ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್‌ಬುಕ್ ಪಿಕ್ : ಹಾವೇರಿ ಗೋಲಿಬಾರ್ ಮರೆತುಬಿಟ್ಟಿರಾ ರಾಜಕಾರಣಿಗಳೇ?

ವೆಂಕನಗೌಡ ಪಾಟೀಲ್

ಮೊನ್ನೆ ಜೂನ್ 10, ಮನಸ್ಸಿನಲ್ಲಿ ಅದೆನೋ ಕಸಿವಿಸಿ, ಮರೆಯಬೇಕೆಂದರೂ ಆ ನೆನೆಪುಗಳು ಮತ್ತೆ ಮತ್ತೆ ಕಾಡಿದವು. ಅಂದು ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರಿಗೆ ಗುಂಡಿನ ಉತ್ತರ ನೀಡಿದ ಅಂದಿನ ನಿರ್ಲಜ್ಜ ಸರಕಾರ, ಪೊಲೀಸರ ಅಟ್ಟಹಾಸ, ಗುಂಡು ತಿಂದು ಇಂದಿಗೂ ನರಳುತ್ತಿರುವ ಅಮಾಯಕ ಜನರ ಆಕ್ರಂದನ ನನ್ನನ್ನು ಇಂದಿಗೂ ಕಾಡುತ್ತಿವೆ. ಉತ್ತಮವಾಗಿ ಸುರಿದಿದ್ದ ಮುಂಗಾರು ಮಳೆಯಿಂದ ಸಂತಸಗೊಂಡ ಅನ್ನದಾತರು ಭೂತಾಯಿಯ ಮಡಿಲು ತುಂಬಲು ಸಿದ್ದತೆ ನಡೆಸಿದ್ದರು. ಆಗಲೇ ಎದುರಾದದ್ದು ರಸಗೊಬ್ಬರ ಸಮಸ್ಯೆ.

ಅತ್ತ ಮುಂಗಾರು ಹಂಗಾಮು ಚುರುಕಾಗಿದ್ದರಿಂದ ಗೊಬ್ಬರಕ್ಕಾಗಿ ರೈತರು ಗೊಬ್ಬರ ಅಂಗಡಿಗಳು. ಎಪಿಎಂಸಿ, ಸಹಕಾರಿ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಆಗ ತಾನೆ ಅಧಿಕಾರ ಗದ್ದುಗೆ ಏರಿದ್ದ ಬಿಜೆಪಿ ಸರಕಾರ ಅಧಿಕಾರದ ಅಮಲಿನಲ್ಲಿ ಅನ್ನದಾತರಿಗೆ ಅಗತ್ಯವಾದ ರಸಗೊಬ್ಬರ ಪೂರೈಸುವುದನ್ನು ಮರೆತು, ಮಾನ್ಯ ಸನ್ಮಾನ, ಜಗದೀಶ ಶೆಟ್ಟರಗೆ ಸಚಿವ ಸ್ಥಾನ ಇಂತ ಗದ್ದಲಗಳಲ್ಲೇ ಮುಳುಗಿತ್ತು. ಹಾವೇರಿ ಕೃಷಿ ಪ್ರದಾನವಾದ ಜಿಲ್ಲೆ ಎಂಬ ಅರಿವಿದ್ದರೂ ಅಲ್ಲಿನ ಕೃಷಿ ಅದಿಕಾರಿಗಳು ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರದ ಬಗ್ಗೆ ಸಮರ್ಪಕ (ಇಂಡೆಂಟ್) ಬೇಡಿಕೆ ಸಲ್ಲಿಸಿರಲಿಲ್ಲ. ಇನ್ನೊಂದೆಡೆ ಹಾವೇರಿ ಜಿಲ್ಲೆಗಾಗಿಯೇ ರೈಲು ಮೂಲಕ ಬಂದಿದ್ದ ಅಲ್ಪಸ್ವಲ್ಪ ರಸಗೊಬ್ಬರ ದಾಸ್ತಾನು, ಶಿಕಾರಿಪುರಸ, ಹುಬ್ಬಳ್ಳಿಯ ಪುಢಾರಿ ಜನರ ಪಾಲಾಗಿತ್ತು. ಮತ್ತೊಂದೆಡೆ ಸಿಕ್ಕದ್ದೆ ಚಾನ್ಸು ಎಂಬಂತೆ ಹಾವೇರಿಯ ಗೊಬ್ಬರದಂಗಡಿಗಳ ರಕ್ತಪಿಪಾಸು ಕಾಳಸಂತೆಕೋರರು ಡಬ್ಬಲ್ಲ್ ದರಕ್ಕೆ ಗೊಬ್ಬರ ಮಾರಾಟ ಶುರುವಿಟ್ಟುಕೊಂಡರು.

