– ದಿನೇಶ್ ಕುಮಾರ್
ಡಬ್ಬಿಂಗ್ ಅಂದ್ರೆ ಹೇಲು-ಹಿಚಡಿ ಅನ್ನೋ ಕನ್ನಡ ಸಿನಿಮಾರಂಗದ ಪ್ರಭೃತಿಗಳು-ಪಂಡಿತರ ಮಧ್ಯೆ ಕನ್ನಡದ ಪ್ರತಿಭಾವಂತ ನಿರ್ದೇಶಕ ದುನಿಯಾ ಸೂರಿ ಆಡಿರುವ ಮಾತುಗಳು ನಿಜವಾದ ಎದೆಗಾರಿಕೆ ಇರುವ, ಸೃಜನಶೀಲ ಮನಸಿನ ಕಲಾವಿದ-ತಂತ್ರಜ್ಞರ ಅಭಿವ್ಯಕ್ತಿಯಂತಿದೆ. ಡಬ್ಬಿಂಗ್ ಬಂದ್ರೆ ನಾಶ ಆಗೋಗ್ತೀವಿ ಅನ್ನೋ ಅಂಜುಬುರುಕರ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಸ್ಪರ್ಧೆಗೆ ಒಡ್ಡಿಕೊಳ್ಳುವುದಕ್ಕೆ ತಯಾರಾಗಿರುವ, ಆತ್ಮವಿಶ್ವಾಸವುಳ್ಳ ನಿರ್ದೇಶಕರು ಇದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ. ಸೂರಿಯವರ ಈ ಮಾತುಗಳು ದಾಖಲಾಗಿರುವುದು ಏಪ್ರಿಲ್ ತಿಂಗಳ ಸಿನಿಗಂಧ ಪತ್ರಿಕೆಯಲ್ಲಿ. ಓವರ್ ಟು ಸೂರಿ….

“ಒಂದು ಗೆಲುವಿಗೋಸ್ಕರ, ಒಂದು ಸಿನಿಮಾ ಮಾಡುವುದಕ್ಕೋಸ್ಕರ ಅಷ್ಟೊಂದು ಕಷ್ಟಪಟ್ಟ ನಾವು ಇವತ್ತು ಸುಖದಲ್ಲಿ ಮುಳುಗಿಬಿಟ್ಟೆವಾ ಎಂಬ ಫೀಲ್ ಆಗುತ್ತೆ. ನಡೆಯುತ್ತೆ ಬಿಡು ಅನ್ನೋ ಧೋರಣೆ ಇದು. ಸತ್ಯ ಒಪ್ಪಿಕೊಳ್ಳುವುದಕ್ಕೆ ಏನಂತೆ? ಬೇರೆ ಭಾಷೆ ಚಿತ್ರರಂಗದಲ್ಲಿ ಇರೋ ಥರ ಇಲ್ಲಿ ಕ್ವಾಲಿಟಿ ಆಫ್ ಫಿಲ್ಮ್ ಮೇಕಿಂಗ್ ನಲ್ಲಿ ಸ್ಪರ್ಧೆ ಕೊಡೋರೇ ಇಲ್ಲ. ಫೈಟೇ ಇಲ್ಲ ಅಂದ್ರ ಮಜಾ ಇರಲ್ಲ ಇಂಡಸ್ಟ್ರೀಲಿ. ಪಕ್ಕದೂರಿನವರು ಮ್ಯಾಚ್ ಗೆ ಕರೆದರೆ ನಾವು ಹೋಗೋಲ್ಲ. ನಮ್ಮೂರಲ್ಲೇ ಈಸಿಯಾಗಿ ಬಾಲು ಹಾಕೋರು ಇದ್ದಾರೆ ಅಂತ ಒಂದು ಸರ್ಕಲ್ ಹಾಕ್ಕೊಂಡು ನಾವು ನಾವೇ ಆಡಿಕೊಂಡು ಕುಂತಿದ್ದೀವಿ. ಅವರತ್ರ ಒಳ್ಳೇ ಬೌಲರ್ ಗಳು ಇದ್ದಾರೆ ಅಂತ ಅವರ ಜತೆ ಮ್ಯಾಚ್ ಗೆ ಹೋಗಲ್ಲ ಅಂದ್ರೆ ಹೆಂಗೆ? ಇದು ಒಂದು ಸಲನಾದ್ರೂ ಉಲ್ಟಾ ಆಗಬೇಕು. ಬರಲಿ ಬಿಡಿ ಡಬ್ಬಿಂಗ್, ಹಂಗಾದ್ರೂ ಕಾಂಪಿಟೇಷನ್ ಶುರುವಾಗಲಿ. ನಮ್ ಚಿತ್ರಗಳ ಕಂಟೆಂಟು ಮತ್ತು ಕ್ವಾಲಿಟಿ ಇಂಪ್ರೂವ್ ಆಗುತ್ತೆ. ನಮಗೆ ತೋಚಿದಂಗೆ ಫಿಲ್ಮ್ ಮಾಡ್ತಾನೇ ಇದ್ರೆ ಒಂದು ದಿನ ಜನಾನೇ ನಮ್ಮನ್ನ ರಿಜೆಕ್ಟ್ ಮಾಡಿ ಬಿಸಾಕ್ತಾರೆ. ನೀವು ಸಿನಿಮಾ ಮಾಡಲೇಬೇಕು ಅಂತ ಯಾರೂ ನಮ್ಮ ಮನೆ ಮುಂದೆ ಕುಂತು ಸ್ಟ್ರೈಕ್ ಮಾಡ್ತಾ ಇಲ್ಲ. ಒಟ್ಟಾರೆ ಸಿನಿಮಾ ನೋಡುಗನಿಗೆ ಯಾವತ್ತೂ ಕೋಪ ಬರಿಸ್ಬಾರದು. ಅವರಿಗೆ ಕೋಪ ಬಂದ ದಿನ ನಾವು ಸರ್ವನಾಶ ಆಗ್ತೀವಿ.”






