ಅರುಣ್ ಕೆಸರಗುಪ್ಪೆ
ನನಗೆ ಇದೀಗ ತಿಳಿದ ಸಂಗತಿ:
ಮಲೆನಾಡಿನಲ್ಲಿ ಮಳೆಯ ದೆಸೆಯಿಂದಾಗಿ ಮನೆ ಬಿದ್ದರೆ, ಕೊಟ್ಟಿಗೆ ಬಿದ್ದರೆ ಹಾಗೇ ಇನ್ನಿತರ ಏನೇ ಅನಾಹುತಗಳಾದರೂ ಸರ್ಕಾರದ ವತಿಯಿಂದ ಆ ಕ್ಷಣದಲ್ಲಿಯೇ ತತ್ಕ್ಷಣದ ಪರಿಹಾರವನ್ನು ನೀಡಲಾಗುತ್ತದೆ. ತಹಶೀಲ್ದಾರ್ ಅವರೇ ಆ ಪರಿಹಾರವನ್ನು ಸಂತ್ರಸ್ಥರಿಗೆ ನೀಡುತ್ತಾರೆ.
ಹಾಗೆ ಸಿಗುವ ತತ್ಕ್ಷಣದ ಪರಿಹಾರದ ಮೊತ್ತ ಎಷ್ಟು ಗೊತ್ತೇ?
ಗೊತ್ತಿಲ್ಲವೇ? ಇದು ಸರ್ಕಾರದ ದಾಖಲೆಗಳಲ್ಲಿಯೇ ಇರುವುದು,
ಒಂದು ನೂರು ರುಪಾಯಿ ಹಾಗೂ ಒಂದು ಕಂಬಳಿ !!!!!
ಇದು ಯಾರೋ ಬಸ್ಸ್ಟ್ಯಾಂಡಿನಲ್ಲಿ ಕುಳಿತು, ಬೀಡಿ ಸೇಯುತ್ತಾ ಹೇಳಿದ ಉಡಾಫೆಯ ಮಾತಲ್ಲ.
ಸಾಗರದ ತಹಶಿಲ್ದಾರ್, ರಾಜಣ್ಣ ಅವರನ್ನು ಕೇಳಿದರೆ, ಕಡತ ಹುಡುಕಿ ಈ ವಿಚಿತ್ರ ಸತ್ಯ ಬಿಚ್ಚಿಡುತ್ತಾರೆ.
1995 ರಲ್ಲಿ ಸಾಗರದ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸಿದ ಶ್ರಿಯುತ ಗುರುಮೂರ್ತಿ ಅವರ ಜೊತೆ ನನ್ನ ಸ್ನೇಹಿತರಾದ ಪೂರ್ಣಪ್ರಜ್ಞ ಬೇಳೂರು ಹೀಗೆ ಅನಾಹುತವಾದ ಸ್ಥಳಕ್ಕೆ ಭೇಟಿ ನೀಡಿದಾಗ ಇದೇ ಪರಿಹಾರವನ್ನೇ ಗುರುಮೂರ್ತಿ ಅವರು ಸಂತ್ರಸ್ಥರಿಗೆ ನೀಡಿದ್ದರಂತೆ.
ಇಂದೂ ಇಷ್ಟೇ ಸಿಗುವುದು !!!
ಮೊನ್ನೆ ಮಳೆಯಲ್ಲಿ ಏನಾದರೂ ಅನಾಹುತವಾಗಿದ್ದರೆ, ತಹಶೀಲ್ದಾರ್ ಆಫೀಸ್ಗೆ ದೌಡಾಯಿಸಿ,
ನೂರು ರುಪಾಯಿ ಹಾಗೂ ಕಂಬಳಿಯನ್ನು ಗೆಲ್ಲಿ !!!






ಸ್ವಾಮಿ..ಒಬ್ಬೊಬ್ಬರಿಗೆ ಇರಬೇಕು ಇದು.. ಹಾಗಿದ್ರೆ ಈ ಸ್ಕೀಮ್ ಚೆನ್ನಾಗಿದೆ!.
[ಮೊನ್ನೆ ಮಳೆಯಲ್ಲಿ ಏನಾದರೂ ಅನಾಹುತವಾಗಿದ್ದರೆ, ತಹಶೀಲ್ದಾರ್ ಆಫೀಸ್ಗೆ ದೌಡಾಯಿಸಿ,]
ಜಾರಿ ಬಿದ್ದಿದ್ದೆ ಮಾರಾಯ್ರೆ..ಆದರೆ ನಂಗೆ ಈ ಸ್ಕೀಮ್ ಗೊತ್ತಿರಲಿಲ್ಲ..ನೀವು ಇಂತಹ ಸೂಚನೆಗಳನ್ನೆಲ್ಲ ಮೇ ತಿಂಗಳಲ್ಲೇ ಕೊಡಬೇಕು..ಅರ್ಧ ಮಳೆಗಾಲ ಮುಗಿದು ಹೋಯ್ತೀಗ!