ಇದೆಲ್ಲದರ ನಡುವೆ ಜಿಲ್ಲೆಯಾದ್ಯಂತ ಗೊಬ್ಬರಕ್ಕಾಗಿ ರೈತರು ಹಗಲು ರಾತ್ರಿ ಎನ್ನದೇ ಗೊಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತರು. ರೈತರ ಮಕ್ಕಳು ಶಾಲೆ ಬಿಟ್ಟು ಗೊಬ್ಬರ ಸರತಿಯಲ್ಲಿ ನಿಂತಿದ್ದರು. ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿತ್ತು. ನಿತ್ಯವೂ ಪ್ರತಿಭಟನೆ, ರಸ್ತೆ ತಡೆ, ಕ್ಲಲು ತೂರಾಟ, ಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಮೂಲಾಗಿತ್ತು. ಇಂತ ಕ್ಲಿಷ್ಕರ ಸಂದರ್ಭದಲ್ಲೂ ರೈತರನ್ನು ದೋಚುತ್ತಿದ್ದ ಕೆಲ ವರ್ತಕರು, ಟನ್ ಗಟ್ಟಲೇ ರಸಗೊಬ್ಬರವನ್ನು ಗೋದಾಮುಗಳಲ್ಲಿ ಮುಚ್ಚಿಟ್ಟು. ಹೊರಗಡೆ ನೋ ಸ್ಟಾಕ್ ಬೋರ್ಡ್ ಹಾಕುತ್ತಿದ್ದರು. ಆಗ ಗೊಬ್ಬರ ಪತ್ತೆ ಹಚ್ಚಿದ ರೈತರು ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದರು. ಆಗ ನೋಸ್ಟಾಕ್ ಬೋರ್ಡ್ ಹಾಕಿದ್ದ ದುರುಳರು ರೈತರ ನಮ್ಮ 30 ಲಕ್ಷ, 12 ಲಕ್ಷ ಬೆಲೆಬಾಳುವ ಗೊಬ್ಬರ ಲೂಟಿ ಮಾಡಿದ್ದಾರೆ ಎಂದು ದೂರು ನೀಡುತ್ತಿದ್ದರು. ಆದರೆ ಇದೆಲ್ಲವನ್ನು ನಿಬಾಯಿಸಬೇಕಿದ್ದ ಪೊಲೀಸರು ಮಾತ್ರ ನೋ ಸ್ಟಾಕ್ ಎಂದವನ ಅಂಗಡಿಯಲ್ಲಿ ಗೊಬ್ಬರ ಎಲ್ಲಿಂದ ಬಂತು, ಹೇಗೆ ಬಂತು ಎಂಬ ತನಿಖೆಯ ಗೋಜಿಗೆ ಹೋಗಲೇ ಇಲ್ಲ. ಬದಲಾಗಿ ಕಾನೂನು ಸುವ್ಯವಸ್ಥೆಯ ನೆಪದಲ್ಲಿ ರೈತರ ನಿಜವಾದ ಹೋರಾಟವನ್ನು ಬಗ್ಗು ಬಡಿಯಲು ಮುಂದಾದರು. ಲಾಠಿ, ಬೂಟುಗಳ ಮೂಲಕ ರೈತರನ್ನು ದಮನ ಮಾಡಲೆತ್ನಿಸಿದರು. ಈ ಎಲ್ಲ ಸ್ಥಿತಿ ಗೊತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಉದಾಸಿ ಮಾತ್ರ ಸಮಸ್ಯೆಯ ಬಗ್ಗೆ ಉದಾಸೀನತೆ ತೋರುತ್ತಲೇ ಹೋದರು.