ಡಬ್ಬಿ೦ಗ್ ಬರಲಿ ಬಿಡಲಿ.. ಆದರೆ ಹಿ೦ದಿ ಧಾರವಾಹಿಗಳು ಯಥಾವತ್ತಾಗಿ ಕನ್ನಡಕ್ಕೆ ಭಾಷಾ(ಆವಾ)೦ತರ ಆಗಿ ತ೦ಗುಳನ್ನ ತಿನ್ನಿಸುತ್ತಿವೆ. ಝೀ ಹಿ೦ದಿಯ ಛೋಟಿ ಬಹು, ಪುನರ್ ವಿವಾಹ್ ಝೀ ಕನ್ನಡದಲ್ಲಿ ಬಡಿಸುತ್ತಿದ್ದಾರೆ.(ನನಗೆ ಗೊತ್ತಿರುವುದು ಎರಡೇ!!)
ಆ ಕಡೆ ನಾರ್ಸಿಸಿಸ್ಟ್ ಪರ್ಸನಾಲಿಟಿಗಳು. ಕೋಟ್ಯಾಧಿಪತಿ ವರ್ಸಸ್ ಬಿಗ್ ಬಾಸ್ ನಡುವೆ ಗೆಲುವಿನ ಮೇಲ್ವಿಚಾರದಲ್ಲಿ ಕನ್ನಡಿಗರು ಸೋತಿದ್ದಾರೆ. ನಿಮಿಷಕ್ಕೊ೦ದು ಬ್ರೇಕು. ತಮ್ಮನ್ನು ತಾವು ಹೊಗಳುವುದಕ್ಕೆ. ಸಿನೆಮಾ ಜೊತೆ ಕಿರುತೆರೆಯನ್ನೂ ಕಾಪಾಡಿ.
ಡಬ್ಬಿಂಗ್ ನಿಂದ ಕನ್ನಡ ಸಂಸ್ಕೃತಿ ಉಳಿಯಲ್ಲ ಎಂದು ಬೊಬ್ಬೆ ಹಾಕುವವರು ಬೇರೆ ಟೀಮಿನ ಬೌಲರ್ ಗೆ ಹೆದರಿಕೊಂಡವರೆ. ಸೂರಿಯವರ ಮಾತನ್ನು ಗಂಭೀರವಾಗಿ ಪರಿಗಣಿಸಿ ಸ್ಪರ್ಧೆಗೆ ತೆರೆದುಕೊಳ್ಳಬೇಕಾದ ಜರೂರು ಇದೆ. ಬೇರೆ ಭಾಷಿಕರು ಕನ್ನಡ ನೆಲದಲ್ಲಿ ಅವರ ಭಾಷೆಯ ಚಿತ್ರಗಳನ್ನು ವೀಕ್ಷಿಸುವುದರಿಂದ ಕನ್ನಡ ಕಲಿಯುವ ವಾತಾವರಣ ಎಲ್ಲಿಂದ ಬರುತ್ತದೆ? ಈ ನಿಟ್ಟಿನಲ್ಲಿ ಕನ್ನಡ ಚಿತ್ರೋಧ್ಯಮ ಕಾರ್ಯಪ್ರವೃತ್ತವಾಗುವುದು ಒಳಿತು.
…ಡಬ್ಬಿಂಗ್ ಬೇಕು. ನಾವು ಬರೆದಿದ್ದೇ ಕಥೆ, ಮಾಡಿದ್ದೇ direction ಅಂತ ನಮ್ಮ ಸುತ್ತ ನಾವೇ ಗೋಡೆ ಹಾಕ್ಕೊಂಡು ಸಿನಿಮಾ ಮಾಡಿದ್ರೆ ಕನ್ನಡಿಗರಾಧ್ರೂ ಎಷ್ಟು ದಿನಾಂತ ನೋಡ್ತಾರೆ? ಅವತಾರ್, ರೋಬೋ, ಜಿಂದಗಿ ನಾ ಮಿಲೆ ದುಬಾರಾ, ಪರದೇಶಿಯಂತ ಸಿನಿಮಾಗಳು ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಂದ್ರೆ ಎಷ್ಟು ಚೆಂದ ಅಲ್ವಾ?
