ಉಷಾ ಕಟ್ಟೇಮನೆ
ಪೇಸ್ ಬುಕ್ ನಲ್ಲಿ agriculturist ಎಂಬ ಒಂದು ಗ್ರೂಪ್ ಇದೆ ಸ್ವತಃ ಕೃಷಕರೂ ಆಗಿರುವ ಉತ್ಶಾಹಿ ಯುವ ಪತ್ರಕರ್ತ Mahesh Puchchappady ಆರಂಭಿಸಿರುವ ಗ್ರೂಪ್ ಇದು. ಇದರಲ್ಲಿ ಈಗ ೧೫೫೨ ಮಂದಿ ಸದಸ್ಯರಿದ್ದಾರೆ. ಅತ್ಯಂತ ಗಂಭೀರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅಪರೂಪದ ಗ್ರೂಪ್ ಇದು. ಅಡ್ಮಿನ್ ಮಹೇಶ್ ಈ ಗ್ರೂಪನ್ನು ನಿರ್ವಹಿಸುವ, ಮುನ್ನಡೆಸುತ್ತಿರುವ ಪರಿ ನಿಜಕ್ಕೂ ಇತ್ರ ಗ್ರೂಪ್ ಗಳು ಅನುಸರಿಸುವಂತಿದೆ.
ಅಗ್ರಿಕಲ್ಚರ್ ಗ್ರೂಪ್ ಒಂದು ವರ್ಶ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ದ.ಕ ಜಿ
ಲ್ಲೆಯ ಪುತ್ತೂರಿನಲ್ಲಿ ಗೆಟ್-ಟುಗೆದರ್ ಅನ್ನು ಅವರು ಏರ್ಪಡಿಸಿದ್ದರು. ಆತ್ಮೀಯ ವಾತಾವರಣದಲ್ಲಿ ನಡೆದ ಆ ಸಂವಾದದಲ್ಲಿ ನಾನೂ ಪಾಲೊಂಡಿದ್ದೆ. ಅಡಿಕೆ ಪತ್ರಿಕೆಯ ಸಂಪಾದಕರಾದ ಶ್ರೀಪಡ್ರೆಯವರು ನಮಗೆಲ್ಲಾ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.
ಪೇಸ್ ಬುಕ್ ನಂತಹ ಸಾಮಾಜಿಕ ಜಾಲ ತಾಣದಲ್ಲಿ ಇಂತಹದೊಂದು ಗಂಭೀರ ಗ್ರೂಪನ್ನು ಹುಟ್ಟು ಹಾಕಿ,ಅದನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮಹೇಶ್ ಪುಚ್ಚಪಾಡಿಯವರಿಗೆ ಅಭಿನಂದನೆಗಳು.






ಅಭಿನಂದನೀಯ. ಫೆಸ್ ಬುಕ್ ನ್ನು ಸದುಪಯೋಗ ಪಡಿಸುಎಂದರೆ ಇದು. ಎಲ್ಲ ಕೃಷಿ ಮಿತ್ರರಿಗೂ ಶುಭಾಶಯಗಳು.