ಯಾಕಂದ್ರೆ, ಪೊಲೀಸರು, ರಾಜಕಾರಣಿಗಳ, ಅದಿಕಾರಿಗಳ ಈ ನಡುವಳಿಕೆಗೆ ಕಾರಣ ಇಲ್ಲದಿಲ್ಲ. ಈ ಎಲ್ಲ ದುರುಳರ ತಂಡ ಕಾಳಸಂತೆಕೋರರು, ರಸಗೊಬ್ಬರ ಮಾಫಿಯಾದೊಂದಿಗೆ ಕೈಜೋಡಿಸಿದ್ದರು. ಇದರಲ್ಲಿ ಹೆಸರಿಗೆ ಬಿಜೆಪಿ ಮುಂಚೂಣಿಯಲ್ಲಿದ್ದರೂ, ಕಾಂಗ್ರೆಸ್, ಜೆಡಿಎಸ್ ನ ಕುಳಗಳು ತೆರೆಮರೆಯಲ್ಲಿ ರೈತರ ಲೂಟಿಗೆ ಕುಮ್ಮಕ್ಕು ನೀಡುತ್ತಿದ್ದವು. ಹಾವೇರಿ ಜಿಲ್ಲೆಯಲ್ಲಿ ಯಾವ್ಯಾವ ಪಕ್ಷಗಳ ಮುಖಂಡರು ಎಷ್ಟು ರಸಗೊಬ್ಬರ ಅಂಗಡಿ ಇಟ್ಟುಕೊಂಡಿದ್ದಾರೆ ಎಂದು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ದೇಶಕ್ಕೆ ಅನ್ನ ನೀಡುವ ಅನ್ನದಾತ ಈ ಎಲ್ಲರಲ್ಲಿ ಕೇಳಿದ್ದು ಒಂದೇ… ನಮಗೆ ರಸಗೊಬ್ಬರ ಕೊಡಿ, ನ್ಯಾಯಯುತ ಬೆಲೆಯಲ್ಲಿ ಕೊಡಿ, ಲೂಟಿಯನ್ನು ನಿಲ್ಲಿಸಿ ಎಂದು. ಆದರೆ ರೈತರ ಅಳಲನ್ನು ಕೇಳಿಸಿಕೊಳ್ಳಲು ವ್ಯವದಾನವೂ ಇಲ್ಲದ ಈ ಜನ, ಪೊಲೀಸರ ಲಾಠಿ, ಬೂಟು, ಬಂದೂಕಿನ ಮೂಲಕ ರೈತರನ್ನು ದಮನ ಮಾಡಲು ಮುಂದಾಯ್ತು. ಆದರೆ ಆಗಲೇ ಎಲ್ಲವನ್ನು ಕಳೆದುಕೊಂಡಿದ್ದ ರೈತರು ಆಳುವ ಸರಕಾರ ದುಷ್ಟಕೂಟದ ವಿರುದ್ಧ ತಿರುಗಿಬಿದ್ದರು. ಆಗ ಪೋಲೀಸರು ಗುಂಡಿನ ದಾಳಿ ನಡೆಸಿ ಸಿದ್ದಲಿಂಗಪ್ಪ ಚೂರಿ, ಪುಟ್ಟಪ್ಪ ಹೊನ್ನತ್ತಿ ಎಂಬ ಇಬ್ಬರು ರೈತರನ್ನು ಬಲಿತೆಗೆದುಕೊಂಡರು.

ಅಂದಿನ ಕೆಲವು ಘಟನೆಗಳು- ಇಂದಿಗೂ ಕಾಡುತ್ತಿವೆ. ಕೇಂದ್ರ ಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಉದಾಸಿ ವಿಜಯ ಕರ್ನಾಟಕದ ಹೊಸ ಕಚೇರಿ ಉದ್ಗಾಟನೆಗೆ ಬಂದಿದ್ದರು. ಆಗ ಸಮಯ- 9-30ಗಂಟೆ. ಈ ಸಂದರ್ಭದಲ್ಲಿ ರೈತರ ತಂಡವೊಂದು ಸಚಿವರು ಬಂದು ಸಮಸ್ಯೆ ಬಗೆಹರಿಸಲು ಗೋಗರೆದರು.ಆದ್ರೆ ಉದಾಸಿ ಮಾತ್ರ ಅವರ ಅಳಲನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಮದ್ಯಾಹ್ನ 1 ಗಂಟೆ ಸಚಿವರ ಪತ್ರಿಕಾಗೋಷ್ಠಿ ಇತ್ತು. ಇನ್ನೊಂದೆಡೆ ಅದೇ ಸಮಯಕ್ಕೆ ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ವಿರುದ್ಧ ಬಿಜೆಪಿಯ ಪ್ರತಿಭಟನೆ ಶಾಸಕ ನೇಹರು ಓಲೇಕಾರ ನೇತತ್ವದಲ್ಲಿ ನಡೆಯುತ್ತಿತ್ತು. ಈ ಪ್ರತಿಭಟನೆಗಾಗಿ ಬಿಜೆಪಿ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ಸರ್ಕಲ್ ನಲ್ಲಿ ಟೈರ್ ತಂದುಹಾಕಿದ್ದರು. ಈ ಸಂದರ್ಭದಲ್ಲೇ ರೈತರು ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಶಾಸಕರು ವಾಪಸ್ಸಾಗುತ್ತಿದ್ದಂತೆ, ಸ್ವಾಮಿ ನಿಷ್ಟೆಗಾಗಿ ಪೊಲೀಸರು ರೈತರ ಮೇಲೆ ಮನಬಂದಂತೆ ಲಾಠಿಚಾರ್ಜ್ ಮಾಡಿದ್ರು. ಆಗ ಕೆಲ ರೈತರು ತಿರುಗಿ ಬಿದ್ರು. ಅವರನ್ನು ಮಣಿಸಲು ಪೊಲೀಸರು ಮತ್ತೆ ಮತ್ತೆ ಲಾಠಿಪ್ರಹಾರ ಮಾಡಿದ್ರು. ಕಾಯುವವರೆಗೆ ಕ್ರೂರವಾಗಿ ವರ್ತಿಸಿದಾಗ ರೈತರಾದ್ರೂ ಎಷ್ಟು ತಡೆದಾರು. ಕೊನೆಗೆ ರೈತರು ತಿರುಗಿ ಬಿದ್ರು. ಪೊಲೀಸರ ಮೇಲೆ ಕಲ್ಲು ತೂರಿದರು. ಇದನ್ನೇ ನೆಪವಾಗಿಟ್ಟುಕೊಂಡ ನಿರ್ಧಯಿ ಪೊಲೀಸರು ರೈತರ ಮೇಲೆ ಗುಂಡಿನ ಸುರಿಮಳೆ ಗರೆದ್ರು. ಆಗ ನಡೆಯಬಾರದ ಘಟನೆಯೊಂದು ನಡೆದು ಹೋಯಿತು. ಇಬ್ಬರು ರೈತರು ಬಲಿಯಾದರು. 11 ಜನ ಅಮಾಯಕರು ಪೊಲೀಸ ಗುಂಡೇಟು ತಿಂದು ಇಂದಿಗೂ ನರಳುತ್ತಿದ್ದಾರೆ. ನೂರಾರು ಜನ ಸುಳ್ಳು ಕೇಸುಗಳಲ್ಲಿ ಜೇಲು ಸೇರಿ ಜಾಮೀನು ಮೇಲೆ ಬಂದು, ನ್ಯಾಯಾಲಯಕ್ಕೆ ಅಲೆದು ಅಲೆದು ಹಿಂಸೆ ಅನುಭವಿಸಿದ್ದಾರೆ.