ಸೂರಿ ಅವರ ಮಾತು ಅಕ್ಷರಷ: ಸತ್ಯ. ಈ ಹೊತ್ತು ಸಿನಿಮಾರ೦ಗದಲ್ಲಿ ಪೈಪೋಟಿ ಇದೆ ಎ೦ದರೆ ಅದು ಒಬ್ಬರನ್ನೋಬ್ಬರು ದೂಶಿಸುತ್ತಾ..ಕಾಲ ಹರಣ ಮಾಡುವುದರಲ್ಲೇ ತಮ್ಮ ವಯಸ್ಸನ್ನು ಕಳೆದುಕೊಳ್ಳುತ್ತಿದ್ದು..ಒಳ್ಳೆ ಸಿನಿಮಾಗಳು ಬೇರೆ ಬಾಷೆಗಳಲ್ಲಿ ಬರುತ್ತಿರುವುದು ಮತ್ತು ಅದರಲ್ಲಿರುವ ಕ೦ಟೆ೦ಟ್, ಮೆಸೇಜ್ ಜನಸಾಮಾನ್ಯರಿಗೆ ನಮ್ಮ ಭಾಷೆಯಲ್ಲಿ ಕೊಡುವುದು ತಪ್ಪೇನಲ್ಲ. ಪ್ರೇಕ್ಷಕರು ಯಾವುದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವುದನ್ನು ಸೂಕ್ಶ್ಮವಾಗಿ ಗಮನಿಸಿಕೊ೦ಡು ಅದನ್ನು ಡಬ್ಬಿ೦ಗ್ ಮಾಡಿದರೆ ತಪ್ಪೇನಿಲ್ಲ. ಇತ್ತಿಚಿನ ದಿನಗಳಲ್ಲಿ ಕಡಿಮೆ ಬಜೆಟ್ ನಲ್ಲಿ ಹೊಸ ಮುಖಗಳನ್ನು ಪರಿಚಯಿಸಿ ಗಲ್ಲಾಪಟ್ಟಿಗೆಯನ್ನೂ, ಪ್ರೇಕ್ಶಕರನ್ನೂ ಗೆಲ್ಲುತ್ತಿರುವ ತಮಿಳು ಮತ್ತು ಮಲೆಯಾಳಂ ಸಿನಿಮಾಗಳನ್ನು ಖ೦ಡಿತ ಕನ್ನಡ ಭಾಷಿಕರು ನೋಡಬೇಕು. ಕನ್ನಡದಲ್ಲಿ ಬರುತ್ತಿರುವ ಒಳ್ಳೇ ಸಿನಿಮಾಗಳನ್ನು ಉಳಿದ ಬೇರೆ ಭಾಷೆಗೂ ಡಬ್ಬಿ೦ಗ್ ಮಾಡುವ೦ಥ ವಾತಾವರಣ ಸೃಷ್ಟಿಯಾಗಬೇಕು. ಭಾಷೆ ಮತ್ತು ಸ೦ಸ್ಖೃತಿಗಳ ಕೊಡು ಕೊಳ್ಳುವಿಕೆಯಿ೦ದ ಸಿನಿಮಾಜಗತ್ತು ಮತ್ತಷ್ಟು ವಿಸ್ತೃತಗೊಳ್ಳುತ್ತದೆ. ಪರಸ್ಪರ ಅನುಭವ ಪಡೆದುಕೊಳ್ಳಲು ಸಹಕರಿಸುತ್ತದೆ. ಬಿ.ಎಮ್ ಶ್ರೀ ಹೇಳುವ೦ತೆ ಭಾಷೆ ಯಾವುದಾದರೇನು..ಅದರಲ್ಲಿರುವ ವಿಚಾರ ವಸ್ತು ಬದುಕಿಗೆ ಹತ್ತಿರವಾದರೆ..ಅದನ್ನು ಸ್ವೀಕರಿಸಬೇಕು. ಸೂರಿ ಅವರ ಕಳಕಳಿಗೆ ನಮ್ಮದು ಸಹಮತವಿದೆ.
Dubbing bandhare namma jana at least parabhaasha chitra galannu kannada dalli nodthaare…namma chitragalu chendhaagi ( without remake!!) barabahudhu…original stories barabahudhu…yeshtu dina reservation .? Enneshtu dina hedarikke?? Dubbing beda annorella Tamil, telugu, English bhaashegalannu chennagi ballavaru…Kannada bhaashe ondhe gothiruvavara vyaapthi yu hechali….
Nimma hero shivanige HeLi