ಉಗಮ ಶ್ರೀನಿವಾಸ್
ಇಲ್ಲಿ ವಿಧವೆಯರನ್ನು ಹರಾಜು ಹಾಕುತ್ತಾರೆ ಎಂದರೆ ನಂಬುತ್ತೀರ?. ಗಡಿ ಭಾಗದ ತುಮಕೂರು ಜಿಲ್ಲೆ ಪಾವಗಡದಲ್ಲಿ ಇಂತದ್ದೊಂದು ಅಮಾನವೀಯ ಆಚರಣೆ ಇದೆ. ಇಂತಹ ಆಚರಣೆ ವಿರುದ್ಧ ಸಿಡಿದೆದ್ದ ಮಹಿಳೆ ಹೆಸರು ಹೆಬ್ಬಂಡೆ ನಾಗಮ್ಮ. ಈಕೆ ಅಕ್ಷರದ ಗಂಧ ಗಾಳಿಯೇ ಗೊತ್ತಿಲ್ಲದ್ದವಳು. ಗಂಡ ಸತ್ತರೆ ವಿಧವೆಯನ್ನು ಆಕೆಯ ಮಾವ ಹರಾಜಿಗೆ ಇಡುತ್ತಾನೆ. ಕೂಗಿದ ಹಣ ಈಕೆಯ ಮಾವನಿಗೆ ಹೋಗುತ್ತೆ. ಈಕೆ ಜೀತಕ್ಕೆ ಇರಬೇಕಾಗುತ್ತದೆ. ಹರಾಜಿಗೆ ಕೂಗಿಕೊಂಡವರು ಇವಳನ್ನು ಕರೆದುಕೊಂಡು ಹೋಗಲು ಬಂದಾಗ ಮಚ್ಚು ಹಿಡಿದು ಎಲ್ಲರನ್ನು ಹಿಮ್ಮೆಟ್ಟಿಸಿದ್ದ ದಿಟ್ಟೆ ಈಕೆ. ಜಿಲ್ಲಾಡಳಿತ ಕೂಡ ಈಕೆಯ ಧೈಯ೯ ಮೆಚ್ಚಿ ಈಕೆಗೆ ಆಶ್ರಯ ಯೋಜನೆಯಲ್ಲಿ ಮನೆ ಕೊಡುವುದಾಗಿಯೂ ಘೋಷಿಸಿತ್ತು. ಆದರೆ ಇಲ್ಲಿಯವರೆಗೂ ಕೊಡುವ ಪ್ರಯತ್ನ ಮಾಡಿಲ್ಲ. ಹಲವಾರು ವಷ೯ಗಳಿಂದ ಇದ್ದ ಅಮಾನವೀಯ ಆಚರಣೆ ವಿರುದ್ಧ ಸಿಡಿದೆದ್ದ ಈಕೆ ಬಟ್ಟೆ ಗುಡಿಸಿಲಿನಲ್ಲಿ ಇವತ್ತಿಗೂ ವಾಸಿಸುತ್ತಿದ್ದಾಳೆ. ಮಹಿಳಾ ಸಬಲೀಕರಣದ ಬಗ್ಗೆ ಸಕಾ೯ರದ ಹೇಳಿಕೆಗಳು ಬರೀ ಹೇಳಿಕೆಯಾಗಿಯೇ ಉಳಿಯುತ್ತಿದೆ ಅನಿಸುತ್ತಿದೆ. ನಿಮಗೆ?






idara bagge neevE nanage hELiddiri Ugama….naavu Enu maaDabEku? guide maaDi haage maaDi nyaaya dorakisikoLLONa.
priya ugama, eeke yava jatige seeridavaru? tilisi.nantara matanaduttene. m..9449974058.
🙁
ishte saladu dodda write up maadi
ಪ್ರತಿಭಾ ಮೇಡಂಗೆ–
ಕನ್ನಡಪ್ರಭ ದಲ್ಲಿ ದೊಡ್ಡ ಲೇಖನ ಮಾಡಿದ್ದೆ. ಮುಖಪುಟದಲ್ಲಿ ಕವರ್ ಆಗಿತ್ತು. ಮುರುಘಾಶರಣರು ನಾಗಮ್ಮಗೆ 15 ಸಾವಿರ ರು. ಕೊಟ್ಟು ಹೋಗಿದ್ದರು. ಆದರೆ ಆಕೆ ನಿವೇಶನ ನೀಡುವುದಾಗಿ ಬೊಬ್ಬೆ ಹೊಡೆದಿದ್ದ ಜಿಲ್ಲಾಡಳಿತ ಮಾತ್ರ ತೆಪ್ಪಗೆ ಕೂತಿದೆ.
NamBaLaGaDu, Ee KaLaDaLlu EnThaHa HoLaSu PaDdaTi, HoLaSu JaNa EDdaRe EnDu NamBLu.