ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಡಾರ ಪ್ರಕಾಶನದ ‘ಕನ್ನಡ ಆರಯ್ಪು’ ಸರಣಿ…

ಬಂಡಾರ ಪ್ರಕಾಶನ, ಮಸ್ಕಿ ಸಂಶೋದನೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವ ಸಂಶೋದಕರನ್ನು ಗುರುತಿಸುವ ಮತ್ತು ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಗುಣಾತ್ಮಕ ಸಂಶೋದನೆಯನ್ನು ಪ್ರೋತ್ಸಾಹಿಸುವ ಆಶಯದಿಂದ ಮಹತ್ವದ ‘ಕನ್ನಡ ಆರಯ್ಪು’ ಪುಸ್ತಕ ಸರಣಿಯನ್ನು ತರುತ್ತಿದೆ.

ಈ ಯೋಜನೆಗೆ ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಕಲೆ, ಸಾಹಿತ್ಯ, ಸಮಾಜ, ವ್ಯವಹಾರ, ವಿಗ್ನಾನ ಹೀಗೆ ಯಾವುದೆ ವಿಶಯಗಳಲ್ಲಿ ಯಾವುದೆ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದ ಕನ್ನಡದಲ್ಲಿ ಇರುವ ಸಂಶೋದನಾ ಪ್ರಬಂದಗಳನ್ನು ಪರಿಗಣಿಸಲು ಸಲ್ಲಿಸಬಹುದು. ಈಗ ೨೦೨೧ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದ ಸಂಶೋದನಾ ಪ್ರಬಂದಗಳನ್ನು ಯೋಜನೆಗೆ ಆಹ್ವಾನಿಸಿದೆ. ಉತ್ತಮವೆಂದು ಆಯ್ಕೆಯಾದ ಸಂಶೋದನಾ ಪ್ರಬಂದವನ್ನು ಪ್ರಕಾಶನದ ‘ಕನ್ನಡ ಆರಯ್ಪು’ ಸರಣಿಯಲ್ಲಿ ಪುಸ್ತಕ ರೂಪದಲ್ಲಿ ಆಯಾ ವರುಶ ಪ್ರಕಟಿಸಲಾಗುವುದು.

ಆಸಕ್ತರು ಮೊದಲ ಹಂತದಲ್ಲಿ ಸಂಶೋದನೆಯ ವಿಶಯ, ಅದರ ಮಹತ್ವ, ಸಂಶೋದನಾ ವಿದಾನ, ಕಂಡುಕೊಂಡ ಅಂಶಗಳು ಮೊದಲಾದ ವಿಶಯಗಳನ್ನು ಒಳಗೊಳ್ಳುವಂತೆ ಸಂಶೋದನಾ ಪ್ರಬಂದದ ಸಾರಾಲೇಕವನ್ನು ೫೦೦ ಶಬ್ದಗಳಲ್ಲಿ ಬರೆದು ಮಹಾಪ್ರಬಂದದ ಪರಿವಿಡಿಯೊಂದಿಗೆ ಕಳಿಸಿಕೊಡಬೇಕು. ಪದವಿ ಪ್ರಮಾಣಪತ್ರದ ಪ್ರತಿ, ಪ್ರಕಟಣೆಗೆ ವಿಶ್ವವಿದ್ಯಾಲಯದ ಒಪ್ಪಿಗೆ ಇರುವುದನ್ನು ಕಾತರಿ ಪಡಿಸುವ ವಿಶ್ವವಿದ್ಯಾಲಯದ ಇಲ್ಲವೆ ಮಾರ‍್ಗದರ‍್ಶಕರ ಪತ್ರದ ಪ್ರತಿ, ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಂಶೋದಕರ ಒಪ್ಪಿಗೆ ಪತ್ರ ಇವುಗಳನ್ನು ಕಡ್ಡಾಯವಾಗಿ ಜೊತೆಗೆ ಕಳಿಸಿಕೊಡಬೇಕು.

ಸಾರಾಲೇಕವನ್ನು ಎಪ್ರಿಲ್ ೧೫, ೨೦೨೨ರ ಒಳಗೆ ಕಳಿಸಿಕೊಡಬೇಕು. ಇವುಗಳಲ್ಲಿ ಉತ್ತಮವಾದ ಸಾರಾಲೇಕಗಳನ್ನು ಆರಿಸಿ ಸಂಶೋದಕರಿಗೆ ಮಹಾಪ್ರಬಂದವನ್ನು ಸಲ್ಲಿಸಲು ಮೇ ೫, ೨೦೨೨ರಂದು ವಯಕ್ತಿಕ ಈಮೇಲ್ ಅಯ್ಡಿಗೆ ಬರೆದು ಕೇಳಲಾಗುವುದು. ಸಂಶೋದನಾ ಪ್ರಬಂದವನ್ನು ಮೇ ೧೦, ೨೦೨೨ರ ಒಳಗೆ ಕಳಿಸಿಕೊಡಬೇಕು. ‘ಕನ್ನಡ ಆರಯ್ಪು’ ಸರಣಿಗೆ ಆಯ್ಕೆಯಾದ ಮಹಾಪ್ರಬಂದವನ್ನು ಮೇ ೩೦, ೨೦೨೨ರಂದು ಗೋಶಿಸಲಾಗುವುದು. ಮಹಾಪ್ರಬಂದವನ್ನು ೨೦೨೨ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸಾರಾಲೇಕ, ಸಂಶೋದನಾ ಪ್ರಬಂದ ಇವುಗಳನ್ನು ಸಲ್ಲಿಸಲು ಮತ್ತು ಮಾಹಿತಿಗೆ, ಇತರ ಯಾವುದೆ ಬಗೆಯ ಪತ್ರವ್ಯವಹಾರಗಳನ್ನು ಕೆಳಗಿನ ಈಮೇಲ್ ಅಯ್ಡಿ ಮೂಲಕ ಮಾಡಬಹುದು.

bandarakannadaaraypu@gmail.com

‍ಲೇಖಕರು Admin

30 March, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading