೆದದ್ದು ಹೇಗೋ ಅಂತೆಯೇ ಅವರ ಪುಸ್ತಕಗಳ ವಿನ್ಯಾಸವೂ ಸಹಾ. ‘ಜೋಗಿ ಕಥೆಗಳು’ ಹೊರ ಬಂದಾಗ ‘ಇದನ್ನು ನಾನು ಬರೆಯಬಾರದಿತ್ತು ಎಂದುಕೊಳ್ಳುತ್ತಿರುವಾಗಲೇ ಇದನ್ನು ನೀವು ಓದುತ್ತಾ ಇದ್ದೀರಿ’ ಎಂಬ ಹಣೆ ಪಟ್ಟಿ ಹೊತ್ತು ಬಂದಿತ್ತು. ಈಗ ನದಿಯ ನೆನಪಿನ ಹಂಗು ಬಂದಿದೆ. ಅದರ ಮುಖಪುಟದಲ್ಲಿ ಏನು ಹೇಳುತ್ತಾರೆ ನೋಡಿ… jogi_kadambari.jpg

ಆತ್ಮೀಯರೇ,

ನನ್ನ ಕಾದಂಬರಿಯೊಂದು ಪ್ರಕಟಣೆಗೆ ಸಿದ್ಧವಾಗುತ್ತಿದೆ. ಅದರ ಹೆಸರು ನದಿಯ ನೆನಪಿನ ಹಂಗು. ನಾನು ತುಂಬ ಹಿಂದೆ ಗೆಳೆಯ ಶಾಮಸುಂದರ್ ಪೋರ್ಟಲ್ಲಿಗೆ ಬರೆದ ಕಾದಂಬರಿ ಇದು. ಅಲ್ಲಿ ನನ್ನ ಹೆಸರು ಪ್ರಕಟವಾಗಿರಲಿಲ್ಲ. ಆಮೇಲೆ ಇದನ್ನು ನನ್ನದೇ ಬ್ಲಾಗಿನಲ್ಲಿ ಹಾಕಲು ಆರಂಭಿಸಿದೆ. ಅದೃಷ್ಟವಶಾತ್ ಅದನ್ನು ಪೂರ್ತಿಯಾಗಿ ಹಾಕವುದು ಸಾಧ್ಯವಾಗಲೇ ಇಲ್ಲ.

ಇದನ್ನು ತಾಂತ್ರಿಕ ಕಾರಣಗಳಿಗಾಗಿ ಕಾದಂಬರಿ ಎಂದು ಕರೆದಿದ್ದೇನೆ ಅಷ್ಟೇ. ಇದಕ್ಕೆ ಕಾದಂಬರಿಯ ಯಾವ ಗುಣವೂ ಇಲ್ಲ. ಅದು ನೆನಪಿನ ದಾಖಲೆಗಳಷ್ಟೇ. ನನ್ನ ನೆನಪಿಗೆ ದಕ್ಕಿದ್ದನ್ನು ಹಾಗ್ಹಾಗೇ ಬರೆದುಕೊಂಡು ಹೋಗಿದ್ದೇನೆ. ಓದುವ ಕುತೂಹಲ ಉಳಿಸಿಕೊಂಡದ್ದು ಗಾಢವಾಗಿ ತಟ್ಟುತ್ತದೆ ಅನ್ನುವುದು ಸುಳ್ಳು. ಗಾಢವಾಗಿ ಏನನ್ನೋ ಕಟ್ಟಿಕೊಡಲು ಹೊರಟಾಗ ಓದುವ ಕುತೂಹಲ ಉಳಿಸಿಕೊಳ್ಳುವುದು ಕಷ್ಟ.

ಕಾದಂಬರಿಗೆ ಅಪಾರ ಸೊಗಸಾದ ಮುಖಪುಟ ಮಾಡಿದ್ದಾರೆ. ಗೆಳೆಯ ಬಿ ಸುರೇಶ್ ಪ್ರಕಟಿಸುವ ಸಾಹಸ ಮಾಡುತ್ತಿದ್ದಾರೆ. ಕಾದಂಬರಿಗೆ ಬಿಡುಗಡೆಯಿಲ್ಲ. ಪುಸ್ತಕ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ಪುಸ್ತಕದಂಗಡಿಗಳಲ್ಲಿ ಸಿಗುತ್ತದೆ.

ಮುಂದಿನದು ದೇವರಾ ಚಿತ್ತ.

-ಜೋಗಿ

‍ಲೇಖಕರು avadhi

5 December, 2007

2 Comments

  1. G N Mohan

    ಜೋಗಿ
    ಕಂಗ್ರಾಟ್ಸ್
    ನೇತ್ರಾವತಿಯ ನೆನಪಲ್ಲಿ ನಾನೂ ಒಂಬತ್ತು ವರ್ಷ ನೆಂದಿದ್ದೇನೆ. ಅದು ಹರಿಯುವ ರೀತಿ, ಕಾಡುವ ಪರಿ ಗೊತ್ತಿದೆ. ಎಷ್ಟು ಒಳ್ಳೆಯ ಸಾಲು ಕೊಟ್ಟಿದ್ದೀರಿ. ಎಲ್ಲ ನದಿಗಳಿಗೂ ಕಡಲು ಎಂಬುದಿಲ್ಲ…. ವಾಹ್! ನೀವೆಂಬ ನದಿಗೂ ನಾನೆಂಬ ನದಿಗೂ ಹೀಗೆ ಕಡಲುಗಳೇ ಇಲ್ಲ…

  2. jogimane

    ಥ್ಯಾಂಕ್ಯೂ ಮೋಹನ್
    ತುಂಬ ಹೆದರಿಕೆಯಿಂದಲೇ ಪ್ರಕಟಿಸುತ್ತಿದ್ದೇನೆ. ನೀವೂ ನೇತ್ರಾವತಿ ಕಂಡವರು ಅಂದ ಮೇಲೆ ಭಯ ಜಾಸ್ತಿಯಾಗುತ್ತಿದೆ. ಯಾವುದಕ್ಕೂ ಓದಿ ಸರಾ.
    -ಜೋಗಿ
    ವಿಜಿಗೆ ಕೃತಜ್ಞತೆ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಕೂಡ.ಮತ್ತೇನು ಬರೆದಿರಿ. ಸಮ್ಮೇಳನದಲ್ಲಿ ಜೊತೆಗಿರೋಣ. ಉಡುಪಿಯೂ ತೀರ್ಥಕ್ಷೇತ್ರ ನೆನಪಿರಲಿ.
    -ಜೋಗಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading