ರಾಘವೇಂದ್ರ ಜೋಶಿ

ಜಪಾನಿ ಕವಿ ಮಾಟ್ಸೋ ಬಾಶೋ ನಿಸರ್ಗದಲ್ಲಿನ ಕೌತುಕಗಳಲ್ಲಿ,ಅಲ್ಲಿನ ಸೂಕ್ಷ್ಮಾತಿಸೂಕ್ಷ್ಮ ಘಟನೆಗಳಲ್ಲೂ ಒಂದಿಷ್ಟು ಅಚ್ಚರಿಗಳನ್ನು ಹುಡುಕುವ ಮನುಷ್ಯ. ‘ಥತ್ತೇರಿಕಿ,ಇದರಲ್ಲೇನು ಮಜ ಇದೆ?’ ಅಂತ ನಾವೆಲ್ಲ ignore ಮಾಡಬಲ್ಲ ಅನೇಕ ಸಂಗತಿಗಳಿಗೆ ಈ ಪುಣ್ಯಾತ್ಮ ಹೊಸ ರೂಪರೇಷೆಗಳನ್ನು,ಹೊಸ ಆಯಾಮಗಳನ್ನು ಕೊಡಬಲ್ಲ. ಕಣ್ಣೆದುರಿಗೆ ಕಾಣುವ ಸಣ್ಣ ಸಣ್ಣ ಘಟನೆಗಳನ್ನು ಅನುಭವಿಸಲು ಕಣ್ಣಿದ್ದರಷ್ಟೇ ಸಾಲದು; ಅದೃಷ್ಟವೂ ಬೇಕು-ಎನ್ನುವ ಕವಿವಾಣಿಗೆ ಬಾಶೋ ಅದು ಹೇಗೆ ಸಾಥ್ ಕೊಡುತ್ತಾನೆ ನೋಡಿ:
ಯಾವ ಕರ್ಮವೋ
ಇದ್ಯಾತರ ಕತೆಯೋ
ಭೂತದ ಗುಡ್ಡದ
ಹೊಲದಲ್ಲಿ
ಇನ್ಯಾವ ಪಿಳ್ಳೆ
ಬರುತ್ತೆ ಅಂತ
ಬೆರ್ಚಪ್ಪನನ್ನು
ನಿಲ್ಲಿಸಿರುವರೋ!
ಮೊದಲೇ ಇದರ ಹೆಸರು ಭೂತದ ಗುಡ್ಡ.ಅಂದಮೇಲೆ ಇಲ್ಯಾರೂ ಬರಲಿಕ್ಕಿಲ್ಲ.ಮತ್ಯಾಕೆ ಬೆರ್ಚಪ್ಪ(scarecrow)ನನ್ನು ನಿಲ್ಲಿಸಿದ್ದಾರೆ?ಇದೆಂಥ ಅಸಂಗತ,ಅಪ್ರಸ್ತುತ ಅಂತ ಬಾಶೋ ಅಚ್ಚರಿ ಪಡುತ್ತಾನೆ.ಅಥವಾ ಇಲ್ಯಾರೂ ಬರುವದಿಲ್ಲ ಅಂತ ಹೊಲದ ಒಡೆಯ ಏಕಾಂಗಿತನ ಅನುಭವಿಸುತ್ತಿದ್ದಾನೆಯೇ-ಅಂತ ಕವಿ ಮರುಗುತ್ತಿರಬಹುದೇ?ಅಂಥದೊಂದು ಏಕಾಂತದೊಂದಿಗೆ ಹೋರಾಡಲು, ಹೊಲದೊಡೆಯ ಈ ಬೆರ್ಚಪ್ಪನೊಂದಿಗೆ ಏಕಮುಖದ ಸಂಭಾಷಣೆಯಲ್ಲಿ ತೊಡಗಿಸಿಕೊಂಡಂತಿದೆ..Or there should be few more dimensions which i really don’t know..






0 Comments