ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಪಿಕ್ : ಈ ಬದುಕು ಇಷ್ಟೇನಾ? ಬಾಲ್ಯ, ಒಂದಷ್ಟು ಯೌವನ ಮತ್ತು…

ದಿಲಾವರ್ ರಾಮದುರ್ಗ

ಮಕ್ಕಳನ್ನು ಹೆರುವುದು ಸಹಜ ಧರ್ಮ. ಜೋಪಾನವಾಗಿ ಸಾಕಿ ಸಲಹುವುದೂ. ಮಕ್ಕಳು ಬೆಳೆದ ಮೇಲೆ ಅವರ ಹೆತ್ತವರು ಹೀಗೆ ಬೀದಿಗೆ ಬೀಳಲೇಬೇಕೇನು? ವೃದ್ಧಾಪ್ಯ ಈಗ ಭಯೋತ್ಪಾದನೆ, ಭ್ರಷ್ಟಾಚಾರಕ್ಕಿಂತ ದೊಡ್ಡ ಸಮಸ್ಯೆ. ಸಮಾಜ ಈ ತಪ್ಪನ್ನು ಸರಿಪಡಿಸಿಕೊಳ್ಳದೇ ನಾಡು ಕಟ್ಟಿಕೊಳ್ಳುವುದಾದರೂ ಹೇಗೆ?

ಈ ಹಿರಿ ಜೀವ ತನ್ನ ಮಕ್ಕಳು ಮಾಡಿರಬಹುದಾದ ಅನ್ಯಾಯಯವನ್ನು ಯಾರಲ್ಲೂ ಹೇಳಿಕೊಳ್ಳದೇ, ತನ್ನೆಲ್ಲ ಸಿಟ್ಟು, ಆಕ್ರೋಶವನ್ನು ಎಲ್ಲೋ ತಣ್ಣಗೆ ರಸ್ತೆ ಬದಿ ಕೂತು, ನೋಟ್ ಬುಕ್ಕಿನಲ್ಲಿ ಬರೆದುಕೊಳ್ಳುತ್ತಿದೆ. ಕಾಗದದ ಒಂದೇ ಮಗ್ಗುಲಲ್ಲಿ ಬರೆಯುವುದು. ದುಂಡಗಿನ ಅಕ್ಷರಗಳು. ಬರೆವಣಿಗೆಯ ಫ್ಲೋ ಅಬ್ಬಾ… ಒಂದಷ್ಟು ಸಮಯ ಇವಳು ಬರೆಯುವುದನ್ನೇ ನೋಡುತ್ತ ನಿಂತಿದ್ದೆ. ನಾನು ನಿಂತಿದ್ದರ ಪರಿವಿಯೇ ಇಲ್ಲದೇ ತನ್ನೊಳಗಿನ ಎಲ್ಲವನ್ನು ಆಕೆ ನೋಟ್ ಬುಕ್ ನಲ್ಲಿ ತೋಡಿಕೊಳ್ಳುತ್ತಿದ್ದಳು. ನನ್ನ ದೃಷ್ಟಿಯಲ್ಲಿ ಇದೇ ಒಂದು ಮಹಾ ಕಾದಂಬರಿ.

ಇದೆಲ್ಲ ಆಕೆಯ ವೈಯಕ್ತಿಕ ಬದುಕು, ಬವಣೆಯೇ ಆಗಿರಬಹುದು. ನನ್ನ ತಡೆದು ನಿಲ್ಲಿಸಿದ್ದು ಯಾವುದಾ ಭಾವ? ಅರೇ! ನನಗೂ ಒಬ್ಬ ತಾಯಿ ಇದ್ದಾಳೆ. ನಿಮಗೂ….
 

‍ಲೇಖಕರು G

24 February, 2014

2 Comments

  1. Anjali Ramanna

    ತಿಳಿದವರು ಹೇಳುತ್ತಾರೆ ಒಬ್ಬ ಮನುಷ್ಯನೇ ಒಂದು ಗ್ರಂಥಾಲಯದಂತೆ ಅಂತ…ಆದರೆ ನಾ ಯಾವಾಗಲೂ ಅಂದು ಕೊಳ್ಳುತಿರುತ್ತೇನೆ ಒಬ್ಬ ಮನುಷ್ಯ ಇಲ್ಲವಾದರೆ ಒಂದು ಜೆನೆರೇಷನ್ ಸತ್ತಂತೆ ಅಂತ….ಸರಿಯೋ ತಪ್ಪೋ ಎನ್ನುವ ಗೊಡವೆಗೆ ಬೀಳದೆ ನನ್ನ ಮನಸ್ಸು ಪ್ರತಿ ಬಾರಿಯೂ ತನ್ನ ಅನಿಸಿಕೆಯನ್ನೇ ಗಟ್ಟಿಗೊಳಿಸಿಕೊಳ್ಳುತ್ತೆ….ಈಗಲೂ ಹೀಗೇ ಆಯ್ತು… ! Anjali Ramanna

  2. h a patil

    – neevu bared barah mattu chitra mana kalakidavu. illiya samasye enendare namma deshad kountunbika vyavasthe shithila vaagutta saagide, ade reeti samaj mattu deshagala naithik adhapatana.naavu avyavastheyinda kuvyavastheyedege saagiddeve, baruva kaalave idannella saripadisabeku.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading