ಈ ದೇಶದ ಮೊತ್ತ ಮೊದಲ sez ಒತ್ತುವರಿ ಯಾವುದು ಗೊತ್ತೇ? ಅದು ಮಹಾಭಾರತದ ಖಾಂಡವ ದಹನ ಪ್ರಕರಣ. ಪಾಂಡವರಿಗಾಗಿ ನಗರ ನಿರ್ಮಿಸಲು ಮೈಲು ಗಟ್ಟಲೆ ಖಾಂಡವ ಪ್ರದೇಶವನ್ನು ವಶಪಡಿಸಿಕೊಂಡು, ಅಲ್ಲಿರುವ ಕಾಡನ್ನು ಸುಟ್ಟು ಹಾಕಲಾಯಿತು. ಮೃಗ, ಪಕ್ಷಿ ಮಾತ್ರವಲ್ಲ ಅಲ್ಲಿನ ನಾಗ ಬುಡಕಟ್ಟು ಜನರನ್ನು ಓದ್ದೊಡಿಸಲಾಯಿತು. ಸಹಸ್ರಾರು ನಾಗಗಳು ಸುಟ್ಟು ಹೋದರು. ಬಂಧಿಸಲ್ಪಟ್ಟ ಮಯನಿಂದಲೇ ಇಂದ್ರಪ್ರಸ್ಥವನ್ನು ನಿರ್ಮಿಸುತ್ತಾರೆ. ರೈತರ ಭೂಮಿಯನ್ನು ವಶಪಡಿಸಿ ಅವರನ್ನೇ ಕೂಲಿಕಾರ್ಮಿಕರನ್ನಾಗಿ ಮಾಡಿದ ಹಾಗೆ ಇದು. ಇದರ ಸೇಡಿಗಾಗಿಯೇ ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ನಾಗಗಳು ಕೌರವರ ಪಕ್ಷ ಸೇರಿ, ಅರ್ಜುನನ ವಿರುದ್ಧ ಯುದ್ಧ ಮಾಡುತ್ತಾರೆ.]]>
0 Comments