
ರಾಜಕುಮಾರ ಮಡಿವಾಳರ
ಶಾಂತಕವಿಗಳ ವಿಶ್ರಾಂತಿ…
Prakash Garud ರ ಮೇಲಿನ ನಿರೀಕ್ಷೆ ಹುಸಿ ಹೋಗಲಿಲ್ಲ, ಇದು ಶಾಂತಕವಿಗಳ ಜೀವನ ನಾಟಿಕೆ ಆದರೂ ಇದು ಕನ್ನಡದ ಕಥೆ, ಕನ್ನಡ ನಡೆದು ಬಂದ ಕಥೆ, ಕನ್ನಡವ ಸಕ್ರಿ ಬಾಳಾಚಾರ್ಯ್ ರು ನಡೆಸಿಕೊಂಡ ಬಂದ ಕಥೆ.
ನಾಟಕ ನಿರ್ದೇಶನ ಅದ್ಭುತ, ರಚನೆ ಚೆಂದ, ಒಬ್ಬ ಪ್ರೇಕ್ಷಕನಾಗಿ ಮೊದಲಾರ್ಧದಲ್ಲಿ ಒಂದಿಷ್ಟು ಕತ್ತರಿಪ್ರಯೋಗ( ಸಮಯ ಮತ್ತು ಬದಲಾದ ಪ್ರೇಕ್ಷಕನ ಅಭಿರುಚಿಯನುಸಾರ) ಬೇಕೆನಿಸಿತು, ದ್ವಿತಿಯಾರ್ಧ ಶಾಂತಕವಿ ಪಾತ್ರಧಾರಿ Niranjan Khalikoda ಇಡಿ ನಾಟಕ ಆವಾಹಿಸಿಕೊಂಡಂತೆ ಪ್ರೇಕ್ಷಕನನ್ನು ತುದಿ ಕುರ್ಚಿಗೆ ತಂದು ಕೂರಿಸುವಲ್ಲಿ ಯಶಸ್ವಿ ನಟನೆ ಅನ್ನುವದಕ್ಕಿಂತ ಶಾಂತಕವಿಯನ್ನೆ ಎದುರು ತಂದು ನಿಲ್ಲಿಸಿದ್ದಾರೆ.
Pavan Deshpande ನಟನೆ, ಟೈಮಿಂಗ್ ಸತತ ಕಾಯ್ದುಕೊಂಡಿರುವ ಶೃದ್ಧಾವಂತ ನಟ ಎನ್ನುವುದು ಮತ್ತೆ ಸಾಬೀತುಪಡಿಸಿದ್ದಾನೆ, ಗೋಪಾಲ ರಂಗದ ಮೇಲೆ ಯಾವಾಗಲೋ ಒಮ್ಮೆ ಕಂಡರೂ, ವೇದಿಕೆ ಮೇಲೆ ಇರುವಷ್ಟು ಹೊತ್ತು ನಟರಾಕ್ಷಸ!
ಬೇಂದ್ರೆಯವರ ಹಾಡು “ಶಾಂತಕವಿಗಳ ವಿಶ್ರಾಂತಿ” Raghav Kammar ಕೊನೆಯ ದೃಶ್ಯ ಮತ್ತು ನಿಮ್ಮ ಸಂಗೀತ ತುಂಬ ದಿನಗಳ ನಂತರ ಕಣ್ಣಲ್ಲಿ ನೀರುವಷ್ಟು ಭಾವುಕನನ್ನಾಗಿಸಿದವು.

Rajani Garud Kerekai ಅವರನ್ನ ಬಣ್ಣದಲ್ಲಿ ನೋಡಿದ ಖುಷಿ. ವಿಷಯಾ, ಶಶಿಕಲಾ ಮೇಡಮ್ ಭೇಷ್, ವಾಸನದ ಮತ್ತಿತರ ಕಲಾವಿದರು ಇನ್ನು “ನುರಿಬೇಕು”.. Sunanda Nimbanagoudar ಟೀಮ್ ಧ್ವನಿ ಮಸ್ತ್.. ರಂಗಸಜ್ಜಿಕೆ ಸೂಪರ್, ಮೇಕಪ್ಪಿನಲ್ಲಿ ಸಂತೋಷ ಮಹಾಲೆ ಅಪ್ಪ ಗಜಾನನರ ಅನುಪಸ್ಥಿತಿ ಸಾರ್ಥಕವಾಗಿ ತುಂಬಬಲ್ಲರು ಎನ್ನುವದರಲ್ಲಿ ಯಾವ ಸಂಶಯವೂ ಇಲ್ಲ.
ನಮ್ಮ NP Nagaraj Patil ಮತ್ತು ವಿನಯ ಕೆಲಸ ಶ್ಲಾಘನೀಯ.
ಇದು…
ಎರಡನೆ ಪ್ರಯೋಗ ಯಶಸ್ವಿ ಅನ್ನಬಹುದಾದರೂ, ಮುಂದಿನ ಪ್ರಯೋಗಗಳಲ್ಲಿ ಇನ್ನಷ್ಟು ನಿರೀಕ್ಷೆ ಇದೆ, ಒಂದಿಷ್ಟು ತಾಲಿಮಿನ ಅವಶ್ಯಕತೆ ಖಂಡಿತ ಇದೆ.
ಇದೆಲ್ಲವನ್ನೂ….
ಮೀರಿ ಖಂಡಿತ ಈ ನಾಟಕ ಕನ್ನಡಕ್ಕೊಂದು ಮತ್ತು ಕನ್ನಡ ನಾಟಕ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನ ವಿಭಿನ್ನ ನೆಲೆಯಲ್ಲಿ ಖಾಯಂ ಉಳಿಸಿಕೊಳ್ಳುವ ಎಲ್ಲ ಗುಣ-ಲಕ್ಷಣ-ಬಲ-ಗಟ್ಟಿತನ ಹೊಂದಿರುವುದರಲ್ಲಿ ಎರಡು ಮಾತಿಲ್ಲ..
ಸಕಲರಿಗೂ ಧನ್ಯವಾದ, ಮುಫ್ತಾಗಿ ನಾಟಕಕ್ಕೆ ಆಮಂತ್ರಿಸಿದ ತಂಡದವರಿಗೆಲ್ಲ ಋಣಿ.







0 Comments