ಗಾಯಾಳುಗಳಲ್ಲೊಬ್ಬ ಅಬ್ದುಲ್ ರಝಾಕ್- ಅಬ್ದುಲ್ ರಝಾಕ್. ಗೇಣುದ್ದ ಹೊಲ ಇಲ್ಲ, ಬೆನ್ನಹಿಂದೆ ಮನೆಯೊಂದ್ನನು ಬಿಟ್ಟು, ಚಿಕ್ಕಾಸಿನ ಆಸ್ಥಿ ಇಲ್ಲ. ಬಡತನಕ್ಕೆ ಹಸಿವು ಜಾಸ್ತಿ ಎಂಬಂತೆ ಈತನಿಗೆ ನಾಲ್ಕು ಜನ ಹೆಣ್ಣುಮಕ್ಕಳು. ನಿತ್ಯವೂ ಎತ್ತಿನ ಬಂಡಿ ಜೊತೆ ಹಾವೇರಿಗೆ ಹೋಗಿ ಹಮಾಲಿ ಮಾಡಿ ಕುಟುಂಭದ ಹೊಟ್ಟೆಯ ಹಸಿವು ನೀಗಿಸುತ್ತಿದ್ದ ಅಬ್ದುಲ್ ರಝಾಕ್. ಆದ್ರೆ ಈ ನತದೃಷ್ಟ ಜೂನ್ 10- 2008ರಂದು ಹಾವೇರಿಯ ಬಸ್ ಸ್ಟಾಂಡ್ ಬಳಿ ಹಮಾಲಿಗಾಗಿ ಕಾಯುತ್ತಿದ್ದ. ಅದೇ ಸಮಯಕ್ಕೆ ರೈತರು ಮತ್ತು ಪೊಲೀಸರ ನಡುವೆ ಯುದ್ದ ಆರಂಭವಾಗಿತ್ತು. ಆಗ ಏನು ಅರಿಯದ ಈತನ ಮೇಲೆ ಪೊಲೀಸರು ಗುಂಡು ಹಾರಿಸಿದರು. ಪರಿಣಾಮ. ಈತ ಈಗ ಶಾಶ್ವತ ಅಂಗವಿಕಲನಾಗಿದ್ದಾನೆ. ಹೀಗೆ ಎಲ್ಲ ಗಾಯಾಳುಗಳದ್ದು ಒಂದು ರೀತಿಯ ಕಣ್ಣೀರಿನ ಕಥೆಯೇ ಇದೆ. ಆದ್ರೆ ಎಲ್ಲವನ್ನು ಬರೆಯಲು ಆಗುತ್ತಿಲ್ಲ. ಈಗಲೂ ಬದುಕಿಗಾಗಿ ಪರದಾಡುತ್ತಿರುವ ಇವರಿಗೆ ಸರಕಾರ ಪರಿಹಾರದ ರೂಪದಲ್ಲಿ ಪುಡಿಗಾಸು ನೀಡಿ ಕೈತೊಳೆದುಕೊಂಡಿದೆ. ಇವರಿಗೆ ನ್ಯಾಯ ದೊರಕಿಸಲು ಅಂದು ಬಂದಿದ್ದ ಜನ ? ಈಗ ಯಾವ ಚುನಾವಣೆಯೂ ಇಲ್ಲ. ಮತ್ತು ಇದೊಂದು ಔಟ್ ಡೆಟೆಡ್ ಇಶ್ಯೂ ಎಂದು ಸುಮ್ಮನಾಗಿದ್ದಾರೆ. ಅಂದು ಮೊಸಳೆ ಕಣ್ಣೀರು ಸುರಿಸಿದ್ದ ಯಡಿಯೂರಪ್ಪ, ಬೊಮ್ಮಾಯಿ, ಕಾಂಗ್ರೆಸ್ ನ ಅದಿನಾಯಕುರು, ಜೆಡಿಎಸ್ ನ ಕುಮಾರಸ್ವಾಮಿ. ಹಲವು ಸಂಘ ಸಂಸ್ಥೆಗಳು. ಇವರಾರಿಗೂ ಈಗ ಈ ಜನರ ಬದುಕು ಹೇಗೆ ನಡೆದಿದೆ ಎಂಬುದು ಬೇಕಿಲ್ಲ. ಅದಕ್ಕಾಗಿ ಅವರು ಇತ್ತ ತಿರುಗಿಯೂ ನೋಡುತ್ತಿಲ್ಲ.

ಆದ್ರೆ ಮಾದ್ಯಮದವರು ಮಾತ್ರ ಜೂನ್ 10 ಬಂದಾಗ ಈಗಲೂ ವರದಿಗಳನ್ನು ಮಾಡುತ್ತಾರೆ. ನಾನು ಚೆನ್ನಾಗಿ ಬರೆದೆ, ನನಗೆ ಉತ್ತಮ ಪ್ರತಿಕ್ರೀಯೆ ಸಿಕ್ತು ಎಂದು ಪರಸ್ಪರ ಚರ್ಚೆ ಮಾಡ್ತಾರೆ. ಆದ್ರೆ, ಗುಂಡು ತಿಂದವರು ಬದುಕು ಮಾತ್ರ ಇಂದಿಗೂ ದಯನೀಯವಾಗಿದೆ.

ದುಷ್ಠ ಆಡಳಿತಕೂಟ, ಪುಂಡ ಪೊಲೀಸರು, ಪುಡಿಗಾಸಿಗಾಗಿ ರೈತರ ರಕ್ತ ಹಿರುವ ರಕ್ತಪಿಪಾಸು ಅಧಿಕಾರಿಗಳು, ಸಿಕ್ಕರೆ ಸಾಕು ಸಿಕ್ಕಷ್ಟು ದೋಚೋಣ ಎನ್ನುವ ದಲ್ಲಾಳಿ ವರ್ತಕರು, ನ್ಯಾಯಪ್ರಜ್ಞೆ,ರೈತರ ಹಿತಕ್ಕಿಂತ ಆಳುವವರ, ಜಾಹಿರಾತುದಾರರ ಹಿತವೇ ಮುಖ್ಯ ಎಂಬ ಇಬ್ಬಗೆಯ ನೀತಿ ಹೊಂದಿರುವ ಮಾದ್ಯಮಗಳು. ಈ ಎಲ್ಲ ದುಷ್ಟಕೂಟದ ನಡುವೆ ಹಾವೇರಿ ಗೋಲಿಬಾರ ಸಂತ್ರಸ್ಥರಿಗೆ ನ್ಯಾಯ ಎಂಬುದು ಈಗಲೂ ಮರೀಚಿಕೆಯಷ್ಟೆ. ಗುಂಡು ತಿಂದವರು ಇಂದಿಗೂ ನರಕಯಾತನೆ ಅನುಭವಿಸುತ್ತಿದದ್ದಾರೆ. ನಾನು ಆಗಾಗ ಈ ನೊಂದ ಜನರನ್ನು ಕಂಡುಬರುತ್ತಿದ್ದೇನೆ.

ಹೀಗಾಗಿ ಮೊನ್ನೆ ಜೂನ್ 10 ಬಂದಾಗ, ಹಾವೇರಿ ಗೋಲಿಬಾರ ಘಟನೆ, ಈ ನೊಂದ ಜನ, ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿದ್ದ ದುಷ್ಟಕೂಟ. ರೈತರ ವೇಷ ಹಾಕಿಕೊಂಡು ರೈತರನ್ನು ತುಳಿಯಲು ಹೊಂಚು ಹಾಕುತ್ತಿದ್ದ ಪೊಲೀಸ್ ಅಧಿಕಾರಿಗಳು, ಮೊಸಳೆ ಕಣ್ಣೀರಿಟ್ಟ ಬೇಜವಾಬ್ದಾರಿ ಯಡಿಯೂರಪ್ಪ, ಇದೆಲ್ಲವೂ ನನ್ನ ಮನಸ್ಸಿನಲ್ಲಿ ಒಂದು ಕ್ಷಣ ಬಂದುಹೋದವು. ಮನಸ್ಸು ತಡೆಯಲಿಲ್ಲ. ಅದಕ್ಕಾಗಿ ನನ್ನ ಅಂದಿನ ಅನುಭವವನ್ನು ಇಷ್ಟು ಧೀರ್ಘವಾಗಿ ಬರೆಯಬೇಕಾಯಿತು. ಹಾವೇರಿ ಗೋಲಿಬಾರ ಕುರಿತು ಅದೆಷ್ಟು ಹೇಳಿದ್ರೂ, ಬರೆದ್ರೂ ನನ್ನ ಮನಸ್ಸಿಗೆ ಮಾತ್ರ ಸಮಾದಾನ ಅನಿಸೋಲ್ಲ. ಯಾಕಂದ್ರೆ ನಮ್ಮದೇ ಬಂಧುಗಳಾದ ಪೊಲೀಸರು ಅಂದು ರೈತರೊಂದಿಗೆ ಬ್ರೀಟಿಷರಿಗಿಂತಲೂ ಕ್ರೂರವಾಗಿ ವರ್ತಿಸಿದರು. ಆದ್ರೆ ಅದೆಲ್ಲವನ್ನು ಜಗನ್ನಾಥಶೆಟ್ಟಿ ಆಯೋಗದ ವರದಿಯ ಹೆಸರನಿಲ್ಲ ಯಡಿಯೂರಪ್ಪ ಸರಕಾರ ಮುಚ್ಚಿಹಾಕಲು ಯತ್ನಿಸಿತು. ಆದ್ರೆ ಊರು ಸುಟ್ಟರೂ, ಆ ಊರಿನ ನೆನಪು ಮಾತ್ರ ಮತ್ತೆ ಮತ್ತೆ ಮರುಕಳಿಸತ್ತೆ. ಹಾವೇರಿ ಗೋಲಿಬಾರ್ ಬಿಜೆಪಿ ಹಾಗೂ ಯಡಿಯೂರಪ್ಪನವರಿಗೆ ಎಂದೆಂದಿಗೂ ಕ್ಪಪು ಚುಕ್ಕೆಯಾಗಿಯೇ ಉಳಿಯುತ್ತದೆ.

ಫೇಸ್ ಬುಕ್ ನಲ್ಲಿ ಇಷ್ಟೊಂದು ಧೀರ್ಘವಾಗಿ ಬರೆಯಬೇಕೊ ಬೇಡವೋ ಗೊತ್ತಿಲ್ಲ. ಆದ್ರೂ ಬರೆದಿದ್ದೇನೆ. ಪ್ರೀತಿಯಿಂದ ಓದಿ, ಮುಕ್ತ ಅಭಿಪ್ರಾಯ ನೀಡಿ.

 

‍ಲೇಖಕರು avadhi

20 June, 2013

2 Comments

  1. narayanaswamy kempaiah

    baredaddu tappilla Patilre. nijakkoo adondureetiya Jlianwallabagh. Policeru hakiruva case sullendu anthakarnaviruva Judgegalu teermana needuvanthagali. A dikkinalli nimma prayathnakke nanna bembala, shahakara iruttade. dayamadi omme beti madi.

  2. ತುಳುವ

    ತನ್ನ ಪಾಡಿಗೆ ಬೇಸಾಯ ಮಾಡಿ ನಾಡಿಗೆ ಅನ್ನ ಕೊಡುತ್ತಿದ್ದ ರೈತನಿಗೆ ರಸಗೊಬ್ಬರ ಪರಿಚಯಿಸಿದರು. ಅದಿಲ್ಲದೆ ಬೇಸಾಯವೇ ಸಾಧ್ಯವಿಲ್ಲ ಎನ್ನುವ ಹಾಗಯಿತು. ಇತ್ತ ಬೀಜಗಳನ್ನೂ ಕಾರ್ಪೋರೆಟ್ ಕಂಪನಿಗಳಿ೦ದಲೆ ಖರೀದಿಸುವ ಪರಿಸ್ತಿತಿ. ಸ್ವಾವಲಂಬಿಯಾಗಿದ್ದ ರೈತನನ್ನು ಎಂಥಾ ಪರಿಸ್ತಿತಿಗೆ ತಂದು ನಿಲ್ಲಿಸಿದ್ದೇವೆ ನೋಡಿ.
    ಈಗ ಏನಿದ್ದರೂ ೧ ರು. ಗೆ ಅಕ್ಕಿ ಕೊಡುವ ಕಾಲ. ಬೆಳೆದ ರೈತನ ಕಷ್ಟ ಯಾರಿಗೆ ಬೇಕು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading